Link copied!
Sign in / Sign up
9
Shares

ನಿಮ್ಮ ಮಗುವಿನ ಆಹಾರಕ್ಕೆ ಮೀನನ್ನು ಪರಿಚಯಿಸಲು ಸಲಹೆಗಳು

ಮಗುವಿನ ಆಹಾರವನ್ನು ನಿರ್ಧರಿಸುವುದು ತುಂಬಾ ನಾಜೂಕಿನ  ಕೆಲಸ.ಆಯ್ಕೆ ಮಾಡಿದ ಆಹಾರ ಪದಾರ್ಥಗಳು ಮಗುವಿಗೆ ಗರಿಷ್ಠ ಪೋಷಣೆ ಮತ್ತು ಆರೋಗ್ಯದ ಅನುಕೂಲಗಳನ್ನು ನೀಡುವಂತೆ ಖಚಿತಪಡಿಸಿಕೊಳ್ಳಬೇಕು.ಹೆಚ್ಚಿನ ಮಕ್ಕಳ ತಜ್ಞರು ಮಗುವಿಗೆ ಆರು ತಿಂಗಳು ವಯಸ್ಸಾಗಿರುವಾಗ ಅವನು ಅಥವಾ ಅವಳು ಯಾವುದೇ ಸಮಸ್ಯೆ ಇಲ್ಲದೆ ಮೀನನ್ನು ಒಳಗೊಂಡಂತೆ ಘನ ಆಹಾರಗಳನ್ನು ಸೇವಿಸಬಹುದು ಎಂದು ಸೂಚಿಸುತ್ತಾರೆ. ಮೀನು ನಿಮ್ಮ ಮಗುವಿಗೆ ಅಗಾಧವಾಗಿ ಲಾಭದಾಯಕ ಆರೋಗ್ಯಕರವಾದ ಆಹಾರದ ಆಯ್ಕೆಯಾಗಿದೆ.

೧.ಮೀನುಗಳು, ವಿಶೇಷವಾಗಿ ಕೆಲವನ್ನು ಹೆಸರಿಸುವುದಾದರೆ  ಸಾಲ್ಮನ್, ಟ್ಯೂನ, ಸಾರ್ಡೀನ್ಸ್, ಮ್ಯಾಕೆರೆಲ್ ಇವು  ಒಮೆಗಾ -೩ ಕೊಬ್ಬಿನಾಮ್ಲಗಳು ಡಾಕೋಸಾಹೆಕ್ಸಾನಿಕ್ ಆಮ್ಲ (ಡಿಹೆಚ್ಎಚ್) ಮತ್ತು ಐಕೋಸಪೆಂಟೆಯೊನಿಕ್ ಆಮ್ಲ (ಇಪಿಎ) ಗಳನ್ನು ಒಳಗೊಂಡಿವೆ .ಇವು ಮಗುವಿನ ಮೆದುಳಿನ ಅಭಿವೃದ್ಧಿಗೆ  ಅವಶ್ಯಕವಾಗಿದ್ದು, ಅವುಗಳ ಪ್ರತಿರಕ್ಷಣಾ ವ್ಯವಸ್ಥೆಗೆ ಹೆಚ್ಚು ಅಗತ್ಯವಾದ ವರ್ಧಕವನ್ನು ನೀಡುತ್ತದೆ. ಮಗುವಿನ  ಸಮಗ್ರ  ಬೆಳವಣಿಗೆಗೆ ಅಗತ್ಯವಾದ "ಗುಡ್ ಫಾಟ್ಸ್"(ಒಳ್ಳೆಯ ಕೊಬ್ಬು ) ಮತ್ತು ಪ್ರೋಟೀನ್ಗಳ  ಶ್ರೀಮಂತ ಮೂಲ ಮೀನಾಗಿದೆ .

೨.ಆದಾಗ್ಯೂ, ಮಗುವಿಗೆ ಮೀನನ್ನು ತಿನ್ನಿಸುವಾಗ  ಪೋಷಕರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಮತ್ತು ಜಾಗರೂಕರಾಗಿರಬೇಕು, ವಿಶೇಷವಾಗಿ ತಮ್ಮ ಕುಟುಂಬಗಳಲ್ಲಿ ಆಹಾರ ಅಲರ್ಜಿಯ ಇತಿಹಾಸ ಹೊಂದಿರುವವರು ಇದ್ದಾಗ ಸ್ವಲ್ಪ ಮುಂಜಾಗ್ರತೆ ವಹಿಸಬೇಕು .

೩.ಚಿಪ್ಪು ಮೀನು ಅಥವಾ ಎಲುಬಿನ ಮೀನು ಶಿಶುಗಳಲ್ಲಿ ಅಲರ್ಜಿಯ ಪ್ರತಿಕ್ರಿಯೆಯನ್ನು ಉಂಟುಮಾಡಬಹುದು (ಹೊಟ್ಟೆಯ ಅಸಮಾಧಾನ, ದದ್ದುಗಳು, ಉಬ್ಬಸ, ಕಟ್ಟಿದ ಮೂಗು ಅಥವಾ ಜ್ವರ) ಮತ್ತು ಮಗುವಿಗೆ ಕನಿಷ್ಠ ಒಂದು ವರ್ಷ ವಯಸ್ಸಾಗುವವರೆಗೂ ತಡೆಯಬೇಕು.

೪.ಪಾದರಸದ ಅಂಶ ಹೆಚ್ಚಿದ್ದ (ಕಿಂಗ್ ಮ್ಯಾಕೆರೆಲ್, ಟೈಲ್ಫಿಶ್, ಸ್ವೋರ್ಡ್ಫಿಶ್, ಶಾರ್ಕ್) ಮೀನುಗಳ ಸೇವನೆಯನ್ನು ತಪ್ಪಿಸಬೇಕು ಅಥವಾ ಸೀಮಿತ ಪ್ರಮಾಣದಲ್ಲಿ ನೀಡಬೇಕು. ದೇಹದಲ್ಲಿನ ಹೆಚ್ಚಿನ ಮಟ್ಟದ ಪಾದರಸವು ನರಗಳ ಮತ್ತು ಮಿದುಳಿಗೆ ತೀವ್ರವಾದ ಹಾನಿ ಸೇರಿದಂತೆ ಹಲವಾರು ತೊಂದರೆಗಳನ್ನೂ ಉಂಟುಮಾಡುತ್ತದೆ. ಬದಲಾಗಿ  ಟ್ಯೂನ ಮೀನು, ಸಾಲ್ಮನ್ (ಕಡಿಮೆ ಪಾದರಸದ ಅಂಶ ಇರುವಂತಹುಗಳು ) ಮುಂತಾದ ಮೀನುಗಳನ್ನು  ಆಯ್ಕೆ ಮಾಡಬಹುದು.

೫.ಮಗುವಿಗೆ ನೀಡಿರುವ ಮೀನು ತಾಜಾ ಮತ್ತು ಚೆನ್ನಾಗಿ ಬೇಯಿಸಿರುವುದನ್ನು ಖಚಿತಪಡಿಸಿಕೊಳ್ಳಿ.ಶಿಶುಗಳ ವಿಷಯಕ್ಕೆ ಬಂದಹ ಹೆಚ್ಚಿನ ಹೊಸ ಪ್ರಯೋಗಗಳನ್ನು ಮಾಡುವುದನ್ನು ತಪ್ಪಿಸಿ .ಆರಂಭಿಕರಿಗಾಗಿ, ಬಿಳಿ ಮಾಂಸದ ಮೀನುಗಳನ್ನು (ಕಾಡ್, ಫ್ಲೌಂಡರ್, ಹಾಡ್ಡಾಕ್, ಮುಂತಾದವು) ಸೇವಿಸುವುದು ಉತ್ತಮ ಮತ್ತು ಹೊಟ್ಟೆಗೆ ಸರಳವಾಗಿರುತ್ತದೆ, ಉತ್ತಮ ಜೀರ್ಣಕ್ರಿಯೆಯನ್ನು ಖಾತ್ರಿಗೊಳಿಸುತ್ತದೆ.

೬.ನಿರ್ದಿಷ್ಟವಾಗಿ ,ನೀವು ನಿಧಾನವಾಗಿ ಬೇಯಿಸಿದ ,ಬೇಯಿಸಿದ ,ಹಿಸುಕಿದ ಅಥವಾ ತಿರುಳು ಮೆದುವಾಗಿಸಿದ ಮೀನುಗಳನ್ನು ವಾರಕ್ಕೆ ಮೂರು ಬಾರಿ ನೀಡಬಹುದು .ಮೊದಲ ಬಾರಿಗೆ, ಸಣ್ಣ ಪ್ರಮಾಣದಲ್ಲಿ ಮೀನುಗಳನ್ನು ಸೇವಿಸಲು ನೀಡಿ  ಮತ್ತು ಯಾವುದೇ ಅಲರ್ಜಿಯ ಪ್ರತಿಕ್ರಿಯೆಗಳಿವೆಯೇ ಎಂದು ನೋಡಲು ಕನಿಷ್ಠ ಒಂದು ದಿನ ಕಾಯಿರಿ.

ಮಗುವಿಗೆ ಕೆಲವು  ಆರೋಗ್ಯಕರ ಮೀನಿನ ಖಾದ್ಯಗಳ ತಯಾರಿಕೆ:

ಮುದವಾದ ಕ್ಯಾರೆಟ್ ಮೀನು

ಮುದವಾದ ಮೀನಿನ ಖಾದ್ಯಕ್ಕಾಗಿ ಬೇಕಾಗಿರುವ ಪದಾರ್ಥಗಳು

- ಸ್ವಲ್ಪ ಸಣ್ಣದಾಗಿ ಕೊಚ್ಚಿದ ಕ್ಯಾರೆಟ್.

- ಮೂಳೆಗಳಿಲ್ಲದ ಮೀನು (ಕಾಡ್ ಅಥವಾ ಹಾಡ್ಡಾಕ್), ಸಣ್ಣ ತುಂಡುಗಳಾಗಿ ಕತ್ತರಿಸಿ.

- ನೀರು

ತಯಾರಿ

-ಒಂದು ಕಡಾಯಿಯಲ್ಲಿ ನೀರು ಮತ್ತು ಕತ್ತರಿಸಿದ ಕ್ಯಾರೆಟ್ ಮತ್ತು ಮೀನುಗಳ ತುಂಡುಗಳನ್ನು ಸೇರಿಸಿ ಮತ್ತು ಅದನ್ನು ಕುದಿಸಿ (ಕನಿಷ್ಠ ೧೨ -೧೫  ನಿಮಿಷಗಳವರೆಗೆ ಮಿಶ್ರಣವನ್ನು ಉಗಿಯಲ್ಲಿರಿಸಿ).

- ಬೇಯಿಸಿದ ಮಿಶ್ರಣವನ್ನು ಮಿಕ್ಸರ್ ಗೆ  ವರ್ಗಾಯಿಸಿ ಮತ್ತು ಅದನ್ನು ಚೆನ್ನಾಗಿ ಮಿಶ್ರಿಸಿ ತಿರುಳಾಗಿಸಿ

-ನೀರಿನಿಂದ ಸ್ಥಿರತೆಯನ್ನು ಸರಿಹೊಂದಿಸಿ

ಕೊನೆಯದಾಗಿ, ಚಿಟಿಕೆಯಷ್ಟು ಹುರಿದ ಜೀರಿಗೆ ಪುಡಿಯನ್ನು (ನಿಮ್ಮ ಆಯ್ಕೆ) ನೀವು ಸೇರಿಸಬಹುದು.

ಸಿಹಿಯಾದ ಆಲೂಗೆಡ್ಡೆ, ಆಲೂಗೆಡ್ಡೆ, ಬಟಾಣಿ, ಬೀನ್ಸ್, ಬೇಸಿಗೆ ಸ್ಕ್ವ್ಯಾಷ್, ಬೆಣ್ಣೆ ಹಣ್ಣು , ಈರುಳ್ಳಿ ಮೊದಲಾದ ಇತರ ಆರೋಗ್ಯಕರ ಮತ್ತು ಪೌಷ್ಟಿಕಾಂಶದ ತರಕಾರಿಗಳನ್ನು ಬಳಸಿಕೊಂಡು ಪಾಕವನ್ನು  ನೀವು ತಯಾರಿಸಬಹುದು. ಒಂಬತ್ತು ತಿಂಗಳ ವಯಸ್ಸಿನ ಶಿಶುಗಳಿಗೆ ಈ ಪಾಕವಿಧಾನ ಸೂಕ್ತವಾಗಿದೆ. ಪರ್ಯಾಯವಾಗಿ, ನೀವು ಅಕ್ಕಿ ಅಥವಾ ಧಾನ್ಯಗಳೊಂದಿಗೆ ಮೀನುಗಳನ್ನು ಕೂಡಾ ಸೇವಿಸಬಹುದು.

-ಮೂಳೆಯಿಲ್ಲದ ಮೀನು ತೆಗೆದುಕೊಳ್ಳಿ (ಚೆನ್ನಾಗಿ ಕತ್ತರಿಸಿದ್ದು ) ಮತ್ತು ಚೆನ್ನಾಗಿ ಕುದಿಸಿ.

-ನಂತರ ಅಕ್ಕಿ ಮತ್ತು ಬೇಳೆ ಜೊತೆಗೆ ಮತ್ತು ಕೆಲವು ತರಕಾರಿಗಳನ್ನು ಸೇರಿಸಿ (ಮಗುವಿಗೆ ಆರೋಗ್ಯಕರವಾಗಿರುವ ನಿಮ್ಮ ಆಯ್ಕೆಯ) ಕುಕ್ಕರ್ನಲ್ಲಿ ಸೇರಿಸಿ, ನೀರು ಸೇರಿಸಿ ಮತ್ತು ೨-೩  ಸೀಟಿಗೆ  ಬೇಯಿಸಿ.

-ಈ ಮಿಶ್ರಣವನ್ನು ಮಿಕ್ಸರ್ ಗೆ ವರ್ಗಾಯಿಸಿ ,ಬೇಯಿಸಿದ ಮೀನಿನ ತುಂಡುಗಳನ್ನು ಸೇರಿಸಿ ಚೆನ್ನಾಗಿ ಬೆರೆಸಿ .ಇದಕ್ಕೆ ನೀವು ಸಣ್ಣ ಟೀಚಮಚ ಬೆಣ್ಣೆ ಅಥವಾ ತುಪ್ಪ ಮತ್ತು ಚಿಟಿಕೆ ಕಪ್ಪು ಮೆಣಸು ಪುಡಿ ಅಥವಾ ಹುರಿದ ಜೀರಿಗೆ ಪುಡಿ ಸೇರಿಸಬಹುದು .

-ಆರೋಗ್ಯದಲ್ಲಿ ಶ್ರೀಮಂತವಾಗಿರುವ ಅನ್ನದ ತಿರುಳು ಇದೀಗ ನೀಡಲು ಸಿದ್ಧವಾಗಿದೆ.

ನೀವು ಮಗುವಿಗೆ ಮೀನನ್ನು ನೀಡುವ ಅನೇಕ ಮಾರ್ಗಗಳಿವೆ. ನಿಮ್ಮೊಳಗಿನ  ಸೃಜನಾತ್ಮಕ ಬಾಣಸಿಗವನ್ನು ಹೊರಗೆಳೆಯಿರಿ  ಮತ್ತು ನಿಮ್ಮ ಪುಟ್ಟ ಮಗುವಿಗೆ  ಒಂದು ತುಟಿ-ನೆಕ್ಕಿಕೊಳ್ಳುವಂತಹ  ಮೀನಿನ  ಪಾಕವಿಧಾನವನ್ನು ತಯಾರಿಸಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon