Link copied!
Sign in / Sign up
29
Shares

ಮಗುವಿಗೆ ಪ್ರಯತ್ನಿಸುತ್ತಿದ್ದಾಗ ನನಗೆ ಈ 6 ವಿಷಯಗಳು ಗೊತ್ತಿದ್ದರೆ ಚೆನ್ನಾಗಿತ್ತು

ಮಗುವಿಗೆ ಜನನ ನೀಡಿ ಒಂದು ಮಗುವನ್ನ ಸಾಕುವುದು ಇರಲಿ - ಕೇವಲ ಗರ್ಭಧರಿಸಲು ಮಾಡುವ ಪ್ರಯತ್ನವೇ ಒಂದು ವಿವರಿಸಲು ಆಗದಂತಹ ಅನುಭವ! ಇದನ್ನ ನೀವು ಅನುಭವಿಸಿದವರಿಗೆ ಕೇಳಿದರೆ ತಿಳಿಯುತ್ತದೆ. ನೀವು ಕೂಡ ಈ ಪ್ರಯತ್ನವನ್ನ ಕೈಗೆತ್ತುಕೊಳ್ಳಬೇಕೆಂದು ಅಂದುಕೊಂಡಿದ್ದರೆ, ನೀವು ತಿಳಿದಿರಬೇಕಾದ ಕೆಲವು ವಿಷಯಗಳು ಇಲ್ಲಿವೆ, ಮುಂದೆ ಓದಿ :

೧. ಪ್ರತಿಯೊಂದು ಹೆಣ್ಣು ವಿಭಿನ್ನ

ನಾನು ನನ್ನ ಗರ್ಭಧಾರಣೆಯ ಪ್ರಯಾಣ ನನ್ನ ಸ್ನೇಹಿತೆಯರ ಗರ್ಭಧಾರಣೆ ಅಂತೆ ಇರುವುದು ಎಂದು ತಪ್ಪು ತಿಳಿದಿದ್ದೆ. ನಾನು ಅವರ ಬಳಿ ಗರ್ಭಧಾರಣೆ ಹೇಗಿರುತ್ತದೆ ಎಂದು ತಿಳಿದುಕೊಂಡು ಮತ್ತು ಅಂತರ್ಜಾಲದಲ್ಲಿ ಬೇರೇ ಬೇರೇ ಜನರ ಅನುಭವಗಳ ಬಗ್ಗೆ ಓದಿ, ನನ್ನ ಗರ್ಭದಾರಣೆ ಕೂಡ ಹೀಗೆ ಇರುತ್ತದೆ ಎಂದು ತಪ್ಪು ತಿಳಿದುಕೊಂಡಿದ್ದೆ. “ಒಹ್ ನನ್ನ ಸ್ನೇಹಿತೆ ರಮ್ಯ, ಪ್ರಯತ್ನ ಶುರು ಮಾಡಿ 2 ತಿಂಗಳುಗಳಿಗೆ ಗರ್ಭಿಣಿ ಆದಳು, ನಾನು ಕೂಡ ಹಾಗೆ ಮಾಡಿದರೆ ಸಾಕು!” ಎಂದು ಅಂದುಕೊಂಡಿದ್ದೆ. ಆದರೆ ಅದು ಹಾಗೆ ಆಗಲೇ ಇಲ್ಲ! ಏಕೆಂದರೆ, ಪ್ರತಿಯೊಬ್ಬರೂ ವಿಭಿನ್ನ ಹಾಗು ಪ್ರತಿಯೊಬ್ಬರೂ ದೇಹವೂ ವಿಭಿನ್ನ!

೨. ಅದು ತಕ್ಷಣವೇ ಆಗಬೇಕೆಂದಿಲ್ಲ

ನಿಮ್ಮ ಯಾರೋ ಒಬ್ಬಳು ಸ್ನೇಹಿತೆ ಅವಳು ಪ್ರಯತ್ನ ಶುರು ಮಾಡಿದ ದಿನವೇ ಗರ್ಭಿಣಿ ಆದಳು ಎಂದುಕೊಳ್ಳಿ. ತಾಳಿ! ಇನ್ನೂ ಹತ್ತು ಜನ ಸ್ನೇಹಿತೆಯರು ಕೂಡ ಹಾಗೆ ಹೇಳಿರಬಹುದು ನಿಮಗೆ. ಇಂತವರು ನನ್ನ ಜೀವನದಲ್ಲೂ ಇದ್ದರು ಹಾಗು ನಾನು ಕೂಡ ನಾನು ಮೊದಲ ಬಾರಿ ಪ್ರಯತ್ನಿಸಿದೊಡನೆ ಗರ್ಭತಾಳುತ್ತೀನಿ ಎಂದು ಅಂದುಕೊಂಡಿದ್ದೆ. ನನಗೂ ಹೀಗೆ ಆಗುತ್ತದೆ ಎಂದು ಅಂದುಕೊಂಡಿದ್ದಕ್ಕೆ ನನ್ನ ಪ್ರಯತ್ನ ಒಂದು ತಿಂಗಳು ಆದರೂ ಫಲ ಕೊಡದೆ ಇದ್ದದ್ದು ನನಗೆ ಭಯಪಡಿಸಿತು. ಒಂದು ತಿಂಗಳು, ಆರು ತಿಂಗಳಾಯಿತು, ಆರು ಎಂಟಾಯಿತು. ಎಂಟು ಹತ್ತಾಯಿತು! ಕೊನೆಗೂ ಹತ್ತು ತಿಂಗಳಾದಮೇಲೆ ನಾನು ಗರ್ಭಧರಿಸಿದೆ.

೩. ತಡವಾಯಿತು ಎಂದು ಮಾತ್ರಕ್ಕೆ ನಿಮ್ಮಲ್ಲಿ ಏನೋ ಸರಿ ಇಲ್ಲ ಎಂದಲ್ಲ

ನಾನು ಏನು ತಿಳಿದಿರದ ಹುಡುಗಿ ಇದ್ದಿರಬಹುದು, ನನಗೆ ತಿಂಗಳ ಇಂತಹ ಸಮಯದಲ್ಲಿ ನಾನು ಹೆಚ್ಚು ಫಲವತ್ತಾಗಿ ಇರುತ್ತೇನೆಂದು, ನಾನು ಇಂತ ದಿನ ಅಂಡೋತ್ಪತ್ತಿ ಮಾಡುತ್ತಿನೆಂದು ನನಗೆ ಗೊತ್ತಿರಲಿಲ್ಲ. ನಾನು ಬೆಳೆಯುವಾಗ ಎಲ್ಲರೂ ನನಗೆ “ಸುರಕ್ಷಿತ ಸೆಕ್ಸ್” ಬಗ್ಗೆ ಹೇಳುತ್ತಿದ್ದರು. ನಾವು ಕಾಂಡೋಮ್ ಅಥವಾ ಮತ್ತ್ಯಾವ ಜನನ ನಿಯಂತ್ರಣ ತಂತ್ರಗಳನ್ನ ಉಪಯೋಗಿಸದೆ ಸಂಭೋಗ ನಡೆಸಿದರೆ, ಒಂದೇ ಬಾರಿಗೆ ನಾನು ಗರ್ಭವತಿ ಆಗಿಬಿಡುತ್ತೇನೆ ಎಂದುಕೊಳ್ಳುತ್ತಿದ್ದೆ! ಆದರೆ ನಾನು ಸತತ ಪ್ರಯತ್ನ ಮಾಡಿ ವಿಫಲವಾದ ಮೇಲೆ ನನ್ನ ವೈದ್ಯರ ಬಳಿ ಹೋದಾಗ ಅವರು ಹೇಳಿದ್ದು, ನನ್ನ ವಯಸ್ಸಿನವರಿಗೆ ಗರ್ಭಧರಿಸಲು 6 ತಿಂಗಳಿಂದ ಒಂದು ವರ್ಷದವರೆಗೆ ಪ್ರಯತ್ನಿಸಬೇಕು ಎಂದು. ಆದರೆ ನಾನು ಏನು ಮಾಡುತ್ತಿದ್ದೆ ಗೊತ್ತ? ನನ್ನನ್ನೇ ನಾನು ಬೈದುಕೊಳ್ಳುತ್ತಾ ನನ್ನ ಮೇಲೆ ನಾನೇ ಒತ್ತಡ ಹೇರಿಕೊಳ್ಳುತ್ತಿದ್ದೆ.

೪. ಎಲ್ಲಾ ಹೆಂಗಸರಿಗೂ 28 ದಿನದ ರುತುಚಕ್ರವೇ ಇರುವುದಿಲ್ಲ

ನಾನು ಜನನ ನಿಯಂತ್ರಣ ಟ್ಯಾಬ್ಲೆಟ್ ಸೇವಿಸುವುದನ್ನ ನಿಲ್ಲಿಸಿದ ಮೇಲೆಯೂ ನನ್ನ ರುತುಚಕ್ರವು 34 ದಿನಗಳದಾಗಿತ್ತು. ನಂತರ ನನಗೆ ತಿಳಿದದ್ದು ಇದು ಸಹಜವೆಂದು. ಸಹಜವಾಗಿ ರುತುಚಕ್ರವು 21 ದಿನಗಳಿಂದ ಹಿಡಿದು 35 ದಿನಗಳವರೆಗೂ ಇರುತ್ತದೆ. ನನ್ನ ರುತುಚಕ್ರದ ಅವಧಿ ಕಮ್ಮಿ ಆದಮೇಲೆಯು ನಾನು ತಡವಾಗಿ ಅಂಡೋತ್ಪತ್ತಿ ಮಾಡುತ್ತಿದ್ದೆ. ಸಾಮಾನ್ಯವಾಗಿ 28 ದಿನಗಳ ಋತುಚಕ್ರ ಇರುವ ಹೆಂಗಸರಿಗೆ 14ನೇ ದಿನದಂದು ಅಂಡೋತ್ಪತ್ತಿ ಆಗುತ್ತದೆ. ಆದರೆ, ನನಗೆ 20ನೆ ದಿನಕ್ಕೆ ಆಗುತಿತ್ತು. ನಿಮ್ಮ ದೇಹವು ನಿಮಗೆ ಯಾರೋ ಹೇಳಿದ ಹಾಗೆ ಅಥವಾ ನೀವು ಎಲ್ಲಿಯೋ ಓದಿದ ಹಾಗೆಯೇ ವರ್ತಿಸಬೇಕು ಎಂದೇನಿಲ್ಲ. ನಿಮ್ಮ ವೈದ್ಯರೊಡನೆ ಮಾತಾಡಿದರೆ, ಅವರು ನಿಮ್ಮ ದೇಹದ ಬಗ್ಗೆ ನಿಖರವಾಗಿ ತಿಳಿಸುತ್ತಾರೆ.

೫. ನೀವು ಒಂದು ದಿನ ಪ್ರೆಗ್ನನ್ಸಿ ಟೆಸ್ಟ್ ತಗೊಂಡಾಗ ನೆಗೆಟಿವ್ ಬರಬಹುದು, ಅದೇ ಎರೆಡು ದಿನಗಳು ಬಿಟ್ಟು ನೋಡಿದರೆ ಪೋಸಿತಿವೆ ಬರಬಹುದು!

ಇದು ನಮ್ಮ ದೇಹವು ನಮ್ಮ ಮೇಲೆ ವಾಸ್ತವಿಕವಾಗಿ ಹಾಸ್ಯ ಮಾಡುತ್ತಿರುವುದು. ಪ್ರೆಗ್ನನ್ಸಿ ಪರೀಕ್ಷೆಗಳು ಯಾವಾಗಲು ನಿಖರವಾಗಿ ಇರುವುದಿಲ್ಲ. ಅದು ಕೂಡ ನೀವು ಗರ್ಭತಾಳಿದ ಕೂಡಲೇ ಪರೀಕ್ಷೆ ಮಾಡಿದರೆ ನಿಮಗೆ ತಿಳಿಯುವುದಿಲ್ಲ. HGC (ಎಚ್.ಜಿ.ಸಿ) ಹಾರ್ಮೋನ್ ನಿಮ್ಮ ದೇಹದಲ್ಲಿ ಕಂಡು ಬಂದಾಗ ಪ್ರೆಗ್ನನ್ಸಿ ಪರೀಕ್ಷೆ ಪಾಸಿಟಿವ್ ಎಂದು ಬರುತ್ತದೆ, ಆದರೆ ಈ ಹಾರ್ಮೋನ್ ನೀವು ಗರ್ಭತಾಳಿ ೨ ವಾರಗಳು ಕಳೆದ ನಂತರ ಕಂಡು ಬರುತ್ತದೆ. ಪರೀಕ್ಷೆ ನಡೆಸಲು ಕಾಯುವುದು ಎಷ್ಟೊಂದು ತಲೆಬಿಸಿ ಮಾಡುವಂತದ್ದು ಅಂತ ಗೊತ್ತು ಆದರೆ ನಿಮ್ಮ ಭಾವನೆಗಳು ಏರುಪೇರಾಗಿ ನಿಮ್ಮ ಮನಸ್ಸಿಗೆ ನೋವುಂಟಾಗುವುದನ್ನು ತಡೆಯಲು ಈ ದಾರಿಯೇ ಸರಿ.

೬. ನಿಮ್ಮ ದೇಹದ ಬಗ್ಗೆ ಎಲ್ಲರಿಗಿಂತ ಹೆಚ್ಚು ತಿಳಿದಿರುವುದು ನಿಮಗೇನೇ

ನಿಮ್ಮ ವೈದ್ಯರ ಮಾತನ್ನ ಕೇಳಿ (ಕೇಳಲೇಬೇಕು!), ಆದರೆ ನಿಮ್ಮ ಮಾತನ್ನೂ ನೀವು ಕೇಳಿ. ನಿಮ್ಮ ದೇಹದ ವಿಧಿವಿಧಾನಗಳು ನಿಮಗೆ ಮಾತ್ರವೇ ಗೊತ್ತು. ಗರ್ಭ ಧರಿಸುವುದು ಒಂದು ಉಲ್ಲಾಸದಾಯಕ ಹಾಗು ಅಷ್ಟೇ ಹಾತಷೆಯ ಪ್ರಕ್ರಿಯೆ ಆಗಿರುತ್ತದೆ, ಹಾಗಾಗಿ ನಿಮ್ಮ ಸ್ನೇಹಿತರು, ಪೋಷಕರು, ಬಂಧು ಬಳಗದವರು ಎಲ್ಲರೂ ನಿಮಗೆ ಸಳಗೆ ನೀಡುವವರೇ ಆಗಿರುತ್ತಾರೆ. ಆದರೆ ನಿಮ್ಮ ಮನಸಾಕ್ಷಿ ಹೇಳುವುದನ್ನು ನೀವು ಕೇಳಿ. ಹಾಗೆ ನಿಮ್ಮ ಗರ್ಭಕೋಶ ಹೇಳುವುದನ್ನು ಕೂಡ!   

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon