Link copied!
Sign in / Sign up
3
Shares

ಸ್ತನಗಳ ಬಗೆಗಿನ ಈ 8 ವಿಶಿಷ್ಟ, ವಿಚಿತ್ರ ಸಂಗತಿಗಳು ನೀವು ಎಲ್ಲಿಯೂ ಕೇಳಿರುವುದಿಲ್ಲ!

ಸ್ತನಗಳ ಬಗ್ಗೆ ನೀವು ಎಲ್ಲಿಯೂ ಕೇಳಿರದ 8 ವಿಶಿಷ್ಟ, ವಿಚಿತ್ರ ಸಂಗತಿಗಳು

ನಾವೆಲ್ಲರೂ ಬೆಳೆಯುವಾಗ ಸ್ತನಗಳ ಬಗ್ಗೆ ಕೇಳಿದ್ದೇವೆ ಹಾಗು ಇವುಗಳು ನಮ್ಮ ದೇಹದಲ್ಲೇ ಬೆಳೆಯುವುದರಿಂದ ಇವುಗಳ ಬಗ್ಗೆ ನಮಗೆ ಎಲ್ಲಾ ತಿಳಿದಿದೆ ಎಂದು ನಾವು ಅಂದುಕೊಂಡಿರುತ್ತೇವೆ. ಆದರೆ ಸ್ತನಗಳ ಬಗ್ಗೆ ನಿಮಗೆ ತಿಳಿದಿರದ ಹಲವಾರು ವಿಷಯಗಳು ಇವೆ. ನಾವು ಪ್ರತಿದಿನ ಹೊಸತನ್ನು ಕಲಿಯುತ್ತಾ ಹೋಗುತ್ತಿದ್ದೇವೆ, ಹೀಗಾಗಿ ನೀವು ಸ್ತನಗಳ ಬಗ್ಗೆ ಈ ದಿನ ತಿಳಿಯಬೇಕಾದ ಹೊಸ ಸಂಗತಿಗಳು ಇಲ್ಲಿವೆ ನೋಡಿ.

೧. ನಿಮ್ಮ ಸ್ತನಗಳ ಗಾತ್ರ ಯಾವಾಗಲೂ ಬದಲಾಗುತ್ತಿರುತ್ತದೆ

ನಿಮ್ಮ ಋತುಚಕ್ರದ ಅವಧಿಯ ಕೆಲ ಸಮಯಗಳಲ್ಲಿ ನಿಮ್ಮ ದೇಹದಲ್ಲಿನ ಹಾರ್ಮೋನ್ ಗಳು ಬದಲಾಗುತ್ತವೆ. ಹೀಗಾಗಿ ಈ ಸಮಯಗಳಲ್ಲಿ ನಿಮ್ಮ ಸ್ತನಗಳು ದೊಡ್ಡಾದಾಗಿ ಕಾಣಬಹುದು.

೨. ಸ್ತನಗಳು 9 ಕೆಜಿ ಗಳ ವರೆಗೂ ತೂಕವಿರಬಹುದು

ಸ್ತನಗಳ ತೂಕ ಒಂದು ಹೆಂಗಸಿನಿಂದ ಇನ್ನೊಂದು ಹೆಂಗಸಿಗೆ ಬೇರೆಯಾಗಿರುತ್ತದೆ. ತೂಕವು ಸ್ತನಗಳ ಗಾತ್ರ ಮೇಲೆ ಹಾಗು ಸ್ತನಗಳಲ್ಲಿನ ಫ್ಯಾಟಿ ಅಂಗಾಂಶಗಳು ಮತ್ತು ದಟ್ಟ ಅಂಗಾಂಶಗಳ ಪ್ರಮಾಣದ ಮೇಲೆ ಅವಲಂಬಿತವಾಗಿರುತ್ತದೆ. ಸರಾಸರಿ ಒಂದು ಸ್ತನವು ಅರ್ಧ ಕೆಜಿ ತೂಕ ಹೊಂದಿರುತ್ತದೆ ಮತ್ತು ದೇಹದ ೪-೫% ಅಷ್ಟು ಕೊಬ್ಬನ್ನು ಇದು ಹೊಂದಿರುತ್ತದೆ.

೩. ಎಡಭಾಗದ ಸ್ತನವು ಸಹಜವಾಗಿ ದೊಡ್ಡದಿರುತ್ತದೆ

ತಿಳಿಯದ ಕಾರಣಕ್ಕೆ, ಬಹಳಷ್ಟು ಹೆಂಗಸರಿಗೆ ಎರಡು ಬೇರೆ ಬೇರೆ ಗಾತ್ರದ ಸ್ತನಗಳು ಇರುತ್ತವೆ.

೪. ಒಂದು ಸ್ತನ ಮತ್ತು ಒಂದು ಮೊಲೆತೊಟ್ಟು ಇನ್ನೊಂದಕ್ಕಿಂತ ಹೆಚ್ಚು ಸೂಕ್ಷ್ಮವಾಗಿರುತ್ತದೆ

ಈ ಸೂಕ್ಷ್ಮತೆಯು ಕೂಡ ಒಂದು ಹೆಂಗಸಿನಿಂದ ಇನ್ನೊಂದು ಹೆಂಗಸಿಗೆ ಬೇರೆ ಬೇರೆ ಆಗಿರುತ್ತದೆ.

೫. ನಿಪ್ಪಲ್ ಗ್ಯಾಸ್ಮ್

ಮೊಲೆತೊಟ್ಟುಗಳು ಲೈಂಗಿಕವಾಗಿ ಪ್ರಚೋದನೆಗೆ ಒಳಗಾದಾಗ ಆಕ್ಸಿಟೋಸಿನ್ ಹಾರ್ಮೋನ್ ಬಿಡುಗಡೆ ಹೊಂದುತ್ತದೆ ಹಾಗು ಇದರಿಂದ ಲೈಂಗಿಕ ಪರಾಕಾಷ್ಠೆ (ಒರ್ಗ್ಯಾಸ್ಮ್ ) ಉಂಟಾಗುತ್ತದೆ.

೬. ಮೊಲೆತೊಟ್ಟಿನಲ್ಲಿ ಒಂದು ರಂಧ್ರ ಇರುತ್ತದೆ

ಪ್ರತಿಯೊಂದು ಮೊಲೆತೊಟ್ಟುವಿನಲ್ಲಿ ಹಾಲು ಹೊರಬರಲೆಂದು 15 ರಿಂದ 20 ರಂಧ್ರಗಳು ಇರುತ್ತವೆ.

೭. ಮೊಲೆತೊಟ್ಟುಗಳಲ್ಲಿ ವಿಧಗಳಿವೆ

ಮೊಲೆತೊಟ್ಟುಗಳಲ್ಲಿ ನಾಲ್ಕು ವಿಧಗಳಿವೆ, ಅವುಗಳೆಂದರೆ ನಾರ್ಮಲ್ (ಸಾಮಾನ್ಯ), ಫ್ಲಾಟ್ (ಸಪಾಟವಾದ), ಪಫಿ (ತುಂಬಿರುವುದು) ಮತ್ತು ಇನ್ವೆರ್ಟೆಡ್ (ಉಲ್ಟಾ).

೮. ಧೂಮಪಾನ ಮಾಡುವ ಹೆಂಗಸರ ಸ್ತನಗಳು ಹೆಚ್ಚು ಜೋತು ಬಿದ್ದಿರುತ್ತವೆ

ಇದಕ್ಕೆ ಕಾರಣ ಎಂದರೆ ಅದು ಸಿಗರೇಟ್ ಅಲ್ಲಿರುವ ರಾಸಾಯನಿಕಗಳು. ಇವುಗಳು ದೇಹದಲ್ಲಿನ ಎಲಾಸ್ಟಿನ್ ಅನ್ನು ಕಡಿಮೆ ಮಾಡಿ ಸ್ತನಗಳು ಜೋತು ಬೀಳುವಂತೆ ಮಾಡುತ್ತವೆ.   

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon