Link copied!
Sign in / Sign up
20
Shares

ಸದಾಕಾಲ ಉತ್ಸಾಹದಿಂದ ಕೂಡಿರುವ ಮಕ್ಕಳ 5 ಸೀಕ್ರೆಟ್ಸ್ ತಿಳಿದು ನಿಮ್ಮ ಮಕ್ಕಳನ್ನೂ ಆಕ್ಟಿವ್ ಮಾಡಿ !

ಮಕ್ಕಳು ಒಂದು ಅದ್ಭುತ ಶಕ್ಥಿಯಿದ್ದಂತೆ. ಪ್ರಕೃತಿಯ ಜಾದು ಎಂದರೆ ತಪ್ಪಾಗುವುದ್ದಿಲ್ಲ. ಮಕ್ಕಳ್ಳಿದ್ದಲ್ಲೆಲ್ಲಾ ನಗುವಿರುತ್ತದೆ. ಪ್ರಪಂಚದ ಅರಿವಿಲ್ಲದೆ, ತಮ್ಮ ಮುಗ್ಧ ಮನಸ್ಸಿನ್ನಿಂದ ಎಲ್ಲರನ್ನು ತಮ್ಮೆ ಕಡೆ ಸೆಳೆಯುವ ಶಕ್ತಿ ಮಕ್ಕಳಿಗಿದೆ. ಮಕ್ಕಳೊಂದಿಗೆ ಮೈಮರೆತು ಆಟವಾಡಿದಾಗಲೇ, ನಮಗೆ ತಿಳಿಯುವುದು, ನಮ್ಮೊಳಗೆಯು ಮಗುವಿನ ಮನಸ್ಸೊಂದಿದೆಯಂತ. ನಮ್ಮೆಲ್ಲರ ಮುಖದ್ದಲ್ಲಿ, ಮಂದಹಾಸ ಮೂಡಿಸುವ ಸಾಮರ್ಥ್ಯ ಮಕ್ಕಳಿಗಿದೆ, ಅದೇ ರೀತಿ ನಮ್ಮ ಮುದ್ದು ಮಕ್ಕಳ ಮುಖವು ಸದಾ ಕಾಲ ಉಲ್ಲಾಸದಿಂದ ಕೂಡಿರಬೇಕಾದರೇ, ನಾವು ತಿಳಿದುಕೊಳ್ಳಬೇಕಾದ ವಿಷಯಗಳು ಹಲವಾರಿದೆ. ಇದ್ದಲ್ಲದೆ ಮಕ್ಕಳು ಸಹ ತಮ್ಮ ಜೀವನದ್ದಲ್ಲಿ ಅಳವಡಿಸಿಕೊಳ್ಳಬೇಕಾದ ಅಭ್ಯಾಸಗಳು ಇನ್ನಷ್ಟಿವೆ.

ಯಾವುದಿರಬಹುದು ಈ ಅಭ್ಯಾಸಗಳು ಎಂದು ನೀವು ಯೋಚಿಸುತ್ತಿದ್ದೀರಾ? ನಿಮ್ಮ ಅಕ್ಕ-ಪಕ್ಕದ ಮನೆಯ ಮಕ್ಕಳು, ಪ್ರತಿನಿತ್ಯ ಉತ್ಸಾಹದ ಚಿಲುಮೆಗಳಂತೆ ಲವಲವಿಕೆಯಿಂದ ಕುಣಿದಾಡುವುದ್ದನ್ನು, ನೀವು ಗಮನಿಸಿರಬಹುದು. ಆದರೆ, ಯಾಕೆ ನಿಮ್ಮ ಮಗು ಮಾತ್ರ ನಿರಾಸಕ್ತಿಯಿಂದಿದೆ ಎಂದು ಚಿಂತಿಸುತ್ತಿದ್ದೀರಾ?

ಚಿಂತಿಸಬೇಡಿ, ವೈದ್ಯರು ಹೇಳಿರುವ ಸೂತ್ರಗಳ್ಳನ್ನು, ಪ್ರತಿನಿತ್ಯ ನಿಮ್ಮ ಮಗುವಿನ ದಿನಚರಿಯಲ್ಲಿ ರೂಢಿಸಿ, ಅದರ ಫಲಿತಾಂಶವನ್ನು ನೀವೇ ಕಂಡುಕೊಳ್ಳಿ. ಅವುಗಳೇನೆಂದು ತಿಳಿಯೋಣ ಬನ್ನಿ.

೧. ನಿಮ್ಮ ಮಕ್ಕಳು ಪರಿಪೂರ್ಣ ನಿದ್ರೆ ಮಾಡುವಂತೆ ನೋಡಿಕೊಳ್ಳಿ:

ಸಂಪೂರ್ಣವಾದ ನಿದ್ರೆಯೆಂದರೆ, ನಿಗದಿತ ವೇಳಾಪಟ್ಟಿಯ ಅನುಸಾರವಾಗಿ ಬೇಗ ಮಲಗಿ, ಮುಂಜಾನೆ ಬೇಗ ಏಳುವ ಅಭ್ಯಾಸವನ್ನು ರೂಡಿಸಿಕ್ಕೊಳ್ಳುವುದು. ಅಂದರೆ ನವಜಾತ ಶಿಶುವಿನಿಂದ- ೨ ತಿಂಗಳ ಮಗುವಿನವರೆಗೆ, ಸಾಮಾನ್ಯವಾಗಿ ೧೨-೧೮ ಗಂಟೆಗಳ ಕಾಲ ಮಕ್ಕಳು ನಿದ್ರಿಸುತ್ತಾರೆ. ೩-೧ ವರುಷದ ಮಕ್ಕಳು ೧೪-೧೫ ಗಂಟೆ ಮಲಗುತ್ತಾರೆ. ೧-೩ ವರುಷದ ಮಕ್ಕಳಿಗೆ ೧೨-೧೪ ಗಂಟೆ, ೩-೫ ವರುಷದ ಮಕ್ಕಳಿಗೆ ೧೧-೧೩ ಗಂಟೆ, ೫-೧೦ ವರುಷದ ಮಕ್ಕಳಿಗೆ ೧೦-೧೧ ಗಂಟೆ ಹಾಗೂ ೧೦-೧೭ ವರುಷದ ಮಕ್ಕಳಿಗೆ ೮.೫-೯.೨೫ ಗಂಟೆಯ ನಿದ್ರೆ ಅತ್ಯವಶ್ಯಕ. ಹೀಗೆ ಮೇಲೆ ಹೇಳಿದ ನಿಗದಿತ ಸಮಯಕ್ಕನುಸಾರವಾಗಿ, ಮಕ್ಕಳು ನಿದ್ರಿಸಿದರೆ, ಮುಂಜಾನೆ ಎದ್ದಾಗ ಮಕ್ಕಳ ಮನಸ್ಸಿನ್ನಲ್ಲಿ ಪ್ರಶಾಂತತೆ ಹಾಗೂ ಮುಖದಲ್ಲಿ ಮಂದಹಾಸ  ತುಂಬಿರುತ್ತದೆ. ಹೀಗೆ ವಯಸ್ಸಿನ ಅನುಗುಣವಾಗಿ ನಿಗದಿತ ನಿದ್ರೆಯ ವೇಳಾಪಟ್ಟಿಯನ್ನು ಪಾಲಿಸುವಂತೆ ಪೋಷಕರು, ಮಕ್ಕಳ್ಳನ್ನು ಹುರಿದುಂಬಿಸಬೇಕು. ಇದರಿಂದ ಕೇವಲ ಮಾನಸಿಕ ಬೆಳವಣಿಗೆಯಲ್ಲದೆ, ಮಗುವಿನ  ಶಾರೀರಿಕ ಬೆಳವಣಿಗೆಯಾಗುತ್ತದೆ.


೨. ಮಕ್ಕಳಿಗೆ ಆಯ್ಕೆಯನ್ನು ಮಾಡಲು ಬಿಡಿ

ನಿಮ್ಮ ಮಕ್ಕಳು ಸದಾಕಾಲ ಉಲ್ಲಾಸದಿಂದಿರಬೇಕಾದರೆ, ಕೆಲವೊಂದು ನಿರ್ಧಾರವನ್ನು ಮಕ್ಕಳಿಗೆ ತೆಗೆದುಕೊಳ್ಳಲು ಬಿಡಿ ಹಾಗೂ ಹಲವು ಸಂದರ್ಭಗಳ್ಳಲ್ಲಿ ಆಯ್ಕೆಯನ್ನು ಸಹ ಮಾಡಲು ಅವಕಾಶವನ್ನು ಮಕ್ಕಳಿಗೆ ನೀಡಿ. ಹೀಗೆ ಮಾಡುವುದರಿಂದ ಮಕ್ಕಳಿಗೆ, ತಮ್ಮ ತಂದೆ ತಾಯಂದಿರು, ತಮ್ಮನ್ನು ಎಲ್ಲಾ ವಿಷಯಗಳ್ಳಲ್ಲಿ ನಿಯಂತ್ರಿಸುವುದಿಲ್ಲವೆಂಬುದು ಅರಿವಾಗುತ್ತದೆ. ಹೀಗೆ ಮಾಡಿದ್ದಲ್ಲಿ, ಮಕ್ಕಳು ತಪ್ಪು ಮಾಡಿದಾಗ, ಅವರನ್ನು ತಿದ್ದಿ, ಸರಿ ದಾರಿಗೆ ತರಲು ಸಹಾಯವಾಗುತ್ತದೆ.


೩. ನಿಗದಿತ ವೇಳೆಗೆ, ಮಕ್ಕಳು ಆಹಾರವನ್ನು ಸೇವಿಸುವಂತೆ ರೂಢಿಸಿ:

ಮಕ್ಕಳು ಆಟವಾಡುವ ನೆಪವನ್ನು ಒಡ್ಡಿ, ಒಂದೇ ಬಾರಿಗೆ ಎಲ್ಲಾ ಆಹಾರವನ್ನು ಸೇವಿಸುತ್ತಾರೆ. ಹೀಗೆ ಮಾಡುವುದರಿಂದ ನಿಮ್ಮ ಮಕ್ಕಳು ಕುಪೋಷಣೆಗೆ ಗುರಿಯಾಗುವ ಸಾಧ್ಯತೆಗಳಿವೆ. ಆದ್ದರಿಂದ ನಿಗದಿತ ಸಮಯಕ್ಕೆ ಮಕ್ಕಳು ಆಹಾರವನ್ನು ಸೇವಿಸುವ ಅಭ್ಯಾಸವನ್ನು ರೂಡಿಸಿ. ಉದಾ: ಊಟದ ವೇಳೆ, ಹೊಟ್ಟೆ ಬಿರಿಯುವಂತೆ ಆಹಾರವನ್ನು ಸೇವಿಸದಿರುವಂತೆ ನೋಡಿಕೊಳ್ಳಿ, ಇದರ ಬದಲಾಗಿ ಆಹಾರವನ್ನು ಮಧ್ಯಂತರಗಳ್ಳಲ್ಲಿ ಸೇವಿಸುವಂತೆ ಮಕ್ಕಳಿಗೆ ಹುರಿದುಂಬಿಸಿ.  ಇವೆಲ್ಲವುದರೊಂದಿಗೆ ಆರೋಗ್ಯಕರವಾದ ಪೌಷ್ಟಿಕ ಆಹಾರಗಳಾದ ಹಣ್ಣು, ಮೊಳಕೆ ಕಟ್ಟಿದ ಕಾಳುಗಳು, ಹಸಿ ತರಕಾರಿ ಮೊಟ್ಟೆಯನ್ನು ದಿನನಿತ್ಯ ನಿಮ್ಮ ಮಗುವಿನ ಆಹಾರದ್ದಲ್ಲಿ ಬಳಸಿ.


೪. ಮಕ್ಕಳಿಗೆ ಕೇವಲ ಸ್ಪರ್ಧಾತ್ಮಕ ಕ್ರೀಡೆಯಲ್ಲ, ಮನೆ ಆಟವನ್ನು ಆಡಲು ಹುರಿದುಂಬಿಸಿ:

ಸ್ಪರ್ಧಾತ್ಮ ಕ್ರೀಡೆ ಹಾಗೂ ಆಟ, ಇವೆರೆಡು ಶಬ್ದಗಳಿಗೆ ಬೇರೆ ಬೇರೆ ಅರ್ಥವಿದೆ. ಕೇವಲ ಸ್ಪರ್ಧಾತ್ಮಕ ಮನೋಭಾವೆನಯನ್ನು ರೂಪಿಸುವ ಕ್ರೀಡೆಗಳ್ಳಲ್ಲದೆ, ದಿನ ನಿತ್ಯದ ಮನೆಯ ಆಟವನ್ನು ಅಂಗಳದ್ದಲ್ಲಿ ಆಡುವಂತೆ ಪ್ರೇರೇಪಿಸಿ ಹಾಗು ನೀವು  ಸಹ ಮಕ್ಕಳೊಂದಿಗೆ ಆಟವಾಡಿ. ಹೀಗೆ ಮಾಡುವುದರಿಂದ ಮಕ್ಕಳಿಗೆ ತಮ್ಮ ಸುತ್ತಲಿನ ಪರಿಸರದ ಅನುಭವವಾಗಿ, ಅವರ ಸರ್ವತೋಮುಖ ಬೆಳವಣಿಗೆಗೆ ಸಹಾಯವಾಗುತ್ತದೆ.    


೫. ಮಕ್ಕಳ ಭಾವನೆಗಳಿಗೆ ಕಿವಿಯೊಡ್ಡಿ

ಮಕ್ಕಳು ಹೇಳುವ ಮಾತು ಹಾಗು ಅವರ ಅಭಿಪ್ರಾಯಗಳಿಗೆ ಸ್ಪಂದಿಸಿ. ಅವರೊಳಗೆ ಮೂಡುವ ಗೊಂದಲಗಳಿಗೆ ಪರಿಹಾರವನ್ನು ಸೂಚಿಸಿ. ಹೀಗೆ ಮಾಡುವುದರಿಂದ, ಮಕ್ಕಳ ಮನಸ್ಸಿನ್ನಲ್ಲಿ ತಮ್ಮ ಅಭಿಪ್ರಾಯಗಳಿಗೂ ಮನ್ನಣೆ ಇದೆ ಎಂಬ ವಿಶ್ವಾಸ ಮೂಡುತ್ತದೆ. ಹೀಗೆ, ಚಿಕ್ಕ ವಯಸ್ಸಿನಿಂದಲೇ ಮಕ್ಕಳ ಅಭಿಪ್ರಾಯಗಳಿಗೆ ಬೆಲೆ ಕೊಡುವುದರಿಂದ, ಮಕ್ಕಳು ಹದಿ ಹರೆಯದ ವಯಸ್ಸಿನ್ನಲ್ಲಿ, ನಿಮ್ಮೊಂದಿಗೆ ಎಲ್ಲಾ ವಿಷಯಗಳ್ಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾರೆ.

ನಿಮ್ಮ ಮುದ್ದು ಮಕ್ಕಳ ನಗು ಹಾಗೂ ಆರೋಗ್ಯ ನಿಮ್ಮ ಕೈಯಲ್ಲಿದೆ. ಈ ಲೀಖನ ನಿಮಗೆ ಉಪಯುಕ್ತವೆನಿಸಿದರೆ, ದಯವಿಟ್ಟು ನಿಮ್ಮ ಬಂಧು-ಮಿತ್ರರೊಂದಿಗೆ ಹಂಚಿಕೊಳ್ಳಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon