Link copied!
Sign in / Sign up
58
Shares

ನೀವು ಅಂದುಕೊಂಡಿರುವುದನ್ನ ಏಕೆ ಮಾಡಲಾಗುತ್ತಿಲ್ಲ ಕಾರಣ ನಿಮ್ಮ ರಾಶಿ ತಿಳಿಸುತ್ತದೆ

ನಿಮ್ಮ ಮನಸಿನಲ್ಲಿ ಯಾವುದೊ ಒಂದು ಗುರಿ ಹೊಂದಿರುತ್ತೀರ, ಅದಕ್ಕೆ ಬೇಕಿರುವ ಸಿದ್ಧತೆಗಳನ್ನೂ ಮಾಡಿಕೊಂಡಿರುತ್ತೀರ. ಆದರೆ ಕೆಲವೊಂದು ಸಮಯ ಅವುಗಳಿಗೆ ಅಡಚಣೆಗಳು ಉಂಟಾಗಬಹುದು. ನಿಮ್ಮ ಶ್ರಮವೆಲ್ಲವೂ ವ್ಯರ್ಥವಾಗುತ್ತದೆ ಅಥವಾ ನೀವು ಮಾಡಬೇಕೆಂದಿರುವುದು ಮತ್ತಷ್ಟು ಮುಂದೂಡಲ್ಪಡಲಾಗುತ್ತದೆ. ಆದರೆ ನಿಜವಾಗಿಯೂ ನೀವು ನಿಮ್ಮ ಗುರಿಯನ್ನ ತಲುವುದರಿಂದ ನಿಮ್ಮನ್ನು ಹಿಡಿದಿಟ್ಟಿರುವುದು ಏನು? ನಿಮ್ಮ ರಾಶಿಯು ಇದಕ್ಕೆ ಉತ್ತರ ನೀಡಬಹುದೇ? ಜ್ಯೋತಿಷ್ಯದಲ್ಲಿ ಇದಕ್ಕೆ ಉತ್ತರವಿದೆ ಎನ್ನುವರು ಕೆಲವರು. ಒಮ್ಮೆ ಪರೀಕ್ಷಿಸುವುದರಲ್ಲಿ ತಪ್ಪೇನಿದೆ ಅಲ್ಲವಾ? ಬನ್ನಿ ಹಾಗಿದ್ದರೆ, ನಿಮ್ಮ ರಾಶಿಯ ಪ್ರಕಾರ ನಿಮ್ಮನ್ನ ನಿಮ್ಮ ಗುರಿಯನ್ನ ತಲುಪುವುದರಿಂದ ತಡೆಹಿಡಿಡಿರುವುದು ಏನು ಎಂಬುದನ್ನ ತಿಳಿಯೋಣ.

 
೧. ಮೇಷ

ಆತ್ಮವಿಶ್ವಾಸದ ಕೊರತೆ ಮತ್ತು ಧೈರ್ಯದ ಕೊರತೆ. ನೀವು ಇವುಗಳ ಕಾರಣದಿಂದಲೇ ಬೇರೆಯವರ ಕಣ್ಣಿಗೆ ಯಾವಾಗಲು ಗಾಬರಿ ಆದವರಂತೆ ಅಥವಾ ಇತರರೊಂದಿಗೆ ಹೆಚ್ಚು ಬೆರೆಯುವುದಿಲ್ಲ ಎನಿಸುವಂತೆ ಕಾಣಿಸಬಹುದು. ನೀವು ನಿಮಗಾಗಿ ಬದುಕುವುದನ್ನು, ಮಾತನಾಡುವುದನ್ನು ಕಲಿಯಬೇಕು ಮತ್ತು ನಿಮ್ಮನ್ನ ನೀವು ಮೊದಲು ಒಪ್ಪಿಕೊಳ್ಳಬೇಕು.


೨. ವೃಷಭ

ಧಾರಾಳತೆ, ಅನ್ಯೋನ್ಯತೆ ಮತ್ತು ಭದ್ರತೆ - ಇವೆಲ್ಲವುಗಳ ಕೊರತೆ. ಕೆಲವೊಮ್ಮೆ ನೀವು ಬೇರೆಯವರ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುವಿರಿ. ಕೆಲವೊಂದು ವಿಷಯಗಳು ಹೀಗೇ ಇರುವುದು ಮತ್ತು ಇವುಗಳನ್ನ ಬದಲಿಸುವ ಶಕ್ತಿ ನಮಗಿಲ್ಲ ಎಂಬುದನ್ನ ಅರಿತು ನಾವು ಹೊಂದಿಕೊಂಡು ಬದುಕಲು ಪ್ರಯತ್ನಿಸಬೇಕು.


೩. ಮಿಥುನ

ಏಕಾಗ್ರತೆ, ಒಂದು ವಿಷಯವನ್ನ ಸರಿಯಾಗಿ ಅಧ್ಯಯನ ಮಾಡುವುದು, ವಿಶ್ವಾಸ - ಇವುಗಳ ಕೊರತೆ. ನಿಮಗೆ ಕಲಿಕೆಯಲ್ಲಿ ಕಷ್ಟಗಳು ಎದುರಾಗಬಹುದು, ಜನರ ಜೊತೆಯಿದ್ದಾಗ ಆತಂಕ ಹುಟ್ಟಬಹುದು ಮತ್ತು ನಿಮಗೆ ಅನಿಸಿದ್ದನ್ನು ಸರಿಯಾಗಿ ಹೇಳದೆ ಇರುವುದು ಆಗಬಹುದು. ನೀವು ಸರಿಯಾಗಿ ಮತ್ತು ಪರಿಣಾಮಕಾರಿಯಾಗಿ ಮಾತನಾಡುವುದನ್ನ ಕಲಿಯಬೇಕು ಮತ್ತು ನಿಮ್ಮದೇ ಶೈಲಿಯನ್ನ ಇಷ್ಟಪಡಬೇಕು ಮತ್ತು ಬೆಳೆಸಿಕೊಳ್ಳಬೇಕು.


೪. ಕರ್ಕಾಟಕ

ಯಾವಾಗಲೂ ಒದ್ದಾಡುವುದು, ಅನಿಸಿದ್ದನ್ನು ಬಾಯ್ಬಿಟ್ಟು ಹೇಳದಿರುವುದು ಮತ್ತು ಸ್ವಾವಲಂಬನೆಯ ಕೊರತೆ. ಇನ್ನೊಬ್ಬರಿಗೆ ಜೋತುಬೀಳುತ್ತಿರಿ, ಹಿಂದಿನದ್ದನ್ನು ನೆನೆಸಿಕೊಂಡು ಕೊರಗುತ್ತಿರ. ನೀವು ನಿಮಗೆ ಹಿಂದೆ ಆಗಿದ್ದನ್ನು ಮತ್ತು ಈಗ ಇರುವ ಪರಿಸ್ಥಿತಿಯನ್ನು ಒಪ್ಪಿಕೊಂಡು ಮುನ್ನಡೆಯಬೇಕು.


೫. ಸಿಂಹ

ತಮ್ಮ ಬೆಲೆಯೇ ತಮಗೆ ಗೊತ್ತಿಲ್ಲದಿರುವುದು, ತಮ್ಮನ್ನ ತಾವು ಸರಿಯಾಗಿ ವ್ಯಕ್ತಪಡಿಸಿಕೊಳ್ಳದೆ ಇರುವುದು ಮತ್ತು ಸಂದರ್ಭಗಳಿಗೆ ಶರಣಾಗುವುದು. ನೀವು ಇತರರಿಗೆ ಕಲ್ಲು-ಹೃದಯದವರು, ಅಸೂಯೆ ಉಳ್ಳವರು ಮತ್ತು ನಾಟಕೀಯ ಎನಿಸುವಂತೆ ಕಾಣಿಸಬಹುದು. ನಿಮಗೆ ಇಷ್ಟವಾಗುವ ದಾರಿಯಲ್ಲಿ ನಿಮ್ಮನ್ನ ನೀವು ಸರಿಯಾಗಿ ವ್ಯಕ್ತಿಪಡಿಸಿಕೊಳ್ಳುವುದನ್ನ ನೀವು ರೂಢಿಸಿಕೊಳ್ಳಬೇಕು.


೬. ಕನ್ಯಾ

ಸಮಾಧಾನ ಇರುವುದಿಲ್ಲ. ಕೆಲವೊಮ್ಮೆ ಸಣ್ಣಪುಟ್ಟ ವಿಷಯಗಳಿಗೂ ತಲೆ ಕೆಡಿಸಿಕೊಳ್ಳುವಿರಿ, ಆತಂಕಕ್ಕೆ ಒಳಗಾಗುವಿರಿ ಮತ್ತು ಗಾಬರಿ ಆಗುತ್ತೀರಿ. ಅದು ಕೂಡ ಕೆಲವೊಂದು ವಾಸ್ತವಿಕ ವಿಷಯಗಳ ವಿಚಾರಕ್ಕೆ ಬಂದಾಗ. ಚಿಕ್ಕ ಚಿಕ್ಕ ತಪ್ಪುಗಳ ಬಗ್ಗೆಯೂ ತಲೆ ಕೆಡಿಸಿಕೊಳ್ಳುತ್ತಾ ಅಲ್ಲೇ ಕೂರದೆ, ಮುನ್ನಡೆಯಬೇಕು ಎಂಬುದನ್ನ ನೆನಪಲ್ಲಿಡಬೇಕು ನೀವು.


೭. ತುಲಾ

ತಿರಸ್ಕಾರವನ್ನ ಒಪ್ಪಿಕೊಳ್ಳುವ ಮನಸ್ಸಿಲ್ಲ, ನಿಮ್ಮ ನಿರ್ಧಾರಗಳಿಗೆ ಬದ್ಧತೆಯಿಲ್ಲ ಮತ್ತು ಸಂಬಂಧಗಳಲ್ಲಿ ಅನ್ಯೋನ್ಯತೆ ಕಾಪಾಡಿಕೊಳ್ಳಲು ಆಗುವುದಿಲ್ಲ. ನಿಮ್ಮ ಸಂಬಂಧಗಳು ಕೆಲವೊಮ್ಮೆ ಹದಗೆಡಬಹುದು, ಅಲ್ಲಿ ಪ್ರೀತಿಯನ್ನ ಸ್ಥಿರವಾಗಿ ಕಾಯ್ದುಕೊಳ್ಳಲು ಆಗದೆ ಇರಬಹುದು. ನೀವು ನಿಮ್ಮ ಸಂಬಂಧಗಳನ್ನ ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ಹೆಚ್ಚು ಗಮನ ಹರಿಸಬೇಕು ಮತ್ತು ನಿಮ್ಮ ಕೆಲಸಗಳಿಗೆ ನೀವೇ ಜವಾಬ್ದಾರಿ ತೆಗೆದುಕೊಳ್ಳಬೇಕು.


೮. ವೃಶ್ಚಿಕ

ಇನ್ನೊಬ್ಬರನ್ನ ನಂಬುವುದಿಲ್ಲ, ತಿರಸ್ಕಾರ ಒಪ್ಪಿಕೊಳ್ಳುವುದಿಲ್ಲ ಮತ್ತು ಬೇಗ ಕ್ಷಮಿಸುವುದಿಲ್ಲ. ಕೆಲವೊಮ್ಮೆ ಗುಟ್ಟು ಕಾಪಾಡಿಕೊಳ್ಳಬಹುದು ನೀವು ಮತ್ತು ಯಾರನ್ನ ಹತ್ತಿರ ಸೇರಿಸದೆ ಕೂಡ ಇರಬಹುದು. ನೀವು ಹೆಚ್ಚು ಪಾಸಿಟಿವ್ ಆಗಿ ಯೋಚಿಸಬೇಕು ಮತ್ತು ಜನರನ್ನ ನಂಬಬೇಕು.


೯. ಮಕರ

ನಿಮಗೆ ಯಶಸ್ಸು ಮತ್ತು ಹೆಸರು ಸಿಕ್ಕರೆ ಅದನ್ನ ಉಳಿಸಿಕೊಳ್ಳುವುದು ಗೊತ್ತಿಲ್ಲ, ಇನ್ನೊಬ್ಬರ ಸಹಾಯ ಪಡೆಯುವುದಿಲ್ಲ ಮತ್ತು ಇತರರಿಗೆ ಸಹಕರಿಸುವುದಿಲ್ಲ. ಕೆಲಸಗಳನ್ನ ಒಬ್ಬರೇ ಮಾಡುವುದು, ಎಲ್ಲರಿಂದ ದೂರ ಉಳಿಯುವಿರಿ ಮತ್ತು ದಬ್ಬಾಳಿಕೆ. ಕೆಲವೊಮ್ಮೆ ನೀವು ನಿಮಗೆ ಯಶಸ್ಸು ಸಿಕ್ಕಿರುವುದು ಎಷ್ಟೊಂದು ಜನರ ಸಹಾಯದಿಂದ ಎಂಬುದನ್ನ ಮರೆಯಬಾರದು.


೧೦. ಧನುರಾಶಿ

ಸ್ವಂತ ಬುದ್ದಿವಂತಿಕೆಯನ್ನ ನಂಬದೆ ಇರುವುದು, ತಮ್ಮ ನಂಬಿಕೆಗಳಿಗೆ ಬದ್ಧವಾಗದಿರಬಹುದು, ತಮ್ಮ ಸ್ವಂತ ಅನುಭವಗಳಿಂದಲೇ ಬುದ್ದಿ ಕಲಿಯದೇ ಇರುವುದು. ಇತರರ ನಂಬಿಕೆಗಳಿಂದ ಬೇಗ ಪ್ರೇರೇಪಿತರಾಗುತ್ತೀರಿ. ಬೇರೆಯವರ ಮಾತುಗಳನ್ನೇ ಹೆಚ್ಚು ನಂಬುತ್ತೀರಿ. ನೀವು ನಿಮಗಾಗೇ ಯೋಚಿಸುವುದನ್ನು ಕಲಿಯಬೇಕು. ನಿಮ್ಮ ಅಭಿಪ್ರಾಯಗಳಿಗೆ ಬದ್ಧರಾಗಿರಬೇಕು ಮತ್ತು ತಮಗೆ ತಾವೇ ನಾಯಕರಾಗಿರಬೇಕು.


೧೧. ಕುಂಭ

ಸ್ನೇಹಿತರನ್ನ ಮಾಡಿಕೊಳ್ಳುವುದರಲ್ಲಿ ಮತ್ತು ಸ್ನೇಹ ಕಾಪಾಡಿಕೊಳ್ಳುವುದರಲ್ಲಿ ವಿಫಲತೆ, ತಮ್ಮ ಸ್ವಂತ ಶಕ್ತಿಗಳನ್ನ ನಂಬದೆ ಇರುವುದು ಮತ್ತು ಇತರರಂತೆ ತಾವು ಕೂಡ ಎಂದು ಭಾವಿಸುವುದು. ತಮ್ಮಲ್ಲಿನ ತೊಂದರೆಗಳನ್ನ ತಾವೇ ತಿದ್ದುಕೊಳಬೇಕೆ ಹೊರತು, ನೀವು ಇನ್ನೊಬ್ಬರು ಹೇಳುವವರೆಗೆ ಕಾಯಬಾರದು.


೧೨. ಮೀನಾ

ಆಗಿ ಹೋಗಿರುವ ವಿಷಯಗಳ ಬಗ್ಗೆ ಕೊರಗುತ್ತಾ ಕೂರುವುದನ್ನು ಬಿಡಬೇಕು, ಭಯಗಳನ್ನ ದೂರಮಾಡಿಕೊಳ್ಳಬೇಕು ಮತ್ತು ತಮ್ಮಲ್ಲಿ ತಾವು ವಿಶ್ವಾಸ ಬೆಳೆಸಿಕೊಳ್ಳಬೇಕು. ನೀವು ಕೆಲವೊಮ್ಮೆ ತುಂಬಾ ಸೂಕ್ಷ್ಮ, ತುಂಬಾ ಭಾವುಕರಾಗುತ್ತೀರಿ. ನೀವು ತುಂಬಾ ನಾಚಿಕೊಳ್ಳುವ ಕಾರಣ ಕೆಲವೊಮ್ಮೆ ನಿಮ್ಮ ಬಾಗಿಲಿಗೆ ಅವಕಾಶಗಳು ಬಂದರು, ನೀವು ಅವುಗಳಿಗೆ  ತೋರಿಸುವಿರಿ. ಹೀಗಾಗಿ ನೀವು ಸೃಜನಶೀಲರಾಗಿರಬೇಕು ಮತ್ತು ಧೈರ್ಯದಿಂದ ಮುನ್ನುಗ್ಗಬೇಕು.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon