Link copied!
Sign in / Sign up
3
Shares

ಮಗು ಕೆಮ್ಮುತಿದೆ ಎಂದು ಆಸ್ಪತ್ರೆಗೆ ಕರೆತಂದರೆ, ಅಲ್ಲಿ ನಡೆದದ್ದೇ ಬೇರೆ!

ಹೆತ್ತವರು ಮಗುವಿನ ಮೈಮೇಲೆ ಒಂದು ಗೆರೆ ಕೂಡ ಮೂಡದಂತೆ ಎಷ್ಟೊಂದು ಕಾಳಜಿ ವಹಿಸುತ್ತಾರೆ. ಆದರೆ, ಯಾರದ್ದೋ ತಪ್ಪಿಗೆ ಅವರು ಕೇವಲ ದೈಹಿಕವಷ್ಟೇ ಅಲ್ಲದೆ, ಮಾನಸಿಕವಾಗಿಯೂ ನೋವನ್ನು ಅನುಭವಿಸಬೇಕು. ನರ್ಸ್ ಓರ್ವಳ ಬೇಜವಾಬ್ದಾರಿ ಕೆಲಸದಿಂದ ಇಲ್ಲಿ ಮುದ್ದು ಕಂದಮ್ಮ ಒಂದು ತನ್ನ ಮುಖವನ್ನೇ ಸುಟ್ಟಿಕೊಂಡಿರುವ ಹೃದಯ ವಿದ್ರಾವಕ ಘಟನೆ ಧಾರವಾಡದಲ್ಲಿ ನಡೆದಿದೆ.


ಹತ್ತು ತಿಂಗಳ ಮಗು ಲಾವಣ್ಯ, ಕಫ ಮತ್ತು ಕೆಮ್ಮಿನ ತೊಂದರೆಯಿಂದ ಬಳಲುತ್ತಿದ್ದ ಕಾರಣ, ಆಕೆಯನ್ನ ಧಾರವಾಡದ ತಾವರಗೇರಿ ನರ್ಸಿಂಗ್ ಹೋಮಿಗೆ ಚಿಕಿತ್ಸೆಗೆಂದು ಕರೆತರಲಾಯಿತು. ಮಗುವು ಕಫ ಕಟ್ಟಿರುವುದರಿಂದ ನರಳುತ್ತಿದ್ದದ್ದನ್ನು ನೋಡಿ, ಅಲ್ಲಿದ್ದ ನರ್ಸ್ ಒಬ್ಬಳು ಮಗುವಿಗೆ ನೆಬುಲೈಸೇಶನ್ ಅಗತ್ಯವಿದೆ ಎಂದಳು. ಈ ನೆಬುಲೈಸೇಶನ್ ಎಂದರೆ ಕಫವನ್ನ ಕರಗಿಸಿ ಹೊರತೆಗೆಯುವ ಒಂದು ವಿಧಾನ. ಇದರಿಂದ ಮಗುವಿಗೆ ಉಸಿರಾಟ ಸುಲಭವಾಗುತ್ತದೆ ಮತ್ತು ಆರಾಮ ಎನಿಸುತ್ತದೆ.

ನೆಬುಲೈಸೇಶನ್ ಎಂದರೆ ಮಗುವಿನ ಮುಖಕ್ಕೆ ಒಂದು ಮಾಸ್ಕ್ ಅನ್ನು ತೊಡಿಸುತ್ತಾರೆ. ಆ ಮಾಸ್ಕಿನ ಒಳಗೆ ಯಂತ್ರದಿಂದ ಹೊಗೆ ಬರುತ್ತಿರುತ್ತದೆ. ಇದನ್ನು ಮಗುವು ಒಳಗಡೆ ಸೇವಿಸಬೇಕು. ಆದರೆ ಅದನ್ನು ಬಹಳ ಹೊತ್ತು ಹಾಗೆಯೇ ಬಿಟ್ಟರೆ, ಅದು ಮಗುವಿಗೆ ತೊಂದರೆಯನ್ನು ಉಂಟು ಮಾಡಬಲ್ಲದು. ಹೀಗಾಗಿ ಮಗುವಿಗೆ ಇದನ್ನು ತೊಡಿಸಿದಾಗ ಅದರ ಮುಂದೆ ಓರ್ವ ನರ್ಸ್ ನಿಂತುಕೊಂಡು ಅದನ್ನು ನೋಡುತ್ತಲೇ ಇರಬೇಕು. ಸ್ವಲ್ಪ ಹೊತ್ತಿಗೊಮ್ಮೆ ಆ ಮಾಸ್ಕ್ ಅನ್ನು ತೆಗೆದು ಪುನಃ ತೊಡಿಸುತ್ತಿರಬೇಕು. ಆದರೆ, ಇಲ್ಲಿ ನಡೆದ ಘಟನೆಯಲ್ಲಿ ನರ್ಸ್ ಆ ಮಗುವಿಗೆ ನೆಬುಲೈಸರ್ ತೊಡಿಸಿ ಎಲ್ಲೋ ಹೋಗಿದ್ದ ಕಾರಣ, ಆ ಹೊಗೆಯು ಮಗುವಿನ ಮುಖಕ್ಕೆ ಹಾನಿ ಮಾಡಿ, ಮಗುವಿನ ಮುಖದ ಮೇಲೆಲ್ಲಾ ಸುಟ್ಟ ಗಾಯಗಳಾಗಿವೆ.

 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon