Link copied!
Sign in / Sign up
9
Shares

ಆನಲ್ ಸೆಕ್ಸ್ ಅಲ್ಲಿ ತೊಡಗುವ ಮುನ್ನ ಈ 4 ವಿಷಯ ನೆನಪಿರಲಿ!

ಅಮೆರಿಕಾದ ಇಂಡಿಯಾನಾ ಯೂನಿವರ್ಸಿಟಿಯ ಕಿನ್ಸೆ ಇನ್ಸ್ಟಿಟ್ಯೂಟ್ ಅವರು ನಡೆಸಿದ ಅಧ್ಯಯನದಲ್ಲಿ ಸುಮಾರು ಅರ್ಧದಷ್ಟು ಗಂಡಸರು ಮತ್ತು ಹೆಂಗಸರು ಆನಲ್ ಸೆಕ್ಸ್ ಪ್ರಯತ್ನಿಸಿದ್ದಾರೆ ಎಂಬುದು ತಿಳಿದು ಬಂದಿದೆ. ಆದರೆ “ಪ್ರಯತ್ನಿಸುವುದು” ಮತ್ತು “ಅನುಭವಿಸುವುದಕ್ಕೂ” ವ್ಯತ್ಯಾಸ ಇದೆ. ಇದಲ್ಲದೆ ಬಹಳಷ್ಟು ದಂಪತಿಗಳಿಗೆ ಆನಲ್ ಸೆಕ್ಸ್ ಇಂದ ಉಂಟಾಗುವ ಅಹಿತಕರ ಅನುಭವ ಅಥವಾ ನೋವಿನ ಭಯದಿಂದಲೇ ಆನಲ್ ಇಂದ ದೂರ ಉಳಿಯುತ್ತಾರೆ.

ಆದರೆ ನೀವು ಮತ್ತು ನಿಮ್ಮ ಸಂಗಾತಿ ಇದನ್ನು ಪ್ರಯತ್ನಿಸುವ ಮನಸ್ಸು ಮಾಡಿರುವಿರಾ ಎಂದರೆ, ನಿಮ್ಮ ಅಹಿತಕರ ಅನುಭವ ಸಂಪೂರ್ಣ ಕ್ಷೀಣಿಸಿ, ಆನಲ್ ಸೆಕ್ಸ್ ಅನ್ನು ಸಂಪೂರ್ಣವಾಗಿ ಅನುಭವಿಸುವುದಕ್ಕೆ ಇರುವ ದಾರಿಗಳನ್ನ ನಾವು ತಿಳಿಸಿಕೊಡುತ್ತೇವೆ. ನೀವು ಆನಲ್ ಸೆಕ್ಸ್ ಅಲ್ಲಿ ತೊಡಗುವಿರಾ ಎಂದಾದಲ್ಲಿ, ಅದಕ್ಕೂ ಮುನ್ನ ನೀವು ಈ ಸಿದ್ಧತೆಗಳನ್ನ ಮಾಡಿಕೊಂಡಿರಬೇಕು.

 

೧. ಮಾತಾಡಿಕೊಳ್ಳಿ

ನಿಮಗೆ ಆನಲ್ ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳುವ ಬಯಕೆ ಇದ್ದರೆ, ಅದನ್ನು ಮೊದಲಿಗೆ ನಿಮ್ಮ ಸಂಗಾತಿ ಜೊತೆ ಮೊದಲು ಮಾತನಾಡಿಕೊಳ್ಳಿ. ನಿಮ್ಮ ಬಯಕೆ ಏನೆಂಬುದು ಅವರಿಗೆ ತಿಳಿಸಿ ಮತ್ತು ಅವರೂ ಇದರಲ್ಲಿ ಆಸಕ್ತಿ ತೋರಿದರೆ, ಅವರಿಗಿರುವ ಸಂದೇಹಗಳನ್ನ ಮತ್ತು ಭಯಗಳನ್ನ ಕೇಳಿ, ದೂರ ಮಾಡಿ. ಇದು ನಿಮ್ಮಿಬ್ಬರಿಗೂ ನಿರಾಳವಾಗಿ ಒಳ್ಳೆಯ ಅನುಭವ ಪಡೆಯಲು ಸಹಾಯ ಮಾಡುತ್ತದೆ.

 

೨. ಕುಡಿಯಬೇಡಿ

ಹೌದು, ನೀವು ಕುಡಿಯದೆ ಇದ್ದರೆ ಒಳ್ಳೆಯದು. ಏಕೆ? ಏಕೆಂದರೆ ನಿಮ್ಮ ತಲೆಯು ಸ್ಥಿರವಾಗಿದ್ದರೆ, ನಿಮ್ಮ ಸಂಗಾತಿಯ ಮೂಡ್ ಮತ್ತು ಹಿತವನ್ನ ಸರಿಯಾಗಿ ಗೊತ್ತು ಮಾಡಿಕೊಂಡು, ಅದನ್ನು ಉತ್ತಮವಾಗಿಸಲು ಪ್ರಯತ್ನಿಸಬಹುದು. ನಿಮ್ಮ ಸಂಗಾತಿ ನಿಲ್ಲಿಸು ಎಂದೊಡನೆ ನಿಲ್ಲಿಸಿ ಮತ್ತು ನೀವು ಕಾರ್ಯದಲ್ಲಿ ತೊಡಗಿದ್ದಾಗ ನಿಮ್ಮ ಸಂಗಾತಿಯೂ ಅದನ್ನು ಖುಷಿಯಾಗಿ ಅನುಭವಿಸುತ್ತಿದ್ದಾರೆಯೇ ಎಂಬುದುನ್ನು ನೋಡುತ್ತಿರಿ.

 

೩. ಶುಚಿಯಾಗಿರಿಸಿ

ನೀವು ಮತ್ತು ನಿಮ್ಮ ಸಂಗಾತಿ ಸೇರುವ ಮುನ್ನ ಸ್ನಾನ ಮಾಡಿ. ಇಬ್ಬರೂ ಒಟ್ಟಿಗೇ ಸ್ನಾನ ಮಾಡಿದರೆ ಇನ್ನೂ ಒಳ್ಳೆಯದು. ಸ್ನಾನ ಮಾಡುವಾಗ ನೀವು ಆ ಭಾಗದಲ್ಲಿ ಕೈ ಆಡಿಸುವ ಮೂಲಕ ಅವರಿಗೆ ಆ ಭಾಗದಲ್ಲಿನ ಸ್ಪರ್ಶದ ಅನುಭವಕ್ಕೆ ಹೊಂದಿಕೊಳ್ಳಲು ಸಹಾಯ ಆಗುತ್ತದೆ. ಸಂಪೂರ್ಣವಾಗಿ ಶುಚಿಯಾಗಿಸಿಕೊಳ್ಳುವುದರಿಂದ ನೀವಿಬ್ಬರೂ ಆತ್ಮವಿಶ್ವಾಸದಿಂದ ಸೆಕ್ಸ್ ಅಲ್ಲಿ ತೊಡಗಿಕೊಳ್ಳಬಹುದು.

 

೪. ನಯವಾಗಿಸಿ

ಬಹಳಷ್ಟು ಜನರು ಯಾವುದೇ ನಯವಾಗಿಸುವ ತೈಲ ಅಥವಾ ಲ್ಯೂಬ್ರಿಕ್ಯಾಂಟ್ ಬಳಸದೆಯೇ ಆನಲ್ ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳುವ ತಪ್ಪು ಮಾಡುತ್ತಾರೆ. ಎಲ್ಲವೂ ಸಲೀಸಾಗಿ ಆಗಬೇಕೆಂದರೆ ನೀವು ಒಳ್ಳೆಯ ಲ್ಯೂಬ್ರಿಕ್ಯಾಂಟ್ ಅನ್ನು ಬಳಸಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon