Link copied!
Sign in / Sign up
1
Shares

ಈ 5 ವಿಭಿನ್ನ ಗುಣಗಳ ಅತ್ತೆಯರಲ್ಲಿ, ನಿಮ್ಮ ಅತ್ತೆಯು ಯಾರಿಗೆ ಹೋಲುತ್ತಾರೆ?

ನಿಮಗೆ ಮದುವೆ ಆಗಿರುವುದೇ? ನೀವು ಮೊದಲಿನಂತೆ ನಿಮ್ಮ ಖುಷಿಯ ಕ್ಷಣಗಳನ್ನು ಮುಂದುವರೆಸುತ್ತಿದ್ದೀರಾ? ಹಲವರಿಂದ ಬರುವ ಒಂದೇ ಉತ್ತರ ಇಲ್ಲ.! ನೀವು ಕದನದಲ್ಲಿ ಜಯಿಸಿದರು ನಿಮ್ಮ  ಸಮರವು ಮುಂದೆ ನಿಮಗಾಗಿ ಕಾಯುತ್ತಿದೆ. ನಿಮ್ಮ ಪತಿಯನ್ನು ಮದುವೆಯಾದಾಗ ಅವರ ಜೊತೆಗೆ ಕುಟುಂಬವನ್ನು ಆವರಿಸುತ್ತೀರಾ ಅದರಲ್ಲೂ ನಿಮ್ಮ ಅತ್ತೆಯನ್ನು ಹೇಗೆ ನೀವು ಓಲೈಸಿಕೊಳ್ಳುವಿರಿ ಎಂಬುದು ನನಗೆ ತಿಳಿದಿಲ್ಲ. ನಿಮಗೆ ಒಳ್ಳೆಯ ಅತ್ತೆ ಸಿಕ್ಕರೆ ಅದು ನಿಮ್ಮ ಜೀವನದ ಪರಮಸುಖ, ಖುಷಿ ಕ್ಷಣಗಳಿಗೆ ಸ್ವಾಗತಿಸುತ್ತದೆ. ಇಲ್ಲವಾದಲ್ಲಿ ಅವರ ಬಿಗಿ ಮುಷ್ಠಿಯಲ್ಲಿ ಸಿಲುಕುವಿರಿ.

೧.ಅಸೂಯೆಪಡುವ

ಅವಳಿಗೆ ಮಗಳು ಇಲ್ಲ, ತನ್ನ ಮುದ್ದಿನ ಮಗನ ಮದುವೆಯ ನಂತರ ತನ್ನಿಂದ ದೂರವಾಗುವನೆಂಬ ತವಕ, ಇದನ್ನು ಗೆಲ್ಲುವ ಕಠಿಣ ಸವಾಲು ಈಗ ನಿಮ್ಮ ಮುಂದೆ. ಇದಕ್ಕೆಲ್ಲ ಕಾರಣ ಒತ್ತಡ, ತನಗೆ ಆಸರೆ ಆಗುವುದಿಲ್ಲವೆಂಬ ಭಾವನೆ. ನೀವು ತನ್ನ ಮುದ್ದಿನ ಮಗನಿಗೆ ಒಳ್ಳೆಯ ಹೆಂಡತಿಯಾಗುವುದಿಲ್ಲ ಎಂದು ಭಾವಿಸುತ್ತಾರೆ.

೨.ಅಡ್ಡಬರುವ

ಅವಳು ನಿಮ್ಮ ದಿನನಿತ್ಯದ ಪ್ರತಿ ಹಾಗುಹೋಗುಗಳನ್ನು ತಿಳಿಯಲು ಬಯಸುವಳು. ನಿಮ್ಮ ಮನೆಯ ಸಣ್ಣ-ಪುಟ್ಟ ವಿಷಯವನ್ನು  ನನಗೆ ತಿಳಿಸಿ ಮಾಡಬೇಕು ಎನ್ನುವುದು. ಅವಳು ಒಳ್ಳೆಯವಳಾಗಿದ್ದರು, ಅವಳ ಕೆಲವು ನಡವಳಿಕೆ ನಿಮಗೆ ಹಿಡಿಸದೆ ಇರುವುದು, ಅವಳ ಮುಷ್ಠಿಯಲ್ಲಿ ಯಾಕೆ ಇರಬೇಕು ಎಂಬ ಕಲ್ಪನೆ ತರಬಹುದು.

೩. ಬದಲಾಯಿಸುವ

ಈ ತರಹದ ಗುಣ ಇದ್ದರೆ ನಿಮಗೆ ಕಿರಿಕಿರಿ ಮತ್ತು ತೊಂದರೆ ಹೆಚ್ಚು.ಏಕೆಂದರೆ ಅವಳು ತನ್ನ ಮಗ ನಾ ಹೇಳಿದ ಹಾಗೆ ಕೇಳಬೇಕು ಎಂದು ಭಾವನಾತ್ಮಕವಾಗಿ ಬೆದರಿಸುವುದು. ಇದು ಕೆಲವೊಮ್ಮೆ ನಿಮ್ಮ ಯೋಜನೆಗಳನ್ನು ನಾಶಪಡಿಸಬಹುದು. ಇದರಿಂದ ನಿಮ್ಮ ಗಂಡನಿಗೆ ಯಾರ ಮಾತನ್ನು ಕೇಳಬೇಕೆಂಬ ಗೊಂದಲ ಮೂಡುತ್ತದೆ.

೪.ತನ್ನ ಇಚ್ಛೆಯಂತೆ ಬಯಸುವ

ಕೆಲ ಅತ್ತೆಯಂದಿರು ತನ್ನ ಇಚ್ಛೆಯಂತೆ ಯಾವಾಗಲು ನೆಡೆದುಕೊಳ್ಳಬೇಕು ಎಂದು ಬಯಸುತ್ತಾರೆ. ಅವಳ ಜಂಗಮವಾಣಿಯಲ್ಲಿ ತನಗೆ ಮೊದಲ ಕರೆ ಮಾಡಬೇಕು, ಅದರಲ್ಲೂ ವಿಶೇಷ ಸಂದರ್ಭಗಳಲ್ಲಿ ನನ್ನನ್ನೇ ಕೇಳಿ ಮಾಡಬೇಕು ಎನ್ನುತ್ತಾರೆ. ನಿಮ್ಮ ಮನೆಯ ಯಾವುದೇ ವಸ್ತುವನ್ನು ಸ್ಥಾಳಾಂತರಿಸಲು ನನ್ನ ಅನುಮತಿ ಪಡೆಯಬೇಕು. ಮತ್ತೆ ಅವಳು ನಿಮಗೆ ಒಳ್ಳೆಯ ಅತ್ತೆಯಾಗಲು ಬಯಸುತ್ತಾರೆ.  ಇದು ನಿಮ್ಮನ್ನು ಗೊಂದಲಕ್ಕೆ ತಳ್ಳುತ್ತದೆ. ಮತ್ತು ಕೆಲ ಸಮಯ ಕಿರಿಕಿರಿ ಉಂಟುಮಾಡುತ್ತದೆ. ಅವರಿಗೆ ಏನು ಬೇಕೆಂದು ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ.

೫.ಬೆಂಬಲಿಸುವ

ಅವಳು ನಿಮಗೆ ಮತ್ತು ಕುಟುಂಬಕ್ಕೆ ಅಗತ್ಯಗಳನ್ನು ಕೊಡುವ ಮತ್ತು ಬೆಂಬಲಿಸುವ ಗುಣ ಹೊಂದಿರುತ್ತಾರೆ. ಅವರು ನಿಮ್ಮನ್ನು, ನಿಮ್ಮ ಮಕ್ಕಳನ್ನು ಪ್ರೀತಿಸುತ್ತಾರೆ ಮತ್ತು ಅವರನ್ನು ಗೌರವದಿಂದ ಕಾಣುತ್ತಾರೆ. ಅವರು ನಿಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ಅರ್ಥಮಾಡಿಕೊಂಡು ಗೌರವಿಸುವರು. ಒಂದುವೇಳೆ ನೀವು ತಿಳಿದು ಅಥವಾ ತಿಳಿಯದೆ ತಪ್ಪು ಮಾಡಿದರೆ ನಿಮ್ಮನ್ನು ದ್ವೇಷಿಸದೆ ಸರಿ ಮಾರ್ಗವನ್ನು ತೋರಿಸುವರು ಮತ್ತು ಬುದ್ಧಿಮಾತುಗಳನ್ನು ಹೇಳುವರು. ನಿಮಗೆ ಇಂತಹ ಅತ್ತೆ ಸಿಕ್ಕಿದ್ದರೆ ಅದು ನಿಮ್ಮ ಪುಣ್ಯ ಅದಕ್ಕಾಗಿ ದೇವರಿಗೆ ಧನ್ಯವಾದವನ್ನು ತಿಳಿಸಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon