Link copied!
Sign in / Sign up
7
Shares

ಫೆಬ್ರವರಿ ಮೊದಲವಾರದಲ್ಲಿ ಯಾವ ರಾಶಿಗೆ ಲಾಭ,ಯಾರಿಗೆ ನಷ್ಟ ?

ಮೇಷ 

 ನಿಮ್ಮ ದೈನಂದಿನ ನಡವಳಿಕೆ, ಮಾತಿನ ರೀತಿ ರಿವಾಜುಗಳನ್ನು ಗಮನಿಸಿ ಅನೇಕರು ಪ್ರಭಾವಿತರಾಗಿ ನಿಮ್ಮ ದಾರಿಯಲ್ಲೇ ನಡೆಯಲು ಪ್ರಯತ್ನಿಸುವರು. ದೂರದ ಊರಿನಲ್ಲಿರುವ ಮಗನಿಂದ ಆರ್ಥಿಕ ನೆರವು ದೊರೆಯುವುದು. ಅತಿಯಾದ ಕಾರ್ಯ ಒತ್ತಡ ನಿಮ್ಮ ದೇಹಾರೋಗ್ಯದ ಮೇಲೆ ಪರಿಣಾಮ ಬೀರುವುದು. ತವರು ಮನೆಯಿಂದ ವಿಶೇಷ ಉಡುಗೊರೆ ಬರುವುದು. ಉದ್ಯೋಗಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಸಹೋದ್ಯೋಗಿಗಳ ಸಲಹೆ ಸಹಕಾರ ಪಡೆಯಿರಿ. ಪ್ರೇಮಿಗಳು ಪರಸ್ಪರ ಉಡುಗೊರೆ ವಿನಿಮಯ ಮಾಡಿಕೊಳ್ಳುವರು.ಆರ್ಥಿಕ ಸ್ಥಿತಿ ಉತ್ತಮವಾಗುವುದು. ಮೇಷ ರಾಶಿ ಗೆ ಈ ವಾರ ಶುಭ ಸುದ್ದಿಗಳಿವೆ.

ವೃಷಭ

ದಂಪತಿಯಲ್ಲಿ ಕಂಡು ಬಂದಿದ್ದ ಕೌಟುಂಬಿಕ ಕಲಹ ತಾತ್ವಿಕ ಅಂತ್ಯ ಕಾಣಲಿದ್ದು, ಇಬ್ಬರೂ ಸಂತೋಷ ಜೀವನ ನಡೆಸುವಿರಿ.ಪರಸ್ಪರ ಅರ್ತ ಮಾಡಿಕೊಳ್ಳುವಿರಿ, ಸಮಾಜಮುಖಿಯಾಗಿ ಕೆಲಸ ಮಾಡಲು ಹಿರಿಯರ ಒತ್ತಡ ಎದುರಾಗುವುದು. ನಿಮ್ಮ ನಿರ್ಧಾರದ ಮೇಲೆ ಇದು ಅವಲಂಬಿಸಿರುತ್ತದೆ. ನಿಮ್ಮ ಮಾತಿನ ವೈಖರಿಗೆ ಪ್ರತಿರೋಧಿಗಳು ಸಹ ಶರಣಾಗುವರು. ನೀವು ಹಳೆಯ ವಿಷಯಗಳಿಗೆ ತಲೆಕೆಡಿಸಿಕೊಳ್ಳಬಹುದು ಇದರಿಂದಾಗಿ ಕುಟುಂಬದ ಸದಸ್ಯರೊಡನೆ ಮನಸ್ತಾಪ ಮೂಡುವ ಸಾಧ್ಯತೆ ಇದೆ. ಹಿರಿಯರ ಮಧ್ಯಸ್ಥಿಕೆಯಿಂದ ಬಗೆ ಹರಿಯುವುದು. ಹಣಕಾಸಿನ ತೊಂದರೆ ಕಡಿಮೆ ಆಗುವುದು. ಬರಬೇಕಾಗಿದ್ದ ನಿಮ್ಮ ಹಣ ನಿಮಗೆ ಸಿಗುವುದು.

ಮಿಥುನ

ನಿಮ್ಮ ಆದಾಯದ ಮೂಲಗಳಲ್ಲಿ ತೀವ್ರ ಹೆಚ್ಚಳ ಕಂಡು ಬರಲಿದ್ದು, ಆರ್ಥಿಕವಾಗಿ ಸಬಲರಾಗುವಿರಿ. ಆಪತ್ತಿನಲ್ಲಿರುವವರಿಗೆ ಸಹಾಯ ಮಾಡುವಿರಿ. ಅನೇಕ ಯೋಜನೆಗಳಿಗೆ ಬಂಡವಾಳ ಹೂಡಲು ಇದು ಸರಿಯಾದ ಸಮಯ. ಕುಟುಂಬದಲ್ಲಿ ಜರುಗುವ ಅನಿರೀಕ್ಷಿತ ಘಟನೆಗಳು ನಿಮ್ಮ ಮಾನಸಿಕ ನೆಮ್ಮದಿ ಕದಡುವ ಸಾಧ್ಯತೆ ಇದೆ. ಸ್ನೇಹಿತರ ಸಕಾಲಿಕ ಸಲಹೆ ನಿಮ್ಮ ನಷ್ಟವನ್ನು ಕಡಿಮೆ ಮಾಡುವುದು. ನೆರೆಹೊರೆಯವರ ಸಂಪೂರ್ಣ ಸಹಕಾರ ದೊರೆಯಲಿದೆ.

ಕಟಕ

ಕೆಲವೊಮ್ಮೆ ನಿಮ್ಮ ಅತಿ ಆತ್ಮವಿಶ್ವಾಸ ನಿಮ್ಮ ಯಶಸ್ಸಿನ ಹಾದಿಗೆ ಮುಳ್ಳಾಗಿ ಪರಿಣಮಿಸಬಹುದು. ಅಂತಸ್ತು ಮೀರಿ ತೋರುವ ದೊಡ್ಡಸ್ತಿಕೆ ನಿಮಗೆ ಮಾರಕವಾಗುವುದು. ಅವರಿವರ ಮಾತನ್ನು ಕೇಳಬೇಡಿ, ವಿದ್ಯಾರ್ಥಿಗಳ ಸಾಮರ್ಥ್ಯ‌ಕ್ಕೆ ತಕ್ಕಂತೆ ಬೆಂಬಲ ದೊರೆಯುವುದು. ಖರ್ಚಿನ ಬಗ್ಗೆ ತೀವ್ರ ಹಿಡಿತ ಸಾಧಿಸುವುದು ಒಳ್ಳೆಯದು. ಅತಿ ಖಾರ ಹಾಗೂ ಕರಿದ ಪದಾರ್ಥಗಳ ಸೇವನೆ ಒಳ್ಳೆಯದಲ್ಲ. ವೈದ್ಯರು ಈ ಮುಂಚೆ ಸೂಚಿಸಿದ ಔಷಧವನ್ನು ದಿಢೀರನೆ ನಿಲ್ಲಿಸುವುದು ಒಳ್ಳೆಯದಲ್ಲ.

ಸಿಂಹ

 ಬೇಡದ ವಿಷಯಗಳನ್ನು ತಲೆಯಲ್ಲಿ ತುಂಬಿಕೊಂಡು ಸದಾ ಆಲೋಚಿಸುವ ನಿಮ್ಮ ಈ ಸ್ವಭಾವ ಬೇರೆಯವರ ಚಿಂತೆಗೆ ಕಾರಣವಾಗುವುದು. ಎಂತಹ ಸುಂದರ ಸನ್ನಿವೇಶ ಹಾಗೂ ಸಂದರ್ಭಗಳೂ ನಿಮಗೆ ಮುದ ನೀಡದೆ ಹೋಗಬಹುದು. ನೌಕರಿಯಲ್ಲಿ ಸಾಕಷ್ಟು ಪ್ರಗತಿ ಕಂಡು ಬರಲಿದೆ. ವೇತನದಲ್ಲಿ ಹೆಚ್ಚಳ ಕಂಡುಬರಲಿದೆ. ಆಸ್ತಿ ಖರೀದಿಸಲು ಇದು ಸಕಾಲವಾಗಿದ್ದು, ಈ ವಿಷಯದಲ್ಲಿ ಹಿಂಜರಿಕೆ ಬೇಡ.

ಕನ್ಯಾ

ಮೇಲಧಿಕಾರಿಗಳಿಂದ ಮೆಚ್ಚುಗೆ ಮತ್ತು ಅಭಿನಂದನೆ ಸಿಗಲಿದೆ. ಹಿರಿಯರು ಕೊಡುವ ಒಂದು ಸಣ್ಣ ಸಲಹೆ ನಿಮ್ಮನ್ನು ಹಣಕಾಸಿಗೆ ಸಂಬಂಧಪಟ್ಟ ಬಿಕ್ಕಟ್ಟಿನಿಂದ ಪಾರು ಮಾಡುವುದು. ಕುಟುಂಬದ ನಿರ್ವಹಣೆಗೆ ವೆಚ್ಚ ಹೆಚ್ಚಾಗುವುದು ಜಾಗ್ರತೆ ವಹಿಸಿ. ವಿದ್ಯಾರ್ಥಿಗಳು ಆಲಸ್ಯ ತೋರದೆ ಅಂದಿನ ಪಾಠವನ್ನು ಅಂದೇ ಓದುವುದು ಒಳಿತು.

ತುಲಾ

 ಮಾತನಾಡುವಾಗ ಎಚ್ಚರದಿಂದಿರಿ. ಇದು ಮತ್ತೊಬ್ಬರನ್ನು ಸಿಟ್ಟಿನಿಂದ ಕೆರಳುವಂತೆ ಮಾಡುತ್ತದೆ. ವ್ಯಾಪಾರ ನಿಮಿತ್ತ ಪ್ರಯಾಣ ಮಾಡಬಹುದು.ನಿಮಗೆ ಸಂಬಂಧ ಇಲ್ಲದ ವಿಚಾರಗಳಲ್ಲಿ ಮಧ್ಯೆ ಪ್ರವೇಶಿಸುವುದು ಒಳ್ಳೆಯದಲ್ಲ. ಇದರಿಂದ ನೀವಾಗಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಳ್ಳುವಿರಿ. ಮಗನ ಉದ್ಯೋಗದಲ್ಲಿ ಪ್ರಗತಿ ಕಂಡು ಬರುವುದು. ಅತಿಥಿ ಗಳು ಮನೆಗಾಗಿಮಿಸುವರು.

ವೃಶ್ಚಿಕ

 ಮನೆಯಲ್ಲಿ ವಿಶೇಷ ಧಾರ್ಮಿಕ ಕಾರ್ಯಗಳು ನಡೆಯಲಿದ್ದು ಎಲ್ಲರ ಬೆಂಬಲ ದೊರೆಯಲಿದೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವ ನಿಮಗೆ ಗೌರವಾನ್ವಿತ ಸ್ಥಾನಮಾನ ದೊರೆಯಲಿದೆ. ಸಾಲಬಾಧೆಯಿಂದ ಇಷ್ಟರಲ್ಲೇ ಮುಕ್ತಿ ದೊರೆಯಲಿದೆ. ಸೂರ್ಯನನ್ನು ವಿಶೇಷವಾಗಿ ಆರಾಧಿಸಿ. ವಾಹನಗಳ ರಿಪೇರಿ ತಲೆ ತಿನ್ನಬಹುದು. ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಯಾವುದೇ ಕಾರಣಕ್ಕೂ ಆಲಸ್ಯ ಅಥವಾ ಬೇಜವಾಬ್ದಾರಿತನ ಒಳ್ಳೆಯದಲ್ಲ. ಕುಲದೇವತಾರಾಧನೆಯ ಜೊತೆಯಲ್ಲಿ ಗುರುಗಳ ಸೇವೆ ಮಾಡಿ.

ಧನಸ್ಸು

 ಬಂಧುಗಳ ಮಧ್ಯದಲ್ಲಿ ಭಿನ್ನಾಭಿಪ್ರಾಯವಾಗುವ ಸಾಧ್ಯತೆ ಇದೆ. ಆದಷ್ಟು ತಾಳ್ಮೆ ಆದಷ್ಟು ತಾಳ್ಮೆಯಿಂದಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಕಂಡುಬರುವ ತಾತ್ಕಾಲಿಕ ಹಿನ್ನಡೆ ನಿಮ್ಮ ಮಾನಸಿಕ ನೆಮ್ಮದಿಯನ್ನು ಕದಡುವುದು. ಮೈಮರೆತು ಹೂಡಿದ ಬಂಡವಾಳ ಕೈಗೆ ಬರದೆ ಮೋಸ ಹೋಗುವ ಸಾಧ್ಯತೆ ಇದೆ. ಖರ್ಚನ್ನು ಕಡಿಮೆ ಮಾಡಿ.

ಮಕರ

 ನೀವಾಡುವ ಪ್ರತಿ ಮಾತು ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ನಿಮ್ಮ ಸ್ಥಾನಕ್ಕೆ ಚ್ಯುತಿ ಬರುವ ಸಂಭವವಿದೆ. ಕೈ ಕೆಳಗಿನ ಕೆಲಸಗಾರರೇ ನಿಮ್ಮ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ಇದೆ . ಹಣಕಾಸಿನ ಸ್ಥಿತಿ ಉತ್ತಮವಾಗಿದ್ದು, ಸಾಂಸಾರದಲ್ಲಿ ಶಾಂತಿ ನೆಲಸುವುದು.ಹೆಂಡತಿಯ ಮಾತನ್ನು ಕೇಳಿ.

ಕುಂಭ

ಹೆಚ್ಚು ಶ್ರಮ ಪಟ್ಟು ದುಡಿಯುವ ನಿಮಗೆ ಆದಾಯ ಮಾತ್ರ ಕಡಿಮೆ. ಕಾರ್ಯ ಸಾಧನೆಗೆ ಉತ್ತಮ ಮಾತು ಹಾಗೂ ಸನ್ನಡತೆ ಕಾರಣವಾಗಲಿವೆ. ಲೇವಾದೇವಿ ವ್ಯವಹಾರ ನಷವನ್ನುಂಟು ಮಾಡುವುದು. ಪುಸ್ತಕ ವ್ಯಾಪಾರಿಗಳಿಗೆ ಹೆಚ್ಚಿನ ಆದಾಯವಿದೆ. ಸೋದರಿಯ ಕೌಟುಂಬಿಕ ಸಮಸ್ಯೆ ನಿಮ್ಮಿಂದ ಬಗೆಹರಿಯಲಿದೆ. ಅನವಶ್ಯಕ ಖರೀದಿಯಿಂದಾಗಿ ಸಾಲ ಮಾಡಬೇಕಾಗುವುದು. ಸಂದರ್ಶನವೊಂದರಲ್ಲಿ ನಿರುದ್ಯೋಗಿ ಮಗನಿಗೆ ನೌಕರಿ ದೊರೆಯುವ ಸಾಧ್ಯತೆ ಇದೆ.

ಮೀನ 

ಸಂಬಂಧಿಗಳಿಗೆ ಅಥವಾ ಸಹೋದರರಿಗೆ ಕೊಟ್ಟ ಹಣ ನಿಮಗೆ ಸಕಾಲಕ್ಕೆ ಬರದೆ ಹೋಗಬಹುದು. ಮನೆಯಲ್ಲಿ ಹಿರಿಯರ ಆರೋಗ್ಯದಲ್ಲಿ ತೀವ್ರ ವ್ಯತ್ಯಾಸ ಕಂಡು ಬರುವುದು. ಆದ್ದರಿಂದ ಪ್ರಯಾಣಗಳನ್ನು ಮುಂದೆ ಹಾಕುವುದು ಉತ್ತಮ. ವಿದ್ಯಾರ್ಥಿಗಳ ಸೋಮಾರಿತನ ಅವರಿಗೆ ಮುಳುವಾಗುವುದು. ಬ್ಯಾಂಕ್‌ ನೌಕರರು ಕಾರ್ಯ ಒತ್ತಡದಿಂದಾಗಿ ಸ್ವಯಂ ನಿವೃತ್ತಿ ಬಯಸಬಹುದು. ಗುರು ಚರಿತ್ರೆಯನ್ನು ಪಾರಾಯಣ ಮಾಡಿ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon