Link copied!
Sign in / Sign up
203
Shares

ಜನರು ನಿಮ್ಮ ಬಗ್ಗೆ ಅಂದುಕೊಳ್ಳುವ, ಆದರೆ ಬಾಯ್ಬಿಟ್ಟು ಹೇಳದ ವಿಷಯ ಯಾವುದೆಂದು ರಾಶಿ ತಿಳಿಸುತ್ತದೆ

ನಂಬದೆ ಇರುವವರಿಗೆ ರಾಶಿಯು ಕೇವಲ ನೀವು ಯಾವ ಸಮಯದಲ್ಲಿ ಜನಿಸಿದ್ದು ಎಂಬುದನ್ನ ಮಾತ್ರ ತಿಳಿಸುವಂತದ್ದು. ಆದರೆ ನಂಬುವವರಿಗೆ ಈ ರಾಶಿಯು ತಮ್ಮ ಶಕ್ತಿ ಮತ್ತು ದೌರ್ಬಲ್ಯಗಳು, ತಮ್ಮ ಇಷ್ಟ ಮತ್ತು ಅನಿಷ್ಟಗಳು ಮತ್ತು ಇನ್ನೂ ಹಲವಾರು ವಿಷಯಗಳನ್ನ ತೆರೆದಿಡುತ್ತದೆ. ಇಷ್ಟೇ ಏಕೆ, ನಿಮ್ಮ ರಾಶಿಯು ಜನರು ನಿಮ್ಮನ್ನು ನೋಡಿ ಅಸೂಯೆ ಪಟ್ಟುಕೊಳ್ಳುವಂತ ನಿಮ್ಮಲ್ಲಿರುವ ಆ ಗುಣ ಯಾವುದೆಂದು ಕೂಡ ತಿಳಿಸುತ್ತದೆ. ನಿಮ್ಮ ರಾಶಿಯ ಬಗ್ಗೆ ಇಲ್ಲಿ ನಾವು ವಿಶ್ಲೇಷಿಸಿರುವುದು ಸರಿ ಇದೆಯೇ ಎಂಬುದನ್ನು ಓದಿ ನೋಡಿ.

೧. ಮೇಷ

ಒಳ್ಳೆಯ ವಿಷಯ : ಜನರು ನಿಮ್ಮ ಜೀವನವು ಹೇಗೆ ಎಲ್ಲವನ್ನೂ ಕೂಡಿದೆ ಎಂದು ಆಶ್ಚರ್ಯ ಪಡುವರು. ನಿಮಗೆ ಗೊತ್ತಿರುವುದಕ್ಕಿಂತ ಜಾಸ್ತಿ ಜನರು ನೀವು ಎಷ್ಟು ಜಾಣರು ಮತ್ತು ಎಲ್ಲರು ನಿಮ್ಮೊಂದಿಗಿರಲು ಎಷ್ಟು ಖುಷಿಪಡುವರು ಎಂದು ಮಾತನಾಡುತ್ತಾರೆ.

ಕೆಟ್ಟ ವಿಷಯ : ನಿಮಗೆ ಯಾವುದು ಒಳ್ಳೆಯದು ಎಂದು ಎಲ್ಲಾ ಬಾರಿಯೂ ಗೊತ್ತಾಗುವುದಿಲ್ಲ. ಕೆಲವೊಮ್ಮೆ ನೀವು ಯಾರ ಮಾತು ಕೇಳದೆ ನಿಮಗೆ ಅನಿಸಿದ್ದೇ ಮಾಡುತ್ತೀರಾ. ಆದರೆ ಬಹಳಷ್ಟು ಬಾರಿ ನೀವು ಇನ್ನೊಬ್ಬರು ಏನಾದರು ಮಾಡಿ ಆದಮೇಲೆ ಅದರ ಸ್ಫೂರ್ತಿ ಪಡೆದು ಆ ಕೆಲಸ ಮಾಡುತ್ತೀರಾ. ಹೀಗಾಗಿ ಜನರು ನೀವು ಬೇರೆಯವರು ಮಾಡಿದ ಮೇಲೆ, ಅದನ್ನು ನೋಡಿ ಮಾಡುವ ಬದಲು ನೀವೇ ಇನ್ನಷ್ಟು ಧೈರ್ಯ ಮಾಡಿ ಮುನ್ನುಗ್ಗಿ ಆ ಕೆಲಸ ಮಾಡಬೇಕಿತ್ತು ಎಂದುಕೊಳ್ಳುವರು.


೨. ವೃಷಭ ರಾಶಿ

ಒಳ್ಳೆಯ ವಿಷಯ : ನೀವು ಮಹತ್ವಾಕಾಂಕ್ಷಿ. ನೀವು ಕೇವಲ ಅಂದುಕೊಂಡಿದ್ದನು ಮಾಡಿ ತಿರುವುದಷ್ಟೇ ಅಲ್ಲ, ಅದನ್ನು ಮಾಡುವ ರೀತಿಯೂ ಅದ್ಭುತ. ನೀವು ತುಂಬಾ ನಿಯತ್ತಿನ ಗೆಳತಿ ಆಗಿರುತ್ತೀರಾ. ನಿಮ್ಮ ಜೀವನವು ಎಷ್ಟೊಂದು ಅದ್ಭುತವಾಗಿದೆ ಎಂದು ನೋಡಿಯೇ ಇತರರು ಅಸೂಯೆ ಪಟ್ಟುಕೊಳ್ಳುವರು ಮತ್ತು ನಿಮ್ಮ ಜೀವನಶೈಲಿ ಅಳವಡಿಸಿಕೊಳ್ಳಬೇಕು ಎಂದುಕೊಳ್ಳುವರು.

ಕೆಟ್ಟ ವಿಷಯ : ನೀವು ಕೆಲವೊಮ್ಮೆ ನಿಮ್ಮ ಜೀವನದಲ್ಲಿ ಇಲ್ಲವೆಂದರು ಎಲ್ಲಾ ಸರಿ ಇದೆ ಎಂದು ತೋರಿಸಿಕೊಳ್ಳುವಿರಿ. ನೀವು ಎಲ್ಲರ ಗಮನ ನಿಮ್ಮ ಮೇಲೆ ಇರಬೇಕು ಎಂದು ಬಯಸುತ್ತೀರಾ, ಇದು ನೀವು ಮಾಡುವುದರಿಂದ ಎಲ್ಲರಿಗೂ ತಿಳಿಯುತ್ತದೆ. ನೀವು ಇನ್ನಷ್ಟು ನೈಜ್ಯವಾಗಿ ಇದ್ದು, ನಿಮ್ಮ ಬದುಕಿನಲ್ಲಿರುವ ತೊಂದರೆಗಳನ್ನು ಇದ್ದಂತೆಯೇ ಹೇಳಿದರೆ ಜನರು ನಿಮ್ಮನ್ನು ಇನ್ನಷ್ಟು ಮೆಚ್ಚುತ್ತಾರೆ.


೩. ಮಿಥುನ

ಒಳ್ಳೆಯ ವಿಷಯ : ಒಬ್ಬರಿಗೆ ಸಿಗಬಹುದಾದ ಅತ್ಯುತ್ತಮ ಸ್ನೇಹಿತೆ ಎಂದರೆ ಅದು ನೀವೇ. ನೀವು ಸ್ವಾಭಾವಿಕವಾಗಿಯೇ ನಿಸ್ವಾರ್ಥಿ, ದಯಾಳು, ಸೃಜನಶೀಲೆ ಮತ್ತು ದೃತಿ ಹೊಂದಿರುವವರು. ನೀವು ನಿಮಗೆ ಹೊಂದುವ ಜನರು ಸಿಕ್ಕರೆ ಥಟ್ಟನೆ ಅವರನ್ನು ನಿಮ್ಮ ನೆಚ್ಚಿನ ಗೆಳತಿಯನ್ನಾಗಿ ಮಾಡಿಕೊಳ್ಳುತ್ತೀರಾ. ಆಗ ಅವರು ನಿಮ್ಮನ್ನು ಬಿಟ್ಟಿರಲಾರರು. ನಿಮ್ಮ ಈ ಶಕ್ತಿ ನಮಗೂ ಇರಬೇಕಿತ್ತು ಎಂದು ಇತರರು ಬಯಸುವರು.

ಕೆಟ್ಟ ವಿಷಯ : ನೀವು ನಿಮ್ಮಲ್ಲಿರುವ ತಪ್ಪುಗಳನ್ನು, ತೊಂದರೆಗಳನ್ನು ಒಪ್ಪಿಕೊಳ್ಳುವುದಿಲ್ಲ. ಬದಲಿಗೆ ವಿಷಯವನ್ನೇ ಬದಲಿಸಲು ಇನ್ನೊಂದೇನೋ ಹೊಸ ಕ್ಯಾತೆ ತೆಗೆಯುತ್ತೀರಾ. ನೀವು ಯಾವಾಗಲೂ ಎಲ್ಲರೂ ನಿಮ್ಮ ಕಡೆ ಗಮನ ಕೊಡುತ್ತಿರಬೇಕು ಎಂದು ಬಯಸುತ್ತೀರಾ. ಆದರೆ ಎಲ್ಲರೂ ನಿಮಗೆ ಬೇಕಿರುವ ಹಾಗೆ ಇರಲು ಸಾಧ್ಯವಿಲ್ಲ ಎಂಬುದನ್ನು ತಿಳಿಯಬೇಕು.


೪. ಕಟಕ

ಒಳ್ಳೆಯ ವಿಷಯ : ಜನರು ನಿಮ್ಮ ಜೊತೆಗೂಡಿದರೆ ಸಾಕು, ಅವರು ನಿಮ್ಮ ಬೆನ್ನು ಬಿಡುವುದೇ ಇಲ್ಲ. ನೀವು ಎಲ್ಲರ ಬೆಸ್ಟ್ ಫ್ರೆಂಡ್. ನೀವು ಅಂದುಕೊಂಡಿರುವುದಕ್ಕಿಂತ ಹೆಚ್ಚು ಜನರು ನಿಮ್ಮನ್ನು ಅವರ ಒಳ್ಳೆಯ ಸ್ನೇಹಿತೆ ಎಂದುಕೊಂಡಿದ್ದಾರೆ. ನಿಮ್ಮಲ್ಲಿ ಇರುವ ಯಾವುದೋ ಒಂದು ಗುಣ ಜನರು ನಿಮ್ಮನ್ನು ಬಿಟ್ಟಿರದಂತೆ ಮಾಡುತ್ತದೆ. ಬಹಳಷ್ಟು ಜನರಿಗೆ ನಿಮ್ಮ ಬಗ್ಗೆ ಹೇಳಲು ಯಾವುದೇ ಕೆಟ್ಟ ವಿಷಯವೇ ಇರುವುದಿಲ್ಲ.

ಕೆಟ್ಟ ವಿಷಯ : ನೀವು ಒಂದು ತುಂಬಾ ಭಾವನಾತ್ಮಕ ಜೀವಿ. ನಿಮಗೆ ಯಾವಾಗಲೂ ಇನ್ನೊಬ್ಬರ ಸಮ್ಮತಿ ಬೇಕೇ ಬೇಕು. ನಿಮ್ಮ ಸುತ್ತಲಿನ ಜನರು ಯಾವಾಗಲೂ ಒಂದೇ ರೀತಿ ಇರಬೇಕು ಎಂದು ಬಯಸುವಿರಿ, ಅವರು ಸ್ವಲ್ಪ ಬದಲಾದರೂ ನೀವು ಆತಂಕಕ್ಕೆ ಒಳಗಾಗುತ್ತೀರಿ. ನೀವು ಅವರನ್ನು ಮೆಚ್ಚಿಸಲಿಕ್ಕೆ ಎಷ್ಟು ಶ್ರಮ ಹಾಕುವಿರೆಂದರೆ, ಕೆಲವೊಮ್ಮೆ ನಿಮ್ಮ ಬಗ್ಗೆಯೇ ಮರೆತು ಬಿಡುವಿರಿ. ಕಟಕ ರಾಶಿಯ ಒಂದು ಕೆಟ್ಟ ಗುಣ ಎಂದರೆ ಅವರು ತಮ್ಮ ಎಳೆಸುತನ ಬಿಡಲು ಬಹಳ ಸಮಯ ತೆಗೆದುಕೊಳ್ಳುವರು.


೫. ಸಿಂಹ

ಒಳ್ಳೆಯ ವಿಷಯ : ಬಹಳಷ್ಟು ಜನರಿಗೆ ಅವರು ನೋಡಿರುವ ಅತ್ಯಂತ ಧೈರ್ಯಶಾಲಿ, ಗಟ್ಟಿ ಮನುಷ್ಯ ಎಂದರೆ ಅದು ನೀವೇ. ನಿಮ್ಮ ಉತ್ಸಾಹ ಮತ್ತು ಕಂಕಣಬದ್ದತೆ ಅಚ್ಚರಿ ಹುಟ್ಟಿಸುವಂತದ್ದು. ನೀವು ಅಕ್ರಮಕಾರಿ ಗುಣಗಳು ತೋರಿಸದೆ ಇದ್ದರು, ನೀವು ನಡೆದುಕೊಳ್ಳುವ ರೀತಿ ನೋಡಿ ಜನರು ನಿಮ್ಮೊಂದಿಗೆ ಕ್ಯಾತೆ ತೆಗೆಯುವ ಮುನ್ನ ಎರಡು ಬಾರಿ ಯೋಚಿಸುವರು.

ಕೆಟ್ಟ ವಿಷಯ : ನೀವು ತುಂಬಾ ಹತಾಶೆ ಮನೋಭಾವದವರು ಮತ್ತು ನಿಯಂತ್ರಣ ಸಾಧಿಸುವ ಮನೋಭಾವದವರು. ನಿಮಗಿಂತ ಇನ್ನೊಬ್ಬರು ಯಾರಾದರೂ ಸ್ವಲ್ಪ ಉತ್ತಮರಿದ್ದರು, ನೀವು ಅವರನ್ನು ನೋಡಿದರೆ ಉರಿದು ಬೀಳುತ್ತೀರಾ. ನೀವು ತಂಡದ ಆಟಗಾರ ಆಗಿರಲು ಹೆಚ್ಚು ಪ್ರಯತ್ನ ಮಾಡಬೇಕು. ನೀವು ಎಲ್ಲ ಸಮಯ ಎಲ್ಲರನ್ನೂ ಪ್ರೀತಿಸಬಹುದು - ಹೀಗೆ ಮಾಡಿದರೆ ಜನರು ನಿಮ್ಮನ್ನು ಇಷ್ಟಪಡದೇ ಇರಲು ಸಾಧ್ಯವಿಲ್ಲ.


೬. ಕನ್ಯಾ

ಒಳ್ಳೆಯ ವಿಷಯ : ನೀವು ಇದ್ದೀರಾ ಎಂದರೆ ನಿಮ್ಮ ಸುತ್ತಲೂ ಇರುವವರಿಗೆಲ್ಲಾ ಖುಷಿ. ನೀವು ಒಳ್ಳೆಯ ಹಾಸ್ಯಪ್ರಜ್ಞೆ ಅಥವಾ ಮಹತ್ವಾಕಾಂಕ್ಷೆ ಅಥವಾ ಸಾಹಸಪ್ರಜ್ಞೆ - ಈ ಮೂರರಲ್ಲಿ ಒಂದು ಹೊಂದಿರಬಹುದು. ನೀವು ಇಷ್ಟಪಡುವ ಜನರೊಂದಿಗೆ ನೀವು ಇದ್ದಾಗ, ನೀವು ಅವರ ಕಾಳಜಿ ಮಾಡುತ್ತಿರುತ್ತೀರಾ ಅಥವಾ ಅವರನ್ನು ನಗಿಸುತ್ತಿರುತ್ತೀರಾ. ನೀವು ಬಹಳ ಸೂಕ್ಷ್ಮ ಸಂವೇದನೆ ಉಳ್ಳವರು ಕೂಡ ಆಗಿರುತ್ತೀರಾ. ಈ ಎಲ್ಲಾ ಗುಣಗಳ ಮಿಶ್ರಣವು ನಿಮ್ಮನ್ನು ಅದ್ಭುತ ಸಂಗಾತಿ ಅಥವಾ ಗೆಳತಿಯನ್ನಾಗಿ ಮಾಡುತ್ತದೆ.

ಕೆಟ್ಟ ವಿಷಯ : ನಿಮ್ಮಲ್ಲಿ ಕೆಲವು ಕೆಟ್ಟ ಗುಣಗಳು ಇವೆ - ಇದನ್ನು ನೀವು ಒಪ್ಪಲೇ ಬೇಕು. ನೀವು ಕೆಲವೊಮ್ಮೆ ಮಾನಸಿಕ ತುಲನೆ ಕಳೆದುಕೊಂಡರೆ, ನಿಮಗೆ ಸಿಟ್ಟಿನಲ್ಲಿ ಅಥವಾ ಬೇಸರದಲ್ಲಿ ಏನು ಮಾತಾಡುತ್ತಿದ್ದೀರಾ ಎಂಬ ಅರಿವೇ ಇರುವುದಿಲ್ಲ. ಕೆಲವೊಮ್ಮೆ ನೀವು ಏನೂ ತಿಳಿದುಕೊಳ್ಳದೆಯೇ ವ್ಯಕ್ತಿಯ ಬಗ್ಗೆ ಅಭಿಪ್ರಾಯ ಬೆಳೆಸೊಕೊಳ್ಳುತ್ತೀರಾ ಮತ್ತು ಕಾರಣವಿಲ್ಲದೆ ಅವರನ್ನು ದೂಷಿಸುತ್ತೀರಾ. ಇದನ್ನು ಕಡಿಮೆ ಮಾಡಬೇಕು.


೭. ತುಲಾ

ಒಳ್ಳೆಯ ವಿಷಯ : ನಿಮ್ಮ ಜೀವನವು ಒಂದು ಕನಸಿನಂತೆ ಕಾಣುತ್ತದೆ. ನೀವು ಬೇರೆಯವರು ಅಸೂಯೆ ಪಡುವಂತಹ ಸೌಂದರ್ಯ, ಸ್ಟೈಲ್, ಉತ್ಸಾಹ ಮತ್ತು ಸಫಲತೆ ಎಲ್ಲದರ ಮಿಶ್ರಣವನ್ನು ನಿಮ್ಮದಾಗಿಸಿಕೊಂಡಿರುವಿರಿ. ಎಲ್ಲರೂ ನಿಮ್ಮನ್ನು ಇಷ್ಟಪಡುವರು ಮತ್ತು ಸಭೆ-ಸಮಾರಂಭಗಳಿಗೆ ನಿಮಗೆ ಆಹ್ವಾನ ಬಂದೇ ಬರುತ್ತದೆ. ನೀವು ಮಾಡುವ ಕೆಲಸದಲ್ಲಿ ನೀವು ನಿಪುಣತೆ ಹೊಂದಿರುತ್ತೀರಾ. ನಿಮ್ಮ ಜೀವನವು ಎಷ್ಟೊಂದು ಅಚ್ಚುಕಟ್ಟಾಗಿ ಇದೆ ಎಂದು ಜನರು ಅಂದುಕೊಳ್ಳುವುದಕ್ಕೆ ಇದೂ ಒಂದು ಕಾರಣ.

ಕೆಟ್ಟ ವಿಷಯ : ನಿಮಗೆ ಹೆಚ್ಚಾಗಿ ನಿಮ್ಮದೇ ಯೋಚನೆ. ಬೇರೆಯವರಿಗಿಂತ ನೀವು ಉತ್ತಮರು ಎಂಬುದು ನಿಮ್ಮ ಭಾವನೆ. ಆದರೆ ನಿಮ್ಮ ಈ ಭಾವನೆ ಜನರಿಗೆ ತಿಳಿಯುತ್ತದೆ. ಇದು ಯಾವುದಾದರು ಒಂದು ಹಂತದಲ್ಲಿ ತೊಂದರೆ ಉಂಟುಮಾಡಬಹುದು. ನೀವು ಕೇವಲ ಜನರು ನಿಮ್ಮನ್ನು ನೋಡಿ ಮೆಚ್ಚಬೇಕು ಎಂಬ ಕಾರಣಕ್ಕೆ ಅವರ ಸ್ನೇಹ ಬೆಳೆಸಬಾರದು.


೮. ವೃಶ್ಚಿಕ

ಒಳ್ಳೆಯ ವಿಷಯ : ನೀವು ಒಂದು ರೀತಿಯ ಒರಟು ಹಾಸ್ಯಪ್ರಜ್ಞೆ ಹೊಂದಿರುವವರು. ನಿಮ್ಮ ಈ ವಿಶಿಷ್ಟ ಹಾಸ್ಯಪ್ರಜ್ಞೆ ಇದ್ದದ್ದು ಇದ್ದ ಹಾಗೆಯೇ ಹೇಳಿಬಿಡುವಂತೆ ಮಾಡಿಸುತ್ತದೆ. ನೀವು ಕಠೋರವೆನಿಸುವಷ್ಟು ನಿಷ್ಠಾವಂತರು. ನಿಮ್ಮ ಸ್ನೇಹ ಯಾರಾದರೂ ಬೆಳೆಸಿದರೆಂದರೆ, ಅವರ ಪ್ರತಿ ಹೆಜ್ಜೆಯಲ್ಲೂ ನೀವು ಅವರೊಂದಿಗೆ ಇರುತ್ತೀರಾ. ನಿಮ್ಮ ಸ್ನೇಹಿತರ ಗುಂಪಲ್ಲಿ ಎಲ್ಲರೂ ನಂಬುವ ಮತ್ತು ಬೆಲೆ ಕೊಡುವ ವ್ಯಕ್ತಿ ಎಂದರೆ ಅದು ನೀವೇ.

ಕೆಟ್ಟ ವಿಷಯ : ನಿಮಗೆ ಆತ್ಮಸ್ಥೈರ್ಯ ಅಥವಾ ಆತ್ಮಗೌರವ ಎನ್ನುವುದು ಬಹಳ ಕಡಿಮೆ. ನೀವು ಇನ್ನೊಬ್ಬರನ್ನು ಮೆಚ್ಚಿಸಲಿಕ್ಕೆ, ಅವರು ನಿಮ್ಮ ನಡೆಯನ್ನು ಪ್ರಶಂಸಿಸಿವಂತೆ ಮಾಡಲು ನೀವು ಏನು ಬೇಕಾದರೂ ಮಾಡಲು ಸಿದ್ಧರಿರುತ್ತೀರಾ. ನಿಮಗೆ ಅಷ್ಟೊಂದು ಕಡಿಮೆ ಸ್ಥೈರ್ಯ ಇರುವ ಕಾರಣ ಮೇಲ್ನೋಟಕ್ಕೆ ನೀವು ಸಂಕೋಚ ಮನೋಭಾವದವರಂತೆ ಕಾಣುತ್ತೀರಾ. ಆದರೆ ನಿಜ ಹೇಳಬೇಕೆಂದರೆ ನಿಮಗೆ ಧೈರ್ಯ ಕಡಿಮೆ. ಎಲ್ಲಿ ಯಾರು ಏನು ಹೇಳುತ್ತಾರೋ ಎಂಬ ಭಯಕ್ಕೆ ನೀವು ನಿಮ್ಮ ಹೃದಯವನ್ನು ಬಹಳಷ್ಟು ನೋಯಿಸುವಿರಿ.


೯. ಧನುರಾಶಿ

ಒಳ್ಳೆಯ ವಿಷಯ : ನೀವು ಒಂದು ಪ್ರಬುದ್ಧ ವ್ಯಕ್ತಿ. ನೀವು ವಿಚಾರ ಉಳ್ಳವರಾಗಿದ್ದು, ನೀವು ಜಗತ್ತನ್ನು ನೋಡುವ ರೀತಿ ನೋಡಿ ಜನರು ನಿಮ್ಮನ್ನು ಗೌರವಿಸುವರು. ನಿಮ್ಮ ಬುದ್ದಿವಂತಿಕೆ, ವಿಚಾರಗಳು ಮತ್ತು ಹೊಸತನ್ನು ಹುಡುಕುವ, ಬದಲಾವಣೆ ಬಯಸುವ ನಿಮ್ಮ ಗುಣಗಳು, ನಿಮ್ಮ ಧೈರ್ಯ ಮತ್ತು ಜೀವನಶೈಲಿ ಎಲ್ಲವೂ ಬೇರೆಯವರಿಗೆ ಅಸೂಯೆ ಮೂಡಿಸುವಂತದ್ದು.

ಕೆಟ್ಟ ವಿಷಯ : ನಿಮಗೆ ಒರಟು ಹಾಸ್ಯಪ್ರಜ್ಞೆ ಇದ್ದು ಅದು ಎಲ್ಲರಿಗೂ ಇಷ್ಟ ಆಗುವುದಿಲ್ಲ. ಕೆಲವೊಮ್ಮೆ ನೀವು ನಿಮ್ಮ ಹಾಸ್ಯದೊಂದಿಗೆ ಇತರರ ಮನಸ್ಸು ನೋಯಿಸಬಹುದು. ಎಲ್ಲದಕ್ಕಿಂತ ಮುಖ್ಯವಾಗಿ ನೀವು ತೋರಿಸಿಕೊಳ್ಳುವಷ್ಟು ನಿಮ್ಮ ಜೀವನದಲ್ಲಿ ಎಲ್ಲವೂ ಇಲ್ಲ. ನೀವು ಸದಾಕಾಲ ನಿಮ್ಮ ಬಗ್ಗೆ ಗೊಂದಲ ಹೊಂದಿರುತ್ತೀರಿ ಮತ್ತು ನಿಮ್ಮ ಜೀವನವನ್ನ ಬದಲಿಸುವುದು ಹೇಗೆ ಎಂಬುದರ ಬಗ್ಗೆ ಯೋಚಿಸುತ್ತಿರುತ್ತೀರಾ.


೧೦. ಮಕರ

ಒಳ್ಳೆಯ ವಿಷಯ : ನೀವು ಜವಾಬ್ದಾರಿಗಳನ್ನು ಇಷ್ಟಪಡುವ ವ್ಯಕ್ತಿ. ನೀವು ಅಂದುಕೊಂಡಿದ್ದನ್ನ ಯಾರಿಗೂ ತಿಳಿಯದೆ ಮಾಡಿ ಮುಗಿಸುತ್ತೀರಾ. ತಮ್ಮ ಪ್ರತಿಭೆ ಮತ್ತು ಶಕ್ತಿಗಳನ್ನು ಅರಿತಿರುವ ವ್ಯಕ್ತಿಗಳಲ್ಲಿ ನೀವೂ ಒಬ್ಬರು ಮತ್ತು ನೀವು ಅವುಗಳನ್ನು ಸದುಪಯೋಗ ಮಾಡಿಕೊಳ್ಳುವಿರಿ. ನೀವೂ ಯಾವುದೇ ಹಂತದಲ್ಲಿ ಇದ್ದರು, ಜನರು ನೀವು ಮುನ್ನುಗ್ಗುವ ರೀತಿಯನ್ನು ನೋಡಿ ಬೆರಗಾಗುತ್ತಾರೆ. ಅದಲ್ಲದೆ ಅದರೊಂದಿಗೆ ನೀವು ಅಷ್ಟೆಲ್ಲಾ ಮಾಡಿದರೂ ಹೇಗೆ ಎಲ್ಲರೊಡನೆ ಚೆನ್ನಾಗಿ ಬೆರೆಯುವಿರಿ ಎಂಬುದಕ್ಕೆ ನಿಮ್ಮನ್ನು ಗೌರವಿಸುತ್ತಾರೆ.

ಕೆಟ್ಟ ವಿಷಯ : ನೀವು ಬಹಳ ನಿರುತ್ಸಾಹ ಹೊಂದಿರುತ್ತೀರಾ. ಕೆಲವೊಮ್ಮೆ ನೀವು ಬಹಳ ಬೋರಿಂಗ್ ಎನಿಸುತ್ತೀರಾ, ಇನ್ನೂ ಕೆಲವೊಮ್ಮೆ ಹೇಡಿಯಂತೆ ಎನಿಸುತ್ತೀರಾ. ನಿಮ್ಮ ಜೀವನದಲ್ಲಿರುವ ಜನರು, ನೀವು ವಾಸ್ತವತೆಯನ್ನು ಇದ್ದಂತೆ ನೋಡಲಿ ಎಂದು ಬಯಸುವರು. ಒಂದು ವೇಳೆ ನೀವು ತೆಗೆದುಕೊಂಡಿರುವ ನಿರ್ಧಾರ ಫಲ ಕೊಡದಿದ್ದರೆ ಅಥವಾ ತಪ್ಪಾಗಿದ್ದರೆ, ಅದರಲ್ಲೇ ಮುಳುಗುವ ಬದಲು ಅದರಿಂದ ಹೊರಬರಲು ಪ್ರಯತ್ನಿಸಿ. ತುಂಬಾ ಭಂಡತನ ಒಳ್ಳೆಯದಲ್ಲ.


೧೧. ಕುಂಭ

ಒಳ್ಳೆಯ ವಿಷಯ : ನೀವು ಅನ್ವೇಷಣಕಾರರು. ನಿಮ್ಮ ಜೀವನವಿಡಿ ನೀವು ಒಂದು ವಸ್ತುವನ್ನು ತೆಗೆದುಕೊಂಡು ಅದನ್ನು ಇನ್ನೊಂದಾಗಿ ಮಾರ್ಪಾಡು ಮಾಡುವುದರಲ್ಲೇ ಕಳೆದಿದ್ದೀರಾ. ನಿಮ್ಮ ಗೆಳೆಯರ ಗುಂಪಲ್ಲಿ ಅತ್ಯಂತ ಸೃಜನಶೀಲೆ, ವಿಭಿನ್ನ ವ್ಯಕ್ತಿ ಎಂದರೆ ಅದು ನೀವೇ. ನೀವು ಇತರರಿಗಿಂತ ಬೇರೆ ರೀತಿಯಲ್ಲಿ ಯೋಚಿಸುತ್ತೀರಾ. ಈ ಗುಣಗಳೇ ಎಲ್ಲರೂ ನಿಮ್ಮನ್ನು ಆರಾಧಿಸುವಂತೆ ಮಾಡುವುದು.

ಕೆಟ್ಟ ವಿಷಯ : ನಿಮ್ಮ ಮೂಡ್ ಹೀಗೆ ಇರುತ್ತದೆ ಎಂದು ಹೇಳಲು ಆಗುವುದಿಲ್ಲ ಮತ್ತು ನೀವು ತುಂಬಾ ಅಸೂಯೆ ಪಡುವವರು ಆಗಿರುತ್ತೀರಾ. ಇದಕ್ಕೆಲ್ಲ ಕಾರಣ ನಿಮ್ಮಲ್ಲಿ ಅಡಗಿರುವ ಅಭದ್ರತೆಯ ಭಾವನೆಯೇ ಕಾರಣ. ನೀವು ಒಂದು ಕೆಲಸ ಮಾಡಲು ನಿಮಗೆ ಬೇಕಿರುವ ನಿಮ್ಮ ಇಚ್ಛಾಶಕ್ತಿ ಬಹಳಷ್ಟು ಬಾರಿ ಇನ್ನೊಬ್ಬರ ಮುಂದೆ ನೀವು ಕೂಡ ಅವರಷ್ಟೇ ಸಾಮರ್ಥ್ಯ ಉಳ್ಳವರು ಎಂದು ತೋರಿಸಿಕೊಳ್ಳುವ ಹಂಬಲದಿಂದಲೇ ಬರುತ್ತದೆ. ನೀವು ಕೆಲವೊಮ್ಮೆ ಬಹಳಷ್ಟು ಆತುರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಇದರಿಂದ ಜೀವನಪರ್ಯಂತ ಪಶ್ಚಾತಾಪ ಪಡುತ್ತೀರಿ. ಈ ಒಂದು ಕಾರಣಕ್ಕೆ ಜನರು ನಿಮ್ಮಿಂದ ಸ್ವಲ್ಪ ದೂರ ಉಳಿಯುವರು.


೧೨. ಮೀನಾ

ಒಳ್ಳೆಯ ವಿಷಯ : ನೀವು ಒಂದು ಕಲಾವಿದೆ, ಒಂದು ಸೃಷ್ಟಿಕರ್ತೆ. ನಿಮಗೆ ದೇವರು ಒಂದು ಪ್ರತಿಭೆ ನೀಡೇ ಇರುತ್ತಾನೆ ಮತ್ತು ನೀವು ಜೀವನವನ್ನು ನೋಡುವ ರೀತಿಯೇ ವಿಭಿನ್ನ. ನೀವು ಎಲ್ಲಾ ಕಲೆಗಳಲ್ಲಿ ನಿಸ್ಸಿಮರು. ನೀವು ನಿಮ್ಮನ್ನು ಚೆನ್ನಾಗಿ ಅರಿತಿರುತ್ತೀರಾ ಮತ್ತು ನಿಮ್ಮ ಮನಸ್ಸಿನ ಆಳದವರೆಗೆ ಇಳಿಯುತ್ತೀರಾ. ಜನರು ನಿಮ್ಮ ನೈಜ್ಯತೆಯನ್ನು ಆರಾಧಿಸುವರು ಮತ್ತು ಹೇಗೆ ನೀವು ಜೀವನದಲ್ಲಿ ಅವಶ್ಯವಿರುವ ವಿಷಯಗಳಿಗಾಗಿ ನಿಮ್ಮ ಅಹಂ ಅನ್ನು ಬದಿಗಿಡುತ್ತಿರಾ ಎಂಬುದನ್ನು ಇಷ್ಟಪಡುತ್ತಾರೆ.

ಕೆಟ್ಟ ವಿಷಯ : ನೀವು ಯಾವಾಗಲೂ ಆಕಾಶದಲ್ಲೇ ತೇಲಾಡುತ್ತಿರುತ್ತೀರಾ. ನೀವು ನಿಮ್ಮ ಕನಸುಗಳಲ್ಲಿ ಎಷ್ಟೊಂದು ಕಳೆದು ಹೋಗಿರುತ್ತೀರಾ ಎಂದರೆ, ಕೆಲವೊಮ್ಮೆ ನೀವು ಮಾಡಬೇಕಿರುವ ಕೆಲಸಗಳನ್ನೇ ಮಾಡುವುದಿಲ್ಲ. ನೀವು ನಿಮ್ಮ ಜೀವನವನ್ನು ಒಟ್ಟುಗೂಡಿಸಬೇಕು ಮತ್ತು ಮಾನವ ಜವಾಬ್ದಾರಿಗಳೆಲ್ಲಾ ಸುಳ್ಳು ಎಂಬಂತೆ ವರ್ತಿಸುವುದು ಕಡಿಮೆ ಮಾಡಬೇಕು. ಹೌದು, ಮನಸ್ಸನ್ನು ಅರಿಯುವುದು ಎಷ್ಟು ಮುಖ್ಯವೋ, ಬಾಹ್ಯ ಜಗತ್ತಿನಲ್ಲಿ ಜವಾಬ್ದಾರಿ ನಿರ್ವಹಿಸುವುದು ಅಷ್ಟೇ ಮುಖ್ಯ. ನೀವು ನಿಮ್ಮ ಜವಾಬ್ದಾರಿಗಳನ್ನ ಸರಿಯಾಗಿ ನಿಭಾಯಿಸದ ಕಾರಣ ಜನರು ನಿಮ್ಮಿಂದ ದೂರ ಇರಲು ಇಷ್ಟಪಡಬಹುದು.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon