Link copied!
Sign in / Sign up
6
Shares

ಅಂಜೂರ ಹಣ್ಣಿನ 6 ಚಮತ್ಕಾರಿ ಉಪಯೋಗಗಳು

ಬಹುಷಃ ಏಷ್ಯಾ ಖಂಡದಲ್ಲಿರುವ ಎಲ್ಲಾ ಜನರಿಗೂ ಅಂಜೂರದ ಬಗ್ಗೆ ತಿಳಿದಿರುತ್ತದೆ. ಈ ಹಣ್ಣುಗಳ ವಿನ್ಯಾಸ ಮತ್ತು ರುಚಿಯೇ ವಿಭಿನ್ನ. ಒಣಗಿಸಿದ ಅಂಜೂರವು ವರ್ಷದ ಎಲ್ಲಾ ಸಮಯದಲ್ಲೂ ಲಭ್ಯವಿದ್ದರೆ, ಹಸಿ ಅಂಜೂರ ಹಣ್ಣು ಕೇವಲ ಬೇಸಿಗೆ ಕಾಲದಲ್ಲಿ ಮಾತ್ರ ಸಿಗುವುದು. ಇತ್ತೀಚಿನ ದಿನಗಳಲ್ಲಿ ಅಂಜೂರವನ್ನು ಜಗತ್ತಿನ ಬೇರೆ ಭಾಗಗಳಲ್ಲೂ ಜನರು ಇಷ್ಟಪಟ್ಟು ಸೇವಿಸುತ್ತಿದ್ದಾರೆ. ಈ ಹಣ್ಣಿನ ರುಚಿಯೇ ಅಷ್ಟೊಂದು ಅದ್ಭುತವಾಗಿದೆ. ಈ ಹಣ್ಣಿನ ಬೀಜಗಳು ಸಹ ಈ ರುಚಿಗೆ ಕೊಡುಗೆ ನೀಡುತ್ತವೆ. ಆದರೆ ಇಲ್ಲಿ ನಾವು ಹೇಳಹೊರಟಿರುವುದು ಇಂತಹ ಅಂಜೂರ ಹಣ್ಣಿನ ಉಪಯೋಗಗಳು :

೧. ಕೊಲೆಸ್ಟರಾಲ್ ಕಡಿಮೆ ಮಾಡುತ್ತದೆ ಮತ್ತು ಜೀರ್ಣ ಕ್ರಿಯೆಯನ್ನು ವೃದ್ಧಿಸುತ್ತದೆ

ಅಂಜೂರದ ಅತಿಮುಖ್ಯ ಉಪಯೋಗಗಳಲ್ಲಿ ಒಂದು ಎಂದರೆ ಅದು ಅನಾರೋಗ್ಯಕರ ಕೊಲೆಸ್ಟರಾಲ್ ಪ್ರಮಾಣವನ್ನು ಕಡಿಮೆ ಮಾಡುವುದು. ಅಂಜೂರದಲ್ಲಿ ಪೆಕ್ಟಿನ್ ಎಂಬ ಕರಗಬಲ್ಲ ಫೈಬರ್ ಇದ್ದು, ಈ ಫೈಬರ್ ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೂಲಕ ಹಾದು ಹೋಗುವಾಗ, ತನ್ನ ಜೊತೆಗೆ ನಮ್ಮ ದೇಹದಲ್ಲಿರುವ ಅನಾರೋಗ್ಯಕರ ಕೊಲೆಸ್ಟರಾಲ್ ಅನ್ನು ಕೂಡ ಎಳೆದುಕೊಂಡು ಹೋಗಿ, ನಮ್ಮ ವಿಸರ್ಜನೆಯ ಅಂಗಗಳ ಮೂಲಕ ಅದನ್ನು ಹೊರಹಾಕುತ್ತದೆ.


೨. ಮಧುಮೇಹ (ಡಯಾಬಿಟೀಸ್) ಪೀಡಿತರಿಗೆ ಒಳ್ಳೆಯದು

ಅಂಜೂರದ ಎಳೆಗಳಿಗೆ ದೇಹದಲ್ಲಿನ ಇನ್ಸುಲಿನ್ ಪ್ರಮಾಣವನ್ನು ಕಡಿಮೆ ಮಾಡುವ ಶಕ್ತಿ ಇದೆ. ಅಲ್ಲದೆ ಅಮೆರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಅವರು ಮಧುಮೇಹಿಗಳಿಗೆ ಅಂಜೂರವನ್ನು ತಿನ್ನುವಂತೆ ಶಿಫಾರಸು ಮಾಡುತ್ತಾರೆ - ಏಕೆಂದರೆ ಅಂಜೂರವು ಹೈ-ಫೈಬರ್ ಆಹಾರವಾಗಿದ್ದು ಡಯಾಬಿಟಿಸ್ ಅನ್ನು ನಿಯಂತ್ರಣದಲ್ಲಿ ಇಡುತ್ತದೆ. ಇವೆಲ್ಲವುಗಳ ಜೊತೆಗೆ ಅಂಜೂರದಲ್ಲಿ ಪೊಟ್ಯಾಸಿಯಂ ಅಂಶ ಜಾಸ್ತಿ ಇದ್ದು, ಇದು ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ.


೩. ಕರೋನರಿ (ಪರಿಧಮನಿಯ) ಹೃದಯ ರೋಗ ನಿವಾರಿಸುವುದರಲ್ಲಿ ಸಹಾಯ ಮಾಡುತ್ತದೆ

ಹೃದಯ ರೋಗಗಳಲ್ಲಿ ಬಹಳಷ್ಟು ವಿಧಗಳಿದ್ದು, ಅವುಗಳಲ್ಲಿ ಕೆಲವೊಂದನ್ನು ತಪ್ಪಿಸಲು ನಮ್ಮ ಕೈಯಲ್ಲಿ ಸಾಧ್ಯವಿರುವುದಿಲ್ಲ. ಅಂತಹ ರೋಗಗಳಲ್ಲಿ ಸಾಮಾನ್ಯವಾಗಿ ಕಂಡು ಬರುವುದೇ ಈ ಕರೋನರಿ ಹೃದ್ರೋಗ. ಒಂದು ಕುತೂಹಲಕಾರಿ ಅಂಶ ಏನು ಎಂದರೆ, ಒಣಗಿಸಿದ ಅಂಜೂರದಿಂದ ನಮಗೆ ಸಿಗುವ ಒಮೇಗಾ-೩, ಒಮೇಗಾ-೬, ಫೆನೊಲ್ ಎಲ್ಲವು ಕರೋನರಿ ಹೃದ್ರೋಗ ಉಂಟಾಗುವುದನ್ನು ತಪ್ಪಿಸುತ್ತವೆ.


೪. ಮೂಳೆಗಳ ಆರೋಗ್ಯಕ್ಕೆ

ಮೂಳೆಗಳ ಪೋಷಣೆ ಮಾಡುವ ವಿಟಮಿನ್ಸ್ ಮತ್ತು ಮಿನರಲ್ಸ್, ಮುಖ್ಯವಾಗಿ ಕ್ಯಾಲ್ಸಿಯಂ ಸಿಕ್ಕರೆ ಮೂಳೆಗಳು ಗಟ್ಟಿ ಆಗುತ್ತವೆ. ಅದೃಷ್ಟವಶಾತ್ ಅಂಜೂರದಲ್ಲಿ ಅಪಾರ ಪ್ರಮಾಣದ ಕ್ಯಾಲ್ಸಿಯಂ ಇದ್ದು, ಇದು ಮೂಳೆಗಳ ಬೆಳವಣಿಗೆಗೆ ಪೂರಕವಾಗಿದೆ.


೫. ಮಲಬದ್ದತೆಯನ್ನು ನಿವಾರಿಸುತ್ತದೆ

ಮೊದಲೇ ಹೇಳಿದಂತೆ ಅಂಜೂರದಲ್ಲಿ ಬಹಳಷ್ಟು ಫೈಬರ್ ಇರುತ್ತದೆ. ಮೂರು ಅಂಜೂರ ಹಣ್ಣುಗಳಲ್ಲಿ ಸುಮಾರು 5 ಗ್ರಾಂ ಅಷ್ಟು ಉಪಯುಕ್ತ ಫೈಬರ್ ಇರುತ್ತದೆ. ಇದು ಕರುಳಿನ ಚಲನೆಯನ್ನು ವೃದ್ಧಿಸಿ ಜೀರ್ಣ ಪ್ರಕ್ರಿಯೆಯನ್ನು ಸುಲಭ ಮಾಡುತ್ತದೆ. ಜೀರ್ಣಾವಸ್ಥೆಯ ಯಾವುದೇ ತೊಂದರೆ ಇದ್ದರು ನೀವು ಅಂಜೂರವನ್ನು ಸೇವಿಸಬಹುದು. ನಿಮಗೆ ಮಲಬದ್ಧತೆ ತೊಂದರೆ ಇದ್ದರೆ, 2-3 ಒಣ ಅಂಜೂರವನ್ನು ನೀರಿನಲ್ಲಿ ನೆನೆ ಇಟ್ಟು, ನಂತರ ಅವುಗಳನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಸೇವಿಸಿ.


೬. ತೂಕ ಇಳಿಕೆಯಲ್ಲಿ ಸಹಾಯ ಮಾಡುತ್ತದೆ

ಇಲ್ಲಿಯೂ ಕೂಡ ಅಂಜೂರದಲ್ಲಿರುವ ಫೈಬರ್ ಬೇಡದಿರುವ ಕೊಬ್ಬನ್ನು ತೆಗೆದು ಹಾಕಲು ಸಹಾಯ ಮಾಡುವ ಕಾರಣ, ವೈದ್ಯರು ಸ್ಥೂಲಕಾಯ ಇರುವವರಿಗೆ ಇದನ್ನು ತಿನ್ನಲು ಹೇಳುತ್ತಾರೆ. ಆದರೆ ಅಂಜೂರದಲ್ಲಿ ಬಹಳಷ್ಟು ಕ್ಯಾಲೊರಿಗಳು ಇರುವುದರ ಕಾರಣ, ಇದನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon