Link copied!
Sign in / Sign up
0
Shares

69 ನೇ ಗಣರಾಜ್ಯೋತ್ಸವದಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಕರ್ನಾಟಕದ ಇವರಬಗ್ಗೆ ನಿಮಗೆ ತಿಳಿದಿದಿಯೇ?


ಯಾರು ಈ ನರಸಮ್ಮ?

ಕೇಂದ್ರ ಸರ್ಕಾರ ೬೯ನೇ ಗಣರಾಜ್ಯೋತ್ಸವದಂದು ಕರ್ನಾಟಕದ ಈ ವಯೋವೃದ್ಧ ಮಹಿಳೆಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು,ಅವರು ಯಾರೆಂದು ನಿಮಗೆ ನಾವಿಂದು ತಿಳಿಸುತ್ತೇವೆ ,ಅವರೇ ಸೂಲಗಿತ್ತಿ ನರಸಮ್ಮ. ೯೭ ವರ್ಷ ವಯಸ್ಸಿನ ನರಸಮ್ಮ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕೃಷ್ಣಾಪುರ ಗ್ರಾಮದವರು,ಮದುವೆಯ ನಂತರ ತಮ್ಮ ೨೨ನೇ ವಯಸ್ಸಿಗೆ ತಮ್ಮ ಸಂಬಂಧಿಕರಿಗೆ ಮನೆಯಲ್ಲೇ ಸಹಜ ಹೆರಿಗೆ ಮಾಡಿಸಿದರು.ಅದರಿಂದ ತಮ್ಮ ಹಳ್ಳಿಯಲ್ಲಿ ಜನಪ್ರಿಯರಾದರು ನಂತರ ಅಕ್ಕ ಪಕ್ಕದ ಹಳ್ಳಿಗಳಲ್ಲಿ ಹೆರಿಗೆಮಾಡಿಗರ್ಭಿಣಿಯರಿಗೆ ಸಹಜ ಹೆರಿಗೆ ಮಾಡಿಸಿದರು,ವೈದ್ಯರಿಲ್ಲದೆ,ಆಧುನಿಕ ಚಿಕಿತ್ಸೆಗಳು ಇಲ್ಲದ ಸಮಯದಲ್ಲಿ ನರಸಮ್ಮ ಸಾವಿರಾರು ಹೆರಿಗೆಗಳನ್ನು ಮಾಡಿಸಿ ಸಾವಿರಾರು ಕುಟುಂಬಗಳಿಗೆ ಸಮಯಮಾಡಿದ್ದಾರೆ, ನಂತರ ತಮ್ಮ ಜೀವನದ ಬಹುಪಾಲು ಸಮಯವನ್ನು ಹೆರಿಗೆ ಮಾಡಿಸುವುದರಲ್ಲೇ ಕಳಿದಿದ್ದಾರೆ. ಈ ರೀತಿ ಸಮಾಜ ಸೇವೆ ಸಲ್ಲಿಸಿದ್ದಾರೆ. ಸುತ್ತಮುತ್ತಲಿನ ಹಳ್ಳಿಗಳಿಗೆ ಸೂಲಗಿತ್ತಿ ನರಸಮ್ಮ ಎಂದೇ ಹೆಸರುವಾಸಿ . 

ಪದ್ಮಶ್ರೀ ಕೊಡಲು ಕಾರಣವೇನು? 

ಇವರ ಸಮಾಜ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಸ್ವಯಂಪ್ರೇರಿತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ತಮಗೆ ಗೊತ್ತಿರುವ ಕೆಲ್ಸಸದಲ್ಲೇ ಉನ್ನತಿ ಸಾಧಿಸಿ ಸಮಾಜಸೇವೆಯಲ್ಲಿ ತೊಡಗಿದ ನರಸಮ್ಮ ಎಲ್ಲರಿಗು ಮಾದರಿ . ಇವರ ಸಮಾಜ ಸೇವೆಗೆ ನಾಮದೊಂದು ಸಲಾಂ  

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon