Link copied!
Sign in / Sign up
15
Shares

ನಿಮ್ಮ ರಾಶಿಯ ಪ್ರಕಾರ 2018 ರಲ್ಲಿ ಯಾವ ತಿಂಗಳು ನಿಮಗೆ ಅದೃಷ್ಟ ತರುವುದು ಗೊತ್ತೇ?

ಪ್ರತಿ ವರ್ಷವು ತನ್ನದೇ ಆದ ಹೊಸತನವನ್ನು ತರುವುದು ಸಹಜ, ಕೆಲವರಿಗೆ ಕೆಲವು ಸಮಯ ಅದೃಷ್ಟ ಇರುವುದು ಆ ಸಮಯದಲ್ಲಿ ಅವರ ಸರಿಯಾದ ನಿರ್ಧಾರ ಅವರ ಬದುಕಿನಲ್ಲಿ ಬದಲಾವಣೆಯನ್ನು ತರುತ್ತದೆ. ಆದರೆ ಇದು ಕೆಲವರಿಗೆ ತಿಳಿದೆ ಇರುವುದಿಲ್ಲ, ಈ ಸಮಯದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಜೀವನದಲ್ಲಿ ಬದಲಾವಣೆಯನ್ನು ತರಬಹುದು. ಈ ಅದೃಷ್ಟದ ದಿನಗಳಲ್ಲಿ ನೀವು ಮನಸ್ಸಿನಲ್ಲಿ ಸ್ಪಷ್ಟತೆ ಕಾಣುವಿರಿ, ಪುನರ್ಜಿವನ ಪಡೆಯುವಿರಿ, ಕಾರ್ಯ ಸಾಧನೆ ಮಾಡುವಿರಿ. ನಿಮ್ಮ ಕನಸ್ಸನ್ನು ಸಾಧಿಸಲು ಈ ಸಮಯಗಳು ನಿಮಗೆ ಸಹಾಯ ಮಾಡುತ್ತವೆ.


೧.ಮೇಷ ರಾಶಿ

ಮೇಷ ರಾಶಿಯವರಿಗೆ ಈ ವರ್ಷ ಹರ್ಷದ ಸಮಯ ಮತ್ತು ಹಲವು ಅವಕಾಶಗಳು ಇವರ ದಾರಿಗೆ ಸುಲಭವಾದ ಆದಿಯಲ್ಲಿ ಬರುತ್ತವೆ. ಫೆಬ್ರವರಿ ಮತ್ತು ಏಪ್ರಿಲ್ ನಿಮಗೆ ಈ ವರ್ಷ ಅದೃಷ್ಟದ ತಿಂಗಳುಗಳಾಗಿವೆ. ಈ ತಿಂಗಳುಗಳಲ್ಲಿ ನೀವು ಕೆಲಸ ಪ್ರಾರಂಭಿಸಿದರೆ ಅಥವಾ ಈಗಾಗಲೇ ಕೆಲಸ ಪ್ರಾರಂಭಿಸಿ ಶ್ರಮ ಪಡುತ್ತಿದ್ದರೆ ವರ್ಷಾಂತ್ಯಕ್ಕೆ ನಿಮ್ಮ ಕನಸು ನನಸಲಾಗಿದೆ.


೨.ವೃಷಭ ರಾಶಿ

ಈಗ ನೀವು ಎಳೆದಾಟದ ದಿನವನ್ನು ಅನುಭವಿಸುತ್ತಿರುವಿರಿ, ಆದರೆ ಮಾರ್ಚ್ ನಲ್ಲಿ ಸ್ವಲ್ಪ ಸುಧಾರಣೆಯನ್ನು ಕಾಣುವಿರಿ.ಅದರ ನಂತರದ ದಿನಗಳಲ್ಲಿ ನೀವು ಆತ್ಮ ವಿಶ್ವಾಸವನ್ನು ಕಾಣುವಿರಿ ಮತ್ತು ಕೆಲವು ಬದಲಾವಣೆಗಳನ್ನು ಬಯಸುವಿರಿ. ಏಪ್ರಿಲ್ ನಿಂದ ನಿಮ್ಮ ಜೀವನದಲ್ಲಿ ಬದಲಾವಣೆ ಕಾಣುವುದು ಮತ್ತು ಜೂನ್ ನಲ್ಲಿ ನೀವು ಪ್ರೀತಿ, ಕುಟುಂಬ ಮುಂತಾದ ವಿಷಯಗಳಲ್ಲಿ ಯಶಸ್ಸನ್ನು ಕಾಣಲು ಶುರು ಮಾಡುವಿರಿ.


೩.ಮಿಥುನ ರಾಶಿ

ನಿಮಗೆ ಸಂಪೂರ್ಣ ಅದೃಷ್ಟ ತರುವ ಯಾವುದೇ ತಿಂಗಳು ಇಲ್ಲದಿದ್ದರೂ, ಏಪ್ರಿಲ್ ನಂತರ ಎಲ್ಲಾ ತಿಂಗಳಲ್ಲೂ ನಿಮ್ಮ ಆಸೆಯಂತೆ ನಡೆಯುವುದು. ನಿಮ್ಮ ಯೋಜನೆಗಳು ಏಪ್ರಿಲ್ ನಲ್ಲಿ ಯಶಸ್ವಿಯಾಗುವುದು, ಈ ಸಮಯದಿಂದ ನಿಮಗೆ ಹೊಸ ಶಕ್ತಿ, ಚೈತನ್ಯ ಮತ್ತು ಆತ್ಮ ವಿಶ್ವಾಸ ಸಿಗುವುದು. ಜೂನ್ ನಂತರ ನೀವು ನಿಮ್ಮದೇ ದಾರಿಯಲ್ಲಿ ಅವಕಾಶಗಳನ್ನು ಕಾಣುವಿರಿ.


೪.ಕಟಕ ರಾಶಿ

ಫೆಬ್ರವರಿ ಮತ್ತು ಜೂನ್ ತಿಂಗಳು ನಿಮಗೆ ರಕ್ಷಾ ಕವಚ ತಿಂಗಳುಗಳಾಗಿ ಕೆಲಸ ಮಾಡುವುದು.ಜೂನ್ ನಲ್ಲಿ ಗ್ರಹಗಳ ಬದಲಾವಣೆ ಇಂದ ನಿಮಗೆ ಧನಾತ್ಮಕ ಬದಲಾವಣೆ ಮತ್ತು ಚಿಂತನೆಯನ್ನು ಮಾಡುವಿರಿ. ನಿಮ್ಮ ಪ್ರೀತಿಯ ಸಫಲತೆಗೆ ಜುಲೈ ಅದೃಷ್ಟದ ಮಾಸವಾಗಿದೆ.


೫.ಸಿಂಹ ರಾಶಿ

ಜುಲೈ ಮತ್ತು ಆಗಸ್ಟ್ ನೀವು ಸಿಡಿಯುವ ತಿಂಗಳಾಗಿದೆ, ಸಾಮಾನ್ಯವಾಗಿ ನೀವು ತಾಳ್ಮೆ ಹೊಂದಿರುವ ವ್ಯಕ್ತಿಗಳು. ಜುಲೈ ನಲ್ಲಿ ನಿಮಗೆ ಧನಾತ್ಮಕ ಪ್ರೇರೇಪಣೆ ಹೆಚ್ಚಾಗಿ ಸಿಗುವುದು. ಆಗಸ್ಟ್ ನಿಮ್ಮ ಪ್ರಣಯ ಜೀವನವನ್ನು ಅನುಭವಿಸಲು ಅದೃಷ್ಟ ತರುವುದು. ನಿಮ್ಮ ಭವಿಷ್ಯದ ಜೊತೆ ಅದೃಷ್ಟ ಇರುವುದು ನಿಮ್ಮ ಮತ್ತೊಂದು ಅದೃಷ್ಟ.


೬.ಕನ್ಯಾ ರಾಶಿ

ಸೆಪ್ಟೆಂಬರ್ ನಿಮಗೆ ಅದೃಷ್ಟವನ್ನು ತರುವುದು. ನಿಮ್ಮ ದಾರಿಗೆ ಬರುವ ಉತ್ತಮ ಅವಕಾಶಗಳನ್ನು ನೀವು ಈ ತಿಂಗಳಲ್ಲಿ ಯಶಸ್ವಿಯಾಗಿ ಉಪಯೋಗಿಸಿಕೊಂಡರೆ ನಿಮ್ಮ ಜೀವನದ ಒಂದು ಅದ್ಭುತ ತಿರುವನ್ನು ನೀವು ಕಾಣಬಹುದು. ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ಈ ವರ್ಷ ಸಿಗುವ ಅವಕಾಶ ಇದೆ, ಆದರೆ ನೀವು ಪ್ರಯತ್ನಿಸಬೇಕು ಅಷ್ಟೇ.


೭.ತುಲಾ ರಾಶಿ

ಫೆಬ್ರವರಿ ನೀವು ಏನೇ ಅಪಾಯವನ್ನು ಅಥವಾ ರಿಸ್ಕ್ ಅನ್ನು ತೆಗೆದುಕೊಳ್ಳುವ ಸಮಯ. ಚಿಂತಿಸಬೇಡಿ ನಿಮ್ಮ ರಕ್ಷಣೆಗೆ ಸದಾ ನಿಮ್ಮ ಪ್ರಯತ್ನ  ಮತ್ತು ಅದೃಷ್ಟ ಇರುವುದು. ಈ ವರ್ಷದ ನಿಮ್ಮ ಪ್ರಯತ್ನ ಮತ್ತು ಶ್ರಮ ಮುಂದಿನ ವರ್ಷದಲ್ಲಿ ಉತ್ತಮ ಅತ್ಯಬ್ದುತ ಯಶಸ್ಸನ್ನು ನಿಮಗೆ ಉಡುಗೊರೆಯಾಗಿ ನೀಡುತ್ತದೆ.


೮.ವೃಶ್ಚಿಕ ರಾಶಿ

ಯಶಸ್ಸಿನ ಏರಿಕೆಯನ್ನು ಮೇ ತಿಂಗಳಲ್ಲಿ ನೀವು ಕಾಣುವಿರಿ. ಶಕ್ತಿ, ಪ್ರೇರಣೆ, ಉತ್ಸಾಹವನ್ನು ಈ ಸಮಯದಲ್ಲಿ ಕಾಣುವಿರಿ.ಈ ವರ್ಷ ನಿಮಗೆ ಉತ್ತಮ ವರ್ಷವಾಗಿದೆ.


೯.ಧನಸ್ಸು ರಾಶಿ

ಜನವರಿ ತಿಂಗಳಲ್ಲಿ ಬರುವ ವಿಷಯ ನಿಮ್ಮ ಇಡೀ ಮುಂದಿನ ತಿಂಗಳಿನ ದಾರಿಯನ್ನು ನೀವೇ ಆಯ್ಕೆ ಮಾಡಿಕೊಳ್ಳಲು ಅವಕಾಶವನ್ನು ನೀಡಿದೆ. ನಿಮಗೆ ಗೊಂದಲ ಇದ್ದರೆ, ನವೆಂಬರ್ ನಲ್ಲಿ ತಿರುವು ಪಡೆಯಲು ಅವಕಾಶ ಸಿಗುವುದು. ಡಿಸೆಂಬರ್ ನಲ್ಲಿ ನಿಮ್ಮ ಪ್ರೀತಿ ಸಿಗುವುದು ಅಥವಾ ಮರುಗಳಿಸುವುದು.


೧೦.ಮಕರ ರಾಶಿ

ನಿಮ್ಮ ಯೋಚನೆ ಮತ್ತು ಯೋಜನೆಗಳನ್ನು ಕಾರ್ಯ ರೂಪಕ್ಕೆ ತರಲು ಜನವರಿ ಸೂಕ್ತ ಸಮಯ. ಇದರಿಂದ ನೀವು ಜನರ ಜೊತೆ ಆಳವಾಗಿ ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ. ಈ ಶ್ರಮ ಮತ್ತು ಪ್ರಯತ್ನಕ್ಕೆ ಡಿಸೆಂಬರ್ ನಲ್ಲಿ ನಿಮಗೆ ಯಶಸ್ಸು ಸಿಗುವುದು.


೧೧.ಕುಂಭ ರಾಶಿ

ನಿಮ್ಮ ವಿಭಿನ್ನ ಯೋಚನೆ ಮತ್ತು ಯೋಜನೆ ಸಫಲವಾಗಲು ಮಾರ್ಚ್ ತಿಂಗಳು ಅದೃಷ್ಟವಾಗಿದೆ. ನಿಮಗೆ ಶಕ್ತಿ ಮತ್ತು ಮನೋದೈರ್ಯವನ್ನು ತರುತ್ತದೆ.


೧೨.ಮೀನ

ಕ್ರಿಯಾತ್ಮಕ, ಮತ್ತು ನಿಮ್ಮ ಕನಸು ನನಸಾಗಲು ಫೆಬ್ರವರಿ ಸಹಾಯವಾಗುತ್ತದೆ. ನಿಮ್ಮ ಕನಸನ್ನು ನನಸಾಗಿಸಲು ಸಿದ್ದರಾಗಿರಿ, ಫೆಬ್ರವರಿ ನಂತರ ಯಾವುದೇ ಸಮಯದಲ್ಲಿ ನಿಮಗೆ ಅವಕಾಶಗಳು ಬರಬಹುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon