Link copied!
Sign in / Sign up
0
Shares

ಪ್ರಿ-ಮೆಚೂರ್ ಆಗಿ ಹೆರಿಗೆ ಹೊಂದಿದ ಮಗುವನ್ನು ಸಲಹಲು 6 ಸಲಹೆಗಳು


 

 

ಯಾವ ತಾಯಿಗೂ ತಾನು ಅಕಾಲಿಕವಾಗಿ ಪ್ರಸವಿಸಿದ ಮಗುವನ್ನು ಪರಿಪಾಲಿಸಬೇಕಾದ ಕೆಲವು ಮಾಹಿತಿಗಳ ಬಗ್ಗೆ ಅರಿವಿರಲಾರದು. ಕೆಲವೊಮ್ಮೆ ವೈದ್ಯರ ವಿವರವಾದ ಹೇಳಿಕೆಗಳು ನಿಮಗೆ ಯಾವುದೇ ಸಹಾಯವನ್ನು ನೀಡದೇ ಹೋಗಬಹುದು. ನಿಮ್ಮ ಮಗುವನ್ನು ಪಾರಿಪಾಲಿಸಲಿರುವ ರೀತಿಗಳು ಯಾವುದಾಗಿರಬಹುದೆಂದು ನೀವು ಕಂಡುಕೊಳ್ಳದ ಹೊರತಾಗಿ ನಿಮಗೆ ಬೇರೆ ದಾರಿಯೇ ಇಲ್ಲ.

ನಿಮ್ಮ ಸಂಕಟವನ್ನು ಅರಿತುಕೊಂಡು ನಿಮಗೆ ನೆರವಾಗುವ ಉದ್ದೇಶದಿಂದ, ಅಕಾಲಿಕ ಪ್ರಸವಕ್ಕೊಳಗಾದ ಮಗುವಿನ ಬಗ್ಗೆ ಕೆಲವು ಪ್ರಧಾನ ಅಂಶಗಳ ಬಗ್ಗೆ ಪ್ರಕಾಶ ಬೀರುವ ಪ್ರಯತ್ನವನ್ನು ಮಾಡಿದ್ದೇವೆ.

 

೧. ಸಿಡ್ಸ್ (ಸಡನ್ ಇನ್ಫಾಂಟ್ ಡೆತ್ ಸಿಂಡ್ರೋಮ್ )

ಅಕಾಲಿಕ ಪ್ರಸವಕ್ಕೊಳಗಾದ ಮಗುವಿನ ಸಿಡ್ಸ್ ಪ್ರಮಾಣವು ತುಂಬಾ ಹೆಚ್ಚಾಗಿರುವುದರ ರಹಸ್ಯವನ್ನು ಭೇದಿಸಲು ಇದುವರೆಗೂ  ಸಾಧ್ಯವಾಗಿಲ್ಲ.

ಆದರೆ ಸಮಾಧಾನಕರ ಸಂಗತಿಯೆಂದರೆ, ಕಳೆದ ಒಂದೆರಡು ವರ್ಷಗಳಿಂದ ಸೀಡ್ಸ್ ನ ಪ್ರಮಾಣದಲ್ಲಿ ಸಾಕಷ್ಟು ಇಳಿಮುಖವಾಗಿದೆ. ಮಗುವನ್ನು ಬಿಗಿದು ಕಟ್ಟದಿರುವುದರಿಂದಲೂ, ದಪ್ಪವಾದ ಹೊದಿಕೆಗಳಿಂದ ಹೊದಿಸದಿರುವುದರಿಂದಲೂ ಇಂತಹ ಕೆಲವು ಅನಾಹುತಗಳನ್ನು ತಪ್ಪಿಸಬಹುದು. ಯಾವುದೇ ವಿಕಿರಣಗಳು ಅಥವಾ ಸೂರ್ಯಪ್ರಕಾಶವು ಮಗುವಿನ ಮೇಲೆ ನೇರವಾಗಿ ಬೀಳದಿರುವ ಸ್ಥಳಗಳಲ್ಲಿ ಮಗುವನ್ನು ಮಲಗುವಂತೆ ಜಾಗ್ರತವಹಿಸಬೇಕು. ಮಗುವಿನ ಬಗ್ಗೆ ತುಂಬಾ ಕಾಳಜಿ ವಹಿಸುವುದರಿಂದ ಸೀಡ್ಸ್ ನ ಪ್ರಮಾಣವನ್ನು ಕಡಿಮೆಗೊಳಿಸಬಹುದು. 

೨. ಸ್ನಾನ

ಅಕಾಲಿಕವಾಗಿ ಪ್ರಸವಕ್ಕೊಳಗಾದ ನಿಮ್ಮ ಮಗು, ಇತರ ಮಕ್ಕಳಿಗಿಂತೇನೂ ಭಿನ್ನವಾಗಿಲ್ಲ. ಮಗುವಿಗೆ ತೀರಾ ಥಂಡಿಯಾಗದಂತೆ ನಿಗಾವಹಿಸುವುದು ಅತ್ಯಗತ್ಯ.ಸ್ನಾನ ಮುಗಿಸಿದ ತಕ್ಷಣವೇ ಮಗುವನ್ನು ಬಾತ್ ಟವೆಲ್ ಅಥವಾ ಹತ್ತಿ ಬಟ್ಟೆಯಿಂದ ಸುತ್ತಿ ಬಿಡಿ. ಯಾವುದೇ ಕಾರಣಕ್ಕೂ ಮಗುವಿನ ಶರೀರೋಷ್ಣತೆಯು ಕಡಿಮೆಯಾಗದಂತೆ ನೋಡಿಕೊಳ್ಳಿ.ಸ್ನಾನವಾದ ತಕ್ಷಣವೇ ಮಗುವನ್ನು ನಿಮ್ಮ ಎದೆಗವುಚಿಕೊಂಡು ಅಥವಾ ಶುಭ್ರವಾದ ಹತ್ತಿ ಬಟ್ಟೆಯಿಂದ ಸುತ್ತಿಕೊಂಡು ಮಗುವು ತನ್ನ ಸಾಮಾನ್ಯ ಶರೀರೋಷ್ಣವನ್ನು ಮರಳಿ ಪಡೆಯುವಂತೆ ಮಾಡಿರಿ. 

೩. ಮಕ್ಕಳ ಸೌಂದರ್ಯೋತ್ಪನ್ನಗಳು

ನಿಮ್ಮ ಮಗುವಿನ ಚರ್ಮವು ತುಂಬಾ ಸೂಕ್ಷ್ಮವಾಗಿರುವುದರಿಂದ,ಯಾವುದೇ ರೀತಿಯ ಸೌಂದರ್ಯೋತ್ಪನ್ನಗಳನ್ನು ಮಗುವಿನ ಮೇಲೆ ಬಳಸದಿರಿ. ಸ್ನಾನವಾದ ಬಳಿಕ ಮಗುವಿನ ಚರ್ಮ ಒರಟಾಗಿದೆಯೆಂದು, ಮಗುವಿಗೆ ಹಚ್ಚುವ ಮಾಯ್ಸ್ ಚುರೈಸರುಗಳನ್ನು ಅಥವಾ ಲೋಶನ್ನುಗಳು ಕೆಲವೊಮ್ಮೆ ವಿಪರೀತ ಪರಿಣಾಮವನ್ನು ಉಂಟು ಮಾಡಬಹುದು. ಆದಕಾರಣ, ನಿಮ್ಮ ವೈದ್ಯರ ಶಿಫಾರಸ್ಸಿಲ್ಲದೇ ಯಾವುದೇ ರೀತಿಯ ಉತ್ಪನ್ನಗಳನ್ನು ಮಗುವಿನ ಮೇಲೆ ಬಳಸದಿರಿ.

೪. ಉಷ್ಣತೆ

ಮಗುವು ಮಲಗುವ ಕೋಣೆಯ ಉಷ್ಣತೆಯು ಸ್ಥಿರವಾಗಿರುವಂತೆ ನೋಡಿಕೊಳ್ಳಬೇಕು. ಕೋಣೆಯ ಬದಲಾಗುವ ಉಷ್ಣತೆಯು, ಮಗುವಿನ ಶರೀರದ ಸಾಮಾನ್ಯ ಉಷ್ಣತೆಯನ್ನೂ ಬದಲಾಯಿಸುತ್ತದೆ. ಮಗುವಿನ ಶರೀರದ ಉಷ್ಣತೆಯು ಕಡಿಮೆಯಾದರೆ, ಮಗುವು ತೀವ್ರವಾದ ತೊಂದರೆಯನ್ನೆದುರಿಸಬೇಕಾಗುತ್ತದೆ. ನಿಮ್ಮ ಮಗುವಿನ ರೋಗ ಪ್ರತಿರೋಧಕ ಶಕ್ತಿಯು ತೀರಾ ಕೆಳ ಮಟ್ಟದಲ್ಲಿರುವುದರಿಂದ, ಕೋಣೆಯ ತಾಪಮಾನವು ೧೬-೨೦೦ ಡಿಗ್ರಿ ಸೆಲ್ಸಿ ಯಸ್  ಗಳ ನಡುವೆ ಇರುವಂತೆ ನಿಗಾವಹಿಸಬೇಕು. 

೫. ಮಗುವಿನ ನಿದ್ರಾ ಸಮಯ

ಎಷ್ಟು ಹೊತ್ತು ಮಲಗಲು ಸಾಧ್ಯವಾಗುವುದೋ, ಮಗುವು ಅಷ್ಟು ಹೊತ್ತು ಮಲಗುವುದು ಅದರ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಮಗುವಿನ ಆಂತರಿಕ ಹಾಗೂ ಬಾಹ್ಯ ಬೆಳವಣಿಗೆಯ ಪ್ರಕಿೃಯೆಯು ಮಗುವು ನಿದ್ರಿಸುವ ಸಮಯದಲ್ಲೇ ನಡೆಯುವುದು ಎಂಬ ಸತ್ಯವನ್ನು ನೀವು ಮರೆಯಲೇ ಬಾರದು. ಮಗುವನ್ನು ಎತ್ತಿ ತಬ್ಬಿಕೊಂಡು, ಆಗಾಗ ಎದೆಹಾಲು ಉಣಿಸಬೇಕು.

ಇಂತಹ ಕೆಲವು ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡು ಮಗುವಿನ ಆರೋಗ್ಯದ ಬಗ್ಗೆ ವಹಿಸುವ ಕಾಳಜಿಯಿಂದ ಮಗುವು ಬಹಳ ಶೀಘ್ರದಲ್ಲೇ ತನ್ನ ಆರೋಗ್ಯವನ್ನು ಮರಳಿ ಪಡೆಯುವುದು.  

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon