Link copied!
Sign in / Sign up
6
Shares

ಈ 7 ಪ್ರಶ್ನೆಗಳನ್ನ ಯಾವ ಅತ್ತೆಯೂ ಕೇಳಲೇ ಬಾರದು!

ಅತ್ತೆಯಂದಿರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳದ ಹೊರತು, ಅವರು ನಿಮ್ಮ ಪ್ರೀತಿಯ ಸಖಿಯಾಗುವುದಿಲ್ಲ.ನಿಮ್ಮ ಪ್ರೀತಿಯ ಮಗುವನ್ನು ಸಾಕಿ ಸಲಹಿ ಬೆಳೆಸುವ ಸಮಯದಲ್ಲಿ ಅವರ ಆಸರೆ ನಿಮಗೆ ಖಂಡಿತ ಬೇಕಾಗುತ್ತದೆ. ತಮ್ಮ ಸೊಸೆಯಂದಿರಲ್ಲಿ ಕೇಳಲೇಬಾರದ ಕೆಲವು ಪ್ರಶ್ನೆಗಳನ್ನು ನಿರ್ದಾಕ್ಷಿಣ್ಯವಾಗಿ ಕೆಲವು ಅತ್ತೆಯರು ಕೇಳುವಾಗ ಕೆಲವೊಮ್ಮೆ ಆ ಪ್ರಶ್ನೆಗಳು ಹಾಸ್ಯಾಸ್ಪದವೆನಿಸಲೂಬಹುದು.

ಜಗತ್ತಿನ ಎಲ್ಲಾ ಸೊಸೆಯರು ಎದುರಿಸುವ ಏಳು ಅತಿರೇಕದ ಪ್ರಶ್ನೆಗಳು.

 

 ೧. ನಾನು ಮಾಡುವಂತೆ ನೀನು ಯಾಕೆ ಮಾಡಬಾರದು?

ಕಾರ್ಯಕ್ಷಮತೆಯು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವುದು ದಿನನಿತ್ಯದ ಕಾರ್ಯಕ್ರಮಗಳು ಸುಗಮವಾಗಿ ನಡೆಯುತ್ತಿದೆಯೆಂದಾದರೆ, ಇಂತಹ ಸಲಹೆಗಳು ಅಸಂಬದ್ಧವೆನಿಸುವವು.

 ೨. ಮಗುವಿನ ಕೆಲಸವನ್ನು ಯಾಕೆ ಮೊದಲೇ ಮಾಡಿ ಮುಗಿಸುವುದಿಲ್ಲ ?

ತಮ್ಮ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕೆಂದು ಸ್ವಂತ ತಾಯಿಯರಿಗೆ ಜನ್ಮವತ್ತಾಗಿ ತಿಳಿದಿರುತ್ತದೆ. ಮಕ್ಕಳನ್ನು ಸಲಹುವ ರೀತಿಯ ಬಗ್ಗೆ ವಿಮರ್ಶಿಸುವುದಕ್ಕಿಂತ, ಮಗುವನ್ನು ಓಲೈಸಲು/ಸಂತೈಸಲು ಕೈಜೋಡಿಸಿದರೆ, ನಿಮ್ಮ ಸೊಸೆಯ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಗೌರವ ಮೂಡುವುದು.

೩. ಮಗುವಿಗೆ ಏನು ಇಷ್ಟವೆಂದು ಕೂಡ ನಿನಗೆ ತಿಳಿದಿಲ್ಲವೇ ?

ಕಡ್ಡಾಯ ಬಿಟ್ಟು ಆ ವಿಷಯಕ್ಕೆ ಮಾತ್ರ ಕೈ ಹಾಕಬೇಡಿ. ನಿಮ್ಮ ತಾಯಿಯ ನಿಮ್ಮನ್ನು ಬೆಳೆಸಲು ಎಷ್ಟೆಲ್ಲ ಶ್ರಮಪಟ್ಟಿರುವರೋ, ಅದೇ ಪ್ರಯತ್ನವನ್ನು ತನ್ನ ಮಗುವನ್ನು ಬೆಳೆಸುವಲ್ಲಿ ನಿಮ್ಮ ಸೊಸೆಯೂ ಮಾಡುವರು. ಅವನು ನಿಮ್ಮ ಸೊಸೆಯ ಮಗ. ತಾಯಿ ಮಕ್ಕಳಿಬ್ಬರೂ ಪರಸ್ಪರ ಬಹಳ ಸ್ನೇಹ ಬಾಂಧವ್ಯಗಳಿಂದ ಬೆಸೆಯಲ್ಪಟ್ಟವರು. ಮಗುವು ಇಷ್ಟಪಡುವ ಬಿಸಿ ಬೇಳೆಬಾತನ್ನು ಅವನ ತಾಯಿಯು ಮಾಡುವಂತೆ ನಿಮ್ಮಿಂದ ಮಾಡಲು ಸಾಧ್ಯವಿಲ್ಲ. ಆದರೆ, ನಿಮ್ಮ ಕೆಲವು ಕೈ ರುಚಿಗಳನ್ನು ಅವನೂ ಇಷ್ಟಪಟ್ಟಿರಬಹುದು.

೪. ತುಂಬಾ ದಪ್ಪಗಾಗಿದ್ದೀಯಲ್ಲಾ...?

ಇಂತಹ ಪ್ರಶ್ನೆಯನ್ನು ಒಬ್ಬ ಸ್ತ್ರೀಯಲ್ಲಿ ಬೇರೆ ಯಾವ ಹೆಂಗಸು ಕೇಳಲು ಸಾಧ್ಯ ? ನಿಮ್ಮ ಅತ್ತೆಯೇ ಹೌದು ! ಇದರ ಬಗ್ಗೆ ನಿಮ್ಮ ಮಗ ಸೊಸೆಯರು ಹಲವು ಬಾರಿ ಚರ್ಚಿಸುತ್ತಾರೆ. ಮೊದಲಿನ ಉಡುಪುಗಳು ಧರಿಸಲಾಗದೇ ಮೂಲೆಗುಂಪಾಗಿರುವುದರ ಬಗ್ಗೆಯೂ ಖೇದ ವ್ಯಕ್ತಪಡಿಸಿರುತ್ತಾರೆ. ಪುನಃ,ಅದೇ ಮಾತನ್ನು ಅತ್ತೆಯ ಬಾಯಿಯಿಂದ ಕೇಳಿಸಿಕೊಳ್ಳಲು ಯಾವುದೇ ಸೊಸೆಯರು ಬಯಸಲಾರರು. 

೫. ಈ ಖಾದ್ಯವನ್ನು ನೀನು ಎಲ್ಲಿಂದ ತರಿಸಿದೆ ?

ಇಂತಹ ಮಾತುಗಳು ನಿಮ್ಮ ಕೃಪಣತನವನ್ನಲ್ಲದೇ, ಇನ್ನೇನನ್ನೂ ಸೂಚಿಸುವುದಿಲ್ಲ. ಈ ಒಂದು ಖಾದ್ಯವನ್ನು ತಯಾರಿಸಲು ಗಂಟೆಗಟ್ಟಲೆ ಅಡುಗೆಮನೆಯಲ್ಲಿ ಮೀಸಲಾಗಿಟ್ಟು, ಬಯಸಿದ ರುಚಿಯನ್ನು ಪಡೆಯಲು,ನಿರ್ದಿಷ್ಟ ಸಮಯ ಪರಿಧಿಯೊಳಗೆ ಒಂದು ಅಡುಗೆಯನ್ನು ತಯಾರಿಸಿದಾಗ, ಮೆಚ್ಚಿ, ಬೆನ್ನು ತಟ್ಟಿ, ಪ್ರೋತ್ಸಾಹಿಸುವ ಬದಲು ಇಂತಹ ಕುಹಕ ನುಡಿಯನ್ನು ಕೇಳಲು ಯಾವ ಸೊಸೆಯೂ ಇಚ್ಛಿಸುವುದಿಲ್ಲ.

೬. ಇವತ್ತು ನೀನಾ ಅಡುಗೆ ಮಾಡಿದ್ದು ?

ಮದುವೆಗೆ ಮೊದಲು ಒಮ್ಮೆಯೂ ಅಡುಗೆಯನ್ನು ಪರೀಕ್ಷಿಸಿರದ ಸೊಸೆಯು, ಅಡುಗೆಯನ್ನು ಕಲಿತುಕೊಳ್ಳಲು ಅಥವಾ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವಾಗ, ಅದನ್ನು ಪ್ರೋತ್ಸಾಹಿಸುವ ಬದಲು, ಕಟು ಮಾತುಗಳಿಂದ ಮೂದಲಿಸುವ ಅಗತ್ಯವೇನಿದೆ ? ಅದಕ್ಕಿಂತಾ ,ನಿಮ್ಮ ನಾಳ ಪಾಕವನ್ನು ಅವರಿಗೆ ಕಲಿಸಿಕೊಟ್ಟರಾಗದೆ ? ಈ ಲೇಖನವು ಪ್ರಯೋಜನವೆನಿಸಿತೇ ? ಹಾಗಾದರೆ, ಇದನ್ನು ಲೈಕ್ ಮಾಡಿ. ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

೭. ನಿನ್ನ ಮಗುವಿಗೆ ನನ್ನ ಅಥವಾ ನಿನ್ನ ಮಾವನ ಹೆಸರಿಡುವೆಯಾ ?

ತನ್ನ ಮೊದಲ ಮೊಮ್ಮಗುವಿಗೆ ತನ್ನ ಹೆಸರಿಡಬೇಕೆಂಬ ಸಹಜವಾದ ಬಯಕೆ ಎಲ್ಲ ಅತ್ತೆ ಮಾವಂದಿರಿಗೆ ಇರಬಹುದು.ಆದರೆ, ಒತ್ತಾಯ ಮಾಡುವುದು ಸರಿಯೇ ?

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon