Link copied!
Sign in / Sign up
2
Shares

ನೀವು ಈ ಆಹಾರಗಳನ್ನ ಸೇವಿಸಿದರೆ ಬೊಜ್ಜು ಕರಗುತ್ತದೆ!

ಇತ್ತೀಚಿನ ದಿನಗಳಲ್ಲಿ ಸರಿಯಾದ ದೇಹ ಪೋಷಣೆ ಅಥವಾ ವ್ಯಾಯಾಮದ ಕೊರತೆ, ಅನಿಯಮಿತ ಆಹಾರ ಅಥವಾ ಕ್ರಮವಲ್ಲದ ಆಹಾರಕ್ರಮ ಮುಂತಾದ ಕಾರಣಗಳಿಂದ ದೇಹದಲ್ಲಿ ಬೊಜ್ಜು ಶೇಖರಣೆ ಆಗುವುದು ಸಾಮಾನ್ಯವಾಗಿದೆ. ಇದನ್ನು ಕರಗಿಸಬೇಕು ಅಥವಾ ಇದರಿಂದ ಮುಕ್ತಿ ಪಡೆಯಬೇಕು ಎಂಬ ಆಸೆ ಇದ್ದರು ಅದನ್ನು ಮಾಡಲು ಕಷ್ಟ ಪಡಬೇಕು ಅಥವಾ ಸಮಯ ಇಲ್ಲ ಎಂಬ ಕಾರಣದಿಂದ ಅದನ್ನು ಹಾಗೆ ಬೆಳೆಯಲು ಬಿಡುವರು. ಆದರೆ ನಿಮಗೆ ಹೆಚ್ಚು ಕಷ್ಟ ಇಲ್ಲದೆ ಸರಿಯಾದ ನೈಸರ್ಗಿಕ ಆಹಾರ ಕ್ರಮದಿಂದ ಈ ಸಮಸ್ಯೆಯನ್ನು ದೂರವಾಗಿಸಿ.

೧.ಎಲೆಕೋಸ

ಇದು ನಮ್ಮ ದೇಹದ ಜೀರ್ಣ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಸಾಮಾನ್ಯವಾಗಿ ಸೊಂಟದ ಭಾಗದ ಕೊಬ್ಬನ್ನು ಅಥವಾ ಬೊಜ್ಜನ್ನು ಕರಗಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದರಲ್ಲಿರುವ ಪ್ರೊಟೀನ್ ಮತ್ತು ಗಂಧಕ ಅಂಶಗಳು ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತವೆ. ನಿಮ್ಮ ದೇಹದ ಬೊಜ್ಜನ್ನು ಬೇಗನೆ ಕರಗಿಸಲು ಬಯಸಿದರೆ ಎಲೆಕೋಸನ್ನು ಹಸಿಯಾಗಿ ತಿನ್ನುವುದು ಉತ್ತಮ.

 
೨.ದ್ವಿದಳ ಧಾನ್ಯಗಳು

ಇದರಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣದ ಅಂಶವಿದ್ದು, ನಿಮ್ಮ ದಿನ ನಿತ್ಯದ ಆಹಾರ ಕ್ರಮದಲ್ಲಿ ಇದನ್ನು ಸೇರಿವೆಯುವುದರಿಂದ ಹಲವು ಪ್ರಯೋಜನಗಳನ್ನು ಕಂಡುಕೊಳ್ಳಬಹುದು. ನಿಮ್ಮ ದೇಹಕ್ಕೆ ಬೇಕಾದ ವಿಟಮಿನ್ ಮತ್ತು ಪೋಷಕಾಂಶಗಳನ್ನು ಇದು ಹೊದಗಿಸುವುದರಿಂದ ಇದು ಆರೋಗ್ಯಕ್ಕೂ ಒಳ್ಳೆಯದು.


೩.ಕ್ಯಾರೆಟ್

ಕ್ಯಾರೆಟ್ ಗಳಲ್ಲಿ ಕ್ಯಾರೋಟಿನ್ ಎಂಬ ಅಂಶವಿದ್ದು, ಇದು ಕೊಬ್ಬನ್ನು ಕರಗಿಸುವಲ್ಲಿ ಸಹಾಯ ಮಾಡುತ್ತದೆ. ಮತ್ತು ಇದು ತ್ವಚೆಯ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


೪. ಮೊಟ್ಟೆ

ಮೊಟ್ಟೆಯಲ್ಲಿ ಹಲವು ಬಗೆಯ ಪೌಷ್ಟಿಕ ಅಂಶಗಳು ಇರುವುದರಿಂದ ಇದು ದೇಹದಲ್ಲಿ ಶೇಕರಿಸಿರುವ ಅನಗತ್ಯ ಪದಾರ್ಥಗಳನ್ನು ದೇಹದಿಂದ ಹೊರಹಾಕುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.


೫.ಜೇನುತುಪ್ಪ

ನೀವು ಬೇಗನೆ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಅಥವಾ ಕೊಬ್ಬನ್ನು ಕರಗಿಸಲು ಬಯಸಿದರೆ, ಒಂದು ಲೋಟ ನೀರಿಗೆ(ಉಗುರು ಬೆಚ್ಚಗೆ ಇರಲಿ) ಜೇನುತುಪ್ಪವನ್ನು ಸೇರಿಸಿ ಕುಡಿಯುವುದು ತುಂಬಾ ಪ್ರಯೋಜನಕಾರಿಯಾಗಿದೆ. ಜೇನುತುಪ್ಪದಲ್ಲಿರುವ ಕಾರ್ಬೋಹೈಡ್ರೇಟ್ಗಳು ಜೀರ್ಣಕ್ರಿಯೆ ಉತ್ತಮವಾಗಿ ನಡೆಯುವಂತೆ ಮಾಡಿ ರಕ್ತನಾಳದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ನೀವು ಸಕ್ಕರೆಯ ಬದಲಿಗೆ ಜೇನುತುಪ್ಪ ವನ್ನು ಬಳಸುವುದು ನಿಮ್ಮ ತೂಕವನ್ನು ಬೇಗನೆ ಕಡಿಮೆ ಮಾಡಿಕೊಳ್ಳಲು ಇರುವ ಒಂದು ಸರಳ ಉಪಾಯ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon