Link copied!
Sign in / Sign up
17
Shares

7 ಅತ್ಯಂತ ಅಪಾಯಕಾರಿ ಶಿಶು ಉತ್ಪನ್ನಗಳು

ಹೆಚ್ಚಿನ ಪೋಷಕರಲ್ಲಿ ಒಂದು ನಿರ್ದಿಷ್ಟ ಭಯವನ್ನು ಉಂಟುಮಾಡುವ ವಿಷಯವೆಂದರೆ - ಸಣ್ಣ ಆಟಿಕೆಗಳು! ಜವಾಬ್ದಾರಿಯುತ ಪೋಷಕರಾಗಿ, ಅಂತಹ ವಿಷಯಗಳನ್ನು ನಿಮ್ಮ ಮಗುವಿನ ವ್ಯಾಪ್ತಿಯಿಂದ ಹೊರಗಿಡಲು ನೀವು ಉತ್ತಮ ಕೆಲಸಗಳನ್ನು ಮಾಡುತ್ತೀರಿ. ಆದರೆ ಅದು ನಿಜವೇ? ನಿಜವಾಗಿಯೂ ಅಲ್ಲ, ಕೆಲವು ಶಿಶು ಉತ್ಪನ್ನಗಳು ನಿಮ್ಮ ಮಗುವಿನ ಅಮೂಲ್ಯ ಕ್ಷಣಗಳನ್ನು ಅದರ ಇಚ್ಚೆಯಂತೆ ಕಳೆಯಲು ಬಿಡುವುದಿಲ್ಲ. ಅದು ನಿಮ್ಮ ಮಗುವಿನ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಅಂತಹ ಉತ್ಪನ್ನಗಳ ಕೆಲ ಪಟ್ಟಿಯು ಇಲ್ಲಿದೆ. 

೧. ತೊಟ್ಟಿಲು

ಇದು ನಿಮ್ಮ ಮಗುವನ್ನು ಸ್ವತಂತ್ರವಾಗಿರಿಸಲು ಅಡ್ಡಿಯಾಗುತ್ತದೆ, ಮಗುವನ್ನು ತೊಟ್ಟಿಲಿಗೆ ಪಟ್ಟಿ(ಬೆಲ್ಟ್)ಯಿಂದ ಕಟ್ಟಿದ್ದರೆ ಅದು ಶಿಶುವಿಗೆ ಅಹಿತಕರವಾಗಬಹುದು, ಪಟ್ಟಿ ಕಟ್ಟಿಲ್ಲವೆಂದರೆ ಮಗು ತೊಟ್ಟಿಲಿನಿಂದ ಕೆಳಗೆ ಬೀಳಬಹುದು. ಈ ಪಟ್ಟಿಯ (ಬೆಲ್ಟ್) ನಿರಂತರ ಎಳೆಯುವಿಕೆ ಇಂದ ನಿಮ್ಮ ಮಗುವಿಗೆ ಗಾಯವಾಗಬಹುದು ಅಥವಾ ಉಸಿರು ಕಟ್ಟಿದಂತಾಗಬಹುದು. ಅಥವಾ ಮಗು ತೊಟ್ಟಿಲಿನಿಂದ ಮೇಲೇಳಲು ಪ್ರಯತ್ನಿಸಿದರೆ ಅದಕ್ಕೆ ಕಟ್ಟಿರುವ ಪಟ್ಟಿಯಿಂದ(ಬೆಲ್ಟ್) ಅದಕ್ಕೆ ಮತ್ತಷ್ಟು ಹಾನಿಯಾಗಬಹುದು. ಹಾಸಿಗೆ ಮೇಲೆ ಮಲಗಿಸುವುದು ಒಂದು ಒಳ್ಳೆಯ ಉಪಯವಾಗಿದೆ. 

೨. ವಾಕರ್ಸ್(ನಡಿಗೆ ವಸ್ತು)

ವಾಕರ್ಸ್ಅನ್ನು ಉಪಯೋಗಿಸುವುದು ಅನೇಕ ಮಕ್ಕಳಲ್ಲಿ ಸಂತೋಷವನ್ನು ಉಂಟುಮಾಡುತ್ತದೆ. ಅದು ನಿಮ್ಮ ಮಗುವು ಮೊದಲ ಹೆಜ್ಜೆ ಇಡಲು ಸಹಾಯ ಮಾಡುತ್ತದೆ, ಎಂಬ ವಿಶ್ವಾಸವಿದ್ದರೂ, ಒಂದು ಸಮೀಕ್ಷೆಯ ಪ್ರಕಾರ ಸುಮಾರು ೨೧,೦೦೦ ಶಿಶುಗಳು ಇದರಿಂದ  ಗಾಯಗಳನ್ನು ಮಾಡಿಕೊಂಡಿವೆ. ಒಂದು ವಾಕರ್ ಮಗುವಿನ ಗರಿಷ್ಠ ಬೆಳವಣಿಗೆಯ ಪ್ರಕ್ರಿಯೆಯನ್ನು ಪ್ರತಿಬಂಧಿಸುತ್ತದೆ ಅಥವಾ ಅದನ್ನು ವಿಳಂಬಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಕೃತಕವಾಗಿ ಮೊದಲ ಹಂತಗಳನ್ನು ಹುಟ್ಟುಹಾಕುವ ಬದಲು ಮೂಲ ನಡವಳಿಕೆಗಳಿಗಾಗಿ ನೈಸರ್ಗಿಕ ಮಾರ್ಗಗಳಿಗೆ ಯಾವಾಗಲೂ ಆದ್ಯತೆ ನೀಡಬೇಕು.  

೩. ಶಿಶು ಸ್ನಾನದತೊಟ್ಟಿಯ ಆಸನಗಳು

ಈ ಸ್ನಾನದತೊಟ್ಟಿಯ ವ್ಯಾಪಾರಿಗಳು  ತಮ್ಮ ಲಾಭಕ್ಕಾಗಿ ಉತ್ಪನ್ನದ ಸುಳ್ಳು ಭರವಸೆಯನ್ನು ಗ್ರಾಹಕರಿಗೆ ನೀಡುತ್ತದೆ. ನಿಮ್ಮ ಮಗುವಿನ ಸ್ನಾನದ ಸಮಯದಲ್ಲಿ ನೇರವಾಗಿ ಕುಳಿತುಕೊಳ್ಳಲು ಇದು ಸಹಾಯ ಮಾಡುತ್ತದೆಯೇ?, ಹೌದು. ಆದರೆ ನಿಮ್ಮ ಮಗುವು ಕೆಳಕ್ಕೆ ಬೀಳುವ ಅಪಾಯ ಹೆಚ್ಚು. ಈ ಸಲಕರಣೆಗಳ ಕಾರಣದಿಂದ ಸುಮಾರು ೧೭೦ ಸಾವುಗಳು ಸಂಭವಿಸಿದೆ ಎಂದು ಸಮೀಕ್ಷೆ ವರದಿ ಮಾಡಿದೆ. 

೪. ಜೋಕಾಲಿ

ನಾವು ಪ್ರತಿದಿನ ಅವರನ್ನು ನೋಡುತ್ತೇವೆ, ತಾಯಿಯೂ ತನ್ನ ಮಗುವಿನೊಂದಿಗೆ ಜೋಕಾಲಿ ವಾಹಕ(ಕ್ಯಾರಿಯರ್) ಜೊತೆಗೆ ತಿರುಗಾಡುವುದು ಒಂದು ಮುದ್ದಾದ ದೃಶ್ಯವನ್ನು ರೂಪಿಸುತ್ತದೆ. ಆದರೆ ಕಟು ಸತ್ಯ ಏನೆಂದರೆ, ಕಳೆದ ೧೫ ವರ್ಷಗಳಲ್ಲಿ ಸುಮಾರು ೧೫ ಸಾವುಗಳು ಸಂಭವಿಸಿವೆ, ಮತ್ತು ಗಾಯಗಳಾಗಿವೆ, ಮತ್ತು ಇದರ ಸಂಖ್ಯೆ ಇನ್ನೂ ಹೆಚ್ಚಾಗುತ್ತಿದೆ ಎಂಬುದು. ಮಗುವಿನ ದೇಹದ ವಿರುದ್ಧ ದೀರ್ಘಕಾಲದ ಸಂಕುಚನವು ಅಂತಿಮವಾಗಿ ಉಸಿರುಗಟ್ಟುವಿಕೆಗೆ ಕಾರಣವಾಗಬಹುದು ಎಂದು ವಿಜ್ಞಾನವು ನಮಗೆ ಹೇಳುತ್ತದೆ. ಇದರಿಂದ ಕೆಳಗೆ ಬಿದ್ದು ತಲೆ ಬುರುಡೆಗೂ ಗಾಯವಾಗಬಹುದು.

೫. ಮೃದು-ಆರಾಮದಾಯಕ ಹಾಸಿಗೆ

ಈ ವಿನ್ಯಾಸಗೊಳಿಸಿದ ಕಂಬಳಿಗಳು, ದಿಂಬುಗಳು ಮತ್ತು ಹಾಸಿಗೆಗಳು ನೋಡಲು ಸುಂದರವಾಗಿರಬಹುದು, ಆದರೆ ಅವುಗಳನ್ನು ಅಲಂಕಾರಿಕ ಉದ್ದೇಶಗಳಿಗೆ ಮಾತ್ರ ಸೀಮಿತಗೊಳಿಸಿದರೆ ಒಳ್ಳೆಯದು. ಹೆಚ್ಚು ಮೃದುತ್ವ, ಅವ್ಯವಸ್ಥೆಗೆ ಸಿಲುಕಿಸುವ ಅಥವಾ ಉಸಿರುಗಟ್ಟುವಂತೆ ಮಾಡುವ ಸಾಧ್ಯತೆ ಹೆಚ್ಚು.

೬. ಬಂಪರ್ಸ್

ಈ ವಸ್ತುಗಳನ್ನು ಮೂಲತಃ ನಿಮ್ಮ ಮಗುವಿನ ತಲೆಯನ್ನು ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ. ಆದರೆ ಅವರು ಅದನ್ನು ಶಿಶುಗಳಿಗಾಗಿ ಮಾಡಿರುವ ವಿಧಾನ ತಿರಾ ಕೆಟ್ಟದಾಗಿದೆ. ನಾವು ಉಸಿರುಗಟ್ಟಿಸುವ ಬಗ್ಗೆ ಹೇಳುತ್ತಿದ್ದೇವೆ. ಅವರ ಮೂಲ ಚಲನವನ್ನು ಚಿಕ್ಕ ವಯಸ್ಸಿನಲ್ಲೇ ನಿರ್ಭಂದಿಸುವುದರಿಂದ ಇಂತಹ ಅವಕಾಶಗಳು ಹೆಚ್ಚಾಗುತ್ತವೆ. ನೈಸರ್ಗಿಕವಾಗಿ ಬೆಳೆಯಲು ಮತ್ತು ಆಡಲು ಬಿಡುವುದು ಒಳ್ಳೆಯದು. ನಿಮ್ಮ ಮಗುವು ತನ್ನ ತಲೆಯನ್ನು ತಾನೇ ಸರಿಹೊಂದಿಸಿಕೊಳ್ಳಲಿ. 

೭.ಮಲಗುವ ವಿನ್ಯಾಸಕ (ಸ್ಲೀಪ್ ಪೋಸಿಷನರ್)

ಮಗುವಿನ ನಿದ್ರೆಯ ಸಮಯದಲ್ಲಿ ತಮ್ಮ ಸ್ಥಾನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ, ಆದರೆ ಮೂಲಭೂತವಾಗಿ ಅದರ ಹೊಟ್ಟೆಯನ್ನು ತಿರುಗದಂತೆ ತಡೆಯುತ್ತದೆ. ಕೆಲವೊಮ್ಮೆ ಅವುಗಳನ್ನು ಮಗುವಿನ ತಲೆಯನ್ನು ಮೇಲಕ್ಕೆತ್ತಲು ಸಹ ಬಳಸಲಾಗುತ್ತದೆ, ಇದು ಆಸಿಡ್ ರಿಫ್ಲಕ್ಸ್ ಸಮಸ್ಯೆಗಳಿಗೆ ತುತ್ತಾಗಲು ಸಹಾಯ ಮಾಡಿದಂತೆ ಆಗುತ್ತದೆ. ಆದರೆ, ಗೊತ್ತಿಲ್ಲದೇ, ಮಗುವು ಮಲಗುವ ವಿನ್ಯಾಸಕ(ಸ್ಲೀಪ್ ಪೋಸಿಷನರ್)ದ ವಿರುದ್ದ ತನ್ನ ತಲೆಯನ್ನು ಇರಿಸಿದರೆ ಅದು ದಿಡೀರ್ ಉಸಿರುಗಟ್ಟಿಸುವುಕೆಗೆ ಕಾರಣವಾಗುತ್ತದೆ. ರಕ್ತ ಸಂಚಯನದಲ್ಲಿ ಏನಾದರೂ ತೊಂದರೆ ಕಾಣಿಸಿದರೆ ನಿಮ್ಮ ವೈದ್ಯರನ್ನು ಬೇಟಿ ಮಾಡಿ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon