Link copied!
Sign in / Sign up
7
Shares

ಈ 7 ವಿಚಿತ್ರ ಉಪಾಯಗಳಿಂದ ನಿಮ್ಮ ಲೈಂಗಿಕ ಜೀವನ ಮತ್ತಷ್ಟು ಸುಖಮಯ ಮಾಡಿಕೊಳ್ಳಿ!

ನೀವು ನಿಮ್ಮ ಮುಂಜಾನೆಗಳು ಇನ್ನಷ್ಟೂ ಕ್ರಿಯಾಶೀಲ ಮಾಡಿಕೊಳ್ಳಲು ಉಪಾಯಗಳನ್ನ ಓದಿರುತ್ತೀರ, ನಿಮ್ಮ ದಿನಗಳು ಖುಷಿಯಿಂದ ತುಂಬಿರಲು ಹಾಗು ಆರೋಗ್ಯಕರವಾಗಿರಲು ಉಪಾಯಗಳನ್ನು ಓದಿರುತ್ತೀರ. ಆದರೆ ನಿಮ್ಮ ಲೈಂಗಿಕ ಜೀವನ ಇನ್ನಷ್ಟು ಚೆನ್ನಾಗಾಗಿಸಿಕೊಳ್ಳುವುದರ ಬಗ್ಗೆ ಓದಿದ್ದೀರಾ?

ಲೈಂಗಿಕ ಕ್ರಿಯೆ ಎನ್ನುವುದು ನೈಸರ್ಗಿಕವಾಗಿರಬೇಕು ಅಲ್ಲವೇ? ಇದು ಜೋಡಿಗಳ ಮಧ್ಯೆ  ಸರಳವಾಗಿ ಆಗಬೇಕಲ್ಲವೇ? ಇದು ಸುಗಮವಾಗಿ ಆಗಿ ಇಬ್ಬರಿಗೂ ತೃಪ್ತಿ ನೀಡಬೇಕು ಅಲ್ಲವೇ? ಹೌದು ನಿಜ. ಆದರೆ, ಪ್ರತಿ ಬಾರಿಯೂ ಹೀಗೆ ಆಗಬೇಕು ಎಂದಿಲ್ಲ. ಕೆಲವೊಂದು ಬಾರಿ ಈ ಕ್ರಿಯೆಯು ಕಷ್ಟ ಆಗಬಹುದು ಅಥವಾ ಇರಿಸು ಮುರಿಸು ಉಂಟು ಮಾಡಬಹುದು. ಹೀಗಾಗಿ ನೀವು ನಿಮ್ಮ ಲೈಂಗಿಕ ಕ್ರಿಯೆಯನ್ನ ಮತ್ತಷ್ಟು ಚೆನ್ನಾಗಾಗಿಸಿಕೊಳ್ಳಲು ಈ ಉಪಾಯಗಳನ್ನ ಓದಿ ಅಳವಡಿಸಿಕೊಂಡರೆ ತಪ್ಪೇನಿಲ್ಲ. ನಿಮ್ಮ ಲೈಂಗಿಕ ಜೀವನ ಮತ್ತಷ್ಟು ರಸಮಯ ಆಗಿಸಲು ಇಲ್ಲಿ ಕೆಲವು ಉಪಾಯಗಳಿವೆ ಓದಿ.

೧. ಕಾಲುಚೀಲ (ಸಾಕ್ಸ್) ಧರಿಸಿ

ಇದು ಕಾಣಲಿಕ್ಕೆ ಸೆಕ್ಸಿ ಆಗಿ ಇರದೇ ಇರಬಹುದು. ಆದರೆ, ಮುಂದಿನ ಬಾರಿ ನೀವು ಸಂಭೋಗದಲ್ಲಿ ತೊಡಗಿಕೊಳ್ಳುವಾಗ ಇವುಗಳನ್ನ ಧರಿಸುವುದನ್ನು ಪರಿಗಣಿಸಿ. ಅಮೆರಿಕಾದ ಯೂನಿವರ್ಸಿಟಿ ಒಫ್ ಗೋರಿಂಗೆಮ್ ಸಂಶೋಧಕರು ತಾವು ನಡೆಸಿದ ಅಧ್ಯಯನದಲ್ಲಿ ಕಾಲುಚೀಲ ಧರಿಸಿ ಸಂಭೋಗ ನಡೆಸುವ 80% ಜೋಡಿಗಳು ಲೈಂಗಿಕ ಪರಾಕಾಷ್ಠೆ ಹೊಂದಿದರೆ, ಸಾಕ್ಸ್ ಧರಿಸದಿದ್ದವರಲ್ಲಿ ಕೇವಲ 50% ಜನರು ಪರಾಕಾಷ್ಠೆ ಹೊಂದುವರು ಎಂದು ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.

ಕಾಲುಚೀಲಗಳು ನಿಮ್ಮ ಪಾದಗಳನ್ನು ಬೆಚ್ಚಗೆ ಇಡುವುದಷ್ಟೇ ಅಲ್ಲದೆ, ಅವುಗಳು ನಿಮ್ಮ ರಕ್ತ ಸಂಚಾರ ವೃದ್ಧಿಸುತ್ತವೆ. ಈ ರಕ್ತ ಸಂಚಾರ ವೃದ್ಧಿಯಿಂದ ನೀವು ಅತ್ಯುತ್ತಮ ಲೈಂಗಿಕ ಪರಾಕಾಷ್ಠೆ ಹೊಂದಬಹುದು.

೨. ಹೀಲ್ಸ್ ಅನ್ನು ತೆಗೆದು ಹಾಕಿ

ಅಧ್ಯಯನಗಳಿಂದ ತಿಳಿದು ಬಂದಿರುವುದು ಏನೆಂದರೆ ನೀವು 2 ಇಂಚುಗಳಿಗಿಂತ ಹೆಚ್ಚಿನ ಎತ್ತರದ ಹೀಲ್ಸ್ ಅನ್ನು ಧರಿಸಿದರೆ, ನಿಮ್ಮ ಸೊಂಟವು ಅಸಹಜ ಕೋನದಲ್ಲಿ ಬಾಗುತ್ತದೆ. ಇದು ನಿಮ್ಮ ಲೈಂಗಿಕ ಪರಾಕಾಷ್ಠೆಯ ತೀವ್ರತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ನೀವು ಈಗಲೇ ಉದ್ದದ ಹೀಲ್ಸ್ ಇರುವ ಚಪ್ಪಲಿಗಳನ್ನ ಧರಿಸುವುದು ನಿಲ್ಲಿಸಬೇಕು !

೩. ಯಾವಾಗಲು ಜಲೀಕರಣಗೊಂಡಿರಿ (ಹೈಡ್ರೇಟೆಡ್)

ಹೆಚ್ಚೆಚ್ಚು ನೀರು ಸೇವಿಸುವ ಹೆಂಗಸರ ದೇಹದ ಎಲ್ಲಾ ಭಾಗಗಳು ಜಲೀಕರಣ ಹೊಂದು ನಯವಾಗಿ (ಲೂಬ್ರಿಕೇಟೆಡ್) ಇರುತ್ತವೆ ಹಾಗು ಅವರಲ್ಲಿ ಲೈಂಗಿಕ ಆಸಕ್ತಿ ಹೆಚ್ಚಿರುತ್ತದೆ. ಸ್ತ್ರೀರೋಗತಜ್ಞರು ಹೆಚ್ಚು ನೀರು ಸೇವಿಸುವುದರಿಂದ ಯೋನಿಯು ಒಣಗುವುದನ್ನು ತಡೆಯಬಹುದು ಎನ್ನುತ್ತಾರೆ. ಹೀಗಾಗಿ ಹೆಚ್ಚೆಚ್ಚು ನೀರು ಕುಡಿಯಿರಿ!

೪. ಮೌಖಿಕ ಲೈಂಗಿಕತೆ ವೇಳೆ ಕಕ್ಕುವಂತೆ ಆದರೆ, ಇದನ್ನು ಪ್ರಯತ್ನಿಸಿ

ಈ ಅಧ್ಯಯನವು ದಂತ ವೈದ್ಯರು ತಾವು ಚಿಕಿತ್ಸೆ ನೀಡುವಾಗ ತಮ್ಮ ರೋಗಿಗಳು ಕಕ್ಕದಿರಲು ಏನು ಮಾಡಬೇಕು ಎಂಬುದನ್ನ ಕಂಡು ಹಿಡಿಯುವುದಕ್ಕೆ ನಡೆಸಿದ್ದು. ಆದರೆ ಈ ಪ್ರಕ್ರಿಯೆಯನ್ನು ಯಾರು ಬೇಕಾದರೂ ಉಪಯೋಗಿಸಬಹುದು. ನಿಮಗೆ ಲೈಂಗಿಕ ಕ್ರಿಯೆಯ ವೇಳೆ ಯಾವುದಾದರೂ ವಾಸನೆ ಅಥವಾ ರುಚಿ ಅಹಿತಕರ ಎನಿಸಿ ಕಕ್ಕುವಂತೆ ಅನಿಸಿದರೆ, ನೀವು ನಿಮ್ಮ ಅಂಗೈಯಲ್ಲಿನ ಹೆಬ್ಬೆರೆಳು ಮತ್ತು ತೋರ್ಬೆರಳು ಮಧ್ಯೆ ಇರುವ ಜಾಗವನ್ನ ಒತ್ತಿಕೊಳ್ಳುವ ಮೂಲಕ ಕಕ್ಕುವಂತೆ ಭಾಸವಾಗುವುದನ್ನು ನಿವಾರಿಸಬಹುದು.

೫. ಈ ವರ್ಕೌಟ್ ಮುಂಚೆ ಆ ವರ್ಕೌಟ್ ಮಾಡಿ

ನೀವು ಮಂಚದ ಮೇಲೆ ಬೆವರುವ ಮುನ್ನ ವ್ಯಾಯಾಮ ಮಾಡಿ ಬೆವರು ಹೊರಹಾಕಿದರೆ, ನೀವು ನಿಮ್ಮ ಲೈಂಗಿಕ ಜೀವನದಲ್ಲಿ ಮತ್ತಷ್ಟು ವಿಶ್ವಾಸದಿಂದ ತೊಡಗಿಸಿಕೊಳ್ಳಬಹುದು ಮತ್ತು ಹೆಚ್ಚಿನ ತೃಪ್ತಿಯನ್ನ ಪಡೆಯಬಹುದು. ವ್ಯಾಯಾಮ ಮಾಡುವುದು ನಿಮ್ಮನ್ನು ಗಟ್ಟಿ ಮಾಡುವುದು ಮತ್ತು ನಿಮ್ಮನ್ನು ಹೆಚ್ಚು ಫ್ಲೆಕ್ಸಿಬಲ್ ಮಾಡುವುದು ಅಷ್ಟೇ ಅಲ್ಲದೆ, ಇದು ನಿಮ್ಮ ಜನನಾಂಗಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ.

೬. ಹಸಿರು ಸೇವಿಸಿ

ಹೆಲ್ತ್ ಮ್ಯಾಗಜಿನ್ ಪ್ರಕಾರ ಅರುಗುಲಾ, ಪಾಲಕ್, ಮತ್ತು ಅವಕಾಡೊ ಸೇವಿಸುವುದು ರಕ್ತ ಸಂಚಾರವನ್ನ ವೃದ್ಧಿಸುವುದಷ್ಟೇ ಅಲ್ಲದೆ, ಲೈಂಗಿಕ ಆಸಕ್ತಿಯನ್ನ ಕ್ಷೀಣಿಸುವಂತ ಪ್ರಾಕೃತಿಕ ಅಂಶಗಳನ್ನ ದೊರವಿಡುತ್ತವೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon