Link copied!
Sign in / Sign up
33
Shares

ನಿಮ್ಮ 6 ತಿಂಗಳ ಕಂದಮ್ಮಗಳಿಗೆ, ಇಲ್ಲಿದೆ ಪರಿಪೂರ್ಣ ಆಹಾರದ ಪಟ್ಟಿ. (ವೇಳಾಪಟ್ಟಿಯೊಂದಿಗೆ)

ನಿಮ್ಮ ಮುದ್ದು ಕಂದಮ್ಮಗಳಿಗೆ ಎದೆಹಾಲಿನ ಜೊತೆಗೆ, ಘನರೂಪದ ಆಹಾರವನ್ನು ಯಾವ ವಯಸ್ಸಿನ್ನಿಂದ ಪ್ರಾರಂಭಿಸಬೇಕು ಎಂದು ಚಿಂತಿಸುತ್ತಿದ್ದೀರಾ? ಯಾವ ವಿಧದ ಘನರೂಪದ ಆಹಾರವನ್ನು ನೀಡಬೇಕು ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ಮಕ್ಕಳ ತಜ್ಞರ ಸಲಹೆ. ನಿಮ್ಮ ಮಗುವು ಜನಿಸಿದ ದಿನದಿಂದ ೬ ತಿಂಗಳಿನವರೆಗೆ, ಕೇವಲ ಎದೆ ಹಾಲನ್ನು ಮಾತ್ರ ನೀಡಿ. ೬ ತಿಂಗಳಿನ ನಂತರ ಕ್ರಮೇಣವಾಗಿ, ಘನ ಆಹಾರವನ್ನು ಪ್ರಾರಂಭಿಸಬೇಕು. ಘನ ಆಹಾರದ ಜೊತೆಗೆ ತಾಯಿಯ ಎದೆ ಹಾಲ್ಲನ್ನು, ಕನಿಷ್ಠ ೨ ವರ್ಷಗಳವರೆಗೆ ನೀಡಬೇಕು. ಹೀಗೆ ಮಾಡಿದ್ದಲ್ಲಿ, ಮಗುವಿನ ರೋಗ ನಿರೋಧಕ ಶಕ್ತಿ ವೃದ್ಧಿಸಿ, ಶಾರೀರಿಕ ಹಾಗೂ ಮಾನಸಿಕ ಬೆಳೆವಣಿಗೆಗೆ ಸಹಾಯವಾಗುತ್ತದೆ.

ಹಾಗಾದರೆ ಬನ್ನಿ, ವೈದ್ಯರು ಹೇಳಿರುವಂತೆ ಯಾವ ರೀತಿಯ ಘನರೂಪದ ಆಹಾರವನ್ನು, ಯಾವ ಸಮಯದಲ್ಲಿ ನಿಮ್ಮ ಕೂಸಿಗೆ ನೀಡಬೇಕು ಎಂದು ತಿಳಿಯೋಣ.

ನಿಮ್ಮ ಮಗುವಿಗೆ ೬ ತಿಂಗಳಿನ ನಂತರ, ಯಾವ ಆಹಾರದಿಂದ ಪ್ರಾರಂಭಿಸಬೇಕು ಎಂಬ ಪಟ್ಟಿ ಇಲ್ಲಿದೆ.

ಮೊದಲನೆಯ ದಿನ :

ಮೊದಲ ಬಾರಿಗೆ, ನೀವು ಯಾವುದೇ ಆಹಾರವನ್ನು ನಿಮ್ಮ ಕಂದಮ್ಮಗಳಿಗೆ ನೀಡಬೇಕಾದ್ದಲ್ಲಿ, ಒಂದು ಚಮಚಕ್ಕಿಂತ ಜಾಸ್ತಿ ತಿನ್ನಿಸಬೇಡಿ. ಉದಾ: ಕಿವುಚಿದ ಅನ್ನ , ಬೀಳೆ ಅಥವಾ ಯಾವುದೇ ಹಣ್ಣನ್ನು ಒಂದು ಚಮಚ ಮೀರದಂತೆ ಎಚ್ಚರವಹಿಸಿ. ಹೀಗೆ ಮಾಡಿದ್ದಲ್ಲಿ, ನಿಮ್ಮ ಮಗುವಿಗೆ ಹೊಸದಾಗಿ ಪ್ರಾರಂಭಿಸಿದ ಆಹಾರದಿಂದ, ಯಾವುದಾದರು ಅಡ್ಡ ಪರಿಣಾಮಗಳಾಗುತ್ತಿದೆಯೇ ಎಂದು ಗಮನಿಸಿ. ಉದಾ: ಬೇದಿ, ಕೆಮ್ಮು, ನೆಗಡಿ, ಉಬ್ಬಸ, ಜ್ವರ ಇತ್ಯಾದಿ. ಈ ರೀತಿಯ ಸಮಸ್ಯೆಗಳು  ಕಂಡುಬಂದ್ದಲ್ಲಿ, ಆ ಆಹಾರವನ್ನು ಕೂಡಲೇ ನಿಲ್ಲಿಸಿ, ಹತ್ತಿರದ ವೈದ್ಯರನ್ನು ಸಂಪರ್ಕಿಸಿ. ಯಾವುದೇ ಅಡ್ಡ ಪರಿಣಾಮಗಳು ಕಾಣದ್ದಿದ್ದಲ್ಲಿ, ಮಗುವಿಗೆ ಅದೇ ಆಹಾರವನ್ನು ಎದೆಹಾಲಿನೊಂದಿಗೆ ಮುಂದುವರೆಸಿ.

ಎರಡನೆಯ ದಿನ:

ಮೊದಲನೆ ದಿನ ನೀಡಿದ ಆಹಾರವನ್ನು, ೨ ಚಮಚಕ್ಕೆ ಏರಿಸಿ, ಎದೆ ಹಾಲಿನೊಂದಿಗೆ ಮುಂದುವರಿಸಿ.

ಮೂರನೆಯ ದಿನ:

ಪ್ರಾರಂಭಿಸಿದ ಆಹಾರವನ್ನು ೩ ಚಮಕ್ಕೆ ಏರಿಸಿ, ದಿನಕ್ಕೆ ಎರಡು ಬಾರಿ ನೀಡಿ. ನಿಮ್ಮ ಮಗುವಿಗೆ ಘನರೂಪದ ಆಹಾರವನ್ನು ಪ್ರಾರಂಭಿಸಿದ ಕೂಡಲೇ, ವಿಧ ವಿಧದ ಆಹಾರವನ್ನು ತಿನ್ನಿಸಬೇಡಿ. ಒಂದೊಂದೇ ಆಹಾರದಿಂದ ಪ್ರಾರಂಭಿಸಿ, ಕ್ರಮೇಣ ಆಹಾರದ ವಿಧವನ್ನು ಹೆಚ್ಚಿಸಿ. ಮಗುವಿಗೆ ಹೆಚ್ಚಿನ ಪ್ರಮಾಣದ್ದಲ್ಲಿ ಆಹಾರವನ್ನು ತಿನ್ನಿಸಿ, ತಮ್ಮ ಮಗುವು ಮುದ್ದು ಮುದ್ದಾಗಿ ಕಾಣಲಿ ಎಂಬ ಆಸೆ ಹೊಂದಿರುವ ತಾಯಂದಿರೇ ಎಚ್ಚರ. ಹೀಗೆ ಒಂದೇ ಬಾರಿಗೆ, ಮಗುವಿನ ಆಹಾರದ ಪ್ರಮಾಣವನ್ನು ಹೆಚ್ಚಿಸಿದರೆ , ಮಗುವಿನ ಪಚನ ಶಕ್ತಿಯು ಕಡಿಮೆಯಾಗಿ ಅಜೀರ್ಣ, ಹೊಟ್ಟೆ ನೋವು, ವಾಂತಿ, ಬೇದಿ, ಜ್ವರ ಮುಂತಾದ ಖಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಕ್ರಮೇಣವಾಗಿ ಮಗುವಿನ ಆಹಾರವನ್ನು ಹೆಚ್ಚಿಸಿ.

 

ಯಾವ ವಿಧದ ಘನರೂಪದ ಆಹಾರವನ್ನು ಮಕ್ಕಳಿಗೆ ನೀಡಬೇಕು ಎಂದು ತಿಳಿದುಕೊಳ್ಳಲು ಆತುರವೇ? ಇಲ್ಲಿದೆ ನೋಡಿ ವೈದ್ಯರ ಉತ್ತರ

ತರಕಾರಿಗಳಾದ ಕುಂಬಳಕಾಯಿ( ಸಿಹಿ ಕುಂಬಳ), ಆಲುಗೆಡ್ಡೆ, ಸಿಹಿ ಗೆಣಸು, ಅವರೇಕಾಳು, ಕೆಂಬೇರು(ಕ್ಯಾರಟ್) ಇತ್ಯಾದಿ. ಈ ತರಕಾರಿಗಳ್ಳನ್ನು ಚೆನ್ನಾಗಿ ಬೇಯಿಸಿ, ಕಿವುಚಿ ಮುದ್ದೆಯಂತೆ ತಿನ್ನಿಸಬಹುದು.

ಹಣ್ಣುಗಳಾದ ಪರಂಗಿ ಹಣ್ಣು, ಸೇಬು, ಬಾಳೆಹಣ್ಣು, ಮಾವಿನ ಹಣ್ಣು, ಪೀಚ್ ಹಣ್ಣು, ಬೆಣ್ಣೆ ಹಣ್ಣುಗಳ್ಳನ್ನು ನೀಡಬಹುದು. ಹಣ್ಣಿನಲ್ಲಿ ವಿಟಮಿನ್, ಉತ್ಕರ್ಷಣ ನಿರೋಧಕಗಳು( anti-oxidants), ಖನಿಜಗಳು, ಒಮೇಗಾ ಕೊಬ್ಬಿನಾಮ್ಲಗಳು

ತುಂಬಿರುವುದರಿಂದ, ನಿಮ್ಮ ಕಂದಮ್ಮಗಳ ಸಂಪೂರ್ಣ ಬೆಳವಣಿಗೆಗೆ ಸಹಕಾರಿಯಾಗಲಿದೆ. ಆದರೆ ಒಂದು ಬಾರಿಗೆ, ಒಂದೇ ಹಣ್ಣನ್ನು ನೀಡಬೇಕು. ಹಣ್ಣನ್ನು ಕಿವುಚಿ/ ರುಬ್ಬಿ ಪಾನಕದಂತೆಯು ಸಹ ನೀಡಬಹುದು.

ಇನ್ನು ಧಾನ್ಯಗಳ ಪಟ್ಟಿಯ ಕಡೆ ಬಂದರೆ, ತೋಕೆ ಗೋಧಿ(Oats), ಅಕ್ಕಿ, ಜವೆಗೋಧಿ( barley)ಯನ್ನು ನೀಡಬಹುದು.

ಅಕ್ಕಿಯನ್ನು ಚೆನ್ನಾಗಿ ಬೇಯಿಸಿ, ಅದಕ್ಕೆ ಎದೆ ಹಾಲನ್ನು ಮಿಶ್ರಿಣ ಮಾಡಿ ತಿನ್ನಿಸಬಹುದು, ಇಲ್ಲವೆ ಬೇಳೆ ಕಟ್ಟಿನ ಸಾರಿನೊಂದಿಗು ಸಹ ನೀಡಬಹುದು. ಇದಕ್ಕಿಂತ ಸುಲಭ ಉಪಾಯವೇನೆಂದರೆ ಅಕ್ಕಿ/ ತೋಕೆ ಗೋಧಿಯನ್ನು, ಮೇಲೆ ಹೇಳಿದ ತರಕಾರಿಗಳೊಂದಿಗೆ ಪಾತ್ರೆಯಲ್ಲಿ ಚೆನ್ನಾಗಿ ಬೇಯಿಸಿ,  ಎರಡನ್ನು ಕಿವುಚಿ, ಅದರಿಂದ ಬರುವ ನೀರನ್ನು ತೆಗೆದು, ಮುದ್ದೆಯಂತಿರುವ ಆಹಾರವನ್ನು ಮಗುವಿಗೆ ಕ್ರಮೇಣ ನೀಡಿದ್ದಲ್ಲಿ, ಅದರ ಜೀರ್ಣ ಶಕ್ತಿ ವೃದ್ಧಿಸುತ್ತದೆ.

ಮಾಂಸಾಹಾರ ತಿನ್ನುವ ಕುಟುಂಬದ್ದಲ್ಲಿ , ಮಗುವಿಗೆ ಮಾಂಸ ಅಥವಾ ಮೀನನ್ನು ಪ್ರಾರಂಭಿಸುವ ಮೊದಲು ವೈದ್ಯರ ಸಲಹೆಯನ್ನು ಪಡೆಯಿರಿ. ಮೀನಿನ್ನಲ್ಲಿ ಅತಿ ಹೆಚ್ಚಿನ ಪ್ರಮಾಣದ ಪಾದರಸವಿರುವುದರಿಂದ , ನಿಮ್ಮ ಎಳೆ ಕಂದಮ್ಮಗಳಿಗೆ ಮೀನನ್ನು ನೀಡದಿರಿ. ಇಲ್ಲವಾದ್ದಲ್ಲಿ ಪಾದರಸದಿಂದ, ಮಗುವಿನ ಮೆದುಳಿನ ಬೆಳವಣಿಗೆ ಕುಂಟಿತವಾಗಿ ನರಮಂಡಲದ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ. ಮಾಂಸವನ್ನು ತಿನ್ನಿಸಲೇ ಬೇಕು ಎನ್ನುವ ಪೋಷಕರು, ದಯವಿಟ್ಟು ಮಾಂಸವನ್ನು ಚೆನ್ನಾಗಿ ಬೇಯಿಸಿ, ಅದರಿಂದ ಬರುವ ಸಾರು(soup)ಅನ್ನು ಮಾತ್ರ ಮಕ್ಕಳಿಗೆ ತಿನ್ನಿಸುವುದು ಸೂಕ್ತ.

 

ನಿಮ್ಮ ೬ ತಿಂಗಳಿನ ಮಗುವಿಗೆ ಮಾದರಿ/ಪರಿಪೂರ್ಣ ಆಹಾರದ ಪಟ್ಟಿಇಲ್ಲಿದೆ:

 

೧. ನಿಮ್ಮ ಮಗುವಿಗೆ ಮುಂಜಾನೆಯ ತಿಂಡಿಗೆ, ಎದೆ ಹಾಲನ್ನು ನೀಡಬೇಕು ಹಾಗೂ ಹಣ್ಣಿನ/ ತರಕಾರಿಯ, ಪೀತ ವರ್ಣ ದ್ರವ್ಯ(puree)ಯನ್ನು ಸಹ ನೀಡಬಹುದು.

೨. ಮಧ್ಯಾಹ್ನದ ಊಟಕ್ಕೆ ಚೆನ್ನಾಗಿ ಬೇಯಿಸಿದ ಅನ್ನ ಹಾಗೂ ತರಕಾರಿಯನ್ನು ನೀಡಿ.

೩. ಸಂಜೆಯ ವೇಳೆ ಹಣ್ಣು ಅಥವಾ ತರಕಾರಿಯ ತಿಳಿ( soup) ಯನ್ನು ನೀಡಬಹುದು. ಆದರೆ ಇದು ಕಡ್ಡಾಯವಲ್ಲ. ಇಲ್ಲವಾದರೆ ಎದೆ ಹಾಲನ್ನು ನೀಡಿದರೆ ಸಾಕು.

೪. ರಾತ್ರಿಯ ಊಟಕ್ಕೆ ಹಣ್ಣು/ ತರಕಾರಿಯ ತಿಳಿಯನ್ನು ನೀಡಿ. ಇವೆಲ್ಲವುಗಳ ಮಧ್ಯೆ, ನಿಮ್ಮ ಮಗುವಿಗೆ ಎಷ್ಟು ಸಲ ಸಾಧ್ಯವೋ, ಅಷ್ಟು ಸಲ ಎದೆ ಹಾಲನ್ನು ಕುಡಿಸಿ, ನಿಮ್ಮ ಮುದ್ದು ಕಂದಮ್ಮಗಳ ಆರೋಗ್ಯವನ್ನು ಕಾಪಾಡಿ.

ಈ ಲೇಖನ ನಿಮಗೆ ಉಪಯುಕ್ತವೆನಿಸಿದರೆ, ನಿಮ್ಮಂತೆ ಮಗುವಿನ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಸಾವಿರಾರು ತಾಯಂದಿರೊಂದಿಗೆ ಇದನ್ನು ಹಂಚಿಕೊಳ್ಳಿ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
100%
Like
0%
Not bad
0%
What?
scroll up icon