Link copied!
Sign in / Sign up
22
Shares

ಶಾಸ್ತ್ರದಲ್ಲಿ ಹೇಳಿರುವುದು ೯ ರೀತಿಯ ಮಹಿಳೆಯರು, ಇದರಲ್ಲಿ ನೀವು ಯಾವ ರೀತಿ ಮಹಿಳೆ ?

ಹಿಂದಿನ ಕೆಲವು ವರ್ಷಗಳಲ್ಲಿ, ನಮ್ಮ ಪೂರ್ವಜರು ರಚಿಸಿದ ಪುರಾತನ ಗ್ರಂಥಗಳ ಸಹಾಯದಿಂದ ನಾವು, ಧರ್ಮ, ಕರ್ಮ, ಅಸ್ತ್ರ, ಯುಗ, ಜೀವನ, ಹುಟ್ಟು, ಸಾವು, ಜ್ಯೋತಿಷ್ಯ ಮತ್ತು ವಿಜ್ಞಾನವನ್ನು ತಿಳಿದುಕೊಂಡಿರುವೆವು / ಅರ್ಥಮಾಡಿಕೊಂಡಿರುವೆವು.

ಅವರ ಜ್ಞಾನವನ್ನು ನಾವು ಅರ್ಥಮಾಡಿಕೊಂಡು ಅದನ್ನು ಮತ್ತು ಅವರನ್ನು ಗೌರವಿಸಿ ಸರಿಯಾದ ಮಾರ್ಗದಲ್ಲಿ ನಡೆಯಬೇಕಾಗಿದೆ. ಶಾಸ್ತ್ರದ ಮೂಲ ಅರ್ಥ ಜ್ಞಾನ ಎಂಬುದು, ಇದು ಮಾನವಕುಲಕ್ಕೆ ಒಳಿತನ್ನು ಬಯಸಿದ ದೈವಿಕ ಋಷಿಮುನಿಗಳಿಂದ ಸಂಕಲ್ಪಿಸಲಾಗಿದೆ ಅಥವಾ ಗ್ರಂಥಗಳಲ್ಲಿ ಸಂಗ್ರಹಿಸಲಾಗಿದೆ.

ಶಾಸ್ತ್ರದ ಉಪ-ವಿಭಾಗಗಳು

ಹೌದು, ಈ ಜ್ಞಾನವು ಬರಿ ಪುರುಷ, ಮಹಿಳೆ ಮತ್ತು ಮಕ್ಕಳಿಗಾಗಿ ಮಾತ್ರ ಸೀಮಿತವಾಗಿಲ್ಲ, ಇದು ಅವರಿಗೂ ಅನ್ವಯಿಸುತ್ತದೆ. ಶಾಸ್ತ್ರದ ಜ್ಞಾನವು ಮಾನವ ಮತ್ತು ಅವನ ವ್ಯಕ್ತಿತ್ವದ ಬಗ್ಗೆ ವ್ಯಾಪಕ ಮಾಹಿತಿಯನ್ನು ಹೊಂದಿದೆ ಮತ್ತು ಮಾನವನ ಭೂತಕಾಲ, ವರ್ತಮಾನ ಕಾಲ, ಮತ್ತು ಭವಿಷ್ಯದ ಬಗ್ಗೆ ಕೂಡ ಜ್ಞಾನವು ಮಾಹಿತಿಯನ್ನು ಸಂಗ್ರಹಿಸಿದೆ. ಇದು ಮಾನವನ ದೇಹದ ಸಂಪೂರ್ಣ ವಿಶ್ಲೇಷಣೆಯನ್ನು ಕೂಡ ಮಾಡುತ್ತದೆ(ಸಮುದ್ರಿಕ ಶಾಸ್ತ್ರ) ಇತ್ಯಾದಿ ಜ್ಞಾನವನ್ನು ಇದು ವಿವರಿಸುತ್ತದೆ.

ಗುಣ

ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ, ಮಹಿಳೆಯ ವ್ಯಕ್ತಿತ್ವ ಅವಳ ಹಿಂದಿನ ಜನ್ಮದ ಅಸ್ತಿತ್ವದ ಗುಣಕ್ಕೆ(ಸತ್ತ್ವ) ಸಂಬಂಧ ಇದೆ. ಇಲ್ಲಿ ಉಲ್ಲೇಖಿಸಿರುವ ಪ್ರಕಾರ, ತಮ್ಮ ಪೂರ್ವ ಜನ್ಮದ ಬುದ್ದಿ ಮತ್ತು ವ್ಯಕ್ತಿತ್ವವನ್ನು ಈ ಜನ್ಮದಲ್ಲೂ ಸ್ವಲ್ಪ ಮುಂದುವರೆಸುವರು ಅದು ಅವರ ಹಿಂದಿನ ಜನ್ಮದ ಹುಟ್ಟಿನ ಆಧಾರದ ಮೇಲೆ.

ಸತ್ವ

ಈ ಸತ್ವಗಳ ಆಧಾರದ ಮೇಲೆ, ಶಾಸ್ತ್ರವು ಸ್ತ್ರೀಯನ್ನು ೯ ವಿಧವಾಗಿ ವಿಂಗಡಿಸಿದೆ. ಆ ಮಹಿಳೆಯರು ಯಾರು ಅವರ ಗುಣ ಏನು ಎಂಬುದನ್ನು ಮುಂದೆ ತಿಳಿಯಿರಿ.

೧.ದೇವಸತ್ತ್ವ ಸ್ತ್ರಿ

ಇವರು ದೈವಿಕ ಭಕ್ತಿಯುಳ್ಳ, ಯಾವುದೇ ಕಳಂಕವಿಲ್ಲದ, ವ್ಯಕ್ತಿ ಮತ್ತು ಅವರ ಸುತ್ತಮುತ್ತಲಿನ ವಾತಾವರಣದಲ್ಲಿ ಅವರು ಉತ್ಸಾಹಭರಿತ ಜೀವನವನ್ನು ನಡೆಸುವರು. ಇವರು ಹೂವಿನಂತೆ ಆಕರ್ಷಿತರಾಗುವರು. ಇವರು ಸಮಾಜಮುಖಿ ಕೆಲಸಗಳನ್ನು ಮಾಡುವರು. ಇವರ ಸಿಹಿ ಮಾತುಗಳನ್ನು ಅಳಿಸಲು ಇಷ್ಟಪಡುವರು. ಇವರಿಗೆ ಆಸ್ತಿ ಮತ್ತು ಭಾಗ್ಯ ಬೇಗನೆ ಸಿಗುತ್ತದೆ.

೨.ಗಂಧರ್ವ ಸತ್ವ ಸ್ತ್ರೀ

ಇವರ ಹೆಸರು ಹೇಳುವಂತೆ, ಇವರು ಪ್ರೀತಿಯ ಜೊತೆ ಜನಿಸುವರು. ತೆಳುವಾದ ಸುಂದರ ದೇಹ ಹೊಂದಿರುವ ಇವರು, ಮನೋಹರತೆ, ಹೆಸರು ಮಾಡುವ, ಬುದ್ದಿಶಕ್ತಿಯುಳ್ಳ, ಶುದ್ಧ ಮನೋಭಾವ ಇರುವ ಮಹಿಳೆಯರಾಗಿದ್ದರೆ. ಇವರು ಹಾಡು ಆಡುವುದು, ನೃತ್ಯ ಮಾಡುವುದರ ಕಡೆ ಹೆಚ್ಚು ಒಲವನ್ನು ಹೊಂದಿರುತ್ತಾರೆ. ಇವರು ಆಡಂಬರದ ಬದುಕಿನ ಕಡೆ ತಮ್ಮ ಒಲವನ್ನು ಹೊಂದಿರುತ್ತಾರೆ.

೩.ಯಕ್ಷ ಸತ್ವ ಸ್ತ್ರೀ

ಇವರು ಸಸ್ಯ ಸಂಪತ್ತು ಮತ್ತು ಐಶ್ವರ್ಯ ಸಂಪತ್ತನ್ನು ಹೊಂದಿರುವ ದೇವತೆಗಳಿಗೆ ಪ್ರಿಯವಾದವರು, ಇವರು ಅರೆ ಸಂಪತ್ತು ಇದ್ದ ಹಾಗೆ. ಶಾಸ್ತ್ರದ ಪ್ರಕಾರ ಇವರು ದೃಢ ಮನಸ್ಸು ಉಳ್ಳವರು, ಮತ್ತು ಎಂತಹದೇ ಸಂದರ್ಭದಲ್ಲೂ ಎಲ್ಲವನ್ನು ಎದುರಿಸುವ ಶಕ್ತಿಯನ್ನು ಹೊಂದಿರುವವರು. ಇವರು ಕೂಡ ಮಾನವ ಕುಲಕ್ಕೆ ಒಳಿತನ್ನು ಬಯಸುವರು. ಆದರೆ ಕೆಟ್ಟ ಅಥವಾ ದುಷ್ಟ ಮಾನವರನ್ನು ಇವರು ಎಂದು ಕ್ಷಮಿಸುವುದಿಲ್ಲ.

೪.ಮನುಷ್ಯ ಸತ್ವ ಸ್ತ್ರೀ

ಮಾನವೀಯ ಗುಣ ಇರುವ ಇವರಿಗೆ, ಸ್ನೇಹ, ಪ್ರೀತಿ ಮತ್ತು ಸತ್ಕಾರ ಗುಣಗಳೇ ಇವರ ಆಭರಣಗಳು. ಇವರು ಸತ್ಯ, ಕಠಿಣ ಶ್ರಮ ಮತ್ತು ಗೌರವ ಸಂಪಾದಿಸುವುದನ್ನು ನಂಬುತ್ತಾರೆ. ಇವರು ಮುಕ್ತ-ಮನಸ್ಸಿನವರಾಗಿದ್ದು, ಇವರ ಅನಿಸಿಕೆಗಳನ್ನು ವ್ಯಕ್ತಪಡಿಸಲು ಹೆದರುವುದಿಲ್ಲ, ಆದರೆ, ಧರ್ಮ, ಕೊಟ್ಟ ಮಾತಿಗೆ(ಭರವಸೆಗೆ), ಪ್ರಾಯಶ್ಚಿತ್ತಕ್ಕೆ ಹೆದರುವರು.

೫.ಪಿಶಾಚ ಸತ್ವ ಸ್ತ್ರೀ

ಹೆಸರೇ ಸೂಚಿಸುವಂತೆ, ಇವರು ರಾಕ್ಷಸರ ವರ್ಗವನ್ನು ಪ್ರೀತಿಸುವರು. ಇವರು ನಿಷೇದಿಸಿರುವಂತಹ ಕೆಲಸಗಳನ್ನು ಮಾಡುವರು. ನಿರ್ಬಂಧಗಳನ್ನು ತೆರವುಗೊಳಿಸುವರು. ಅವರ ಬಳಿ ಆಸ್ತಿ ಅಥವಾ ಸ್ವತ್ತುಗಳಿಗೆ ಅವರು ಎಂದಿಗೂ ತೃಪ್ತಿ ಪಡುವುದಿಲ್ಲ. ಎಲ್ಲವು ಅಂದರೆ ಸೌಂದರ್ಯ, ಆಸ್ತಿ, ಪ್ರೀತಿ, ಶಕ್ತಿ ಇತ್ಯಾದಿಗಳೆಲ್ಲವೂ ನನಗೆ ಬೇಕು ಎಂಬ ಗುಣ ಉಳ್ಳವರು.

೬.ನಾಗಸತ್ವ ಸ್ತ್ರೀ

ಪ್ರಾಣಿಗಳ ವ್ಯಕ್ತಿತ್ವದಂತೆ, ಈ ಮಹಿಳೆಯರು ತಮ್ಮ ಜೀವನದಲ್ಲಿ ಆತುರವನ್ನು ಹೊಂದಿರುತ್ತಾರೆ. ತೆಳುವಾದ, ಸಣ್ಣವಾದ ಸುಂದರ ಮೈಕಟ್ಟನ್ನು ಇವರು ಹೊಂದಿರುವರು. ಈ ಮಹಿಳೆಯರು ತಮ್ಮ ಜನ್ಮದಿಂದಲೇ ಸಂದೇಹ ಪಡುವ ಗುಣವನ್ನು ಪಡೆದಿರುತ್ತಾರೆ. ಅವರಿಗೆ ಹತ್ತಿರವಾಗಿರುವವರು ಮಾತ್ರ ಅವರನ್ನು ಅರಿತುಕೊಳ್ಳಬಹುದು. ಇವರು ಬೇಗನೆ ಮರೆಯುವ ಗುಣ ಹೊಂದಿದ್ದು, ಹೆಚ್ಚು ಸಹಾಯ ಮಾಡುವ ಗುಣ ಇರುವುದಿಲ್ಲ.

೭.ಕಾಕಾ ಸತ್ವ ಸ್ತ್ರೀ

ಈ ಮಹಿಳೆಯರು ಸಹಾನುಭೂತಿ ಗುಣ ಹೊಂದಿದ್ದು, ಕಾಳಜಿಯನ್ನು ಹೊಂದಿರುವ ಜೊತೆಗೆ ತಮ್ಮ ಯೋಜನೆಯನ್ನು ತಾವೇ ನಿರೂಪಿಸಿಕೊಳ್ಳುವರು ಆದರೆ ಇದನ್ನು ಅವರು ತಮ್ಮ ಯೋಚನೆಯಲ್ಲಿ ಮಾತ್ರ ಮಾಡುವರು ನೈಜವಾಗಿ ಮಾಡುವುದಿಲ್ಲ. ಇವರಿಗೆ ಕಾಗೆ ರೀತಿಯ ಕಣ್ಣುಗಳು ಇರುತ್ತವೆ. ಇವರು ಬೇರೆಯವರಿಂದ ಪ್ರಯೋಜನಗಳನ್ನು ಪಡೆಯುವದನ್ನು ಯಾವಾಗಲು ನಿರೀಕ್ಷಿಸುವರು. ಇವರಿಗೆ ಆಸ್ತಿ ಮತ್ತು ಆಹಾರದ ಮೇಲೆ ಅತಿಯಾದ ಆಸೆ ಇರುತ್ತದೆ.

೮.ವಾನರ ಸತ್ವ ಸ್ತ್ರೀ

ಇವರು ತಮ್ಮ ದೇಹವನ್ನು ತಾವೇ ನಿರಂತರವಾಗಿ ಸ್ಪರ್ಶಿಸಿಕೊಳ್ಳುವರು, ಅಂದರೆ, ಅವರ ಕೈಗಳಿಂದ ಕಣ್ಣು ಉಜ್ಜುವುದು, ತೋಳು ಮುತ್ತಿಕೊಳ್ಳುವುದು, ತಲೆ ಮುಟ್ಟುವುದು, ಕೂದಲನ್ನು ಆಡಿಸುವುದು, ಮುಂತಾದವುಗಳನ್ನು ಮಾಡುವರು. ಇವರು ವೇಗವಾಗಿ ಮತ್ತು ಹೆಚ್ಚು ಮಾತನಾಡುವ ಗುಣ ಹೊಂದಿರುವರು. ಇವರಿಗೆ ಬೇಗ ಆಯಾಸ ಆಗುವುದಿಲ್ಲ, ಮತ್ತು ಇವರ ಸುತ್ತ ಇರುವ ಜನರನ್ನು ಇವರು ಯಾವಾಗಲು ಗಮನಿಸುತ್ತಿರುತ್ತಾರೆ.

೯.ಖಾರ ಸತ್ವ ಸ್ತ್ರೀ

ಇವರಿಗೆ ಮಾನವೀಯತೆಯ ಯಾವುದೇ ಗುಣ ಇರುವುದಿಲ್ಲ, ಮತ್ತು ಸಮಾಜ ಇವರನ್ನು ಹೇಗೆ ಗ್ರಹಿಸುತ್ತದೆ ಎಂಬುದರ ಬಗ್ಗೆ ಇವರು ಯಾವಾಗಲು ಚಿಂತಿಸುವರು. ಇವರು ಅಶುಚಿ ಆಗಿರುವರು, ಬಟ್ಟೆಯನ್ನು ಒಗೆಯದೇ ಇರುವರು, ಸ್ನಾನ ಮಾಡಲು ಇಚ್ಛಿಸುವುದಿಲ್ಲ. ಇವರು ಪ್ರಮಾಣ, ವಚನ ಮತ್ತು ಪ್ರಾಯಶ್ಚಿತ್ತವನ್ನು ನಂಬುವುದಿಲ್ಲ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon