Link copied!
Sign in / Sign up
3
Shares

ಕುಟುಂಬದಲ್ಲಿ ಬಾಂಧವ್ಯ ಹೆಚ್ಚಿಸಿ ಸಂತೋಷ ನೆಲೆಸಿರುವಂತೆ ಮಾಡಲು 5 ಸೂತ್ರಗಳು

ಕುಟುಂಬದಲ್ಲಿ ಸದಾಕಾಲ ನಗುವಿದ್ದರೆ ಚೆಂದ. ಆದರೆ ಈಗಿನ ಕಾಲದಲ್ಲಿ ತಂದೆ ಒಂದು ಸಮಯಕ್ಕೆ ಮನೆಗೆ ಬಂದರೆ, ತಾಯಿ ಮತ್ತೊಂದು ಸಮಯಕ್ಕೆ, ಮಕ್ಕಳು ಅವರ ಮನಸ್ಸಿಗೆ ಬಂದ ಹಾಗೆ ಬೆಳೆಯುತ್ತಿರುತ್ತಾರೆ. ಒಬ್ಬರ ಬಗ್ಗೆ ಮತ್ತೊಬ್ಬರಿಗೆ ವಿಚಾರಿಸುವಷ್ಟು ಸಮಯವಿಲ್ಲ. ಒಂದೇ ಮನೆಯಲ್ಲೇ ಎಲ್ಲರೂ ಇದ್ದರು, ಅವರಲ್ಲಿ ನಗು- ಸಾಮರಸ್ಯ ನಾಶವಾಗುತ್ತಿದೆ. ಊಟ ಮಾಡುವಾಗ ಟಿವಿಯ ಮುಂದೆ ಅಥವಾ ಫೋನ್ ಹಿಡಿದು, ಎಲ್ಲರೂ ಅವರದೇ ಲೋಕದಲ್ಲಿ ಮುಳುಗಿ ಹೋಗಿರುತ್ತಾರೆ. ಹೀಗೆ ಆಧುನಿಕ ತಂತ್ರಜ್ಞಾನ, ಪಾಶ್ಚಾತ್ಯ ಸಂಸ್ಕೃತಿಗಳು, ನಮ್ಮ ಸಂಬಂಧಗಳ್ಳಲ್ಲಿ ಬಿರುಕನ್ನು ಮೂಡಿಸುತ್ತಿದೆ. ಕುಟುಂಬದಲ್ಲಿ ಎಲ್ಲರೂ ಒಂದಾಗಿ, ಸಂತೋಷದಿಂದ ಬದುಕಬೇಕಾದರೆ, ಇಲ್ಲಿ ಹೇಳಿರುವ ಸೂತ್ರವನ್ನು ಅನುಸರಿಸಿ.

೧. ಒಂದು ಹೊತ್ತಾದರೂ ಒಟ್ಟಿಗೆ ಕುಳಿತು ಊಟ ಮಾಡಿ

ಬೆಳ್ಳಿಗೆ ಎಲ್ಲರೂ ಅವರವರ ಕೆಲಸದಲ್ಲಿ ಬ್ಯುಸಿ, ಮಧ್ಯಾನ ಸಾಧ್ಯಾನೇ ಇಲ್ಲ. ರಾತ್ರಿಯಾದರು ಮನೆಯವರೆಲ್ಲರೂ ಸೇರಿ ಒಟ್ಟಿಗೆ ಊಟ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಕುಟುಂಬದ ಬಾಂಧವ್ಯ, ಪ್ರೀತಿ ಮಾತಷ್ಟು ಹೆಚ್ಚಾಗುತ್ತದೆ. ಒಬ್ಬರ ದಿನದ ಕೆಲಸಗಳನ್ನು ಮತ್ತೊಬರೊಂದಿಗೆ ಹಂಚಿಕೊಂಡಾಗ ನಿಮ್ಮ ಒತ್ತಡವೂ ಕಡಿಮೆಯಾಗುತ್ತದೆ.


೨. ಮನೆಯ ಕೆಲಸಗಳ್ಳನ್ನು ಹಂಚಿಕೊಂಡು ಮಾಡಿ

ಕೇವಲ ತಾಯಿಯಷ್ಟೇ ಅಲ್ಲ, ತಂದೆ ಮಕ್ಕಳು ಎಲ್ಲರೂ ಸೇರಿ ಮನೆಯ ಕೆಲಸವನ್ನು ಮಾಡಬೇಕು. ಹೀಗೆ ಮಾಡುವುದರಿಂದ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ನೀವು ಕಲಿಸಿದಂತಾಗುತ್ತದೆ.


೩. ಕುಟುಂಬದವರಿಗೆ ಸಮಯ ಮೀಸಲಿಡಿ

ಸಂಜೆ ಸ್ವಲ್ಪ ಸಮಯವಾದರೂ ಎಲ್ಲರೂ ಒಟ್ಟಿಗೆ ಕುಳಿತು ಮಾತನಾಡಿ, ಹೊರಗೆ ಮನೋರಂಜನೆಗೆ ಒಟ್ಟಿಗೆ ಹೋಗಿ. ವಾರದ ಕೊನೆಯಲ್ಲಿ ಎಲ್ಲರು ಸೇರಿ ಚಿಕ್ಕ ಪ್ರವಾಸಕ್ಕೆ ಹೋಗಿ. ಎಷ್ಟೇ ಕೆಲಸವಿದ್ದರೂ, ಬಿಡುವು ಮಾಡಿಕೊಂಡು ನಿಮ್ಮ ಕುಟುಂಬದವರೊಂದಿಗೆ ಕಾಲ ಕಳೆಯಿರಿ.


೪. ಮಾತನಾಡಿ

ಮನಸ್ಸು ಬಿಚ್ಚಿ ಮಾತನಾಡಲು ಸ್ವಲ್ಪ ಸಮಯ ನಿಗದಿ ಮಾಡಿ. ನಿಮ್ಮ ದಿನದ ಕೆಲಸ ಕಾರ್ಯವನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ಯಾವುದಾದರು ಸಮಸ್ಯೆ ಎದುರಾದರೆ ಅದನ್ನು ಮುಕ್ತವಾಗಿ ಮಾತನಾಡಿ ಒತ್ತಡದಿಂದ ಹೊರಗೆ ಬನ್ನಿ.


೫. ಎಲ್ಲರೊಂದಿಗೆ ಬೆರೆಯಿರಿ

ನಿಮ್ಮ ತಂದೆ ತಾಯಿಯ ಸ್ನೇಹಿತರೋ, ಮಕ್ಕಳ ಸ್ನೇಹಿತರೋ, ಎಲ್ಲರೊಂದಿಗೆ ಬೆರೆತು ಕಾಲ ಕಲೆಯಿರಿ. ಇದು ನಿಮಗೆ ಒಳ್ಳೆಯ ಅನುಭವವನ್ನು ನಡಿ, ನಿಮ್ಮ ಮನೆಯ ನೆಮ್ಮದಿ ಹಾಗು ಖುಷಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon