Link copied!
Sign in / Sign up
2
Shares

ಎದೆಹಾಲು ನೀಡುವ ಅಮ್ಮಂದಿರೆ ಇವುಗಳನ್ನ ತಿಳಿದುಕೊಳ್ಳದೆ ಎದೆಹಾಲು ನೀಡಬೇಡಿ!

ಗರ್ಭಾವಸ್ಥೆಯೆಲ್ಲಾ ಕಳೆದು ಮುದ್ದಾದ ಕಂದಮ್ಮ, ಭೂಮಿಗೆ ಬಂದ ಮೇಲೆ ನಿಮ್ಮ ಜಾವಬ್ಧಾರಿ ಮತ್ತಷ್ಟು ಜಾಸ್ತಿಯಾಗಿದೆ. ಇನ್ನು ನೀವು ಬಾಣಂತನ, ಮಗುವಿನ ಪಾಲನೆ ಪೋಷಣೆಯ ಕಡೆಗೆ ಹೆಚ್ಚಿನ ಗಮನವನ್ನು ನೀಡಬೇಕು. ಮಗುವಿಗೆ ಹಾಲುನಿಸುವುದರಿಂದ ಹಿಡಿದು ಅದನ್ನು ಮಲಗಿಸುವವರೆಗೂ ನಿಮ್ಮ ಜವಾಬ್ಧಾರಿ ಹೆಚ್ಚಿರುತ್ತದೆ. ಮೊದಲ ಸಲ ತಾಯಿಯಾದವರಿಗೆ, ಮಗುವನ್ನು ಹೇಗೆ ನೋಡಿಕೊಳ್ಳಬೇಕು, ಹೀಗೆ ಹಾಲುಣಿಸಬೇಕು ಎಂಬುದರ ಅರಿವಿರುವುದಿಲ್ಲ. ಮಗುವನ್ನು ಸರಿಯಾದ ರೀತಿಯಲ್ಲಿ ಹಿಡಿದು, ಹಾಲನ್ನು ಕುಡಿಸದಿದ್ದರೆ ಕುಪೋಷಣೆಗೆ ಓಳಗಾಗುತ್ತವೆ. ಹಾಗಾದರೆ ನಿಮ್ಮ ಪುಟ್ಟ ಕಂದಮ್ಮಗಳಿಗೆ ಹಾಲುಣಿಸುವಾಗ ನೀವು ಪಾಲಿಸಬೇಕಾದ ಅಂಶಗಳೇನೆಂದು ನಾವು ನಿಮಗೆ ತಿಳಿಸುತ್ತೇವೆ.


೧. ಬೇಗನೆ ಮೊಲೆ ಹಾಲುಣಿಸಿ

ಮಗು ಜನಿಸಿದ ಒಂದು ಗಂಟೆಯೊಳಗೆಯೇ, ಹಾಲು ಉಣಿಸುವುದನ್ನು ಪ್ರಾರಂಭಿಸಿ. ಹೀಗೆ ಮಾಡುವುದರಿಂದ ನಿಮ್ಮ ಗರ್ಭಾಶಯವು ಸಹಜ ರೂಪಕ್ಕೆ ಮರಳಲು ಸಹಕಾರಿಯಾಗುತ್ತದೆ. ಪ್ರಸವದ ೨ ದಿನದವರೆಗೆ ತಾಯಿಯ ಹಾಲಿನಲ್ಲಿ, ಸಾಕಷ್ಟು ಪೋಷಕಾಂಶವನ್ನು ಹೊಂದಿರುವುದರಿಂದ ಮಗುವಿಗೆ ಎದೆ ಹಾಲನ್ನು ಬೇಗನೆ ಪ್ರಾರಂಭಿಸಿ. ಮಗು ಹುಟ್ಟಿದ ಕೂಡಲೇ ಹಾಲು ಕುಡಿಯದ್ದಿದರೂ, ಕೆಲವು ಗಂಟೆಗಳ ನಂತರ ಮತ್ತೆ ಪ್ರಯತ್ನಿಸಿ. ಒಟ್ಟಿನಲ್ಲಿ ಪ್ರಸವದ ಮೊದಲ ೨ ದಿನಗಳ ಹಾಲು ಶ್ರೇಷ್ಠ ಎಂದರೆ ತಪ್ಪಾಗುವುದಿಲ್ಲ.


೨.  ಸರಿಯಾದ ಭಂಗಿಯಲ್ಲಿ ಮಗುವನ್ನು ಹಿಡಿಯಿರಿ

ಹೌದು ಮಗುವನ್ನು ನೀವು ಯಾವುದೋ ಭಂಗಿಯಲ್ಲಿ ಹಿಡಿದರೆ, ಮಗು ಹಾಲು ಕುಡಿಯುವುದಿಲ್ಲ. ಆದ್ದರಿಂದ ನಿಮಗೆ ಅನುಕೂಲವಾಗುವ ಭಂಗಿಯಲ್ಲಿ, ದಿಂಬಿನ ಸಹಾಯದಿಂದ, ನಿಮ್ಮ ಕಯ್ಯಿ ಸಹಾಯದಿಂದ ಹಾಗು ಹಾಸಿಗೆಯ ಮೇಲೆ ಮಲಗಿಸಿಕೊಂಡು ತುಂಬಾನೇ ಹತ್ತಿರದಿಂದ ಹಾಲನ್ನು ಕುಡಿಸಬೇಕು. ಇಲ್ಲವಾದಲ್ಲಿ, ನಿಮ್ಮ ಸ್ತನಗಳಿಗೆ ತೊಂದರೆಯಾಗುವ ಸಾಧ್ಯತೆಗಳಿರುತ್ತದೆ.


೩. ಸಮಯಕ್ಕೆ ಸರಿಯಾಗಿ ಹಾಲುಣಿಸಿ

ಮಕ್ಕಳಿಗೆ ನಿಗದಿತ ಸಮಯಕ್ಕೆ ಹಾಲುನಿಸುವುದು ಕಷ್ಟ, ಮಗುವಿಗೆ ಹಸಿವಾದಾಗ ಅಳುತ್ತದೆ, ಆಗ ಮಾತ್ರ ಹಾಲುಣಿಸಿ. ಮಗುವಿನ ಅಳು ಕೇಳುತ್ತಿದಂತೆಯೇ ನಿಮ್ಮ ಸ್ತನಗಳ್ಳಲ್ಲಿ ಹಾಲು ಜೀನುಗಳು ಪ್ರಾರಂಭವಾಗುತ್ತದೆ. ಆದ್ದರಿಂದ ಮಗುವಿನ ಅಳುವಿನ ಬಗ್ಗೆ ಗಮನ ವಹಿಸಿ.


೪. ನೋವಿನ ಸ್ತನಗಳು

ಪ್ರಸವದ ಮೊದಲ ವಾರ ತಾಯಿಯ ದೇಹದಲ್ಲಿ ಹೆಚ್ಚು ಹಾಲು ಉತ್ಪತ್ತಿಯಾಗುತ್ತದೆ. ಇದರಿಂದ ಸ್ತನಗಳು ತುಂಬಿದ ಅನುಭವಾಗುತ್ತದೆ ಹಾಗು ಕೆಲವರಲ್ಲಿ ಇದು ತುಂಬಾ ನೋವನ್ನು ಸಹ ಉಂಟು ಮಾಡುತ್ತದೆ. ಹೀಗಾದರೆ, ನೀವು ಮಗುವಿಗೆ ಪ್ರತಿ ೨ ಗಂಟೆಗೆ ಒಮ್ಮೆ ಹಾಲನ್ನು ಉಣಿಸಿ. ಇದರಿಂದ ನಿಮ್ಮ ಸ್ತನಗಳ ನೋವು ಕಡಿಮೆಯಾಗುತ್ತದೆ. ನೋವು ನಿವಾರಕ ಮಾತ್ರೆಗಳ್ಳನ್ನು ವೈದ್ಯರ ಸಲಹೆ ಇಲ್ಲದೆ ತೆಗೆದುಕೊಳ್ಳಬೇಡಿ. ಇದು ನಿಮ್ಮ ಮಗುವಿನ ದೇಹದೊಳಗೆ ಸೇರುವ ಸಾಧ್ಯತೆಗಳು ಹೆಚ್ಚು. ಬಿಸಿ ನೀರಿನ ಬಟ್ಟೆ ಅಥವಾ ಐಸ್ ಕ್ಯೂಬ್ ಗಳನ್ನು ಹಾಲುಣಿಸುವ ಮೊದಲು ಹಾಗು ಹಾಲುಣಿಸಿದ ನಂತರ ಸ್ತನಗಳ ಮೇಲೆ ಉಜ್ಜಿದರೆ ನೋವು ಕಡಿಮೆಯಾಗುತ್ತದೆ.


೫. ಮೊಲೆ ತೊಟ್ಟುಗಳು ಸೀಳುಬಿಡುವುದು

ಇದು ಪ್ರಸವದ ಮೊದಲ ವಾರದಲ್ಲಿ ಸಾಮನ್ಯ. ಇದಕ್ಕೆ, ನೀವು ಮಗುವಿಗೆ ಹಾಲುಣಿಸಿದ ನಂತರ ನಿಮ್ಮ ಮೊಳೆ ತೊಟ್ಟುಗಳ್ಳನ್ನು ಬಸಿ ನೀರಿನಿಂದ ತೊಳೆದು ಶುಬ್ರವಾಗಿಸಿ ಹಾಗು ವೈದ್ಯರ ಸಲಹೆಯ ಮೇರೆಗೆ ಆಯಿಂಟ್ಮೆಂಟ್ ಅನ್ನು ಹಚ್ಚಿ. ಪ್ರತಿದಿನ ಹಾಲುಣಿಸುವ ಮೊದಲು ಹಾಗು ಹಾಲುಣಿಸಿದ ನಂತರ  ಮೊಲೆ ತೊಟ್ಟುಗಳ್ಳನ್ನು ತೊಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ.


೬. ಉತ್ತಮವಾದ ಆಹಾರ ಹಾಗು ನಿದ್ರೆಯನ್ನು ಮಾಡಿ

ಮಗು ಜನಿಸಿದ ಬಳಿಕ ನೀವು ಹೆಚ್ಚು ಪೋಷಕಾಂಶಗಳನ್ನು ಸೇವಿಸಬೇಕು. ಅಂದರೆ ೫೦೦ ಕ್ಯಾಲೊರಿಗಿಂತ ಹೆಚ್ಚು ಸೇವಿಸಬೇಕು. ಇದರೊಂದಿಗೆ ಒಳ್ಳೆಯ ನಿದ್ರೆ ಹಾಗು ಆಹಾರವನ್ನು ಸೇವಿಸಬೇಕು. ಮದ್ಯಪಾನ, ಕೆಫೀನ್, ಟೀ, ಕೃತಕ ತಂಪು ಪಾನಿಯಗಳಿಂದ ದೂರವಿರಿ.


೬. ಸ್ತನಗಳ ಸೋಂಕು

ಹಾಲುಣಿಸುವ ತಾಯಂದಿರಲ್ಲಿ ಇದು ಕಂಡು ಬರುವ ಸಾಮಾನ್ಯ ಸಮಸ್ಯೆ. ಸೊಂಕಾದ ತಾಯಂದಿರಲ್ಲಿ ಜ್ವರ, ಚಳಿ, ಸ್ತನಗಳು ಕೆಂಪಾಗಿರುವುದು ಹಾಗು ಸ್ತನಗಲೊಳಗೆ ಗೆಡ್ಡೆಗಳು ಕೈಗೆ ಸಿಕ್ಕ ಅನುಭವಾದರೆ ಕೂಡಲೇ ಪ್ರಸೂತಿ ತಜ್ಞರನ್ನು ಭೇಟಿ ಮಾಡಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon