ಗಂಡಸರೇ ಎಚ್ಚರ! ಈ 9 ಚಿಕ್ಕ ಚಿಕ್ಕ ವಿಷಯಗಳೇ ಹೆಂಗಸರಿಗೆ ಖುಷಿ ನೀಡುವುದು
ದುಬಾರಿ ಉಡುಗೊರೆ ಬೇಡ ಎಂದಲ್ಲ - ಯಾರಿಗೆ ತಾನೇ ಅದು ಇಷ್ಟವಾಗಲ್ಲ ಹೇಳಿ?! ಆದರೆ ಈ ಯಾವುದೇ ಭೌತಿಕ ವಸ್ತುಗಳು ನೀವು ನಮ್ಮ ಬಗ್ಗೆ ಎಷ್ಟು ಪ್ರೀತಿ ಇಟ್ಟುಕೊಂಡಿದ್ದೀರ ಎಂದು ತಿಳಿಸುವುದಿಲ್ಲ. ಯಾವಾಗಲೋ ಒಮ್ಮೆ ನೀಡುವ ಉಡುಗೊರೆಯೂ ನೀವು ದಿನ ತೋರುವ ಕಾಳಜಿ, ಅಕ್ಕರೆ ಮುಂದೆ ಏನು ಅಲ್ಲ. ಹೆಂಗಸರಿಗೆ ತುಂಬಾ ಅರ್ಥಪೂರ್ಣ ಎನಿಸುವುದು ಮತ್ತು ಪ್ರಮುಖ ಎನಿಸುವುದು ನೀವು ಯೋಜಿಸದೆ ಅಥವಾ ಯೋಚಿಸದೆ ಮಾಡುವ ಕೆಲಸಗಳು. ಸರಳ, ಚಿಕ್ಕ ಚಿಕ್ಕ ಸನ್ನೆ ಸೂಚನೆಗಳೇ ನಮಗೆ ಮುದ ನೀಡುವಂತವು.
ನೀವು ಮುಂದಿನ ಬಾರಿ ಒಂದು ಹೆಣ್ಣನ್ನು ಖುಷಿ ಪಡಿಸಬೇಕೆಂದರೆ, ಈ 10 ವಿಷಯಗಳು ನೆನಪಿರಲಿ :
೧. ನಮ್ಮ ದಿನದ ಬಗ್ಗೆ ಕೇಳುವುದು
“ಇವತ್ತು ಹೇಗಿತ್ತು ನಿನ್ನ ದಿನ?” ಎಂಬ ಒಂದು ಸರಳ ಪ್ರಶ್ನೆ ಕೇಳಿದರೂ ಸಾಕು, ದೈನಂದಿನ ಚಟುವಟಿಕೆಗಳ ಬಗ್ಗೆಯೂ ಎಷ್ಟು ಆಸಕ್ತಿ ತೋರುತ್ತೀರ ಎಂದು ಹಾಗು ಅವುಗಳ ಬಗ್ಗೆ ತಿಳಿದುಕೊಂಡು, ಕಲಿಯುವ ಆಸಕ್ತಿ ತೋರುತ್ತಿದ್ದೀರ ಎಂಬುದನ್ನ ತೋರಿಸುತ್ತದೆ.
೨. ಕಾರಿನ ಬಾಗಿಲು ತೆರೆಯೋದು
ಇದು ಹಳೆ ಕಾಲದ್ದು ಆಯಿತು ಎಂದುಕೊಳ್ಳಬೇಡಿ. ನೀವು ನಿಮ್ಮ ಸಂಬಂಧದ ಮೊದಲ ಹಂತಗಳನ್ನ ದಾಟಿದ್ದರೂ ಪರವಾಗಿಲ್ಲ, ಈ ಸಭ್ಯ ನಡೆಯು ಯಾವಾಗಲು ನಿಮಗೆ ಪ್ರಶಂಸೆ ತಂದು ಕೊಡುತ್ತದೆ.
೩. ಅಪ್ಪುಗೆಗಳು ಮತ್ತು ಮುತ್ತುಗಳು
ಒಂದೆರೆಡು ಕ್ಷಣಗಳು ಹೆಚ್ಚಿಗೆ ಅಪ್ಪಿ ಹಿಡಿಯುವುದು ಬಹಳಷ್ಟು ತಿಳಿಸುತ್ತದೆ. ಅದು “ನೆನಪಿಡು, ನಾನು ನಿನ್ನ ಪ್ರೀತಿಸುತ್ತೀನಿ” ಎಂಬುದಕ್ಕೆ ಭಾಷಾಂತರ ಹೊಂದುತ್ತದೆ.
೪. ನಮ್ಮ ಮಾತುಗಳನ್ನ ಆಲಿಸುವುದು
ಟಿವಿ ನೋಡಿಕೊಂಡು ನಾವು ಹೇಳುವುದಕ್ಕೆಲ್ಲಾ “ಊ….ಊ” ಅನ್ನುವುದಲ್ಲ. ಒಬ್ಬರು ಮಾತಾಡುವಾಗ ಕೇಳಿಸಿಕೊಳ್ಳುವುದು ಒಂದು ಸಾಮಾನ್ಯ ಸೌಜನ್ಯತೆಯ ಕಾರ್ಯ ಆಗಿರಬಹುದು, ಆದರೆ ಇರಾದೆ ವ್ಯಕ್ತಿಪಡಿಸುತ್ತಾ ನಮ್ಮ ಮಾತುಗಳನ್ನ ಕೇಳುವುದು ನೀವು ನಮ್ಮಲ್ಲಿ ಇಟ್ಟಿರುವ ಆಸಕ್ತಿ ಇದೆ ಎಂದು ತೋರಿಸುತ್ತದೆ. ಅಲ್ಲದೆ ನಮ್ಮ ಮಾತುಗಳು ಗಮನಾರ್ಹ ಎಂದು ನಮಗೆ ತಿಳಿಸಿಕೊಡುತ್ತದೆ.
೫. ಫೋನ್ ಕರೆಗಳು
ವಾಟ್ಸಪ್ ಅಲ್ಲಿ ಮೆಸೇಜ್ ಕಳಿಸುವುದು ಮದುವೆ ನಂತರ ಕಮ್ಮಿ ಅಥವಾ ವಿರಳ ಆಗಿರಬಹುದು, ಆದರೆ ಫೋನ್ ಅನ್ನು ಕೈಗೆತ್ತುಕೊಂಡು ನಮಗೆ ಒಂದು ಕರೆ ಮಾಡುವುದನ್ನ ನಾವು ತುಂಬಾ ಗೌರವಿಸುತ್ತೇವೆ. ನೀವು ನಿಮಗೆ ಅನಿಸಿದೊಡನೆ ತಡ ಮಾಡದೆ ನಮಗೆ ಕರೆ ಮಾಡಿ ನಮ್ಮ ಧ್ವನಿ ಕೇಳಿಸಿಕೊಳ್ಳುವಿರಿ ಎಂಬ ಖುಷಿ ನಮಗೆ.
೬. ನಾವು ಚೆನ್ನಾಗಿ ಕಾಣಿಸುತ್ತಿದ್ದೀವಿ ಎಂದು ಹೇಳುವುದು
ಅತಿಯಾಗಿ ಹೊಗಳುವುದು ಕೇವಲ ಬೊಗಳೆ ಮಾತು ಅನಿಸಬಹುದು, ಆದರೆ ನಿಮಗೆ ನಮ್ಮಲ್ಲಿ ಇಷ್ಟ ಆಗಿರುವುದನ್ನ ಬಿಡಿಸಿ ಹೇಳುವುದು ನಮಗೆ ಖುಷಿ ನೀಡುತ್ತದೆ. ಅದು ನಮ್ಮ ವಸ್ತ್ರ ಆಗಿರಬಹುದು, ನಮ್ಮ ದೈಹಿಕ ನೋಟ ಆಗಿರಬಹುದು, ನೀವು ನಮ್ಮಲ್ಲಿನ ಚಿಕ್ಕ ವಿಷಯಗಳನ್ನ ಗುರುತಿಸುವುದು ತುಂಬಾ ಖುಷಿಯ ವಿಷಯ.
೭. ಯಾವಾಗಲೋ ಹೇಳಿದ್ದು ನೆನಪಿಡುವುದು
ನಾವು ಎಂದೋ ಮಾತಾಡುವಾಗ ನಾನು ಹೇಳಿದ್ದ ವಿಷಯವನ್ನ ನೀವು ನೆನಪಿಟ್ಟುಕೊಂಡು, ಅದನ್ನ ಇನ್ನೊಂದು ದಿನ ಯಾವಾಗಾದರೂ ಮಾತಾಡುವಾಗ ನೆನಪಿಸಿಕೊಂಡರೆ ನೀವು ನಮ್ಮ ಮಾತನ್ನ ಗಮನ ಕೊಟ್ಟು ಕೇಳುತ್ತಿದ್ದೀರ ಎಂಬುದನ್ನ ತಿಳಿಸುತ್ತದೆ.
೮. ನಮ್ಮ ಕೈ ಹಿಡಿದುಕೊಳ್ಳುವುದು
ಇದು ತುಂಬಾ ಚಿಕ್ಕ ವಿಷಯ ಅನಿಸಬಹುದು, ಆದರೆ ಇದೊಂದು ಅತ್ಯಂತ ಸಿಹಿಯಾದ ನಡಿಗೆ ಆಗಿದ್ದು ಇದನ್ನ ನಾವು ಎಷ್ಟೊಂದು ಬಾರಿ ಅಪ್ರಮುಖ ಎಂದುಕೊಳ್ಳುತ್ತೀವಿ. ನಮ್ಮ ಕೈಗಳನ್ನ ಹಿಡಿಯುವುದು ನಿಮ್ಮ ಅಕ್ಕರೆಯ ಒಂದು ಸೂಚನೆ ಆಗಿರುತ್ತದೆ ಹಾಗು ನೀವು ನಮ್ಮ ಬಗ್ಗೆ ಹೊಂದಿರುವ ಹೆಮ್ಮೆಯನ್ನ ತೋರಿಸುತ್ತದೆ.
೯. ಯಾವ್ಯಾವುದೋ ಸಿಹಿ ಸಂದೇಶಗಳನ್ನ ಕಳುಹಿಸುವುದು
“ಹೇಗೆ ನಡೀತಿದೆ ದಿನ? ನಿನ್ನ ಮಿಸ್ ಮಾಡ್ಕೊಳ್ತಿದಿನಿ” ಕೂಡ ಸಾಕು. ನೀವು ನಮ್ಮ ಬಗ್ಗೆ ಯೋಚಿಸುತ್ತಿದ್ದರೆ, ಕೂಡಲೇ ಒಂದು ಮೆಸೇಜ್ ಹಾಕಿ. ಇದು ನಮ್ಮ ಮುಖದ ಮೇಲೆ ಮಂದಹಾಸ ಮೂಡಿಸುತ್ತದೆ ಹಾಗು ನೀವು ನಮಗಾಗಿ ನಿಮ್ಮ ಕಾರ್ಯಗಳಿಂದ ಒಂದು ಕ್ಷಣ ಬಿಡುವು ಮಾಡಿಕೊಂಡಿರಿ ಎಂಬುದನ್ನ ನಾವು ಪ್ರಶಂಸಿಸುತ್ತೇವೆ.
