Link copied!
Sign in / Sign up
9
Shares

ಅಮ್ಮಂದಿರ ಜೀವನ ಸುಲಭವಾಗಿಸುವ ನೀವು ಹಿಂದೆಂದೂ ಕೇಳಿರದ 8 ಸೂಪರ್ ಕ್ಲೀನಿಂಗ್ ಟ್ರಿಕ್ಸ್!

ಮನೆ ಸ್ವಚ್ಛವಾಗಿದ್ದರೆ ನಮ್ಮ ಮನಸಿಗೆ ನೆಮ್ಮದಿ. ಆದರೆ ಮಕ್ಕಳನ್ನ ನೋಡಿಕೊಂಡು, ಅಡುಗೆ ಮಾಡಿಕೊಂಡು, ನಾವೂ ಕೆಲಸಕ್ಕೆ ಹೋಗಿ ಬಂದು ಮನೆಯನ್ನು ಪ್ರತಿನಿತ್ಯವೂ ಸ್ವಚ್ಛವಾಗಿಡಬೇಕು ಎಂದರೆ ಅದೇನು ಸುಲಭದ ಮಾತಲ್ಲ. ಆದರೆ, ಅದು ಕಷ್ಟವೆಂದ ಮಾತ್ರಕ್ಕೆ ಮನೆ ಸ್ವಚ್ಛವಾಗಿ ಇರದಿದ್ದರೆ, ಹೆಂಗಸರಿಗೆ ಅದಕ್ಕಿಂತ ಹೆಚ್ಚು ಇರಿಸುಮುರಿಸು ಉಂಟಾಗುತ್ತದೆ. ಆದರೆ, ಅದೃಷ್ಟವಶಾತ್ ಹೆಂಗೆಳೆಯರ ಜೀವನ ಸುಲಭವಾಗಲು ಕೆಲವೊಂದು ವಿಶಿಷ್ಟ ಟ್ರಿಕ್ಸ್ ಇವೆ. ಈ ಟ್ರಿಕ್ಸ್ ಮೂಲಕ ನೀವು ನಿಮ್ಮ ಮನೆಯನ್ನೂ ಸ್ವಚ್ಛವಾಗಿಡಬಹುದು ಮತ್ತು ಹೆಚ್ಚು ಆಯಾಸವನ್ನು ಕೂಡ ದೂರ ಇಡಬಹುದು. ಯಶಸ್ವೀ ತಾಯಿಯಾಗಲು ಇವುಗಳು ನಿಮಗೆ ತಿಳಿದಿರಬೇಕು. ಕ್ಲೀನಿಂಗ್ ಟ್ರಿಕ್ಸ್ ಜೊತೆ ಯಶಸ್ವೀ ತಾಯಿ ತಿಳಿದಿರಬೇಕಾದ ಇತರೆ ವಿಷಯಗಳು ಯಾವುದೆಂದು ಇಲ್ಲಿ ಕ್ಲಿಕ್ ಮಾಡಿ ತಿಳಿಯಿರಿ. 

ಹಾಗಿದ್ದರೆ ಅಂತಹ ಟ್ರಿಕ್ಸ್ ಯಾವುದೆಂದು ನೋಡೋಣ ಬನ್ನಿ.


೧. ತರಕಾರಿ ಕತ್ತರಿಸುವ ಮಣೆಯನ್ನು ಸ್ವಚ್ಛವಾಗಿಡಲು


ನೀವು ತರಕಾರಿ ಕತ್ತರಿಸಲೆಂದು ಬಳಸುವ ಮಣೆಯ ಮೇಲೆ ಬಹಳಷ್ಟು ಕಲೆಗಳು ಉಂಟಾಗಿರುತ್ತವೆ. ನೀವು ಏನೇ ಮಾಡಿದರೂ ಅವುಗಳು ಹೋಗುವುದಿಲ್ಲ. ಆದರೆ, ಆ ಮಣೆಯ ಮೇಲೆ ಸ್ವಲ್ಪ ಪುಡಿ ಉಪ್ಪನ್ನು ಹರಡಿ, ನಂತರ ಅದರ ಮೇಲೆ ನಿಂಬೆಹಣ್ಣಿನಿಂದ ಚೆನ್ನಾಗಿ ಉಜ್ಜಿದರೆ, ಎಲ್ಲಾ ಕಲೆಗಳು ಮಾಯವಾಗುತ್ತವೆ.


೨. ಫಳ-ಫಳ ಹೊಳೆಯುವ ಗಾಜು


ನೀವು ನಿಮ್ಮ ಮನೆಯ ಗಾಜಿನ ವಸ್ತುಗಳನ್ನ (ಕಿಟಕಿಯಿಂದ ಹಿಡಿದು, ಗಾಜಿನ ಟೇಬಲ್ ವರೆಗೆ) ಸ್ಪ್ರೇ ಅಥವಾ ಸೋಪಿನ ನೀರು ಬಳಸಿ ಒರೆಸುತ್ತೀರ ಮತ್ತು ಬಟ್ಟೆಯಿಂದ ನೀರನ್ನು ಒರೆಸುತ್ತೀರ. ಆದರೆ, ಗಾಜಿನ ಮೇಲೆ ನೀರಿನ ಕಲೆ ಹಾಗೆ ಉಳಿದುಬಿಡುತ್ತದೆ. ಇಂತ ಸಮಯದಲ್ಲಿ ನೀವು ಹಳೆಯ ನ್ಯೂಸ್ ಪೇಪರ್ ಅನ್ನು ಒಂದು ಉಂಡೆ ರೀತಿ ಮಾಡಿ, ಅದರಿಂದ ಗಾಜನ್ನ ಒರೆಸಿದರೆ ನೀರಿನ ಕಲೆಗಳು ಹೋಗುತ್ತವೆ.


೩. ಇಯರ್ ಫೋನ್ಸ್ ಅನ್ನು ಸ್ವಚ್ಛವಾಗಿಡಿ ಹೀಗೆ


ಗಲೀಜಾಗಿರುವ ಇಯರ್ ಫೋನ್ಸ್ ಗಿಂತ ಅಸಹ್ಯ ಎನಿಸುವುದು ಮತ್ತೊಂದಿಲ್ಲ. ಅದರಲ್ಲೂ ನೀವು ಇನ್ನೊಬ್ಬರೊಂದಿಗೆ ಅದನ್ನು ಹಂಚಿಕೊಂಡು ಬಳಸುತ್ತಿದ್ದೀರಿ ಎಂದರೆ, ಅದನ್ನು ಮುಟ್ಟಲಾಗುವುದಿಲ್ಲ. ನೀವು ಇಯರ್ ಫೋನ್ಸ್ ಒಳಭಾಗವನ್ನ ಟೂತ್ ಬ್ರಷ್ ಉಪಯೋಗಿಸಿ ಮೃದುವಾಗಿ ಸ್ವಚ್ಛವಾಗಿಸಬಹುದು. ಇಯರ್ ಫೋನ್ಸ್ ಹೊರಭಾಗವನ್ನ ಹಸಿ ಬಟ್ಟೆಯಲ್ಲಿ ಒರೆಸಿ.


೪. ಐರನ್ ಬಾಕ್ಸ್ ಮೇಲಿನ ಅಂಟುಗಳು


ಐರನ್ ಬಾಕ್ಸ್ ಅನ್ನು ಬಹುದಿನಗಳಿಂದ ಬಳಸಿದ ನಂತರ, ಅದರ ತಳದಲ್ಲಿ ಅಂಟಂಟು ಪದಾರ್ಥವನ್ನು ಕಾಣಬಹುದು. ಇದಕ್ಕೆ ಏನು ಮಾಡಬೇಕೆಂದರೆ, ನಿಮ್ಮ ಐರನ್ ಟೇಬಲ್ ಮೇಲೆ ಪುಡಿ ಉಪ್ಪನ್ನು ಹರಡಿ. ನಂತರ ಐರನ್ ಬಾಕ್ಸ್ ಚೆನ್ನಾಗಿ ಬಿಸಿ ಆಗುವವರೆಗೆ ಕಾದು, ಅದನ್ನು ಆ ಉಪ್ಪಿನ ಮೇಲೆ ಇಡಿ. ನಿಮ್ಮ ಐರನ್ ಬಾಕ್ಸ್ ಹೊಸದರಂತೆ ಆಗುತ್ತದೆ.


೫. ನೆಲದ ಮೇಲೆ ಬಿದ್ದಿರುವ ಕೂದಲನ್ನ ಮಾಯಾ ಮಾಡಿಬಿಡಿ


ಮೆಡಿಕಲ್ ಸ್ಟೋರ್ಸ್ ಅಲ್ಲಿ 10 ರುಪಾಯಿಗೆ ಸಿಗುವ ರಬ್ಬರ್ ಗ್ಲೋವ್ಸ್ ಅನ್ನು ಖರೀದಿಸಿ. ಅದನ್ನು ಕೈಗೆ ಧರಿಸಿಕೊಂಡು, ನಲ್ಲಿ ನೀರಿನಡಿ ನಿಮ್ಮ ಕೈಯನ್ನು ವದ್ದೆ ಮಾಡಿಕೊಳ್ಳಿ. ಹೀಗೆ ಹಸಿ ಗ್ಲೋವ್ಸ್ ಧರಿಸಿಕೊಂಡು, ಸೋಫಾ ಮೇಲೆ ಕೈ ಆಡಿಸಿದರೆ ನಿಮ್ಮ ಮನೆಯ ನಾಯಿಯ ಕೂದಲು, ಮನೆ ಮಂದಿಯ ಕೂದಲು, ಹಾಗೆಯೇ ಗ್ಲೋವ್ಸ್ ಗೆ ಅಂಟಿಕೊಳ್ಳುತ್ತವೆ.


೬. ಮಕ್ಕಳ ಬಿಳಿ ಶೂ ಅನ್ನು ಬಿಳಿಯದ್ದಾಗಿಯೇ ಕಾಪಾಡಿ


ನಿಮ್ಮ ಮಕ್ಕಳು ಶನಿವಾರದಂದು ಧರಿಸುವ ವೈಟ್ ಸ್ಕೂಲ್ ಶೂಸ್ ಆಗಿರಲಿ ಅಥವಾ ನೀವು ಧರಿಸುವ ಬಿಳಿ ಸ್ಪೋರ್ಟ್ಸ್ ಶೂಸ್ ಆಗಿರಲಿ, ಅವುಗಳನ್ನ ಬಿಳಿಯಾಗಿಯೇ ಇರಿಸಲು ಒಂದು ಟ್ರಿಕ್ ಇದೆ. ಅದೇನೆಂದರೆ, ನಿಮ್ಮ ನೈಲ್ ಪೋಲಿಷ್ ರಿಮೂವರ್ ಅನ್ನು ಒಂದು ಹತ್ತಿಯ ಉಂಡೆಗೆ ಹಚ್ಚಿಕೊಂಡು, ಅದನ್ನು ಶೂ ಮೇಲಿನ ಕಳೆಯ ಮೇಲೆ ಉಜ್ಜಿ. ಕಲೆಯು ಮಾಯವಾಗುವುದನ್ನು ನೋಡಿ.


೭. ಈ ಟ್ರಿಕ್ ಗೆ ನೀವು ಫ್ಯಾನ್ ಆಗಿಬಿಡುತ್ತೀರಿ!


ಧೂಳು ಹಿಡಿದ ಫ್ಯಾನ್ ಅನ್ನು ಪೊರಕೆ ಅಥವಾ ಡಸ್ಟರ್ ಇಂದ ಒರೆಸಲು ಹೋಗಿ, ನಿಮ್ಮ ಮೈ, ಬಟ್ಟೆ ಮತ್ತು ಮನೆಯೆಲ್ಲಾ ಧೂಳು ಮಾಡಿಕೊಳ್ಳುವ ಬದಲು ಒಂದು ಸೂಪರ್ ಟ್ರಿಕ್ ಬಳಸಿ, ಇವೆಲ್ಲವನ್ನೂ ತಪ್ಪಿಸಬಹುದು. ನಿಮ್ಮ ಮನೆಯಲ್ಲಿನ ಯಾವುದಾದರೂ ಹಳೆಯ ಪಿಲ್ಲೋ ಕವರ್ (ತಲೆದಿಂಬಿನ ಕವರ್) ಅಥವಾ ಒಗೆಯಲು ಹಾಕಬೇಕೆಂದಿರುವ ಪಿಲ್ಲೋ ಕವರ್ ಅನ್ನು ಫ್ಯಾನಿನ ರೆಕ್ಕೆಗೆ ತೊಡಿಸಿ. ನಂತರ ಫ್ಯಾನಿನ ರೆಕ್ಕೆಯನ್ನು ಒತ್ತಿಕೊಂಡು ಪಿಲ್ಲೋ ಕವರ್ ಅನ್ನು ಹಿಂದೆ ಎಳೆಯುತ್ತಾ ಬನ್ನಿ. ಧೂಳೆಲ್ಲವೂ ಪಿಲ್ಲೋ ಕವರ್ ಒಳಗೆ ಸೇರಿಕೊಳ್ಳುತ್ತವೆ.


೮. ಸ್ಪೂನ್, ಚಾಕು ಎಲ್ಲಾ ಫಳಫಳ!


ಒಂದು ಉದ್ದನೆಯ ಪಾತ್ರೆಯಲ್ಲಿ ಸಮವಾಗಿ ನೀರು ಮತ್ತು ನಿಂಬೆರಸವನ್ನು ಬೆರೆಸಿದ ಮಿಶ್ರಣವನ್ನು ತುಂಬಿಸಿ. ಅದರೊಳಗೆ ಚಾಕು, ಸ್ಪೂನ್, ಇಕ್ಕಳ ಮತ್ತು ಮುಂತಾದವುಗಳನ್ನು ಹತ್ತು ನಿಮಿಷಗಳವರೆಗೆ ನೆನೆ ಇಡಿ. ನಂತರ ಒಂದು ಮೃದು ಬಟ್ಟೆಯಿಂದ ಅವುಗಳನ್ನ ಒರೆಸಿ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon