Link copied!
Sign in / Sign up
15
Shares

ಅನಾಮಾಲಿ ಸ್ಕ್ಯಾನ್ ಎಂದರೇನು?

ಅನಾಮಾಲಿ(ವೈಪರಿತ್ಯ/ಅಸಂಗತ) ಸ್ಕ್ಯಾನ್ ಎರಡನೇ ತ್ರೈಮಾಸಿಕದಲ್ಲಿ ಅತ್ಯಂತ ಸಾಮಾನ್ಯವಾಗಿ ಮಾಡಿಸುವ  ಸ್ಕ್ಯಾನ್ ಆಗಿದೆ. ಇದನ್ನು ೧೮-೨೦ ವಾರಗಳ ನಡುವೆ ಮಾಡಿಸುತ್ತಾರೆ. ಅನಾಮಲಿ ಸ್ಕ್ಯಾನ್ ಅನ್ನು ಮಧ್ಯ-ಗರ್ಭಾವಸ್ಥೆ ಸ್ಕ್ಯಾನ್ ಎಂದು ಕರೆಯುವರು. ಇದು ಮಗು ಮತ್ತು ತಾಯಿಯ ಗರ್ಭವನ್ನು ಪರೀಕ್ಷೆ(ತಪಾಸಣೆ) ಮಾಡಲು ಸಹಾಯ ಮಾಡುತ್ತದೆ. ವೈದ್ಯರು ಇದರ ಮೂಲಕ ಮಗುವಿನ ಬೆಳವಣಿಗೆ ಸರಿಯಾಗಿ ಆಗುತ್ತಿದೆಯೇ ಎಂದು ಮತ್ತು ಜರಾಯು(ಪ್ಲಾಸೆಂಟದ)ವಿನ ಸ್ಥಿತಿಯನ್ನು ಗಮನಿಸುತ್ತಾರೆ.

ಗರ್ಭಾವಸ್ಥೆಯಲ್ಲಿ ಪ್ರಮುಖವಾಗಿ ಎಲ್ಲಾ ಸ್ಕ್ಯಾನ್ ಗಳನ್ನು ಉದರದ ಮೂಲಕ ಮಾಡುತ್ತಾರೆ. ಅಲ್ಟ್ರಾಸೌಂಡ್ ವೈದ್ಯರು ಹೊಟ್ಟೆಗೆ ಜೆಲ್ ಅನ್ನು ಅನ್ವಯಿಸುತ್ತಾರೆ ಮತ್ತು ನಿಮ್ಮ ಮಗುವಿನ ಚಿತ್ರಗಳನ್ನು ಪಡೆಯಲು ಅದರ ಮೇಲೆ ಸಂಜ್ಞಾಪರಿವರ್ತಕವನ್ನು(ಟ್ರಾನ್ಸ್ಡುಸೆರ್) ಚಲಿಸುತ್ತಾರೆ. ಮಗುವಿನ ಲಕ್ಷಣಗಳು ಅಥವಾ ಅಂಗಗಳಿಂದ ಬರುವ ಶಬ್ದ ತರಂಗಗಳನ್ನು ಸೆರೆ ಹಿಡಿದು, ಸಂಜ್ಞಾಪರಿವರ್ತಕ(ಟ್ರಾನ್ಸ್ಡುಸೆರ್)ವು ಗಣಕದ(ಕಂಪ್ಯೂಟರ್) ಪರದೆ ಮೇಲೆ ಚಿತ್ರ ಮೂಡುವಂತೆ ಮಾಡುತ್ತದೆ. ಎಷ್ಟು ಮಾಹಿತಿ ಸಾಧ್ಯವೋ ಅಷ್ಟು ಮಾಹಿತಿ ಪಡೆಯಲು, ವೈದ್ಯರು ವಿವಿಧ ಕೋನಗಳ ಮೂಲಕ, ವಿವಿಧ ಚಿತ್ರಗಳನ್ನು ಪಡೆದು ಪರೀಕ್ಷಿಸುತ್ತಾರೆ. ಯಾವಾಗ ಮಗುವಿನ ಚಿತ್ರಗಳು ಸ್ಪಷ್ಟವಾಗಿ ಕಾಣಿಸುತ್ತವೆ, ಆಗ ವೈದ್ಯರು ಮಗುವಿನ ಅಳತೆ, ಗುಣಲಕ್ಷಣಗಳನ್ನು ತಿಳಿದುಕೊಳ್ಳುತ್ತಾರೆ. ಸೆರ್ವಿಕ್ಷ್(ಗರ್ಭನಾಳ/ಗರ್ಭಕಂಠ)ನ ಬಗ್ಗೆ ಮಾಹಿತಿ ತಿಳಿಯಬೇಕಾದರೆ, ವೈದ್ಯರು ನಿಮಗೆ ಟ್ರ್ಯಾನ್ಸ್ ವ್ಯಜಿನಲ್ ಸ್ಕ್ಯಾನ್ ಮಾಡಿಸಲು ಹೇಳಬಹುದು.

ಸ್ಕ್ಯಾನ್ ಮಾಡುವಾಗ ಅವರು ಏನನ್ನು ನೋಡುತ್ತಾರೆ?

೧.ನಿಮ್ಮ ಎರಡನೇ ತ್ರೈಮಾಸಿಕದಲ್ಲಿ, ಅನಾಮಾಲಿ ಸ್ಕ್ಯಾನ್ ಮಾಡುವಾಗ, ವೈದ್ಯರು ಈ ಕೆಳಗಿನವುದನ್ನು ನೋಡುತ್ತಾರೆ(/ಗಮನಿಸುತ್ತಾರೆ),

೨.ನಿಮ್ಮ ಗರ್ಭದಲ್ಲಿ ಎಷ್ಟು ಶಿಶುಗಳಿವೆ ಎಂಬುದನ್ನು. ಕೆಲವೊಮ್ಮೆ, ಗರ್ಭಿಣಿಯಾಗಿ ೨೦ ವಾರಗಳು ಕಳೆಯುವ ತನಕ ಅವಳಿ ಶಿಶುಗಳು ಕಾಣುವುದಿಲ್ಲ.

೩.ನಿಮ್ಮ ಮಗುವಿನ ತಲೆಯ ಆಕಾರ ಮತ್ತು ರಚನೆ. ಈ ಹಂತದಲ್ಲಿ ಅಪರೂಪವಾಗಿ ಕಾಣಿಸಿಕೊಳ್ಳಬಹುದಾದ ಮೆದುಳಿನ ಸಮಸ್ಯೆಗಳನ್ನು ಪರೀಕ್ಷಿಸಲು.

೪.ಬಹಳ ಮುಖ್ಯವಾಗಿ, ಮಗುವಿನ ಹೃದಯವನ್ನು ಪರೀಕ್ಷಿಸುತ್ತಾರೆ. ವೈದ್ಯರು ಹೃದಯದ ನಾಲ್ಕು ಕೋಣೆಗಳನ್ನು(೨-ಹೃತ್ಕರ್ಣ, ೨-ಹೃತ್ಕುಕ್ಷಿ) ಗಮನಿಸುತ್ತಾರೆ. ಮೇಲಿನ ಎರಡು ಕೋಣೆ ಮತ್ತು ಆಟ್ರಿಯಾ, ಹಾಗೂ ಕೆಳಗಿನ ಎರಡು ಕೋಣೆ ಮತ್ತು ವೆಂಟ್ರಿಕಲ್ಸ್, ಗಾತ್ರದಲ್ಲಿ ಸಮನಾಗಿರಬೇಕು. ಪ್ರತಿ ಹೃದಯ ಬಡಿತಕ್ಕೂ ಕವಾಟಗಳು(ಹೃದಯ ನಾಳ) ತೆರೆಯುವುದು ಮತ್ತು ಮುಚ್ಚುವುದನ್ನು ಮಾಡಬೇಕು. ವೈದ್ಯರು ಪ್ರಮುಖ ಅಭಿಧಮನಿ ಮತ್ತು ಅಪಧಮನಿ, ಇವು ರಕ್ತವನ್ನು ಹೃದಯದ ಹೊಳಗೆ ಮತ್ತು ಹೊರಗೆ ಸಾಗಿಸುತ್ತವೆ.

೫.ಮಗುವಿನ ಉದರವನ್ನು ಪರೀಕ್ಷಿಸುತ್ತಾರೆ. ಶಿಶು ಕೆಲವೊಮ್ಮೆ ಆಮ್ನಿಯೋಟಿಕ್ ದ್ರವವನ್ನು ನುಂಗಿರಬಹುದು, ಇದು ಮಗುವಿನ ಹೊಟ್ಟೆಯಲ್ಲಿ ಕಪ್ಪು ಗುಳ್ಳೆಯಾಗಿ ಕಂಡುಬರುತ್ತದೆ.

೬.ನಿಮ್ಮ ಮಗುವಿಗೆ ಎರಡು ಮೂತ್ರಪಿಂಡಗಳಿವೆ ಮತ್ತು ಮೂತ್ರವು ಶಿಶುವಿನ ಗಾಳಿಗುಳ್ಳೆಯೊಳಗೆ ಮುಕ್ತವಾಗಿ ಹರಿಯುತ್ತಿದೆಯೇ ಎಂದು ವೈದ್ಯರು ಪರಿಶೀಲಿಸುತ್ತಾರೆ.

೭.ಸೀಳು ತುಟಿ ಇದೆಯಾ ಎಂಬುದನ್ನು ನೋಡಲು ಮಗುವಿನ ಮುಖವನ್ನು ಪರಿಶೀಲಿಸುವರು. ಮಗುವಿನ ಬಾಯಿಯೊಳಗೆ ಸೀಳು ಅಂಟುಗಳನ್ನು ಕೆಲವೊಮ್ಮೆ ಪತ್ತೆಹಚ್ಚುವುದು ಕಷ್ಟ.

೮.ಮಗುವಿನ ಬೆನ್ನೆಲುಬು, ಎರಡೂ, ಅಡ್ಡಾವಾಗಿ ಮತ್ತು ಉದ್ದವಾಗಿ ಎಲ್ಲಾ ಎಲುಬುಗಳು ಜೋಡಿಸಲ್ಪಟ್ಟಿದೆಯೇ, ಎಂದು ಖಚಿತಪಡಿಸಿಕೊಳ್ಳಲು ನೋಡಲಾಗುತ್ತದೆ.

೯.ಮಗುವಿನ ಕಿಬ್ಬೊಟ್ಟೆಯ ಗೋಡೆ ಮುಂಭಾಗದಲ್ಲಿ ಎಲ್ಲಾ ಆಂತರಿಕ ಅಂಗಗಳನ್ನು ಆವರಿಸುವುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.

೧೦.ಮಗುವಿನ ತೋಳುಗಳು, ಕಾಲುಗಳು, ಕೈಗಳು ಮತ್ತು ಪಾದಗಳಲ್ಲಿ ಯಾವುದೇ ವಿರೂಪತೆಗಳನ್ನು, ವೈದ್ಯರು ಪರೀಕ್ಷಿಸುತ್ತಾರೆ.

ಮಗುವಿನ ಬೆಳವಣಿಗೆಯ ಬಗ್ಗೆ ವಿವರವಾದ ಅಧ್ಯಯನದ ಜೊತೆಗೆ, ವೈದ್ಯರು ಈ ಕೆಳಗಿನವುಗಳನ್ನು ನೋಡುತ್ತಾರೆ:

ಅ.ಜರಾಯು(ಪ್ಲಾಸೆಂಟ)

ಬ.ಕರುಳು ಬಳ್ಳಿ

ಕ.ಆಮ್ನಿಯೋಟಿಕ್(ಗರ್ಭದ ಒಳ ಕವಚದಲ್ಲಿರುವ) ದ್ರವ

ಜರಾಯು(ಪ್ಲಾಸೆಂಟ) ಗರ್ಭಾಶಯದ ಮುಂಭಾಗದ ಗೋಡೆಯ ಮೇಲೆ ಅಥವಾ ಹಿಂಭಾಗದ ಗೋಡೆಯ ಮೇಲೆ ಇರಬಹುದು. ಇದು ಸಾಮಾನ್ಯವಾಗಿ ಗರ್ಭಾಶಯದ ಗೋಡೆಯ ಮೇಲ್ಭಾಗದಲ್ಲಿರುತ್ತದೆ. ಜರಾಯು(ಪ್ಲಾಸೆಂಟ) ಗರ್ಭಕೋಶದ (ನಾಳ)ಕುತ್ತಿಗೆಯಿಂದ ಕೆಳಕ್ಕೆ ತಲುಪಬಹುದು ಅಥವಾ ಮುಚ್ಚಬಹುದು. ಗರ್ಭಾಶಯಕ್ಕಿಂತ ಜರಾಯು ಕೆಳಗೆ ಇದ್ದರೆ(ಜಾರುತ್ತಿದ್ದರೆ), ಅದರ ಸ್ಥಾನವನ್ನು ಪರಿಶೀಲಿಸಲು ವೈದ್ಯರು ಮೂರನೇ ತ್ರೈಮಾಸಿಕದಲ್ಲಿ ಮತ್ತೊಂದು ಸ್ಕ್ಯಾನ್ ಅನ್ನು ಸೂಚಿಸಬಹುದು. ನಂತರ, ಜರಾಯು ಗರ್ಭಕಂಠದಿಂದ ದೂರ ಹೋಗಬೇಕು.

ವೈದ್ಯರು ಹೊಕ್ಕುಳಬಳ್ಳಿಯಲ್ಲಿರುವ ಮೂರು ರಕ್ತನಾಳಗಳನ್ನು (ಎರಡು ಅಪಧಮನಿಗಳು ಮತ್ತು ಒಂದು ಅಭಿಧಮನಿ) ಎಣಿಕೆ ಮಾಡುತ್ತಾರೆ. ಅವರು ಆಮ್ನಿಯೋಟಿಕ್ ದ್ರವದ ಪ್ರಮಾಣವನ್ನು ಪರಿಶೀಲಿಸುತ್ತಾರೆ ಮತ್ತು ಮಗುವು ಮುಕ್ತವಾಗಿ ಚಲಿಸಲು ಸಾಧ್ಯವಿದೆಯೇ ಎಂದು ನೋಡುತ್ತಾರೆ.

ಸ್ಕ್ಯಾನ್ನಲ್ಲಿ, ವೈದ್ಯರು ಮಗುವಿನ ದೇಹದ ಭಾಗಗಳನ್ನು ಅಳೆಯುತ್ತಾರೆ ಮತ್ತು ಅವರು ಮಗುವಿನ ದೈಹಿಕ ಬೆಳವಣಿಗೆಯನ್ನು ಪರೀಕ್ಷಿಸುತ್ತಾನರೆ. ವೈದ್ಯರು ಇದನ್ನು ಅಳೆಯುತ್ತಾರೆ,

ಅ.ತಲೆ ಸುತ್ತಳತೆ (ಎಚ್.ಸಿ) ಮತ್ತು ವ್ಯಾಸ (ಬೈಪರಿಯಲ್ ವ್ಯಾಸ ಅಥವಾ ಬಿ.ಪಿ.ಡಿ)

ಬ.ಕಿಬ್ಬೊಟ್ಟೆಯ ಸುತ್ತಳತೆ (ಎ.ಸಿ)

ಕ.ಎಲುಬು ಅಥವಾ ತೊಡೆ ಮೂಳೆಯ ಉದ್ದ (FL)

ಯಾವುದಾದರೂ ಅಪಾಯಗಳಿವೆಯೇ?

ಹೆಚ್ಚಿನ ಸ್ಕ್ಯಾನ್ ಗಳಿಂದ ಮಗುವು ಸಾಮಾನ್ಯವಾಗಿ ಅಭಿವೃದ್ಧಿಗೊಳ್ಳುತ್ತಿದೆ ಮತ್ತು ಯಾವುದೇ ಸಮಸ್ಯೆಗಳಿಲ್ಲ ಎಂಬುದನ್ನು ತಿಳಿಸುತ್ತವೆ.

ಏನಾದರೂ ತೊದರೆ ಅಥವಾ ಸಮಸ್ಯೆಗಳು ಕಂಡರೆ ವೈದ್ಯರು ಅದಕ್ಕೆ ಸೂಕ್ತ ಪರಿಹಾರಗಳನ್ನು ಸೂಚಿಸುತ್ತಾರೆ. ಎಲ್ಲಾ ಸ್ಕ್ಯಾನ್ ಗಳು ಎಲ್ಲಾ ತೊಂದರೆ ಅಥವಾ ಸಮಸ್ಯೆಗಳನ್ನು ಗುರುತಿಸುವುದಿಲ್ಲ, ಎಲ್ಲಾ ಸ್ಕ್ಯಾನ್ ಗಳನ್ನು ಮಾಡಿಸಿದ್ದರೂ ಮಗುವು ಆರೋಗ್ಯದ ಸಮಸ್ಯೆಯಿಂದ ಜನಿಸಬಹುದಾದ ಸಾಂಭವ್ಯ ಇರುತ್ತದೆ. ಸ್ಕ್ಯಾನ್ ನಲ್ಲಿ ಸಮಸ್ಯೆ ಅಥವಾ ತೊಂದರೆ ಕಂಡರೆ, ಅದನ್ನು ಖಚಿತ ಪಡಿಸಿಕೊಳ್ಳಲು ಮತ್ತೊಂದು ಸ್ಕ್ಯಾನ್ ಮಾಡಿಸಲು ಹೇಳಬಹುದು.

ವೈದ್ಯರು ಹೇಳಿದ ಎಲ್ಲಾ ಸ್ಕ್ಯಾನ್ ಗಳನ್ನು ಮಾಡಿಸುವುದು ಬಹಳ ಮುಖ್ಯವಾಗುತ್ತದೆ. ಇದು ಗರ್ಭಾವಸ್ಥೆಯಲ್ಲಿ ಬಹಳ ಪ್ರಮುಖವಾದ ಹೆಜ್ಜೆ, ಇದರಿಂದ ಮಗುವಿಗೆ ಮಾತ್ರ ಅಲ್ಲದೇ, ತಾಯಿಗೆ ಇರುವ ಸಮಸ್ಯೆಯನ್ನು ತಿಳಿಯಬಹುದು. ಏನಾದರೂ ತೊಂದರೆ ಇದ್ದರೆ, ಕೂಡಲೇ ಅದಕ್ಕೆ ತಕ್ಕ ಪರಿಹಾರ ಕಂಡುಕೊಂಡು, ಆರೋಗ್ಯವಂತ ಶಿಶುವಿನ ಜನನವನ್ನು ಪಡೆಯಬಹುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon