Link copied!
Sign in / Sign up
10
Shares

ಅಪ್ಪ-ಮಗಳ ನಡುವೆ ಸಂಬಂಧ ಗಟ್ಟಿಯಾಗಿಸಿಕೊಳ್ಳಲು 5 ಸೂಪರ್ ಸಲಹೆಗಳು!

ಅಪ್ಪಂದಿರು 'ಉಸ್ತುವಾರಿ ಇರುವವರು' ಎಂಬ ಪಾತ್ರವನ್ನು ವಹಿಸಿಕೊಳ್ಳುತ್ತಿದ್ದಾರೆ ಮತ್ತು ತಮ್ಮ ಹೆಣ್ಣುಮಕ್ಕಳಿಗೆ ಸಂಬಂಧಿಸಿದ ವಿಷಯದಲ್ಲಂತೂ ಅತಿಯಾದ ಸಂರಕ್ಷಕರೇ ಆಗಿರುವರು. ಅಮ್ಮಂದಿರಂತೆ ಅವರು ತಮ್ಮ ಭಾವನೆಗಳಿಗೆ ಧ್ವನಿ ನೀಡಲಾರರಾದರೂ, ತಮ್ಮ ಕುಟುಂಬದ ಸಂತೋಷಕ್ಕಾಗಿ ಅಹರ್ನಿಶಿ ದುಡಿಯುವವರು. ಆದ್ದರಿಂದ ಅವರು ಕೆಲವೊಮ್ಮೆ ಕಟ್ಟುನಿಟ್ಟಾದ ವ್ಯಕ್ತಿಯಾಗಿ ಕಾಣಿಸಿಕೊಳ್ಳಬಹುದು. ವಿಶೇಷವಾಗಿ ಅಪ್ಪಂದಿರು ಮತ್ತು ಹೆಣ್ಣು ಮಕ್ಕಳು ವಿಶೇಷ ಬಂಧವನ್ನು ಹಂಚಿಕೊಳ್ಳುತ್ತಾರೆ. ಪುಟಾಣಿ ಮಗಳಿಗಂತೂ , ಆಕೆಯ ತಂದೆ ಯಾವಾಗಲೂ ತನ್ನ ರಕ್ಷಾಕವಚವೇ ಆಗಿರುತ್ತಾನೆ. 

ಈ ಜಗತ್ತಿನಲ್ಲಿ ತಮ್ಮ ತಂದೆಯರನ್ನು ಬಿಟ್ಟರೆ ಪ್ರಪಂಚದ ಬೇರೆ ಯಾವುದೇ ವ್ಯಕ್ತಿಯಲ್ಲೂ ಹೆಣ್ಣು ಮಕ್ಕಳು ಹೆಚ್ಚು ವಿಶ್ವಾಸ ವ್ಯಕ್ತಪಡಿಸುವುದಿಲ್ಲ. ಆದರೆ, ಈ ಹಂತವು ದೀರ್ಘಕಾಲ ಉಳಿಯುವುದಿಲ್ಲ. ಹದಿಹರೆಯಕ್ಕೆ ಕಾಲಿಡುವ ಹೆಣ್ಣುಮಕ್ಕಳು, ತಾವು ಪ್ರೌಢರಾಗಿರುವುದರಿಂದ,  ತಮ್ಮ ನಿರ್ಧಾರವನ್ನು ತಾವೇ ತೆಗೆದುಕೊಳ್ಳಲಿರುವ ಸ್ವಾತಂತ್ರ್ಯ ಬೇಕೆಂದೂ ಮತ್ತು ತಮ್ಮ ತಪ್ಪುಗಳಿಂದ ಕಲಿಯಲು ಸಾಧ್ಯವಾಗುತ್ತದೆಯೆಂದೂ ನಂಬುತ್ತಾರೆ.  

ತಮ್ಮ ಆ ಪುಟ್ಟ ಹುಡುಗಿಯು ಬೆಳೆದಂತೆ, ತಮ್ಮ ಕೆಲಸವು ಮಾರ್ಗದರ್ಶಕನಂತೆ ಸಲಹೆ ನೀಡುವುದು ಮಾತ್ರವಾಗಿರುತ್ತದೆ ಎಂದು ಪ್ರತೀ ತಂದೆಯರೂ ಅರ್ಥ ಮಾಡಿಕೊಳ್ಳಬೇಕು. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥರಾಗುವಂತೆ ಅವರನ್ನು ಬೆಳೆಸಲಾಗಿದೆಯೆಂದು ನೀವು ನಂಬಬೇಕಾಗಿದೆ. 

 ಈ ಪ್ರಕ್ಷುಬ್ಧ ಪರಿವರ್ತನಾ ಹಂತದ ಸಮಯದಲ್ಲಿ ತಮ್ಮ ಹೆಣ್ಣುಮಕ್ಕಳ ಮನಸ್ಸಿಗೆ ಹತ್ತಿರವಾಗಿ ಉಳಿಯಲು ಸಹಾಯವಾಗುವಂತಹ ಕೆಲವು ಸಲಹೆಗಳು ಇಲ್ಲಿವೆ. 

೧. ಉತ್ತಮ  ಕೇಳುಗರಾಗಿ 

ಸಿದ್ದವಾಗಿಟ್ಟಿರುವ ಪರಿಹಾರಗಳನ್ನು ನೀಡಲಿರುವ ಕಾಲವು ಬಹಳ ಹಿಂದೆಯೇ ಸರಿದು ಹೋಗಿದೆ. ಏನು ಮಾಡಬೇಕು ಎಂಬುದರ ಬಗ್ಗೆ ಉಪನ್ಯಾಸ ನೀಡುವ ಬದಲು, ಶಾಂತ ಚಿತ್ತರಾಗಿ ಅವರ ಸಮಸ್ಯೆಗಳನ್ನು ಕೇಳಿ ತಿಳಿದುಕೊಳ್ಳಿ. ಆಕೆಯೊಂದಿಗೆ ಮಾತನಾಡಿ, ಅವಳ ಮನಸ್ಸಿನಲ್ಲಿ  ಹಾದುಹೋಗುವ ಸಂಗತಿಗಳೇನೆಂದು ಅರ್ಥಮಾಡಿಕೊಳ್ಳಿ. ಇದು ನಿಮ್ಮೊಂದಿಗೆ ತನ್ನ ಮನಸ್ಸು ತೆರೆದುಕೊಳ್ಳಲು ಮತ್ತು ನಿಮ್ಮ ಸಲಹೆಯನ್ನು ಪಡೆಯುವಂತೆ ಅವಳಿಗೆ ಧೈರ್ಯ ನೀಡುತ್ತದೆ. ಚರ್ಚೆಯು ತನ್ನ ನಿರ್ಣಾಯಕ ಚಿಂತನೆಯ ಕೌಶಲ್ಯಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಮತ್ತು ಅದು ತನ್ನ ಜೀವನದ ಎಲ್ಲಾ ಯಶಸ್ಸುಗಳನ್ನು ಗಳಿಸಿಕೊಳ್ಳಲಿರುವ ಪ್ರಮುಖ ಕೌಶಲವಾಗಿದೆ. ಆದೇಶಗಳನ್ನು ನೀಡುವುದರ ಬದಲಾಗಿ ಸ್ಮಾರ್ಟ್ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರಿಗೆ ಮಾರ್ಗದರ್ಶನ ನೀಡಿರಿ. 

 

೨. ತುಂಬು ಹೃದಯದಿಂದ ಪ್ರಶಂಸಿರಿ

ತನ್ನ ಬಗ್ಗೆ ಅಪನಂಬಿಕೆ ತಾಳುವ ಕೆಲವು ಹಂತಗಳ ನಡುವೆ ಹಾದುಹೋಗುವ ಸಮಯವಿದು. ನೀವು ನೀಡುವ ಸಲಹೆಗಳಿಗಿಂತಲೂ, ತಾವು ಕೂಡಾ ಪರಿಗಣಿಸಲ್ಪಡುತ್ತಿದ್ದೇವೆ ಅಥವಾ ಅಂಗೀಕರಿಸಲ್ಪಡುತ್ತಿದ್ದೇವೆಂಬ ಭಾವನೆಯನ್ನು ಭಿತ್ತಬೇಕಾದ ಸಮಯ. ಸಹಜವಾಗಿ ತಾಯಿಯರೇ ಈ ನಿಟ್ಟಿನಲ್ಲಿ ಮುಂದುವರೆಯುತ್ತಾರಾದರೂ, ಮಕ್ಕಳು ತಮ್ಮ ಪೋಷಕರಿಬ್ಬರ ಗಮನ ತಮ್ಮತ್ತ ಹರಿಯಬೇಕೆಂಬ ಬಯಕೆಯಿರುತ್ತದೆ. ಮೀನ ಮೇಷವೆಣಿಸದೇ, ಜೀವನದ ಘಟ್ಟಗಳನ್ನು ಎದುರಿಸಲಿರುವ ಕಲೆಗಳನ್ನು ತಿಳಿಸಿಹೇಳಿ.ನಿನ್ನ ಬಗ್ಗೆ ನನಗೆ ಅಭಿಮಾನವಿದೆಯೆನ್ನುವುದರ ಜೊತೆಗೆ, ಅವರ ಸಾಧನೆಗಳನ್ನೂ ಗುರುತಿಸಿ. ಅಂಗೀಕಾರಕ್ಕಾಗಿ ಹಂಬಲಿಸದ ಮನವಿದೆಯೇ ? 

 

೩. ಅವಳನ್ನು ಬೆಂಬಲಿಸಿ 

ನಿಮ್ಮ ಮಗಳೊಂದಿಗೆ ಹೆಚ್ಚಿನ ಸಮಯ ಕಳೆಯುವುದೇ ನೀವು ಅವಳಿಗೆ ನೀಡಬಹುದಾದ ಅತೀ ದೊಡ್ಡ ಉಡುಗೋರೆ. ಇದು ಅವಳ ಹಿತಾಸಕ್ತಿಗಳನ್ನು ತಿಳಿಯಲು ಮತ್ತು ನಿಮ್ಮ ಮಗಳು ಇಷ್ಟಪಡುವ ಕಾರ್ಯಗಳ ಕುರಿತು ಅರಿಯಲು ನಿಮಗೆ ಸಹಾಯವಾಗುತ್ತದೆ.ಅಲ್ಲದೇ ನಿಮ್ಮಿಬ್ಬರಲ್ಲಿ ಉತ್ತಮ ಸಂಪರ್ಕವನ್ನು ಬೆಸೆಯಲು ಸಹಾಯ ಮಾಡುತ್ತದೆ. ಅವಳ ನೆಚ್ಚಿನ ಹಾಡನ್ನು ಕೇಳುವುದು ಅಥವಾ ಅವಳೊಂದಿಗೆ ತನ್ನ ನೆಚ್ಚಿನ ಹಾಸ್ಯವನ್ನು ನೋಡುವುದು ಇವೇ ಮೊದಲಾದ ಸರಳ ಕಾರ್ಯಗಳನ್ನು ಮಾಡುವುದು ನಿಮ್ಮೊಳಗಿನ ಬಾಂಧವ್ಯವನ್ನು ಬೆಸೆಯುತ್ತದೆ. ನೀವು ನಿಜವಾಗಿಯೂ ಪ್ರಾಮಾಣಿಕವಾಗಿ ಅವರ ಬಗ್ಗೆ  ಆಸಕ್ತಿ ಹೊಂದಿದ್ದೀರಿ ಮತ್ತು ಅವಳನ್ನು ಉತ್ತಮವಾಗಿ ತಿಳಿದುಕೊಳ್ಳಲು ಪ್ರಯತ್ನ ಮಾಡಲು ನೀವು ಸಾಕಷ್ಟು ಕಾಳಜಿಯನ್ನು ವಹಿಸುತ್ತಿದ್ದಿರೆಂದು ನಿಮ್ಮ ಮಗಳು ಭಾವಿಸುವುದಕ್ಕೆ ದಾರಿಮಾಡುತ್ತದೆ.  

 

೪. ಉತ್ತಮ ಗೆಳೆಯರಾಗಿ 

 

ಹದಿಹರೆಯದ ಸಮಯಗಳನ್ನು  ನಿಭಾಯಿಸಲು ಮಕ್ಕಳಿಗೆ ತುಂಬಾ ಕಷ್ಟವಾಗಬಹುದು. ಅವರು ತಮ್ಮ ಬತ್ತಳಿಕೆಯಲ್ಲಿ ಬಹಳಷ್ಟು, ದೈಹಿಕ ಬದಲಾವಣೆಗಳೊಂದಿಗೆ, ತಮ್ಮದೇ ಪ್ರಾಯದವರೊಂದಿಗಿನ ಇತರ ಮಾನಸಿಕ ಒತ್ತಡ, ಮತ್ತು ಸ್ವಯಂ-ಅನುಮಾನದೊಂದಿಗೆ ವ್ಯವಹರಿಸುತ್ತಾರೆ. ಇಂತಹ ಒತ್ತಡ ಭರಿತ ಸಮಯದಲ್ಲಿ ಅವಳಿಗೆ ನಿಮ್ಮ ಬೆಂಬಲದ ಅಗತ್ಯವಿದೆ. ಕೇವಲ ಕ್ಷುಲ್ಲಕವೆಂದು ತಿಳಿದು ಅಲಕ್ಷ ಮಾಡಬೇಡಿ. ನೀವು ಯಾವಾಗಲೂ ನಿಮ್ಮ ಮಗಳನ್ನೇ ಬೆಂಬಲಿಸುವಿರಿ ಮತ್ತು ಅವಳನ್ನು ಸಮಾಧಾನವಾಗಿರಲು ಬಯಸುತ್ತೀರಿ ಎಂದು ತೋರಿಸಿರಿ. ಜೀವನದ ಎಲ್ಲಾ ಏರಿಳಿತಗಳ ಮೂಲಕ ಅವಳು ಹೊಂದುವ ಸರಳ ಅಂಶವು ಎಲ್ಲ ವ್ಯತ್ಯಾಸಗಳನ್ನು ಮಾಡುತ್ತದೆ. 

 

೫. ಕುಟುಂಬದವರಲ್ಲಿ ಆರೋಗ್ಯಕರ ಸಂಬಂಧ  

 

ಹದಿಹರೆಯವು, ಬಾಲಕಿಯರು ನೈಜ-ಜೀವನದ ಸಂಬಂಧಗಳಲ್ಲಿ ಭಾಗಿಯಾಗುವ ಸಮಯವಾಗಿದೆ. ಆದ್ದರಿಂದಲೇ ಪೋಷಕರು ತಮ್ಮ ನಡವಳಿಕೆಯ ಮೂಲಕ ಉತ್ತಮ ಉದಾಹರಣೆ ತೋರುವ ಅವಶ್ಯಕತೆಯಿದೆ. ಕೆಲವು ಬಾರಿ ಹುಡುಗಿಯರು ಅಪಾಯಕಾರಿ ಸಂಬಂಧಗಳಲ್ಲಿ ತೊಡಗುತ್ತಾರೆ. ತಪ್ಪನ್ನು ಸರಿಪಡಿಸುವ ಬದಲು, ಅದನ್ನು ತಡೆಗಟ್ಟುವುದು ಉತ್ತಮ. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ಮತ್ತು ನೀವು ತಿಳಿದುಕೊಳ್ಳುವುದಕ್ಕಿಂತ ಹೆಚ್ಚಿನದನ್ನು ಅವರು ಗಮನಿಸಿರುತ್ತಾರೆ ಹಾಗೂ ಅದರಿಂದ ಕಲಿತುಕೊಳ್ಳುತ್ತಾರೆ. ಹಾಗಾಗಿ ಪತಿ-ಪತ್ನಿಯರಿಬ್ಬರೂ ಪರಸ್ಪರ  ಪ್ರೀತಿಯುತ, ಬೆಂಬಲಿತ ಸಂಬಂಧವನ್ನು ಹೊಂದಿದ್ದರೆ, ನಿಮ್ಮ ಮಗಳು ಅವಳಿಗೆ ಮೌಲ್ಯಯುತವಾದ ಮತ್ತು ಗೌರವಾನ್ವಿತವಾಗಿರುವ ಇದೇ ರೀತಿಯ ಸಂಬಂಧವನ್ನು ಬಯಸುತ್ತಾರೆ. ಅಂತಹ ಸಂಗಾತಿಯೇ ತನಗೆ ಅರ್ಹವಾಗುವುದು ತನ್ನ ಹಕ್ಕೆಂದು ಪರಿಗಣಿಸುತ್ತಾಳೆ. 

 ಓದಿದ ಬಳಿಕ ಶೇರ್ ಮಾಡಿರಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon