Link copied!
Sign in / Sign up
22
Shares

9 ತಿಂಗಳ ಮಗುವಿನ ಆಹಾರ ಚಾರ್ಟ್

ಒಂಭತ್ತು ತಿಂಗಳು ಪ್ರಾಯವಾದ ಮಗುವು ಹಿರಿಯರು ಸೇವಿಸುವ ಸಾಧಾರಣ ಎಲ್ಲ ಘನ ಆಹಾರಗಳನ್ನು ತಿನ್ನಬಲ್ಲದು. ದಿನಕ್ಕೆ ಮೂರು ಬಾರಿಯಾದರೂ, ಗಡದ್ದಾಗಿ ಹೊಟ್ಟೆ ತುಂಬ ತಿನ್ನಬಹುದು, ಎಂದರೆ ಮೊದಲು ನೀಡುತ್ತಿದ್ದ ಆಹಾರಗಳಿಗಿಂತ ಹೆಚ್ಚು ಪ್ರಮಾಣದ ಆಹಾರಗಳನ್ನು ನೀವು ಮಗುವಿಗೆ ನೀಡಬೇಕು. ಕೇವಲ ಬೇಳೆ - ಕಾಳುಗಳನ್ನು ಮಾತ್ರ ನೀಡದೆ, ಹಣ್ಣು ತರಕಾರಿಗಳನ್ನು ಕೂಡ ಮಗುವಿನ ಆಹಾರ ಪದ್ಧತಿಗಳಲ್ಲಿ ಅಳವಡಿಸಿಕೊಳ್ಳಬೇಕು.

ಮಾಂಸಾಹಾರಿಗಳಾಗಿದ್ದರೆ, ಮಗುವಿಗೆ ಮೊಟ್ಟೆ, ಮೀನು ಹಾಗೂ ಸ್ವಲ್ಪ ಮಟ್ಟಿಗೆ ಮಾಂಸವನ್ನು ನೀಡಬಹುದು.ಆದರೆ ಇದರೊಂದಿಗೆ ಮಗುವಿಗೆ ನಿಮ್ಮ ಎದೆಹಾಲನ್ನು ನೀಡಬೇಕೆನ್ನುವುದನ್ನು ಮಾತ್ರ ಮರೆಯದಿರಿ. ಆಹಾರ ಸೇವಿಸಲು ನಿರಾಕರಿಸುವ, ನಿಮ್ಮ ಮುದ್ದು ಮಕ್ಕಳಿಗೆ ಅಗತ್ಯವಾದ ಪೋಷಕಾಂಶಗಳು ನೀವು ನೀಡುವ ಎದೆಹಾಲಿನಿಂದಲೇ ಲಭ್ಯವಾಗಬೇಕಷ್ಟೆ...?

ನಿಮ್ಮ ಮಗುವಿನ ದೈನಂದಿನ ಆಹಾರ ಪದ್ಧತಿಯು ಹೀಗಿರಲಿ.

ಸೋಮವಾರ

ಬೆಳಗ್ಗಿನ ಉಪಹಾರಗಳನ್ನು ತಿನ್ನಿಸುವ ಮೊದಲೇ ಎದೆಹಾಲನ್ನು ನೀಡಿರಿ. ಉಪಹಾರವು ಹೊಗೆಯಾಡುವ ಇಡ್ಲಿ ಅಥವಾ ‘ಘಂ’ ಎನ್ನಿಸುವ ದೋಸೆಯಾಗಿರಲಿ. ಉಪಹಾರಗಳನ್ನು ಸೇವಿಸಲು ಉತ್ಸುಕತೆ ತೋರುವ ಮಗುವಾಗಿದ್ದರೆ, ಸೇವಿಸಲಿರುವ ತಿಂಡಿಯ ಆಯ್ಕೆಯನ್ನು ಮಗುವಿಗೆ ನೀಡಿರಿ. ನೀಡಿದ ಎಲ್ಲ ತಿಂಡಿಗಳನ್ನು ಮಕ್ಕಳು ಒಮ್ಮೆಗೇ ಸೇವಿಸದು. ಸ್ವಲ್ಪ ಸ್ವಲ್ಪವಾಗಿ ತಿಂಡಿಗಳನ್ನು ಸೇವಿಸುವ ಮಗುವಿಗೆ, ಮಧ್ಯಾಹ್ನದ ವೇಳೆಯಲ್ಲಿ ತರಕಾರಿಗಳಿಂದ ತುಂಬಿದ ಕಿಚಡಿಗಳನ್ನು ನೀಡಿರಿ. ಸಂಜೆಯಾಗುತ್ತಿದ್ದಂತೆಯೇ ಹಣ್ಣುಗಳಿಂದ ತುಂಬಿದ ಪಾತ್ರೆಗಳನ್ನು ಮಗುವಿಗೆ ನೀಡುವುದರೊಂದಿಗೆ ಎದೆಹಾಲನ್ನು ಕುಡಿಸಬೇಕು. ರಾತ್ರಿಯ ಊಟಕ್ಕಾಗಿ ಪುಲಾವ್ ಅನ್ನು ಪರೀಕ್ಷಿಸಬಹುದು. ಮಗುವಿಗೆ ಎದೆಹಾಲನ್ನುಣಿಸಿ ಮಲಗಿಸಿರಿ.

ಮಂಗಳವಾರ

ದಿನದ ಆಹಾರ ಎದೆಹಾಲಿನೊಂದಿಗೆ ಪ್ರಾರಂಭಿಸಿ. ಇವತ್ತು ಉಪಹಾರಕ್ಕಾಗಿ ‘ಕೇಕ್’ ನೀಡಿರಿ. ಬೆಣ್ಣೆಯಿಂದ ತಯಾರಿಸಿದ ಉತ್ತಮ ತಿಂಡಿಗಳನ್ನು ನೀಡುವುದರ ಜತೆಗೇ, ತಾಯಿಯ ಎದೆ ಹಾಲನ್ನು ಸೇವಿಸಲು ನೀಡಿರಿ. ಮಧ್ಯಾಹ್ನದ ಊಟಕ್ಕೆ ಅನ್ನ ಮತ್ತು ತರಕಾರಿಗಳ ಪದಾರ್ಥಗಳನ್ನು ಉಣಬಡಿಸಿ. ನಾಲ್ಕು ಗಂಟೆಗೆ ಎದೆಹಾಲಿನೊಂದಿಗೆ, ಬೇಯಿಸಿದ ತರಕಾರಿಗಳನ್ನು ನೀಡಿರಿ. ದಿನವೂ ಸಂಪೂರ್ಣ ಪೋಷಕಾಂಶಗಳು ದೊರೆಯುವಂತೆ, ಇವತ್ತು ರಾತ್ರಿ ಚಪಾತಿ ಹಾಗೂ ಪಲ್ಯವನ್ನು ತಿನ್ನಿಸಿರಿ. ಮಲಗುವ ಮುನ್ನ ಎದೆಹಾಲನ್ನು ನೀಡಲು ಮರೆಯದಿರಿ.

ಬುಧವಾರ

ದಿನನಿತ್ಯದ ಚಟುವಟಿಕೆಯಂತೆ ಎದ್ದೊಡನೆಯೇ ತಾಯಿಯ ಎದೆಹಾಲು. ಬಾಳೆಹಣ್ಣು ಸೇರಿಸಿ ತಯಾರಿಸಿದ ಗಂಜಿಯನ್ನು ಬೆಳಗಿನ ತಿಂಡಿಗಾಗಿ ನೀಡಿರಿ. ಪುನಃ ಎದೆಹಾಲನ್ನು ಕುಡಿಸಿರಿ. ಮಧ್ಯಾಹ್ನದ ಊಟಕ್ಕೆ ಮೀನು ಅಥವಾ ಚಿಕನನ್ನು ನೀಡಿರಿ. ಮಗುವಿಗೆ ಖಾರ ಪದಾರ್ಥಗಳನ್ನು ನೀಡಲು ಯಾವುದೇ ಹಿಂಜರಿಕೆ ಪಡಬೇಕಾಗಿಲ್ಲ. ಸಂಜೆಯಾಗುತ್ತಿದ್ದಂತೆ ಬ್ರೆಡ್ಡಿನ ಸವಿ ತೋರಿಸಿರಿ. ರಾತ್ರಿಯ ಊಟಕ್ಕೆ ತುಪ್ಪ ಸವರಿದ ದೋಸೆಯಾಗಿದ್ದರೆ...? ತದನಂತರ ಎದೆಹಾಲುಣಿಸಿ ಮಲಗಿಸಿರಿ.

ಗುರುವಾರ

ಮಗು ಎದ್ದೊಡನೆಯೇ ಎದೆಹಾಲು..! ತರಕಾರಿಗಳಿಂದ ತುಂಬಿದ ಬ್ರೆಡ್ ಟೋಸ್ಟ್ ಇವತ್ತಿನ ಉಪಾಹಾರವಾಗಿರಲಿ. ಸ್ವಲ್ಪ ಸಮಯದ ಬಳಿಕ ಪುನಃ ಎದೆಹಾಲು ಉಣಿಸಿ. ಮಧ್ಯಾಹ್ನದ ಊಟಕ್ಕೆ ‘ಮಸಾಲಾ ಪೊಂಗಲ್’ ಆಗಿದ್ದರೆ ಹೇಗೆ..?ಮಗುವಿನ ಸಂಜೆಯ ತಿಂಡಿಗೆ ಮಗುವಿನ ಇಚ್ಛೆಗೆ ಅನುಗುಣವಾಗಿ, ತರಕಾರಿ ಸೂಪು ಅಥವಾ ಚಿಕನ್ ಸೋಪು ನೀಡಿದರಾಗದೆ ! ರಾತ್ರಿಯಾಗುತ್ತಿದ್ದಂತೆಯೇ ಆಲೂ ಪರಾಟ ಅಥವಾ ಪನೀರ್ ಪರಾಟ...!! (ನನ್ನ ಬಾಯಲ್ಲೂ ನೀರೂರುತ್ತಿದೆ) ಎದೆಹಾಲುಣಿಸಿ ಮಲಗಿಸಿ.

ಶುಕ್ರವಾರ

ಖಂಡಿತವಾಗಿಯೂ ಮಗುವು ಎದ್ದೊಡನೆಯೇ ತಾಯಿಯ ಅಮೃತ...! ಇವತ್ತು ಉಪ್ಮಾ (ಸಜ್ಜಿಗೆ) ಯಾಕಾಗಬಾರದು ? ಒಂದು ಗಂಟೆಯ ಬಳಿಕ ಎದೆಹಾಲನ್ನು ನೀಡಿರಿ. ಮಧ್ಯಾಹ್ನ ಊಟಕ್ಕೆಂದು ಮೊಸರನ್ನ ಮತ್ತು ಚೆನ್ನಾಗಿ ಬೇಯಿಸಿ ಹಿಸುಕಿದ ತರಕಾರಿ. ಸಂಜೆಯ ತಿಂಡಿಗಾಗಿ ಎದೆಹಾಲಿನೊಂದಿಗೆ ಪನ್ನೀರ್ ತುಂಡುಗಳು. ರಾತ್ರಿಯೂಟಕ್ಕಾಗಿ, ಚಪಾತಿ ಮತ್ತು ತರಕಾರಿ ಪಲ್ಯ. ರಾತ್ರಿಯ ವೇಳೆಯಲ್ಲಿ ಮಗುವು ಸುಖವಾಗಿ ನಿದ್ರಿಸುವಂತೆ, ರಾತ್ರಿ ಊಟವಾದ ಬಳಿಕ ಮತ್ತು ಮಗು ಮಲಗುವ ಮುನ್ನ ಪುನಃ ಎದೆಹಾಲನ್ನುಣಿಸಿರಿ.

ಶನಿವಾರ

ದಿನದ ಪ್ರಾರಂಭ ಎಂದಿನಂತೆಯೇ ಎದೆ ಹಾಲು ನೀಡಿಯೇ ಆಗಿರಲಿ. ವಾರಾಂತ್ಯವನ್ನು ಮೊಟ್ಟೆ ಮತ್ತು ಟೋಸ್ಟ್ ನಿಂದ ಯಾಕೆ ಆಹ್ಲಾದಿಸಬಾರದು...?ಪೂರ್ವಾಹ್ನವಾಗುತ್ತದ್ದಂತೆಯೇ, ಎದೆಹಾಲಿನೊಂದಿಗೆ ಹಣ್ಣುಗಳನ್ನು ಸೇವಿಸಲು ನೀಡಿರಿ. ಮಧ್ಯಾಹ್ನದೂಟಕ್ಕೆ ವೆಜಿಟೆಬಲ್ ರೈಸ್ ನೀಡಿದರೆ ಹೇಗೆ..? ಮಲಗುವ ಹೊತ್ತೆಂದರೆ, ಹಾಲೂಡಿಸುವ ಹೊತ್ತು.

ಭಾನುವಾರ

ದಿನದ ಆರಂಭವನ್ನು ಎಂದಿನಂತೆಯೇ ಎದೆಹಾಲು ನೀಡಿ ಪ್ರಾರಂಭಿಸಿ. ತಿಂಡಿಗಾಗಿ, ಆರೋಗ್ಯಕ್ಕೆ ಉತ್ತಮವಾದ ರಾಗಿ ದೋಸೆಯಾಗಿರಲಿ. ಪೂರ್ವಾಹ್ನವಾಗುತ್ತಿದ್ದಂತೆಯೇ ಎದೆಹಾಲು ನೀಡಿ ಹೊಟ್ಟೆ ತುಂಬಿಸಿದ ಬಳಿಕ ರೋಟಿ ಮತ್ತು ಚಿಕನ್ ಕರಿಯನ್ನು ಮಧ್ಯಾಹ್ನ ಭೋಜನಕ್ಕೆ ನೀಡಿ. ಅವಕಾಡೊ ಹಣ್ಣು ಮತ್ತು ಬ್ರೆಡ್ ಸ್ಟಿಕ್ ಗಳನ್ನು ಸಂಜೆಯ ಹೊತ್ತಿಗೆ ನೀಡುವಂತಾಗಲಿ. ವಾರಾಂತ್ಯವಾದ ಕಾರಣ ಬಾಯಿಗೆ ಸಿಹಿ ಸಿಹಿಯಾದ ‘ಖೀರ್’ ಅನ್ನು ರಾತ್ರಿ ಊಟಕ್ಕೆ  ಸವಿಯಲು ಕೊಡಿ. ರಾತ್ರಿ ಊಟವಾದ ಬಳಿಕ ದಿನವನ್ನು ಎದೆಹಾಲೂಡಿಸಿ ಅಂತ್ಯಗೊಳಿಸಿ ದಿನದ ಆರಂಭವನ್ನು ತಾಜಾ ಆಹಾರದಿಂದ ಪ್ರಾರಂಭಿಸಿ. ಎಂದರೆ ಹಣ್ಣುಗಳು ಮತ್ತು ತರಕಾರಿಗಳ ಸೇವನೆ ಮಾತ್ರ ಆಗಬೇಕೆಂದೇನಿಲ್ಲ. ಹೊಸ ಹೊಸ ತಿಂಡಿಗಳ ತಯಾರಿಯೂ ಆಗಿರಬಹುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon