Link copied!
Sign in / Sign up
95
Shares

ಈ 7 ಕಾರಣಗಳಿಗೆ ನೀವು ಪ್ರತಿದಿನ ಸಂಭೋಗದಲ್ಲಿ ತೊಡಗಬೇಕು!

ಲೈಂಗಿಕ ಕ್ರಿಯೆಯ ಯೋಚನೆ ಮಾನವನ ತಲೆಯಲ್ಲಿ ಅವನಿಗೆ ಗೊತ್ತಿಲ್ಲದೆಯೇ ಯಾವಾಗಲೂ ಹರಿದಾಡುತ್ತಿರುತ್ತದೆ, ಆದರೆ ಅದು ತಪ್ಪು ಅಲ್ಲವೇ ಅಲ್ಲ! ಇದನ್ನ ಮಾಡುವ ವಿಷಯಕ್ಕೆ ಬಂದರೆ, ನೀವು ಇದರಲ್ಲಿ ತೊಡಗಿಕೊಂಡಷ್ಟು ನಿಮ್ಮ ದೇಹಕ್ಕೆ ಮತ್ತು ನಿಮ್ಮ ಮನಸ್ಸಿಗೆ ಒಳ್ಳೆಯದು. ಒಹ್! ಇನ್ನೊಂದು ಮರೆತೆ, ನಿಮ್ಮ ಸಂಬಂಧಕ್ಕೂ ಒಳ್ಳೆಯದು!

ಈ ಲೈಂಗಿಕ ಕ್ರಿಯೆಯಲ್ಲಿ ನಿಯಮಿತವಾಗಿ ತೊಡಗುವುದರಿಂದ ಆಗುವ ಲಾಭಗಳೇನು ಎಂದು ನಾವು ತಿಳಿಸಿದ್ದೇವೆ ಓದಿ :

೧. ಸಂಭೋಗ ನಡೆಸಿ, ಆಸ್ಪತ್ರೆಯಿಂದ ದೂರವಿರಿ

ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದರಿಂದ ಆರೋಗ್ಯದ ಮೇಲೆ ಆಗುವ ಒಳ್ಳೆಯ ಪರಿಣಾಮಗಳು ಎಣಿಸಲಾಗದಷ್ಟು ಇವೆ. ನೀವು ಒಂದು ದಿನ ಜಿಮ್ ಮಾಡುವುದು, ಜಾಗಿಂಗ್ ಮಾಡುವುದು, ವಾಕಿಂಗ್ ಮಾಡುವುದು ತಪ್ಪಿಸಿದರೆ ತೊಂದರೆ ಇಲ್ಲ, ಪರ್ಯಾಯವಾಗಿ ಮಂಚದ ಮೇಲೆ ಕೆಲವು ರಸಮಯ ಕ್ಷಣಗಳು ಕಳೆದರೆ ಸಾಕು. ಸೆಕ್ಸ್ ನಿಮ್ಮ ನಿದ್ರೆಯನ್ನ ಹೆಚ್ಚಿಸುತ್ತದೆ, ಸ್ನಾಯುಗಳನ್ನ ಗಟ್ಟಿ ಮಾಡುತ್ತದೆ ಹಾಗು ಅವುಗಳಿಗೆ ಒಳ್ಳೆ ಆಕಾರವನ್ನ ನೀಡುತ್ತದೆ. ಇಷ್ಟೇ ಅಲ್ಲ, ಇದು ಹೃದ್ರೋಗಗಳನ್ನ ದೂರವಿರಿಸುತ್ತದೆ.

೨. ನಿಮ್ಮ ಸಂಗಾತಿಯನ್ನ ನಿಮಗೆ ಮತ್ತಷ್ಟು ಹತ್ತಿರ ಮಾಡುತ್ತದೆ

ಲೈಂಗಿಕ ಕ್ರಿಯೆಯು ಮಾನಸಿಕ ಹಾಗು ದೈಹಿಕವಾಗಿ ಬಹಳ ಭಾವನಾತ್ಮಕ. ನೀವು ಲೈಂಗಿಕ ಪರಾಕಾಷ್ಟೆ(orgasm) ಹೊಂದಿದಾಗ, ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆ ಹೊಂದುವುದು. ಎರಡು ವ್ಯಕ್ತಿಗಳ ನಡುವಿನ ಆಕರ್ಷಣೆ ಮತ್ತು ಬಾಂಧವ್ಯ ಹೆಚ್ಚಿಸುವಂತ ಹಾರ್ಮೋನ್ ಇದು. ಜೀವಶಾಸ್ತ್ರವು ಏನಾದರು ಹೇಳಲಿ, ಈ ಕ್ರಿಯೆಯು ನಿಮ್ಮ ಹಾಗು ನಿಮ್ಮ ಸಂಗಾತಿಯ ನಡುವಿನ ಬಂಧವನ್ನ ಕೇವಲ ದೈಹಿಕವಾಗಿ ಅಷ್ಟೇ ಅಲ್ಲದೆ ಮಾನಸಿಕವಾಗಿಯೂ ಪುಷ್ಟೀಕರಿಸುತ್ತದೆ.

೩. ಒಳ್ಳೆಯ ಲೈಂಗಿಕ ಜೀವನವು ನಿಮ್ಮ ಚರ್ಮಕ್ಕೆ ಕಾಂತಿಯನ್ನ ನೀಡುತ್ತದೆ

ಸಂಭೋಗವು ನಿಮ್ಮನ್ನ ಕಾಣಲಿಕ್ಕೆ ಕೂಡ ಚೆನ್ನಾಗಿ ಮಾಡುತ್ತದೆ ಎಂದು ಯಾರಿಗೆ ತಿಳಿದಿತ್ತು?! ವೈದ್ಯರು ಹೇಳುವ ಪ್ರಕಾರ ಲೈಂಗಿಕ ಕ್ರಿಯೆಯು ರಕ್ತ ಸಂಚಾರವನ್ನ ವೃದ್ಧಿಸುತ್ತದೆ, ಹೀಗೆ ಲಭಿಸುವ ಹೆಚ್ಚು ಆಮ್ಲಜನಕದಿಂದ ನಿಮ್ಮ ತ್ವಚೆಯ ಕಾಂತಿಯನ್ನ ಹೆಚ್ಚಿಸುತ್ತದೆ ಮತ್ತು ಆರೋಗ್ಯಕರವಾಗಿ ಕಾಣಿಸುವಂತೆ ಮಾಡುತ್ತದೆ. ವ್ಯಾಯಾಮ ರೀತಿಯಲ್ಲೇ ಇದು ಕೂಡ ಹಾರ್ಮೋನ್ ಗಳ ಗತಿಯ ತುಲನೆ ಕಾಪಾಡಿ ಮೊಡವೆ ತೊಂದರೆ ನಿವಾರಿಸುತ್ತದೆ.

೪. ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ

ಒಬ್ಬರನ್ನ ಲೈಂಗಿಕವಾಗಿ ಕೆರಳುವಂತೆ ಮಾಡುವುದು ಹಾಗು ಆ ಆಕರ್ಷಣೆಯನ್ನ ದೈಹಿಕವಾಗಿ ಪ್ರದರ್ಶಿಸುವುದು ನಿಮ್ಮಲ್ಲಿ ನೀವು ಹೆಚ್ಚು ವಿಶೇಷ ಹಾಗು ಹೆಚ್ಚು ಪ್ರೀತಿಸಲ್ಪಡುವಿರಿ ಎಂಬ ಭಾವನೆ ಹುಟ್ಟಿಸುತ್ತದೆ. ಇದು ನಿಮ್ಮ ಆತ್ಮವಿಶ್ವಾಸಕ್ಕೆ ತುಂಬಾನೇ ಒಳ್ಳೆಯದು.

೫. ಋತುಸ್ರಾವವು ಅಲ್ಪಾವಧಿ ಮತ್ತು ಕಡಿಮೆ ತೀವ್ರತೆ ಹೊಂದುತ್ತದೆ

ಇದು ಹೇಗೆ ಕೆಲಸ ಮಾಡುತ್ತದೆ ಅಂದುಕೊಂಡಿರ? ಸಂಭೋಗ ನಡೆಸುವಾಗ ಗರ್ಭಕೋಶವು ಸಂಕೋಚನಗಳನ್ನ (contractions) ಅನುಭವಿಸುತ್ತದೆ ಎಂಬುದು ನಿಮಗೆ ಗೊತ್ತು. ಆದರೆ ನಿಮಗೆ ಒಂದು ವಿಷಯ ಗೊತ್ತಿರದೇ ಇರಬಹುದು, ಅದು ಏನೆಂದರೆ ಗರ್ಭಕೋಶವು ಸಂಕೋಚನಗಳನ್ನ ಅನುಭವಿಸಿದಾಗ ಅದು ರಕ್ತವನ್ನ ಮತ್ತು ಅಂಗಾಂಶಗಳನ್ನ ಬೇಗನೇ ಹೊರಹಾಕುತ್ತದೆ. ಹೀಗಾಗಿ ನೀವು ಹೆಚ್ಚು ಸಂಭೋಗದಲ್ಲಿ ತೊಡಗಿದಷ್ಟು ನಿಮ್ಮ ಪಿರಿಯಡ್ಸ್ ಅವಧಿ ಕಮ್ಮಿ ಆಗುತ್ತದೆ.

೬. ಸೆಕ್ಸ್ ನಿಮ್ಮ ಟೆನ್ಶನ್ ಕಮ್ಮಿ ಮಾಡುತ್ತದೆ

ನಿಮ್ಮ ದೇಹವು ಲೈಂಗಿಕ ಕ್ರಿಯೆಯ ವೇಳೆ ನೀವು ವ್ಯಾಯಾಮ ಮಾಡಿದಾಗ ಹೇಗೆ ಎನ್ದೊಮೊರ್ಫಿನ್ ಬಿಡುಗಡೆ ಹೊಂದುತ್ತದೋ, ಅದೇ ರೀತಿ ಬಿಡುಗಡೆಯಾಗುತ್ತದೆ. ಇದು ನಿಮ್ಮ ಮೇಲಿನ ಒತ್ತಡವನ್ನ ಇಳಿಸುತ್ತದೆ, ನಿಮಗೆ ಆರಾಮ ಎನಿಸುವಂತೆ ಮಾಡುತ್ತದೆ, ಇನ್ನೊಂದು ಅರ್ಥದಲ್ಲಿ ನಿಮಗೆ ಹಿತ ನೀಡುತ್ತದೆ.

೭. ಸಂಭೋಗವು ನಿಮ್ಮನ್ನು ಮಾನಸಿಕವಾಗಿ ಚುರುಕುಗೊಳಿಸುತ್ತದೆ

ಹೌದು! ನಿಜವಾಗಿಯೂ! ಅಧ್ಯಯನದಿಂದ ತಿಳಿದು ಬಂದಿರುವುದು ಏನೆಂದರೆ ಲೈಂಗಿಕ ಪರಾಕಾಷ್ಟೆ ಇಂದ ಮೆದುಳಿನ ಎಲ್ಲಾ ಭಾಗಗಳಿಗೂ ರಕ್ತ ಸಂಚಾರ, ಆಮ್ಲಜನಕದ ಪೂರೈಕೆ, ಪೋಷಕಾಂಶಗಳ ಪೂರೈಕೆ, ಇವೆಲ್ಲವೂ ವೃದ್ಧಿಸುತ್ತದೆ. ಪಜಲ್(ಒಗಟು) ಬಿಡಿಸುವುದು ನಿಮ್ಮ ಮೆದುಳಿನ ಕೇವಲ ಒಂದು ಭಾಗವನ್ನ ಮಾತ್ರ ಸಕ್ರಿಯಗೊಳಿಸಿದರೆ, ಸೆಕ್ಸ್ ನಿಮ್ಮ ಮೆದುಳಿನ ಎಲ್ಲಾ ಭಾಗಗಳನ್ನೂ ಸಕ್ರಿಯಗೊಳಿಸುತ್ತದೆ!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon