Link copied!
Sign in / Sign up
0
Shares

6 ಬಗೆಯ ಹುಡುಗರು : ನಿಮಗೆ ಇಷ್ಟವಾಗುವ ಹುಡುಗ ಯಾರೆಂಬುದು ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ!

ನೀವು ಯಾವ ಬಗೆಯ ಹುಡುಗರಿಗೆ ಆಕರ್ಷಿತರಾಗುವಿರಿ ಅದು ನಿಮ್ಮ ಬಗ್ಗೆ ಹಲವು ವಿಷಯಗಳನ್ನು ತೆರೆದಿಡುತ್ತದೆ. ನೀವು ಸಾಮಾನ್ಯವಾಗಿ ಕೆಲವು ಬಗೆಯ ಗುಣಗಳಿರುವ ಹುಡುಗರಿಗೆ ಹೆಚ್ಚು ಆಕರ್ಷಿತರಾಗಿರುವುದನ್ನು ನೋಡಿರಬಹುದು. ಅದು ಕೆಟ್ಟ ಹುಡುಗ ಅಥವಾ ಒಳ್ಳೆಯ ಹುಡುಗ ನೀವು ಯಾರ ಜೊತೆ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಇಷ್ಟ ಪಡುವಿರಿ.

೧.ಮೋಡಿ ಮಾಡುವ ಮಾತುಗಾರ

ನಿಮಗೆ ಗೊತ್ತು ಅವನು ಎಲ್ಲರ ಬಳಿ ಹೀಗೆ ಮಾಡುವನು ಎಂದು, ಆದರೂ ಅವನು ನಿಮ್ಮನ್ನು ಕೇಂದ್ರೀಕರಿಸಿ ಮಾತನಾಡುವಾಗ ಅವನ ಕಡೆ ನಿಮ್ಮ ಗಮನ ಸೆಳೆಯುವುದು ಅವನ ಮೇಲೆ ಪ್ರೀತಿ ಮೂಡುವುದು.

ನಿಮ್ಮ ಆದ್ಯತೆಯು ನಿಮ್ಮ ವಿನೋದ-ಪ್ರೀತಿಯ ವ್ಯಕ್ತಿತ್ವ ಮತ್ತು ಇತರ ಹಂಬಲದ ಸ್ವೀಕಾರವನ್ನು ನೀವು ಬೇಗನೆ ಒಪ್ಪಿಕೊಳ್ಳುವ ಗುಣವನ್ನು ತೆರೆದಿಡುತ್ತದೆ. ನೀವು ಇವರನ್ನು ಇಷ್ಟ ಪಡುವಿರಿ ಏಕೆಂದರೆ ಅವರು ನಿಮ್ಮ ಪಕ್ಕ ಇರುವ ಅತ್ಯುತ್ತಮ ಜೋಕರ್ ಗಳು, ನೀವು ಅವರ ಜೊತೆ ಆಟ ಆಡುವಿರಿ.


೨.ಒಳ್ಳೆಯ ಹುಡುಗ

ಉತ್ತಮ ಗುಣ ಇರುವ, ಹಂಬಲಿಸುವ, ಪ್ರೀತಿ ತೋರಿಸುವ ಹುಡಗುನ ಮೇಲೆ ಬೇಗನೆ ನಿಮಗೆ ಪ್ರೀತಿ ಮೂಡಬಹುದು.

ನೀವು ಇಂತಹ ಒಳ್ಳೆಯ ಹುಡುಗನ ಮೇಲೆ ಪ್ರೀತಿ ಅಥವಾ ಕ್ರಶ್ ಮಾಡಿಕೊಂಡರೆ ನಿಮ್ಮ ವ್ಯಕ್ತಿತ್ವ ಇದು ಎಂದು ಹೇಳಬಹುದು. ನೀವು ತುಂಬಾ ಚತುರರು. ಏಕೆಂದರೆ ಅವರು ನಿಮ್ಮನ್ನು ಸರಿಯಾಗಿ ಗಮನಿಸಿಕೊಳ್ಳುವರು, ಮತ್ತು ನಿಮ್ಮ ಮಾತನ್ನು ಗೌರವಿಸುವರು, ಮತ್ತು ಅವರು ನಂಬಿಕೆಗೆ ಅರ್ಹರಾಗಿರುವವರು. ಜೊತೆಗೆ ನೀವು ಅಪಾಯ ತೆಗೆದುಕೊಳ್ಳುವವರಲ್ಲ, ಸಾಹಸಮಯ ವ್ಯಕ್ತಿಯಲ್ಲ ಮತ್ತು ರೋಮಾಂಚನಕಾರಿ ಗುಣ ಅಷ್ಟಾಗಿ ನಿಮ್ಮಲ್ಲಿ ಇರುವುದಿಲ್ಲ.

೩.ಕೆಟ್ಟ ಹುಡುಗ

ಮೋಟಾರ್ ಸೈಕಲ್, ಸ್ವ ಪ್ರಶಂಸೆ, ಧೈರ್ಯ ಈ ವಿಷಯಗಳು ನಿಮ್ಮನ್ನು ಬೆರಗಾಗಿಸುವಂತೆ ಮಾಡಬಹುದು, ಅದು ನಿಮಗೆ ಇದಕ್ಕಿಂತ ಹೆಚ್ಚಿನ ವಿಷಯಗಳು ತಿಳಿದಿದ್ದರೂ ಸಹ.

ನೀವು ಇವರಿಗೆ ಸಹಾಯ ಮಾಡಲು ಆಗುವುದಿಲ್ಲ, ಆದರೆ ಇಂತಹ ಹುಡುಗರಿಗೆ ಆಕರ್ಷಿತರಾದರೆ, ನೀವು ಮುಕ್ತ ಮನೋಭಾವದ, ಅಪಾಯವನ್ನು ಎದುರಿಸುವ, ಸಾಹಸಮಯ ಗುಣವುಳ್ಳ ಹುಡುಗಿಯಾಗಿರುವಿರಿ. ನೀವು ಸಾಹಸವನ್ನು ಇಷ್ಟ ಪಡುವಿರಿ ಮತ್ತು ನೀವು ಯಾವುದಕ್ಕೂ ಹೆದರುವುದಿಲ್ಲ. ಆದರೆ ನಿಮಗೆ ಸ್ವಲ್ಪ ಆತ್ಮ ವಿಶ್ವಾಸ ಕಡಿಮೆ ಇರುತ್ತದೆ.


೪.ಉತ್ತಮ ಕಲೆಗಳು ಮುಖ್ಯವಾದರೆ

ಅವರು ಭಾವೋದ್ರಿಕ್ತ, ಮತ್ತು ಕ್ರಿಯಾಶೀಲರಾಗಿದ್ದು, ನೀವು ಅವರನ್ನು ನೋಡಿ ಆಕರ್ಷಿತರಾಗುವಿರಿ. ಇವರು ನೋಡುವುದಕ್ಕೆ ಬುದ್ದಿವಂತರಾಗಿ, ಚತುರರಾಗಿ, ಹಲವು ಕಲೆಗಳನ್ನು ಹೊಂದಿರುವರು, ಅವರಿಗೆ ಆಕರ್ಷಿತವಾಗದೆ ಇರುವುದು ಕಷ್ಟ ಅಲ್ಲವೇ?

ನೀವು ಅವರಲ್ಲಿರುವ ಚತುರತೆಯನ್ನು, ಬುದ್ದಿವಂತಿಕೆಯನ್ನು ಅಥವಾ ಕಲೆಯನ್ನು ನಂಬುವಿರಿ. ನೀವು ಬೆಂಬಲಿಸುವ ವ್ಯಕ್ತಿಯಾಗಿರುವಿರಿ. ಮತ್ತು ಆದರೆ ತೀರ್ಪುಗಾರರಲ್ಲ. ನಿಮಗೆ ನಿಮಗಿಂತ ಬೇರೆಯವರ ಮೇಲೆ ನಂಬಿಕೆ ಜಾಸ್ತಿ, ಅಥವಾ ನಿಮ್ಮ ಕೆಲಸವನ್ನು ಮಾಡುವ ಮೊದಲು ಅವರನ್ನು ಪ್ರಾಯೋಗಿಕ ರೀತಿಯಲ್ಲಿ ಬಳಸಿಕೊಳ್ಳುವಂತೆ ನಿಮ್ಮ ಮನಸ್ಥಿತಿ ಇದೆ ಎಂದು ತಿಳಿಯಬಹುದು.

೫.ಸೊಕ್ಕಿನ ಅಥವಾ ಅಹಂಕಾರದ ಹುಡುಗ

ಅವರು ವಿಶ್ವಾಸವನ್ನು ಮತ್ತು ಸ್ವಾಭಿಮಾನವನ್ನು ಹರಡುತ್ತಾರೆ. ಆದರೆ ಇವರು ಹಂಬಲಿಸುವ ವ್ಯಕ್ತಿಯಾಗಿರುವುದಿಲ್ಲ. ಆದರೆ ಇವರಲ್ಲಿ ಆತ್ಮ ವಿಶ್ವಾಸ ಹೆಚ್ಚಿದ್ದು ನಿಮ್ಮಲ್ಲೂ ಅದು ಬೆಳೆಯುವಂತೆ ಮಾಡುತ್ತಾರೆ.

ನೀವು ಇವರನ್ನು ಇಷ್ಟ ಪಟ್ಟರೆ ನೀವು ಕ್ಷಮೆ ಮನೋಭಾವ ಮತ್ತು ಹಂಬಲದ ಕರುಣೆಯುಳ್ಳ ವ್ಯಕ್ತಿ ಎಂದು ನಿಮ್ಮ ಗುಣವನ್ನು ತೆರೆದಿಡುತ್ತದೆ. ನೀವು ಕಠಿಣ ಸವಾಲನ್ನು ಎದುರಿಸಲು ಮತ್ತು ಜನರ ಟಿಕೆ ಅಥವಾ ವಿಮರ್ಶೆಯನ್ನು ಎದುರಿಸಲು ಸಿದ್ಧರಾಗಿರುವಿರಿ ಮತ್ತು ಅದನ್ನು ಎದುರಿಸುವ ಧೈರ್ಯವನ್ನು ಹೊಂದಿರುವಿರಿ ಎಂದು ತಿಳಿಯಬಹುದು. ಆದರೆ ಇಂತಹ ಸಂಗಾತಿ ಜೊತೆ ನಿಮ್ಮ ಸಂಬಂಧ ಕ್ಷಣಿಕವಾಗಿರುತ್ತದೆ.

೬.ಸುಂದರ ಹುಡುಗ

ಸುಂದರ ಕಣ್ಣು, ಉತ್ತಮ ಕೇಶ ಶೈಲಿ, ಅತ್ಯುತ್ತಮ ದೇಹ ಹೊಂದಿರುವ ಹುಡುಗನನ್ನು ನೀವು ಬೇಡ ಎನ್ನಲ್ಲೂ ನಿರಾಕರಿಸುವಿರಿ.

ಸುಂದರ ಹುಡುಗರ ಕಡೆ ಆಕರ್ಷಿತರಾಗುವುದು ನಿಮ್ಮ ಬಗ್ಗೆ ಹಲವು ವಿಷಯಗಳನ್ನು ಹೇಳುತ್ತದೆ. ನೀವು ನಿಮ್ಮ ಜೊತೆ ಆರಾಮದಾಯಕವಾಗಿರುವಿರಿ. ಪ್ರಾಬಲ್ಯ ಹೊಂದಿರುವ ಮಾನವನ ಅಗತ್ಯ ನಿಮಗೆ ಅವಶ್ಯವಿರುವುದಿಲ್ಲ. ಚೆಲುವನ್ನು ಆರಾಧಿಸುವ ಮನೋಭಾವವನ್ನು ಹೊಂದಿರುವಿರಿ. ಆದರೆ ನೀವು ಗಮನಿಸಬೇಕಾದ ವಿಷಯವೆಂದರೆ ಸುಂದರವಾಗಿರುವವರೆಲ್ಲ ಒಳ್ಳೆಯವರಲ್ಲ ನೀವು ಅವರ ಮನಸ್ಸನ್ನು ಅರಿಯುವುದು ಒಳ್ಳೆಯದು. ಅವರ ಹೊರ ನೋಟಕ್ಕೆ ಬೆಲೆ ಕೊಡದೆ ಅವರ ಮನಸ್ಸಿನ ಅಥವಾ ಒಳ್ಳೆಯ ಗುಣಕ್ಕೆ ಬೆಲೆ ನೀಡುವುದು ಉತ್ತಮ.

ನೀವು ಯಾವ ಬಗೆಯ ಹುಡುಗರಿಗೆ ಪದೇ ಪದೇ ಆಕರ್ಷಿತರಾಗುವಿರಿ ಅದು ನಿಮ್ಮ ಬಗ್ಗೆ ಹಲವು ವಿಷಯಗಳನ್ನು ಹೇಳುತ್ತದೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon