Link copied!
Sign in / Sign up
1
Shares

ಇರುವೆ ಕಚ್ಚಿಸಿಕೊಂಡು ದುಬೈ ಅಲ್ಲಿ ಸಾವನ್ನಪ್ಪಿದ ಭಾರತೀಯ ಮಹಿಳೆ!

ಅಚ್ಚರಿ ಮೂಡಿಸುವ ಘಟನೆ ಒಂದರಲ್ಲಿ, ದುಬೈ ರಾಜಧಾನಿ ರಿಯಾಧ್ ಅಲ್ಲಿ ಭಾರತ ಮೂಲದ ಮಹಿಳೆಯೊಬ್ಬಳು ಇರುವೆ ಕಡಿತದಿಂದ ಸಾವನ್ನಪ್ಪಿದ್ದಾಳೆ. ಮೂಲತಃ ಕೇರಳದ ಆದೂರ್ ನಗರದವಳಾಗಿದ್ದ ಸೂಸಿ ಜೆಫಿ (36) ಮೃತಪಟ್ಟ ದುರ್ದೈವಿ. ಬುಧುವಾರದಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಈಕೆ ಕೊನೆ ಉಸಿರು ಎಳಿದಿದ್ದಾಳೆ ಎಂದು ಸ್ಥಳೀಯ ದಿನಪತ್ರಿಕೆ ಆದ ಖಲೀಜ್ ಟೈಮ್ಸ್ ವರದಿ ಮಾಡಿದೆ.


ಸೂಸಿಯ ಸಂಬಂಧಿಕರು ಸೂಸಿಯು ಮಾರ್ಚ್ 19ರಂದು ರಿಯಾಧ್ ಅಲ್ಲಿನ ತನ್ನ ಮನೆಯಲ್ಲಿ ಇದ್ದಾಗ ವಿಷಕಾರಿ ಇರುವೆಯೊಂದು ಕಡಿದಿದೆ ಎಂದು ಪತ್ರಿಕೆಗೆ ಹೇಳಿಕೆ ಕೊಟ್ಟಿದ್ದಾರೆ. ಆ ದಿನದಿಂದ ಸೂಸಿಯು ಒಬೆಯ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆಯುತ್ತಿದ್ದಳು. ಸಂಬಂಧಿಕರ ಪ್ರಕಾರ ಕಡಿತಕ್ಕೆ ಒಳಗಾದ ದಿನ ಸೂಸಿಯು ತನಗೆ ಏನೋ ಕಡಿಯುತ್ತಿರುವಂತೆ ಭಾಸವಾಗುತ್ತಿದೆ ಎಂದು ಹೇಳಿಕೊಂಡಿದ್ದಾಳೆ. ಆಕೆಯ ಪತಿ ಮ್ಯಾಥ್ಯೂ ಮನೆಯಲ್ಲಿ ಇರುವೆ ಒಂದು ಇದ್ದದ್ದನ್ನು ನೋಡಿ, ಅದನ್ನು ಎತ್ತಿ ಹೊರಗೆ ಎಸೆದಿದ್ದಾನೆ. ಆದರೆ, ನೋಡು ನೋಡುತ್ತಿದ್ದಂತೆಯೇ ಸೂಸಿಯ ದೇಹ ಊದಿಕೊಳ್ಳಲು ಶುರುವಾಗಿದೆ. ಅನಂತರ, ಆಕೆಯ ಉಸಿರಾಟಕ್ಕೂ ತೀವ್ರ ತೊಂದರೆ ಉಂಟಾದಾಗ, ಆಕೆಯನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.


ವರದಿ ಪ್ರಕಾರ, ಕೆಲವೊಂದು ತಳಿಯ ಇರುವೆಗಳು ವಿಷಕಾರಿ ಆಗಿದ್ದು, ಇವುಗಳ ಕಡಿತವು ವಯಸ್ಕರರಿಗೂ ಮಾರಣಾಂತಿಕವಾಗಬಹುದು ಎಂಬುದು ತಿಳಿದು ಬಂದಿದೆ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon