Link copied!
Sign in / Sign up
8
Shares

ಹೆಣ್ಣಿನ ಚರ್ಮದ ಮೇಲಿನ ಅನಗತ್ಯ ಕೂದಲನ್ನು ತೆಗೆಯಲು ಸಲಹೆಗಳು !

ಹೆಣ್ಣು ಎಂದರೆ ಸೌಂದರ್ಯ, ಚೆಲುವು ಎಂದರೆ ಹೆಣ್ಣು, ಆದರೆ ನಿಮ್ಮ ಚರ್ಮದ ಮೇಲಿನ ಬೇಡವಾದ ಕೂದಲುಗಳು ನಿಮ್ಮ ತ್ವಚೆಯ ಹೊಳಪನ್ನು ಕಡಿಮೆ ಮಾಡುವುದರ ಜೊತೆಗೆ ನಿಮ್ಮ ಬಾಹ್ಯ ಸೌಂದರ್ಯವನ್ನು ಕಾಣದಂತೆ ಮಾಡಿರಬಹುದು. ಚಿಂತಿಸಬೇಡಿ, ನೀವು ಶೇವ್ ಅಥವಾ ರಾಸಾಯನಿಕ ಕ್ರೀಮ್ ಗಳನ್ನು ಬಳಸುವುದರಿಂದ ಮತ್ತೆ ಮತ್ತೆ ಕೂದಲನ್ನು ತೆಗೆಯುವ ಅಥವಾ ಅದನ್ನು ಮಾಡುವಾಗ ತ್ವಚೆಗೆ ಸಮಸ್ಯೆ ಅಥವಾ ಹಾನಿಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಅದಕ್ಕಾಗಿ ನಿಮ್ಮ ತ್ವಚೆಗೆ ಯಾವುದೇ ಅಡ್ಡಪರಿಣಾಮ ಅಥವಾ ಸಮಸ್ಯೆಯಾಗದಂತೆ ಕೂದಲನ್ನು ತೆಗೆಯುವ ಜೊತೆಗೆ ಚರ್ಮದ ಹೊಳಪು ಮತ್ತು ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಕೆಲವು ಸಲಹೆಗಳು.

೧.ಅರಿಶಿಣ ಮತ್ತು ಹಾಲು
೧.ಒಂದು ಚಮಚ ಅರಿಶಿಣ ಪುಡಿ ಮತ್ತು ಹಾಲನ್ನು ಒಂದು ಬಟ್ಟಲಿನಲ್ಲಿ ಹಾಕಿ ಮಿಶ್ರಣ ಮಾಡಿ.
೨.ನಿಮ್ಮ ಚರ್ಮದ ಮೇಲಿರುವ ಕೂದಲನ್ನು ತೆಗೆಯಬೇಕೆಂದಿರುವ ಜಾಗಕ್ಕೆ ಇದನ್ನು ಬೆರಳಿನಿಂದ ಹಚ್ಚಿ. ಇದನ್ನು ನೀವು ತ್ವಚೆಗೂ ಹಚ್ಚಬಹುದು.
೩.ಅದು ಒಣಗುವ ವರೆಗೆ ಹಾಗೆ ಬಿಟ್ಟು, ನಂತರ ಅದನ್ನು ಕೂದಲು ಬೆಳೆಯುತ್ತಿರುವ ವಿರುದ್ಧ ದಿಕ್ಕಿನಲ್ಲಿ ವೃತ್ತಾಕಾರವಾಗಿ ತಿಕ್ಕಿರಿ (ಇದನ್ನು ನೀವು ತ್ವಚೆಯ ಹೊಳಪನ್ನು ಹೆಚ್ಚಿಸಲು ಬಳಸಿದರೆ ಒಣಗಿದ ನಂತರ ನೀರಿನಿಂದ ತೊಳೆದುಕೊಳ್ಳಿ).
೪.ತಣ್ಣೀರಿನಿಂದ ತೊಳೆಯಿರಿ.
೨.ಮೊಟ್ಟೆಯ ಬಿಳಿ ಭಾಗ
೧.ಮೊಟ್ಟೆಯ ಬಿಳಿಭಾಗವನ್ನು ಜೋಳದ ಪುಡಿ(ಹಿಟ್ಟು) ಮತ್ತು ಸಕ್ಕರೆ ಪುಡಿ ಜೊತೆ ಮಿಶ್ರಿಸಿ.
೨.ಪೇಸ್ಟ್ ತರಹ ಆಗುವವರೆಗೂ ಅದನ್ನು ಚೆನ್ನಾಗಿ ಕಲಸಿ.
೩.ಈ ಪೇಸ್ಟ್ ಅನ್ನು ಕೂದಲಿರುವ ಜಾಗಕ್ಕೆ ಹಚ್ಚಿ.
೪.೩೦ ನಿಮಿಷಗಳ ಕಾಲ ಇದನ್ನು ಹಾಗೆಯೆ ಬಿಟ್ಟು ನಂತರ ಉಗುರು ಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.
೩.ಕಡಲೆ ಹಿಟ್ಟು
೧.ಸ್ವಲ್ಪ ಕಡಲೆ ಹಿಟ್ಟನ್ನು ತೆಗೆದುಕೊಂಡು, ಇದಕ್ಕೆ ಅರಿಷಿಣ ಮತ್ತು ಸ್ವಲ್ಪ ನೀರನ್ನು ಬೆರಸಿ ಚೆನ್ನಾಗಿ ಮಿಶ್ರಣ ಮಾಡಿ.
೨.ಈ ಮಿಶ್ರಣ ಪೇಸ್ಟ್ ತರಹ ಆದ ನಂತರ ಇದನ್ನು ತ್ವಚೆಗೆ ಹಚ್ಚಿ. ಇದನ್ನು ತ್ವಚೆಗೆ ಹಚ್ಚುವುದರಿಂದ ತ್ವಚೆಯ ಹೊಳಪು ಹೆಚ್ಚುವುದರ ಜೊತೆಗೆ ಮೊಡವೆ ಮತ್ತು ಮುಂತಾದ ಕಲೆಗಳನ್ನು ತೆಗೆಯುದರಲ್ಲೂ ಇದು ತುಂಬಾ ಸಹಾಯಕಾರಿಯಾಗಿದೆ.
೩.ಸ್ವಲ್ಪ ಸಮಯದ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
೪.ನಿಂಬೆಹಣ್ಣು, ಸಕ್ಕರೆ ಮತ್ತು ನೀರು
೧.ನಿಂಬೆಹಣ್ಣಿನ ರಸವನ್ನು ಒಂದು ಬಟ್ಟಲಿನಲ್ಲಿ ಹಾಕಿ.
೨.ಇದಕ್ಕೆ ಸಕ್ಕರೆ ಮತ್ತು ಸ್ವಲ್ಪ ನೀರನ್ನು ಹಾಕಿ ಪೇಸ್ಟ್ ತರ ಆಗುವ ವರೆಗೆ ಚೆನ್ನಾಗಿ ಕಲಸಿ.
೩.ಪೇಸ್ಟ್ ತಯಾರಾದ ಮೇಲೆ ತ್ವಚೆಗೆ ಹಚ್ಚಿರಿ.
೪.೧೫ ನಿಮಿಷಗಳ ನಂತರ ಇದನ್ನು ಉಗುರು ಬೆಚ್ಚನೆಯ ನೀರಿನಿಂದ ತೊಳೆಯಿರಿ.
Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon