Link copied!
Sign in / Sign up
7
Shares

ಮಕ್ಕಳ ಆಹಾರವನ್ನು ಶೇಖರಿಸಿಡಲು ಕೆಲವು ಸಲಹೆಗಳು

೬ ತಿಂಗಳಿಗೆ ಕಾಲಿಡುವಷ್ಟರಲ್ಲಿ ಮಕ್ಕಳು ಘನ ಆಹಾರಗಳನ್ನು ಸೇವಿಸಲು ಪ್ರಾರಂಭಿಸುತ್ತವೆ. ಹೊರಗಿನ ಮಕ್ಕಳ ತಿನಿಸುಗಳಿಗಿಂತ ಮನೆಯಲ್ಲೇ ತಯಾರಿಸಿದ ತಿಂಡಿಗಳನ್ನು ತನ್ನ ಮಕ್ಕಳಿಗೆ ನೀಡಲು ಬಯಸುವ ತಾಯಿಯರಿಗೆ ಅದರ ಶೇಖರಣೆ ತುಸು ತಲೆನೋವಾಗಿ ಕಾಡಬಹುದು. ಮಕ್ಕಳ ಆಹಾರಗಳನ್ನು ಹೇಗೆ ಸಂಗ್ರಹಿಸಬೇಕೆಂದು ಆಲೋಚಿಸುತ್ತಿರುವ ತಾಯಿಯರಿಗೆ ಮಗುವಿಗೆ ನೀಡಬಹುದಾದ ಆಹಾರಗಳನ್ನು ಹಾಗೂ ಅವುಗಳು ಹಾಳಾಗದಂತೆ ನೋಡಿಕೊಳ್ಳುವ ಕೆಲವು ಸಲಹೆಗಳನ್ನು ನೀಡಲಾಗಿದೆ. ಪ್ರಯೋಜನ ಪಡೆದುಕೊಳ್ಳಿರಿ.

ಶಿಶುವಿನ ಆಹಾರ : ಯಾವುದನ್ನು ಸ್ವೀಕರಿಸಬೇಕು ಯಾವುದನ್ನು ವರ್ಜಿಸಬೇಕು

ಮಕ್ಕಳಿಗೆ ನೀಡುವ ಆಹಾರ; ಅದು ತರಕಾರಿ, ಹಣ್ಣುಗಳು ಅಥವಾ ಧಾನ್ಯಗಳು ಯಾವುದೇ ಆಗಿರಲಿ, ಚೆನ್ನಾಗಿ ಬೇಯಿಸಿ ಹಿಚುಕಿ ಅಥವಾ ಪ್ಯೂರಿಯಂತೆ ಮಾಡಿ ಮಗುವಿಗೆ ನೀಡುವುದು ಜೀರ್ಣವಾಗುವಿಕೆಗೆ ಸಹಾಯ ಮಾಡುತ್ತದೆ.

ಚೆನ್ನಾಗಿ ತೊಳೆದು ಬೇಯಿಸಿದ ತರಕಾರಿಯನ್ನು ಮಗುವಿಗೆ ನೀಡಿರಿ ಮಾವು, ಸೇಬು, ಪ್ಲಮ್, ಬಾಳೆಹಣ್ಣು, ಅವಕಾಡೊ, ಸಿಹಿಗುಂಬಳ, ಸಿಹಿಗೆಣಸು, ಟೊಮೆಟೊ, ಚೆನ್ನಾಗಿ ಬೇಯಿಸಿದ ಕ್ಯಾರೆಟ್, ಬಿಳಿ ಮೀನು, ಬೂತಾಯಿ, ಕೋಳಿ, ಮೊಸರು, ಋತುಗಳಿಗನುಗುಣವಾಗಿ ಲಭ್ಯವಾಗುವ ತರಕಾರಿಗಳು, ಕೆಂಪು ಅನ್ನ ಇವೆಲ್ಲವೂ ಚೈತನ್ಯದ ಆಗರವಾಗಿದೆ. ವಿಟಮಿನ್, ಮಿನರಲ್ಸ್, ಕ್ಯಾಲ್ಸಿಯಂ, ಪ್ರೊಟೀನ್ ,ಆಂಟಿ ಆಕ್ಸಿಡೆಂಟ್, ಒಮೆಗಾ೩ ಫ್ಯಾಟಿ ಆಸಿಡ್ಗಳಿಂದ ಭರಿತವಾಗಿರುವ ಆಹಾರಗಳು ಮಗುವಿನ ಆರೋಗ್ಯಕ್ಕೆ ಅತಿ ಉತ್ತಮ ಆಯ್ಕೆ. ಚಿಪ್ಪು ಮೀನುಗಳು, ಪೀನಟ್ಸ್, ಪೀನಟ್ ಬಟರ್, ಹಾಲು ,ವಾಲ್ ನಟ್, ಬ್ರೆಜಿಲ್ ನಟ್, ಸೋಯಾ, ಗೋಧಿಗಳು ಕೆಲವೊಮ್ಮೆ ಅಲರ್ಜಿಗೆ ಕಾರಣವಾಗಬಹುದು. ಆದ ಕಾರಣ, ಒಂದು ವರ್ಷ ದಾಟದ ಹೊರತು ಮಗುವಿಗೆ ಮೊಟ್ಟೆಯನ್ನೊಳಗೊಂಡ ಹಾಗೂ ಮೇಲೆ ತಿಳಿಸಿದ ಆಹಾರಗಳನ್ನು ನೀಡದಿರಿ.

ಹರಿವೆ, ಬೀಟ್ರೂಟ್, ಲೆಟ್ಯೂಸ್ ಗಳು ಹೇರಳವಾಗಿ ನೈಟ್ರೇಟ್ ಗಳನ್ನು ಒಳಗೊಂಡ ಕಾರಣ ಒಂದು ವರ್ಷದ ಕೆಳಗಿನ ಮಗುವಿಗೆ ಆಹಾರಕ್ಕೆಂದು, ಆಯ್ಕೆ ಮಾಡಬಾರದು ಮರ್ಕುರಿ ಅಂಶಗಳನ್ನು ಹೇರಳವಾಗಿ ಒಳಗೊಂಡಿರುವ ಮೀನುಗಳಾದ ಬಂಗುಡೆ, ತೊರ್ಕೆಗಳ ಸೇವನೆಯು ಮೆದುಳಿನ ಬೆಳವಣಿಗೆ ಹಾಗೂ ನರವ್ಯೂಹಗಳನ್ನು ಬಾಧಿಸುವ ಕಾರಣ ಅವುಗಳನ್ನು ಸೇವಿಸಲು ನೀಡದಿರಿ.

ಕಪ್ಪು ಚಾಕಲೇಟ್, ಬೆರ್ರಿ ಹಣ್ಣುಗಳು, ಸಿಟ್ರಸ್ ಹಣ್ಣುಗಳು,ದ್ರಾಕ್ಷಿ, ಬೀಜಗಳು, ಜೋಳಗಳಂತಹ ಕೆಲವು ಆಹಾರಗಳನ್ನು ಕೂಡ ಮಕ್ಕಳಿಗೆ ನೀಡುವುದು ಉತ್ತಮವಲ್ಲ.

ಮಕ್ಕಳ ಆಹಾರ ಶೇಖರಣೆ

ಮಕ್ಕಳಿಗೆಂದು ತಯಾರಿಸಿದ ಪ್ಯೂರಿಗಳನ್ನು ಫ್ರಿಜ್ನಲ್ಲಿ ಶೇಖರಿಸಿಟ್ಟುಕೊಳ್ಳಬಹುದು

ಎರಡು ದಿನಗಳಿಗಿಂತ ಹೆಚ್ಚಾಗಿ ಮಕ್ಕಳ ಆಹಾರಗಳನ್ನು ಫ್ರಿಜ್ನಲ್ಲಿ ಶೇಖರಿಸಿಡುವುದು ಉತ್ತಮವಲ್ಲ

ಮೀನು, ಮಾಂಸ ಅಥವಾ ಮೊಟ್ಟೆಯ ಹಳದಿ ಭಾಗವನ್ನು ಉಪಯೋಗಿಸಿ ತಯಾರಿಸಿದ ಆಹಾರಗಳನ್ನು ಒಂದು ದಿನ ಕಳೆದ ಬಳಿಕ ಉಪಯೋಗಿಸಬಾರದು

ಇದೇ ಆಹಾರಗಳನ್ನು(ಹಣ್ಣುಗಳು ತರಕಾರಿಗಳು ಮಾಂಸ ಅಥವಾ ಮೊಟ್ಟೆಗಳು)ಎರಡು ಮೂರು ತಿಂಗಳುಗಳ ತನಕ ಫ್ರೀಜ಼ರ್ನಲ್ಲಿಟ್ಟು ಉಪಯೋಗಿಸಬಹುದು. ಆದರೂ ಒಂದು ತ ತಿಂಗಳುಗಳೊಳಗಾಗಿ ಈ ರೀತಿ

ಸಂಗ್ರಹಿಸಿದ ಆಹಾರಗಳನ್ನು ಉಪಯೋಗಿಸುವುದು ಒಳಿತು

ಪ್ಲಾಸ್ಟಿಕ್ ಐಸ್ ಟ್ರೇಗಳಿಗಿಂತ, ಗಾಜಿನ ಟ್ರೇಯನ್ನು ಬಳಸಿರಿ ಅಥವಾ ಪ್ಲಾಸ್ಟಿಕ್ ಟ್ರೇಯಾಗಿದ್ದರೆ ಬಿಪಿಎ (ಬಿಸ್ಫಿನಾಲ್ ಎ) ಮುಕ್ತವಾಗಿದೆ ಎಂದು ಖಾತ್ರಿ ಪಡಿಸಿಕೊಳ್ಳಿ

ಬಿಪಿಎಯು ಮೆದುಳಿನ ಬೆಳವಣಿಗೆಗೆ ಮಾರಕವಾಗಿ ಪರಿಣಮಿಸುತ್ತದೆ

ಆಹಾರ ಪದಾರ್ಥಗಳನ್ನು ರಕ್ಷಿಸಲಿಕ್ಕಾಗಿ ಲಭ್ಯವಾಗಿರುವ ಚೀಲಗಳನ್ನು ಖರೀದಿಸಿ, ಬಳಕೆ ಮಾಡಿರಿ

ಪರಿಣಾಮಕಾರಿಯಾದ ಫಲಿತಾಂಶಕ್ಕೆ ಫ್ರೀ ದಿನ ತಾಪಮಾನವನ್ನು 0 ಡಿಗ್ರಿ ಫ್ಯಾರನ್ ಹೀಟ್ ಗೆ ಜೋಡಿಸಿರಿ ಹಾಗೂ 5 ಡಿಗ್ರಿ

ಫಾರನ್ ಹೀಟ್ ಗಿಂತ ಹೆಚ್ಚಾಗದಂತೆ ನೋಡಿಕೊಳ್ಳಿ

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon