Link copied!
Sign in / Sign up
10
Shares

ಲೋಳೆ ಸರದ (ಆಲೋ ವೇರ) ಆರೋಗ್ಯ ಪ್ರಯೋಜನಗಳು

ನಮ್ಮ ನಿಮ್ಮೆಲ್ಲರಿಗು ತಿಳಿದಿರುವ  ಸಿದ್ಧೌಷಧ ಗುಣವಿರುವ ಲೋಳೆಸರ ಎಂಬ ಸಸ್ಯದ ಮೇಲೆ, ಆಯುರ್ವೇದ ಔಷಧಿಗಳ ಉದ್ಯಮವು ಸಂಪೂರ್ಣವಾಗಿ ಅವಲಂಬಿತವಾಗಿದೆ. ಆದರೆ ಹೊರಗಿನ ನೋಟಕ್ಕೆ ನೋಡಲು ಮುದವೆನಿಸದ, ಈ ಸಸ್ಯದ ಸಾಮರ್ಥ್ಯವೆಷ್ಟೆಂದರೆ, ನಮ್ಮ ದಿನನಿತ್ಯದ ಹಲವಾರು ಆರೋಗ್ಯ ಸಮಸ್ಯೆಯನ್ನು ಸುಲಭವಾಗಿ ಗುಣಪಡಿಸುವ ಶಕ್ತಿ ಲೂಳೆಸರಕ್ಕಿದೆ. ಈ ಸಸ್ಯದಿಂದ ಎರಡು ರೀತಿಯ ಅಂಶವನ್ನು ಹೊರತೆಗೆಯಬಹುದು. ಮೊದಲನೆಯದಾಗಿ ಎಲೆಗಳ ಮಧ್ಯದಲ್ಲಿರುವ ಅರೆ ಘನರೂಪದ ದ್ರಾವಣ (ಜೆಲ್), ಏರಡನೆಯದಾಗಿ ಸಸ್ಯವನ್ನು ಹೊರಗಿನಿಂದ ಕತ್ತರಿಸಿದಾಗ ಸೋರುವ ಹಾಲಿನಂತಿರುವ ದ್ರವ(ಲೇಟೆಕ್ಸ್) ವನ್ನು, ನಾವೆಲ್ಲರು ನೋಡಿದ್ದೇವೆ. ಲೋಳೆಸರದ ಇವೆರೆಡು ಉತ್ಪನ್ನಗಳಿಗೆ ರೋಗವನ್ನು ವಾಸಿಮಾಡುವ ಅತ್ಯದ್ಭುತ ಗುಣ ವಿಶೀಷಗಳಿದೆ.

ಈ ಸಸ್ಯದ ಮಾಯಾಗುಣದಿಂದ ಇದರ ಅಸ್ತಿತ್ವವನ್ನು ಬಹು ಉದ್ದಿಮೆಗಳಲ್ಲಿ ನಾವು ಕಾಣಬಹುದು. ಇದರ ಗುಣ ವಿಷೇಶವು ಕೇವಲ ಸೌಂದರ್ಯ ಉದ್ದಿಮೆಗಳಲ್ಲಿ ಮಾತ್ರವಲ್ಲದೆ, ದೇಹದ ತೂಕ ಇಳಿಸುವಲ್ಲಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮುಂತಾದ ವೈದ್ಯಕೀಯ ಉದ್ದಿಮೆಗಳಲ್ಲೂ ಲೋಳೆಸರದ ಪಾತ್ರ ಪ್ರಶಂಸನೀಯ.

೧.ದದ್ದು, ಉರಿಯೂತ ಹಾಗೂ ಚರ್ಮದ ಉಪದ್ರವವನ್ನು ಕಡಿಮೆ ಮಾಡುತ್ತದೆ:

ಒಂದು ಸಲ ಲೋಳೆಸರದ ಹೊರಚರ್ಮದ ಮೇಲಿರುವ ಮುಳ್ಳನ್ನು ತೆಗೆದು ಕಯ್ಯಲ್ಲಿರಿಸಿಕ್ಕೊಂಡಾಗ, ನಮಗೆಲ್ಲರಿಗು ಈ ಸಸ್ಯದ  ವಿಶೇಷತೆಯೇನೆಂದು ತಿಳಿದುಬರುತ್ತದೆ. ಚರ್ಮಕ್ಕೆ ಸೋಕಿದ ಕೂಡಲೇ ಮುದವೆನಿಸುವ ಇದರ ಅರೆ ಘನ ರೂಪದ ದ್ರಾವಣದಲ್ಲಿ ವಿಶೇಷವಾದ ಕಿಣ್ವಗಳ್ಳಿದ್ದು, ಚರ್ಮದ ಮೇಲಾಗುವ ಸುಟ್ಟ ಗಾಯಗಳು ಹಾಗೂ ಉರಿಯೂತದಂತಹ ಸಮಸ್ಯೆಗಳಿಗೆ ಇದನ್ನು ಉಪಯೋಗಿಸಬಹುದು. ವೈಜ್ಞಾನಿಕ ಸಂಶೋಧನೆಯ ಪ್ರಕಾರ ಇದನ್ನು ಜನನಾಂಗದ ತುರಿ ಕಜ್ಜಿಗಳಲ್ಲೂ ಬಳಸಬಹುದು.

೨.ಸುಟ್ಟಗಾಯಗಳಲ್ಲಿ ಬಳಸಬಹುದು:

ಇದಕ್ಕೆ ಪ್ರಬಲ ಉರಿಯೂತ-ವಿರೋಧಿ ಗುಣವಿರುವುದರಿಂದ, ಸುಟ್ಟ ಗಾಯಗಳು ಹಾಗೂ ಚರ್ಮದ ಕಜ್ಜಿ/ ವ್ರಣಗಳ ಮೇಲೆ ಹಚ್ಚಿದಲ್ಲಿ ಉರಿ ಕಾಡಿಮೆಯಾಗುತ್ತದೆ. ಲೋಳೆಸರದ ಮತ್ತೊಂದು ಉಪಯುಕ್ತ ಗುಣವೇನೆಂದರೆ, ತೀವ್ರ ಶೈತ್ಯ ವ್ರಣಗಳಿರುವ ರೋಗಿಗಳಲ್ಲಿಯೂ ಸಹ ಇದನ್ನು ಬಳಸಬಹುದು. ಇಷ್ಟಲ್ಲದೆ ಇದರ ಲೋಳೆಯನ್ನು ಚರ್ಮದ ಮೇಲೇಳುವ ಮೊಡವೆಗಳಿಗೆ ಹಚ್ಚಿದ್ದಲ್ಲಿ, ಕ್ರಮೇಣ ಮೊಡವೆಗಳು ಮಾಯವಾಗುತ್ತವೆ. ಲೋಳೆಸರವನ್ನು ಆಕಸ್ಮಿಕವಾಗಿ ಹೊಟ್ಟೆಯೊಳಗೆ ಸೀವಿಸಿದರೆ, ಕಹಿಯ ಅನುಭವವಾಗುತ್ತದೆಯೇ ಹೊರತು ಯಾವುದೇ ರೀತಿಯ ದುಷ್ಪರಿಣಾಮಗಳಾಗುವುದಿಲ್ಲ.

೩.ಕೇಶ ಸೌಂದರ್ಯಕ್ಕೆ:

ಈ ಗಿಡದ ಲೋಳೆಯನ್ನು ನೆತ್ತಿಗೆ ಹಚ್ಚಿದ್ದಲ್ಲಿ ಕೂದಲಿನ ಹಲವಾರು ಸಮಸ್ಯೆಗಳು ಪರಿಹಾರಾವಗುತ್ತದೆ. ಇದರ ಪ್ರೋಟೀನ್ ವಿಭಜಕ ಕಿಣ್ವಗಳು ನೆತ್ತಿಯ ಮೇಲಿರುವ ಸತ್ತ ಜೀವಾಣುಗಳನ್ನು ಹೊಡೆದೋಡಿಸಿ ಕೂದಲು ದಟ್ಟವಾಗಿ ಬೆಳೆಯುವಂತೆ ಮಾಡುತ್ತದೆ. ನೆತ್ತಿಯ ಮೇಲಾಗುವ ಹುರುಪನ್ನು ಕಡಿಮೆಗೊಳಿಸಿ ಕೇಶಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಲೋಳೆರಸದ ರಾಸಾಯನಿಕ ಸಂಯೋಜನೆಯು, ಶುಷ್ಕ ದ್ರವ್ಯಕ್ಕೆ ಹೋಲಿಕೆಯಾಗಿ ಕೂದಲನ್ನು ಜಿಗುಟುತನ ಹಾಗೂ ತುಂಡಾಗುವಿಕೆಯನ್ನು  ತಡೆಯುತ್ತದೆ.

೪. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ದೇಹದ ತೂಕವನ್ನು ಕಡೆಮೆ ಮಾಡುವಲ್ಲಿ ಸಹಕಾರಿಯಾಗಿದೆ:

ಈ ಸಸ್ಯದ ಉತ್ಕರ್ಷಣ ನಿರೋಧಕ ಶಕ್ತಿಯಿಂದ ದೇಹದಲ್ಲಿರುವ ಕಲ್ಮಶವನ್ನು ಹೊರ ಹಾಕುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಇದನ್ನು ಸಿಹಿ ಪದಾರ್ಥಗಳಾದ, ಜೇನಿನೊಂದಿಗೆ ಬೆರೆಸಿ ಹೊಟ್ಟೆಗೆ ಸೇವಿಸಿದ್ದಲ್ಲಿ, ಇದರ ಕಹಿ ರುಚಿಯ ಅನುಭವವಾಗುವುದಿಲ್ಲ. ಲೋಳೆಸರದ ಪಾನಕವನ್ನು ಸರಿಯಾದ ಪ್ರಮಾಣದಲ್ಲಿ ಧೀರ್ಘ ಅವಧಿಯ ಕಾಲ ಉಪಯೋಗಿಸಿದರೆ, ದೇಹದ  ತೂಕವನ್ನು ಕಡಿಮೆ ಮಾಡಬಹುದು.

೫. ಮಲಬದ್ದತ್ತೆ ಹಾಗೂ ಅಜೀರ್ಣ ಸಮಸ್ಯೆಗೆ ಇದು ರಾಮಬಾಣವಿದ್ದಂತೆ:

ಈ ಸಸ್ಯದ ಕ್ಷೀರ(ಲೇಟೆಕ್ಸ್) ವಿರೇಚಕವಾಗಿದ್ದು, ಮಲಬದ್ದತೆಯನ್ನು ಹೋಗಲಾಡಿಸುತ್ತದೆ. ಹಾಗಾಗಿ ವೈದ್ಯರು ಇದನ್ನು ಮಲಬದ್ದತೆ ರೋಗಿಗಳಿಗೆ ಶಿಫಾರಸ್ಸು ಮಾಡುತ್ತಾರೆ. ಲೂಳೆಸರಕ್ಕೆ ಬ್ಯಾಕ್ಟೀರಿಯಾ ವಿರೋಧಿ ಗುಣವಿರುವುದರಿಂದ ಹೊಟ್ಟೆಯ ಒಳಪದರದ ಮೇಲೆ ತೆಳುವಾದ ಪದರವನ್ನು ನಿರ್ಮಿಸಿ, ಹೊಟ್ಟೆ ಹುಣ್ಣಿನಿಂದ ಮುಕ್ತಿ ನೀಡುತ್ತದೆ ಹಾಗೂ ಪಚನ ಕ್ರಿಯೆಯನ್ನು ಸುಗಮಗೊಳಿಸುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon