Link copied!
Sign in / Sign up
23
Shares

ಈ ೭ ಸುಲಭ ಹಂತಗಳಿಂದ ನಿಮ್ಮ ಮಗುವಿಗೆ ರುಚಿಕರ ಗಂಜಿಯನ್ನು ತಯಾರಿಸಿ

ನಿಮ್ಮ ಮಗುವಿನ ಪ್ರಾರಂಭಿಕ ದಿನಗಳಲ್ಲಿ ಮಗುವಿಗೆ ಅವಶ್ಯವಿರುವ ಪೌಷ್ಟಿಕಾಂಶಗಳನ್ನು ಮತ್ತು ವಿಟಮಿನ್ ಗಳನ್ನು ಮಗುವಿಗೆ ನೀಡುವುದು ಅವಶ್ಯಕ, ಅದು ನೈಸರ್ಗಿಕ ಮತ್ತು ಮನೆಯಲ್ಲೇ ತಯಾರಿಸಿ ನೀಡುವುದು ಉತ್ತಮ ಮತ್ತು ಆರೋಗ್ಯಕರ ಕೂಡ. ಸುಲಭವಾಗಿ ನಿಮ್ಮ ಮಗುವಿಗೆ ರುಚಿಕರ ಗಂಜಿಯನ್ನು ಹೇಗೆ ಮಾಡಬಹುದು ಎಂಬುದನ್ನು ಇಲ್ಲಿ ಹೇಳಲಾಗಿದೆ.

ತರಕಾರಿ ಅಥವಾ ಹಣ್ಣಿನ ಗಂಜಿ ಮಾಡಲು ೭ ಹಂತಗಳು

೧.ತರಕಾರಿ ಅಥವಾ ಹಣ್ಣನ್ನು ತೆಗೆದುಕೊಂಡು ನೀರಿನಿಂದ ಚೆನ್ನಾಗಿ ತೊಳೆಯಿರಿ. ನಂತರ ತರಕಾರಿ ಅಥವಾ ಹಣ್ಣಿನ ಮೇಲ್ಬಾಗದ ಸಿಪ್ಪೆಯನ್ನು ತೆಗೆಯಿರಿ.

೨.ಇವುಗಳನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ.

೩.ಈ ತುಣುಕುಗಳನ್ನು ಅಥವಾ ತುಂಡುಗಳನ್ನು ಕುದಿಯುತ್ತಿರುವ ನೀರಿಗೆ ಹಾಕಿ, ಮತ್ತು ೧೦ ರಿಂದ ೧೫ ನಿಮಿಷಗಳ ಕಾಲ ಬೇಯಿಸಿ.

೪.ಹೆಚ್ಚು ನೀರಿದ್ದರೆ ಅದನ್ನು ಬೇರೆ ಪಾತ್ರೆಗೆ ಹಾಕಿರಿ, ಬೆಂದಿರುವ ಹಣ್ಣು ಅಥವಾ ತರಕಾರಿಗಳನ್ನು ಚೆನ್ನಾಗಿ ಕಿವುಚಿ, ಗುಳ್ಳೆ ಅಥವಾ ಗಂಟು ಹಾಗದಂತೆ ಚೆನ್ನಾಗಿ ಮಿಶ್ರಣ ಮಾಡಿ.

೫.ಇದನ್ನು ಮಾಡಲು ನಿಮಗೆ ಕಷ್ಟವೆನಿಸಿದರೆ, ಮಿಶ್ರಣವನ್ನು ಮಿಕ್ಸಿಗೆ ಹಾಕಿ ರುಬ್ಬಿರಿ.

೬.ಮಿಶ್ರಣ ನಿಮಗೆ ಗಟ್ಟಿಯಾದಂತೆ ಕಂಡರೆ ಹೆಚ್ಚುವರಿ ನೀರನ್ನು ಇದಕ್ಕೆ ಸೇರಿಸಿ.

೭.ಇದನ್ನು ನಿಮ್ಮ ಮಗುವಿಗೆ ತಿನ್ನಿಸಬಹುದು.

ಸಲಹೆ : ಇದನ್ನು ನೀವು ಹಣ್ಣುಗಳಿಂದ ಮಾಡಿದರೆ, ಹಣ್ಣಿನ ಸಿಹಿ ಗಂಜಿಯನ್ನು ಸಿಹಿಯಾಗಿಸುತ್ತದೆ ಮತ್ತು ಮಕ್ಕಳು ಅದನ್ನು ಇಷ್ಟ ಪಡುವರು. ಆದರೆ ತರಕಾರಿಗಳಿಂದ ನೀವು ಮಾಡಿದ್ದರೆ ಅದಕ್ಕೆ ಸ್ವಲ್ಪ ಉಪ್ಪನ್ನು ಸೇರಿಸಿ ನೀಡುವುದರಿಂದ ತಿನ್ನಲು ರುಚಿಯಾಗಿರುತ್ತದೆ, ಮತ್ತು ಮಕ್ಕಳು ಅದನ್ನು ಇಷ್ಟ ಪಡುವರು.

ಇದನ್ನು ತಯಾರಿಸಲು ಕೆಳಗಿನ ಹಣ್ಣು ಮತ್ತು ತರಕಾರಿಗಳನ್ನು ನೀವು ಉಪಯೋಗಿಸಬಹುದು

೧.ಕ್ಯಾರಟ್

೨.ಬಾಳೆಹಣ್ಣು

೩.ಹಸಿರು ಬಟಾಣಿ

೪.ಬೀನ್ಸ್

೫.ಗೆಣಸು

೬.ಬೀಟ್ರೂಟ್

೭.ಪರಂಗಿ ಹಣ್ಣು

೮.ಸೇಬು

೯.ಕುಂಬಳಕಾಯಿ

೧೦.ಮಾವಿನಹಣ್ಣು

ಇದನ್ನು ನಿಮ್ಮ ಮಗುವಿಗೆ ನೀಡಿದರೆ ಆಗುವ ಲಾಭಗಳು

ಗಂಜಿಯು ಮಗುವಿಗೆ ಒಳ್ಳೆಯದು ಎಂದು ನಿಮಗೆ ತಿಳಿದಿದೆ ಅದು ಹೇಗೆ ನಿಮ್ಮ ಮಗುವಿಗೆ ಲಾಭದಾಯಕವಾಗಿದೆ ಎಂಬುದನ್ನು ತಿಳಿದುಕೊಳ್ಳಿ

೧.ಸುಲಭವಾಗಿ ಜೀರ್ಣಿಸಿಕೊಳ್ಳಬಹುದು

೨.ಪೌಷ್ಟಿಕಾಂಶಗಳು ದೊರಕುತ್ತವೆ

೩.ವಿಟಮಿನ್ ಗಳನ್ನು ನೀಡಬಹುದು

೪.ಮಗುವಿನ ಅವಶ್ಯ ಶಕ್ತಿಯನ್ನು ಜೀರ್ಣಕ್ರಿಯೆಗೆ ತೊಂದರೆಯಾಗದಂತೆ ನೀಡಬಹುದು

೫.ಖನಿಜಾಂಶಗಳು ಮತ್ತು ಇತರೆ ಮಗುವಿನ ಆರೋಗ್ಯಕ್ಕೆ ಅವಶ್ಯವಿರುವ ಪುಷ್ಟಿ ನೀಡುವ ಪದಾರ್ಥಗಳನ್ನು ನೈಸರ್ಗಿಕವಾಗಿ ನೀಡಬಹುದು.

ನಿಮ್ಮ ಮಗುವು ಆರೋಗ್ಯಕರವಾಗಿ ಬೆಳೆಯಲು ಇದು ತುಂಬಾ ಸಹಾಯಕಾರಿ ಆಗಿದ್ದು ಸಂಯುಕ್ತ ಆಹಾರಗಳನ್ನು ನೀಡುವುದರ ಬದಲು ಇದನ್ನು ಮನೆಯಲ್ಲಿ ತಾಜಾ ಹಣ್ಣು ಅಥವಾ ತರಕಾರಿಗಳಿಂದ ಮಾಡಿ ತಿನಿಸುವುದರಿಂದ ಮಗುವನ್ನು ಆರೋಗ್ಯವಂತನಾಗಿ ಮಾಡಬಹುದು.

Tinystep Baby-Safe Natural Toxin-Free Floor Cleaner

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon