Link copied!
Sign in / Sign up
0
Shares

"ಇದೆಂತಹ ಆಟಿಕೆ ತಂದಿದೀಯ" ಎಂದು ಅಮ್ಮನ ಮೇಲೆ ಸಿಟ್ಟಿಗೆದ್ದ ಅಪ್ಪನಿಗೆ ಕಾದಿತ್ತು ಅಚ್ಚರಿ!

ಮಗುವಿಗೆ ಎದೆಹಾಲು ಸೇವಿಸುವ ತಾಯಂದಿರು ತಮ್ಮ ಕಾರ್ಯದ ಬಗ್ಗೆ, ತಮ್ಮ ತಾಯ್ತನದ ಬಗ್ಗೆ, ಪ್ರಕೃತಿ ತಮಗೆಂದೇ ನೀಡಿರುವ ಶಕ್ತಿಯ ಬಗ್ಗೆ ಹೆಮ್ಮೆ ಹೊಂದಿರುತ್ತಾರೆ. ಅದು ಸಮರ್ಥನೀಯ ಕೂಡ. ಏಕೆಂದರೆ ಮಗುವಿಗೆ ಎದೆಹಾಲು ನಿಜವಾಗಲೂ ಅಮೃತವೇ ಸರಿ. ಆದರೆ ಎದೆಹಾಲು ಕುಡಿಸುವುದನ್ನು ಬಿಡಿಸುವ ಸಮಯ ಬಂದಾಗ ಅಮ್ಮಂದಿರು ಮಾಡದಿರುವ ಪ್ರಯತ್ನಗಳಿಲ್ಲ. ಅವುಗಳನ್ನ ಅಪ್ಪಂದಿರು ಕೂಡ ನೋಡಿರುತ್ತಾರೆ.

ಹೀಗೆ ಒಬ್ಬ ವ್ಯಕ್ತಿ ತನ್ನ ಮನೆಯಲ್ಲಿ ಮಗುವಿಗೆ ತನ್ನ ಪತ್ನಿ ತಂದಿದ್ದ ಒಂದು ಆಟಿಕೆಯನ್ನು ನೋಡಿದ. ಅದನ್ನು ನೋಡಿದವನೇ ಅವನಿಗೆ ಒಂದು ರೀತಿ ವಿಚಿತ್ರವೆನಿಸಿತು. ಇಂತದ್ದೊಂದು ಆಟಿಕೆಯನ್ನು ನನ್ನ ಪತ್ನಿ ಏಕೆ ಮನೆಗೆ ತಂದಳು ಎಂದು ಯೋಚಿಸಲು ತೊಡಗಿದ. ಅವನ ಪ್ರಕಾರ ತನ್ನ ಪತ್ನಿಗೆ ಮಗುವಿಗೆ ಎದೆಹಾಲು ಕುಡಿಸಿ, ಕುಡಿಸಿ, ಬೇಸತ್ತು ಹೋಗುವಂತಾಗಿ ಇಂತದ್ದೊಂದು ಆಟಿಕೆ ತಂದಿದ್ದಾಳೆ. ಹೀಗನಿಸಲು ಕಾರಣ ಏನು ಎಂದರೆ, ಆ ಆಟಿಕೆಯು ಮೊಲೆತೊಟ್ಟು ಆಕಾರದಲ್ಲಿ ಇದ್ದದ್ದು.

ನೀವೂ ಕೂಡ ತಪ್ಪು ತಿಳಿಯುವ ಮುನ್ನ ಒಂದು ವಿಷಯ ಹೇಳಿಬಿಡುತ್ತೇನೆ. ಮಗುವಿಗೆ ಹಾಲು ಬಿಡಿಸಲೆಂದೇ, ಮಗುವಿನ ಕಡಿತದಿಂದ ಪಾರಾಗಬೇಕು ಎಂದೇ ಮಗುವಿಗೆ ಕಚ್ಚಲು ಈ ರೀತಿಯ ಮೊಲೆತೊಟ್ಟು ಆಕಾರದ ಆಟಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವೇನು ಹೊಸದಲ್ಲ. ಆದರೆ ನೋಡಲು ಥೇಟ್ ಮೊಲೆತೊಟ್ಟಿನಂತೆ ಕಾಣುತ್ತಿದ್ದ ಈ ಆಟಿಕೆಯು ವಾಸ್ತವದಲ್ಲಿ ಇನ್ಕ್ರೆಡಿಬಲ್ಸ್ ಚಿತ್ರದ ಒಂದು ಪಾತ್ರದ ಗೊಂಬೆ.

ಇದನ್ನು ಆ ವ್ಯಕ್ತಿಯ ಹೆಂಡತಿಯು ಒಂದು ಮೇಜಿನ ಮೇಲಿಟ್ಟಿದ್ದಳು. ಇದನ್ನು ಮೇಲಿನಿಂದ ನೋಡಿದ ಪತಿಗೆ ಇದೇನು ಈ ಆಟಿಕೆ ಈ ರೀತಿ ಇದೆ, ಇದನ್ನೇಕೆ ಇವಳು ಮನೆಗೆ ತಂದಳು ಎಂದು ಪತಿಯು ಒಂದು ರೀತಿ ಮುಖ ಮಾಡಿಕೊಂಡು ಅದನ್ನು ಮೇಲೆತ್ತಿ ನೋಡಿದಾಗಲೇ, ಆತನಿಗೆ ತನ್ನ ತಪ್ಪಿನ ಅರಿವಾಗಿದ್ದು. ಇದರ ಬಗ್ಗೆ ಅವನ ಪತ್ನಿ ಫೇಸ್ಬುಕ್ ಅಲ್ಲಿ ಈ ಆಟಿಕೆಯ ಫೋಟೋ ಹಾಕಿ, ನಡೆದ ಘಟನೆಯನ್ನ ವಿನೋದಮಯವಾಗಿ ಹಂಚಿಕೊಂಡಿದ್ದಾಳೆ.



Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon