Link copied!
Sign in / Sign up
1
Shares

ಭವಿಷ್ಯದ 5 ವಿಶಿಷ್ಟ ಪಿರಿಯಡ್ಸ್ ಸಾಧನಗಳು

ಜಗತ್ತಿನಾದ್ಯಂತ ತಂತ್ರಜ್ಞಾನವು ಎಲ್ಲೆಡೆ ಪಸರಿಸುತ್ತಿರುವ ಕಾರಣ, ವೈದ್ಯಕೀಯ ಕ್ಷೇತ್ರದಲ್ಲೂ ನಾವು ಹಿಂದೆಂದೂ ಕಾಣದಷ್ಟು ಹೊಸ ಹೊಸ ಅನ್ವೇಷಣೆಗಳಿಗೆ, ಆವಿಷ್ಕಾರಗಳಿಗೆ ನಾವು ಸಾಕ್ಷಿ ಆಗುತ್ತಿದ್ದೇವೆ. ಋತುಸ್ರಾವ ಎಂಬುದು ಗಮನ ವಹಿಸದಿದ್ದರೆ (ಬಹಳಷ್ಟು ಸಲ ಗಮನ ವಹಿಸಿದರೂ) ಹೆಣ್ಣಿಗೆ ತೀವ್ರ ಇರಿಸುಮುರಿಸು ಮತ್ತು ಮುಜುಗರ ಉಂಟು ಮಾಡಬಹುದು. ಅಷ್ಟೇ ಅಲ್ಲದೆ, ರಕ್ತಸ್ರಾವದ ವೇಳೆ ಗುಪ್ತಾಂಗವನ್ನ ಸರಿಯಾಗಿ ಇಟ್ಟುಕೊಳ್ಳದಿದ್ದರೆ, ಹಲವಾರು ಆರೋಗ್ಯದ ಸಮಸ್ಯೆಗಳು ಕೂಡ ಎದುರಾಗುತ್ತವೆ. ಹೀಗಾಗಿ, ಈ ಋತುಸ್ರಾವವನ್ನ ಸರಿಯಾಗಿ ನಿಭಾಯಿಸಲು ಸುಲಭ ಮಾಡುವಂತ ಭವಿಷ್ಯದ 6 ಆವಿಷ್ಕಾರಗಳು ಯಾವ್ಯಾವು ಮತ್ತು ಅವುಗಳ ಬಗ್ಗೆ ಈ ಲೇಖನದಿಂದ ತಿಳಿಯಿರಿ.

೧. ಬ್ಲೂಟೂತ್ ಟಾಂಪಾನ್

ಸ್ಯಾನಿಟರಿ ಪ್ಯಾಡ್ ಪರ್ಯಾಯವಾಗಿ ಟಾಂಪಾನ್ ಬಳಸುವುದು ನಿಮಗೆ ತಿಳಿದಿರುತ್ತದೆ. ಆದರೆ ಮೈಫ್ಲೋ ಕಂಪನಿ ಸಿದ್ಧಪಡಿಸಿರುವ ಸ್ಮಾರ್ಟ್ ಟಾಂಪಾನ್ ನಿಮ್ಮ ಟಾಂಪಾನ್ ಪೂರ್ತಿ ರಕ್ತದಿಂದ ತುಂಬಿದೊಡನೆ, ಅದನ್ನು ಬದಲಿಸುವಂತೆ ನಿಮಗೆ ಸಂದೇಶ ರವಾನಿಸುವ ಮುಜುಗರ ಉಂಟು ಮಾಡುವ ರಕ್ತದ ಸೋರಿಕೆಯನ್ನ ತಡೆಯುತ್ತದೆ. ಈ ಟಾಂಪಾನಿನ ಜೊತೆಗೆ ಅಂಟಿಕೊಂಡಿರುವ ದಾರವು ಒಂದು ಸಣ್ಣ ಚಿಪ್ ಗೆ ಕೂಡಿಕೊಂಡಿದ್ದು, ಟಾಂಪಾನ್ ತುಂಬಿದೊಡನೆ ನಿಮ್ಮ ಮೊಬೈಲಿಗೆ ಸಂದೇಶ ರವಾನೆ ಆಗುತ್ತದೆ.

೨. ನಿಮ್ಮ ಋತುಸ್ರಾವದ ಎಂತಹ ನೋವಿದ್ದರೂ ತೊಲಗಿಸುವ ಸಾಧನ

ಈ ಸಾಧನದ ಹೆಸರು ಲಿವಿಯಾ. ಇದನ್ನು ಉಪಯೋಗಿಸಲು ನೀವು ಇದರೊಂದಿಗೆ ಬರುವ ಸ್ಟಿಕರ್ ಅನ್ನು, ನಿಮಗೆ ಎಲ್ಲಿ ಹೆಚ್ಚು ನೋವು ಕಾಣಿಸಿಕೊಳ್ಳುತ್ತದೆಯೋ, ಆ ಜಾಗದ ಮೇಲೆ ಅಂಟಿಸಿಕೊಳ್ಳಬೇಕು. ಈ ಸಾಧನವು ಕೇಂದ್ರ ನರಮಂಡಲಕ್ಕೆ ಪಲ್ಸ್ ಗಳನ್ನ ಕಳಿಸುತ್ತಾ, ಅದರ ದ್ವಾರಗಳು ತುಂಬುವಂತೆ ಮಾಡುತ್ತದೆ. ಹೀಗೆ ಎಲ್ಲಾ ದ್ವಾರಗಳೂ ನಿರತವಾಗಿದ್ದಾಗ, ಮೆದುಳಿಗೆ ನೋವು ಸೂಚಿಸುವ ಸಿಗ್ನಲ್ಸ್ ಮುಟ್ಟುವುದಿಲ್ಲ. ಆಗ ನಿಮಗೆ ನೋವು ಅರಿವಾಗುವುದಿಲ್ಲ.

೩. ಪಿರಿಯಡ್ಸ್ ಸೆಕ್ಸ್ ಅನ್ನು ಇನ್ನಷ್ಟು ಮಜಭರಿತ ಮಾಡುವ ಸರ್ವಿಕಲ್ ಡಿಸ್ಕ್

ಇದರ ಹೆಸರು ಫ್ಲೆಕ್ಸ್. ಟಾಂಪಾನ್ ರೀತಿ ಇದನ್ನು ಪದೇ ಪದೇ ಬದಲಿಸುವ ಅಗತ್ಯವಿಲ್ಲ. ಇದನ್ನು ನೀವು 12 ಗಂಟೆಗಳ ಕಾಲ ಧರಿಸಿರಬಹುದು. ಇದರ ಹೊರ ಅಂಚು ದೇಹದ ಉಷ್ಣತೆಗೆ ಅನುಗುಣವಾಗಿ ಬದಲಾಗುವಂತ ಪದಾರ್ಥದಿಂದ ಮಾಡಿದ್ದು, ಇದು ನಿಮ್ಮ ಬೇಕಿರುವ ಆಕಾರಕ್ಕೆ ಮಾರ್ಪಾಡಾಗಿ, ಸೋರಿಕೆಯನ್ನು ತಡೆಗಟ್ಟುತ್ತದೆ. ಹೀಗಾಗಿ ನೀವು ಸಂಭೋಗ ಕಾರ್ಯದಲ್ಲಿ ತೊಡಗಿದರೂ, ಹಾಸಿಗೆ ಕಲೆ ಆಗುತ್ತದೇನೋ ಎಂದು ಭಯ ಪಡಬೇಕಿಲ್ಲ!

೪. ಅಂಚೆಯಾಗಿ ಕಳಿಸಬಹುದಾದ ಟಾಂಪಾನ್

ಋತುಸ್ರಾವದ ರಕ್ತವು ನಿಮ್ಮ ಆರೋಗ್ಯದ ಸ್ಥಿತಿಯ ಬಗ್ಗೆ ಸಾಕಷ್ಟು ಮುಖ್ಯವಾದ ಮಾಹಿತಿಗಳನ್ನ ನೀಡುತ್ತದೆ. ಕಳೆದ ವರ್ಷ ಹಾರ್ವರ್ಡ್ ಅಬಿಯಂತರರು ಆದ ರಿಧಿ ತಾರಿಯಲ್ ಅವರು, ಬಳಸಿರುವ ಟಾಂಪಾನ್ ಅನ್ನು ಟಪಾಲು ಮಾಡಿ, ಅದರಿಂದ ವೈದ್ಯಕೀಯ ಸಲಹೆಗಳು, ಪರೀಕ್ಷೆಗಳ ಫಲಿತಾಂಶ ಪಡೆಯುವಂತಹ ವ್ಯವಸ್ಥೆಯನ್ನ ಹುಟ್ಟಿಹಾಕುವ ಕೆಲಸಕ್ಕೆ ನಾಂದಿ ಹಾಡಿದರು. ಈ ಬಳಸಿದ ಟಾಂಪಾನ್ ಅಲ್ಲಿರುವ ಋತುಸ್ರಾವದ ರಕ್ತದಿಂದ ಅಂಡಾಶಯದ ಕ್ಯಾನ್ಸರ್, ಎಂಡೋಮೆಟ್ರಿಯೋಸಿಸ್ ಅಂತಹ ಅಸ್ವಸ್ತತೆಗಳನ್ನ ಮೊದಲೇ ಕಂಡು ಹಿಡಿಯಬಹುದು.

೫. ವಾಸನೆ-ರಹಿತ ಬ್ಯಾಗ್

ಪ್ರತಿಯೊಂದು ಹೆಣ್ಣು ಕೂಡ ಆಕೆಯ ಜೀವನದಲ್ಲಿ ಒಮ್ಮೆ ಆದರೂ, ಪ್ಯಾಡ್ ಬದಲಿಸಲು, ಅಥವಾ ಬಳಸಿದ ಪ್ಯಾಡ್ ಅನ್ನು ಹೊರಹಾಕಲಾಗದಂತ ಪರಿಸ್ಥಿತಿಯಲ್ಲಿ ಸಿಲುಕಿಯೇ ಇರುತ್ತಾಳೆ. ನೀವು ಯಾರಾದರೂ ಮನೆಗೆ ಹೋದಾಗ ಅಥವಾ ಇನ್ನ್ಯಾವುದೋ ಪಬ್ಲಿಕ್ ಪ್ರದೇಶಗಳಿಗೆ ಹೋದಾಗ ನಿಮಗೆ ನಿಮ್ಮ ಬಳಸಿದ ಪ್ಯಾಡ್ ಅನ್ನು ಹೊರಹಾಕುವುದು ಹೇಗೆ ಎಂಬುದೇ  ತಿಳಿಯದಂತೆ ಆಗುತ್ತದೆ. ಹೀಗಾಗಿಯೇ ಅನಿಮೋಸ ತಯಾರಿಸಿರುವ ಈ ವಾಸನೆ-ರಹಿತ ಬ್ಯಾಗ್ ಆವಿಷ್ಕಾರಕ್ಕೆ ಬಂದಿದ್ದು. ಇದರಲ್ಲಿ ಕೇವಲ ನೀವು ಬಳಸಿದ ಪ್ಯಾಡ್, ಟಾಂಪಾನ್ ಅನ್ನು ಇಟ್ಟುಕೊಳ್ಳುವುದಷ್ಟೇ ಅಲ್ಲದೆ, ಈ ಬ್ಯಾಗಿನೊಳಗೆ ಸೀಲ್ ಮಾಡಬಹುದಾದಂತ ಪ್ಲಾಸ್ಟಿಕ್ ಚೀಲಗಳು, ಒರೆಸಿಕೊಳ್ಳಲು ಪೇಪರ್ ತುಂಡುಗಳು (ಸ್ವೈಪ್ಸ್) ಕೂಡ ಇರುತ್ತವೆ. ಈ ಬ್ಯಾಗಿನಿಂದ ಆಚೆಗೆ ಕಿಂಚಿತ್ತೂ ವಾಸನೆ ಹೊರಬರುವುದಿಲ್ಲ. ನಿಮಗೆ ಬಳಸಿದ ಪ್ಯಾಡ್ ಅನ್ನು ಎಲ್ಲಿ ಹೊರಹಾಕಲು ಅನುಕೂಲ ಅನಿಸುತ್ತದೆಯೋ, ಅಲ್ಲಿ ಅದನ್ನು ಈ ಬ್ಯಾಗಿನಿಂಗ ತೆಗೆದು ಹೊರಹಾಕಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon