Link copied!
Sign in / Sign up
6
Shares

ಈ ರೀತಿಯ ತಾಯಂದಿರು 95 ವರ್ಷದವರೆಗೆ ಬದುಕುವ ಸಾಧ್ಯತೆ ಡಬಲ್ ಅಂತೇ!ಎಂಥವರು ತಿಳಿಯಿರಿ!

ನಿಮ್ಮ ದೇಹದಲ್ಲೇ ಇರುವ ನೈಸರ್ಗಿಕ ಗಡಿಯಾರವನ್ನು ಸ್ವಲ್ಪ ಸಮಯದವರೆಗೆ ನಿದ್ದೆಗೆ ಜಾರಿಸಿದರೆ ತೊಂದರೆ ಏನಿಲ್ಲ. ನೀವು ಮಗುವಿಗಾಗಿ ನಿಮ್ಮ ಜೀವನದ ಇನ್ನೊಂದಷ್ಟು ವರ್ಷಗಳವರೆಗೆ ಕಾದರೆ, ನೀವು ಅಸಹಜವಾದ ಆಯಸ್ಸನ್ನು ಹೊಂದುವ ಸಾಧ್ಯತೆಗಳು ಹೆಚ್ಚುತ್ತವೆ.

ಒಂದು ಬಾಸ್ಟನ್ ಯೂನಿವರ್ಸಿಟಿಯು ವೈದ್ಯಕೀಯ ಶಾಲೆ ಪ್ರಕಟಿಸಿದ “ಮೆನೋಪಾಸ್” ಎಂಬ ಸಂಶೋಧನೆಯಲ್ಲಿ ಯಾರೆಲ್ಲಾ ಹೆಂಗಸರು ನೈಸರ್ಗಿಕವಾಗಿ ತಮ್ಮ ಮಧ್ಯವಯಸ್ಸಲ್ಲಿ (ಅಂದರೆ 3೦ ದಾಟಿದ ಮೇಲೆ) ಗರ್ಭಧಾರಣೆ ಮಾಡಲು ಸಾಧ್ಯವೋ, ಅಂತವರೆಲ್ಲಾ 30ನೇ ವಯಸ್ಸಿಗಿಂತ ಮುನ್ನವೇ ತಮ್ಮ ಕೊನೆಯ ಮಗುವನ್ನು ಮಾಡಿಕೊಂಡಿರುವವರಿಗಿಂತ ಹೆಚ್ಚು ಇಳಿ ವಯಸ್ಸಿನವರೆಗೂ ಆಯಸ್ಸು ಹೊಂದುವ ಸಾಧ್ಯತೆ ಇರುತ್ತೆಂದು ತಿಳಿದು ಬಂದಿದೆ.

33ನೇ ವಯಸ್ಸಿನ ನಂತರ ತಮ್ಮ ಕೊನೆಯ ಮಗುವನ್ನು ಮಾಡಿಕೊಳ್ಳುವ ಹೆಂಗಸರು 95 ವರ್ಷಗಳವರೆಗೆ ಬದುಕುವ ಸಾಧ್ಯತೆಗಳು ಇತರೆ ತಾಯಂದಿರಿಗಿಂತ (29ನೇ ವಯಸ್ಸಿನೊಳಗೆ ಕೊನೆ ಮಗು ಮಾಡಿಕೊಂಡವರಿಗಿಂತ) ದುಪ್ಪಟ್ಟು ಇರುತ್ತದೆ.

“ಒಂದು ವೇಳೆ ನೀವು ಮಗು ಮಾಡಿಕೊಳ್ಳುವುದನ್ನು ದೈಹಿಕವಾಗಿ ಮುಂದಕ್ಕೆ ಹಾಕಿದರೆ, ಇದು ನಿಮಗೆ ದೀರ್ಘಾಯುಷ್ಯ ನೀಡುವುದಿಲ್ಲ. ಬದಲಿಗೆ, ನಮ್ಮ ಸಂಶೋಧನೆಯ ಪ್ರಕಾರ ಹಿರಿಯ ವಯಸ್ಸಿನಲ್ಲಿ ಗರ್ಭತಾಳುವ ಸಾಮರ್ಥ್ಯ ಇರುವುದು ದೇಹಕ್ಕೆ ವಯಸ್ಸು ಕಡಿಮೆ ವೇಗದಲ್ಲಿ ಆಗುತ್ತಿದೆ ಎಂಬುದರ ಸೂಚನೆ” ಎಂದು ತಿಳಿಸುತ್ತಾರೆ ಬಾಸ್ಟನ್ ಯೂನಿವರ್ಸಿಟಿಯ ಬಯೋ-ಸ್ಟಾಟಿಸ್ಟಿಕ್ಸ್ ಪ್ರಾಧ್ಯಾಪಕರಾದ ಪೌಲಾ ಸೆಬಸ್ಟಿಯಾನಿ.

ಸೆಬಸ್ಟಿಯಾನಿ ಮತ್ತು ಆಕೆಯ ತಂಡವು 551 ಕುಟುಂಬಗಳನ್ನು ಒಳಗೊಂಡ ಸರ್ವೇ ಆಗಿದ್ದ “ಲಾಂಗ್ ಲೈಫ್ ಫ್ಯಾಮಿಲಿ ಸ್ಟಡಿ” ರಲ್ಲಿ ಲಭ್ಯವಾಗಿದ್ದ ಮಾಹಿತಿಯನ್ನು ವಿಶ್ಲೇಷಿಸಿದ್ದಾರೆ. ಈ 551 ಕುಟುಂಬಗಳಲ್ಲಿ, ಬಹುತೇಕ ಕುಟುಂಬಗಳಲ್ಲಿ ದೀರ್ಘಾಯುಷ್ಯ ಹೊಂದಿರುವ ಸದಸ್ಯರು ಇದ್ದರು. ಸರ್ವೇ ಅಲ್ಲಿ ಈ ಕುಟುಂಬಗಳಲ್ಲಿನ ಒಟ್ಟು 462 ಹೆಂಗಸರಿಗೆ ಕೊನೆಯ ಮಗು ಆಗಿದ್ದು ಯಾವಾಗ ಮತ್ತು ಈ ಹೆಂಗಸರು ಎಷ್ಟು ವರ್ಷಗಳವರೆಗೆ ಬದುಕಿದರು ಎಂಬುದನ್ನು ದಾಖಲಿಸಲಾಗಿತ್ತು.

ಈ ಮಾಹಿತಿಯುಳ್ಳ ದಾಖಲೆಯನ್ನು ವಿಶ್ಲೇಷಿಸಿದ ಸಂಶೋಧಕರು 30 ದಾಟಿದ ಮೇಲೆ ಮಗು ಹೊಂದುವ ಹಣ್ಣಾದ ಹೆಂಗಸರು 29ರ ಮುನ್ನವೇ ಕೊನೆಯ ಮಗುವನ್ನು ಹೊಂದುವ ತಾಯಂದಿರಿಗಿಂತ 95 ವರ್ಷಗಳವರೆಗೆ ಬದುಕುವ ದುಪ್ಪಟ್ಟು ಸಾಧ್ಯತೆಗಳನ್ನು ಹೊಂದಿರುತ್ತಾರೆ.

ಸಂಶೋಧಕರ ಪ್ರಕಾರ ಸ್ವಲ್ಪ ಹಿರಿಯ ವಯಸ್ಸಿಗೆ ತಾಯಿ ಆಗುವವರು ತಮ್ಮ ದೇಹದಲ್ಲಿ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಜೆನೆಟಿಕ್ ರೂಪಾಂತರಗಳನ್ನು ಮತ್ತು ಫಲವತ್ತತೆಯ ಮೇಲೆ ಪ್ರಭಾವ ಬೀರುವ ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳನ್ನು (ಓವರಿಯನ್ ಕ್ಯಾನ್ಸರ್ ಅಥವಾ ಡಯಾಬಿಟಿಸ್) ನಿವಾರಿಸುವ ಜೆನೆಟಿಕ್ ರೂಪಾಂತರಗಳನ್ನು ಹೊಂದಿರುತ್ತಾರೆ. ಇಂತಹ ಜೆನೆಟಿಕ್ ರೂಪಾಂತರಗಳನ್ನ ಹೊಂದಿರುವ ಹೆಂಗಸರು ಬಹಳ ವರ್ಷಗಳವರೆಗೆ ತಮ್ಮ ಸಂತಾನ ಸಾಮರ್ಥ್ಯವನ್ನು ಉಳಿಸಿಕೊಳ್ಳುತ್ತಾರೆ.

ಇನ್ನೊಂದು ಅಧ್ಯಯನದ ಲೇಖಕರಾದ ಡಾ ।। ಥಾಮಸ್ ಪೆರ್ಲ್ಸ್ ಅವರು “ಈ ಮೇಲಿನ ಸಂಶೋಧನೆಯಿಂದ ತಿಳಿದು ಬಂದಿರುವ ವಿಷಯಗಳು (ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸವ ರೂಪಾಂತರಗಳು) ಇನ್ನೊಂದು ವಿಷಯದ ಬಗ್ಗೆ ಸುಳಿವು ನೀಡುತ್ತದೆ. 100ಕ್ಕೂ ಹೆಚ್ಚು ವರ್ಷಗಳು ಬಾಳುವುರರಲ್ಲಿ 85% ಅಷ್ಟು ಹೆಂಗಸರಾದರೆ, ಕೇವಲ 15% ಅಷ್ಟು ಜನರು ಮಾತ್ರ ಗಂಡಸರು. ಇದಕ್ಕೂ ಉತ್ತರ ಈ ಜೆನೆಟಿಕ್ ರೂಪಾಂತರಗಳು ಕಾರಣ ಆಗಿರಬಹುದು” ಎನ್ನುತ್ತಾರೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon