Link copied!
Sign in / Sign up
7
Shares

ನಿಮ್ಮ ಅಂಡೋತ್ಪತ್ತಿ ಮತ್ತು ಋತುಚಕ್ರದ ಬಗ್ಗೆ ನೀವು ತಿಳಿದಿರಬೇಕಾದ ಮುಖ್ಯವಾದ ಸತ್ಯ ಸಂಗತಿಗಳು

ಅಂಡಾಶಯದಿಂದ ಬಲಿತ ಅಥವಾ ಪ್ರೌಢ ಮೊಟ್ಟೆ ಹೊರ ಬಂದ ಮೇಲೆ ಅಂಡೋತ್ಪತ್ತಿ ಆಗುವುದು. ತನ್ನ ಋತುಚಕ್ರ ಮತ್ತು ಅಂಡೋತ್ಪತ್ತಿ ಸಮಯವನ್ನು ಅರ್ಥಮಾಡಿಕೊಳ್ಳುವುದು ಮಹಿಳೆಗೆ ತುಂಬಾ ಪ್ರಮುಖವಾಗಿದೆ, ಏಕೆಂದರೆ ಗರ್ಭಾವಸ್ಥೆಯನ್ನು ನಿರ್ಧರಿಸುವ ಅಥವಾ ಗರ್ಭಾವಸ್ಥೆಯನ್ನು ತಡೆಯುವ ಒಂದು ಪ್ರಮುಖ ಅಂಶ ಅಥವಾ ಸಂಗತಿ ಇದಾಗಿದೆ.

ಪ್ರತಿ ತಿಂಗಳು ನಿಮ್ಮ ದೇಹದಲ್ಲಿ ನಿಜವಾಗಿಯೂ ಆಗುವುದಾದರೂ ಏನು?

ಅಂಡೋತ್ಪತ್ತಿ ಆಗುವಾಗ ಮತ್ತು ಋತುಚಕ್ರ ಆಗುವಾಗ ನಿಮ್ಮ ದೇಹದಲ್ಲಿ ಏನಾಗುತ್ತದೆ? ಇದಕ್ಕೆ ಹಾರ್ಮೋನುಗಳು ಕಾರಣ. ಅಂಡೋತ್ಪತ್ತಿ ಆಗಲು ಇದು ನಡೆಯುತ್ತದೆ.

ಮೊದಲ ದಿನ ಆಗುವ ಸ್ರಾವವನ್ನು ಒಂದನೇ ದಿನದ ಋತುಚಕ್ರ ಎಂದು ಕರೆಯುವೆವು.

ನೀವು ಅಂಡೋತ್ಪತ್ತಿ ಮಾಡಿದ ೧೪ ದಿನದ ನಂತರ ನಿಮ್ಮ ಮುಟ್ಟು ಸಂಭವಿಸುತ್ತದೆ.

ಈ ಸಮಯದಲ್ಲಿ ಸಂಭೋಗ ನಡೆಯಲಿಲ್ಲ ಎಂದರೆ ಗರ್ಭ ನಿಲ್ಲುವುದಿಲ್ಲ.

ಅಂಡೋತ್ಪತ್ತಿ ಮತ್ತು ಋತುಚಕ್ರದ ಬಗೆಗಿನ ಕೆಲವು ಸತ್ಯಗಳು

೧.ಅಂಡೋತ್ಪತ್ತಿ ಆದ ನಂತರ ಬಿಡುಗಡೆ ಆದ ಮೊಟ್ಟೆಯು ೧೨-೨೪ಗಂಟೆಗಳ ಮೇಲೆ ಬದುಕಿರುವುದಿಲ್ಲ.

೨.ಪ್ರತಿ ಬಾರಿ ಅಂಡೋತ್ಪತ್ತಿ ಆದಾಗ ಒಂದು ಮೊಟ್ಟೆ ಮಾತ್ರ ಬಿಡುಗಡೆ ಆಗುತ್ತದೆ. ಆದರೆ ಕೆಲವೊಮ್ಮೆ ಎರಡು ಅಥವಾ ಮೂರು ಮೊಟ್ಟೆಗಳು ಬಿಡುಗಡೆ ಆಗುತ್ತವೆ.

೩.ಅಂಡೋತ್ಪತ್ತಿ ಆಗುವುದು, ಒತ್ತಡ, ಕಾಯಿಲೆ, ದೈನಂದಿನ ಜೀವನ ಶೈಲಿ ಮುಂತಾದವುಗಳಿಂದ ಏರುಪೇರಾಗುವ ಸಾಧ್ಯತೆಗಳಿವೆ.

೪.ಅಂಡೋತ್ಪತ್ತಿ ಸಮಯದಲ್ಲಿ ಕೆಲವು ಮಹಿಳೆಯರು ರಕ್ತ ಕಣಗಳನ್ನು ಕಾಣುವರು.

೫.ಪಲವತ್ತಾದ ಮೊಟ್ಟೆಯು ಭ್ರೂಣವಾಗಲು ಅಂಡೋತ್ಪತ್ತಿ ಆದ ೬-೧೨ ದಿನಗಳ ಕಾಲವನ್ನು ತೆಗೆದುಕೊಳ್ಳುತ್ತದೆ.

೬.ಪ್ರತಿ ಮಹಿಳೆಯರು ಮಿಲಿಯನ್ ನಷ್ಟು ಅಪಕ್ವವಾದ ಮೊಟ್ಟೆಯನ್ನು ತಮ್ಮಲ್ಲಿ ಇರಿಸಿಕೊಂಡು ಜನಿಸಿರುತ್ತಾರೆ, ಮತ್ತು ಅಂಡೋತ್ಪತ್ತಿಗಾಗಿ ಕಾಯುವರು.

೭.ಕೆಲವೊಮ್ಮೆ ಅಂಡೋತ್ಪತ್ತಿ ಆಗದಿದ್ದರೂ ಋತುಚಕ್ರವನ್ನು ಅನುಭವಿಸುವರು.

೮.ಹಾಗೆಯೆ ಋತುಚಕ್ರ ಆಗದೆ ಇದ್ದರು, ಅಂಡೋತ್ಪತ್ತಿಯನ್ನು ಮಾಡಬಹುದು.

೯.ಅಂಡೋತ್ಪತ್ತಿ ಆಗುವ ಸಮಯದಲ್ಲಿ ಕೆಲವು ಮಹಿಳೆಯರು ಜನನಾಂಗದ ಭಾಗದಲ್ಲಿ ಸ್ವಲ್ಪ ನೋವನ್ನು ಅನುಭವಿಸುವರು.

೧೦.ಒಂದು ವೇಳೆ ಮೊಟ್ಟೆ ಪಲವತ್ತತೆ ಆಗದೆ ಇದ್ದರೆ, ಗರ್ಭಾಶಯ ಅದನ್ನು ತನ್ನಲ್ಲಿ ಹೀರಿಕೊಳ್ಳುತ್ತದೆ.

೧೧.ಸಂಭೋಗದ ನಂತರ ಪುರುಷನ ವೀರ್ಯವು ಮಹಿಳೆಯ ದೇಹದಲ್ಲಿ ೫ ದಿನಗಳವರೆಗೆ ಜೀವಿಸಬಹುದು.

೧೨.ನೀವು ಅಂಡೋತ್ಪತ್ತಿ ಆಗುವ ೩ ದಿನಗಳ ಮುಂಚೆ ಅಥವಾ ೨-೩ ದಿನ ನಂತರ ಸಂಭೋಗದಲ್ಲಿ ತೊಡಗಿಕೊಂಡರೆ ಗರ್ಭಧರಿಸುವ ಸಾಧ್ಯತೆ ತುಂಬಾ ಹೆಚ್ಚಿರುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon