Link copied!
Sign in / Sign up
111
Shares

೫ ಆರೋಗ್ಯಕರ ಮತ್ತು ಸವಿಯಾದ ಗಂಜಿ/ಅಂಬಲಿ

ಎಲ್ಲರ ಪೌಷ್ಟಿಕಾಂಶದ ಉಪಹಾರದ ಪಟ್ಟಿಯಲ್ಲಿ ಗಂಜಿ/ಅಂಬಲಿಯನ್ನು ಕಾಣಬಹುದು.ಮತ್ತು ಇದು ನಿಮ್ಮ ಮಗುವಿಗೆ ಅತ್ಯುತ್ತಮವಾದ ಪೌಷ್ಠಿಕ ಆಹಾರಗಳಲ್ಲಿ ಒಂದಾಗಿದೆ. ಮೃದುವಾದ ವಿನ್ಯಾಸ ಮತ್ತು ಮಗುವಿಗೆ ರುಚಿಯನ್ನು ಒದಗಿಸುವ ಕಾರಣದಿಂದ ಇದನ್ನು ಮಕ್ಕಳಿಗೆ ನೀಡಲು ಬಯಸುತ್ತಾರೆ. ಇದು  ಆರೋಗ್ಯಕರವಾದ ಆಹಾರವು ಆಗಿರುವುದರಿಂದ ಮತ್ತು ವಿವಿಧ ವಯಸ್ಸಿನವರಿಗೂ ಕೊಡಬಹುದು ಮತ್ತು ಗಂಜಿಯು ಪೋಷಕಾಂಶದ ಮೂಲವಾಗಿದೆ ಜೊತೆಗೆ ಇದನ್ನು ಮಕ್ಕಳು ಸುಲಭವಾಗಿ ಜಿರ್ಣಿಸಿಕೊಳ್ಳಬಹುದು ಎಂಬುದು ನಮಗೆ ತಿಳಿದಿದೆ. ಮಗುವಿನ ಅನಾರೋಗ್ಯದ ಸಂದರ್ಭದಲ್ಲಿ ಅಂಬಲಿ/ಗಂಜಿ ಕೊಡುವುದು ಒಳ್ಳೆಯದು, ಇದನ್ನು ವೈದ್ಯರು ಕೂಡ ಸಲಹಿಸುತ್ತಾರೆ. ನಿಮ್ಮ ಮಗುವಿಗೆ ಕನಿಷ್ಟ ಪಕ್ಷ ಒಮ್ಮೆಯಾದರೂ ನೀಡಬೇಕಾದ ರುಚಿಕರ ಮತ್ತು ಆರೋಗ್ಯಕರ ೫ ಪರಿಕರಗಳನ್ನು ಇಲ್ಲಿ ನೀಡಲಾಗಿದೆ. 

೧.ಏಕದಳ ಧಾನ್ಯದ ಜೊತೆಗೆ ಅಕ್ಕಿ ಗಂಜಿ

ನೀಡುವುದು: ೬ ತಿಂಗಳ ನಂತರ

ಸಾಮಗ್ರಿಗಳು:

ಅರ್ಧ ಬಟ್ಟಲು ನೀರು

೨ ಚಮಚ ಮನೆಯಲ್ಲಿ ತಯಾರಿಸಿಕೊಂಡ ಅಕ್ಕಿ ಪುಡಿ(ಹಿಟ್ಟು) (ಕಂದು ಅಕ್ಕಿ ಅಥವಾ ಕೆಂಪು ಅಕ್ಕಿ)

ತಯಾರಿಸುವುದು:

೧.ಒಂದು ಪಾತ್ರೆಗೆ ನೀರು ಹಾಕಿ ಮತ್ತು ಕುದಿಸಿ.

೨.ಕುದಿಯುತ್ತಿರುವ ನೀರಿಗೆ ಅಕ್ಕಿ ಪುಡಿ ಹಾಕಿ ಗಂಟು ಹಾಗದಂತೆ ಕದಡುತ್ತಿರಿ(ತಿರುಗುಸುತ್ತಿರಿ).

೩.ನಿರಂತರವಾಗಿ ಗಟ್ಟಿಯಾಗುವವರೆಗೆ ಮತ್ತು ಕೆನೆ ರಚನೆಯನ್ನು ಪಡೆಯುವವರೆಗೆ ಅದನ್ನು ಬೆರೆಸಿ(ಕದಡುತ್ತಿರಿ).

೪.ಸ್ವಲ್ಪ ತೆಳುವಾಗಲು ಎದೆ ಹಾಲು ಅಥವಾ ಹಸುವಿನ ಹಾಲನ್ನು ಸೇರಿಸಿ.

೫.ಸಿಹಿಯಾಗಲು, ನಿಮಗೆ ಇಷ್ಟವಾದ ಹಣ್ಣನ್ನು ಸೇರಿಸಿ. 

೨.ರಾಗಿ ಗಂಜಿ

ನೀಡುವುದು: ೬ ತಿಂಗಳ ನಂತರ

ಸಾಮಗ್ರಿಗಳು:

೧ ಚಮಚ ರಾಗಿ ಹಿಟ್ಟು/ ಪುಡಿ

ಅರ್ಧ ಬಟ್ಟಲು ನೀರು (ಅಥವಾ ಬೇಕಾದಷ್ಟು)

ತಯಾರಿಸುವುದು:

೧. ರಾಗಿ ಹಿಟ್ಟು ಮತ್ತು ನೀರು ಎರಡನ್ನು ಮಿಶ್ರಿಸಿ, ಯಾವುದೇ ತರಹದ ಗಂಟು/ ಉಣ್ಣೆಗಳಾಗದಂತೆ ಚೆನ್ನಾಗಿ ಮಿಶ್ರಿಸಿ.

೨.ಈ ಮಿಶ್ರಣವನ್ನು ಮದ್ಯಮ ಉರಿಯಲ್ಲಿ ೫-೧೦ ನಿಮಿಷಗಳ ಕಾಲ ರಾಗಿ ಬೇಯುವುವವರೆಗೆ ಬಿಸಿಮಾಡಿ. 

೩.ಓಟ್ಸ್/ತೊಕ್ಕೆ ಗೋಧಿ ಗಂಜಿ

ನೀಡುವುದು: ೬ ತಿಂಗಳ ನಂತರ

ಸಾಮಗ್ರಿಗಳು:

೧/೨ ಬಟ್ಟಲು ಸಾವಯವ/ಜೈವಿಕ ಓಟ್ಸ್/ತೊಕ್ಕೆ ಗೋಧಿ

ನೀರು (ಬೇಕಾದಷ್ಟು)

ತಯಾರಿಸುವುದು:

೧.ಅಡುಗೆ ಪಾತ್ರೆಯನ್ನು ಕ್ರಿಮಿನಾಶಕಗಳಿಂದ ಶುಚಿಗೊಳಿಸಿದ  ನಂತರ (ಕುದಿಯುವ ನೀರಿನಿಂದ), ಅಗತ್ಯ ಪ್ರಮಾಣದ ನೀರನ್ನು ಕುದಿಸಿ.

೨.ಈಗ ಓಟ್ಸ್/ತೊಕ್ಕೆ ಗೋಧಿಯನ್ನು ನೀರಿನಲ್ಲಿ ಹಾಕಿ ಬೇಯಲು ಬಿಡಿ.

೩.ರುಚಿ ಹೆಚ್ಚಿಸಲು ನಿಮಗೆ ಬೇಕಾದ ಹಣ್ಣುಗಳನ್ನು ಸೇರಿಸಬಹುದು.

೪.ಓಟ್ಸ್/ತೊಕ್ಕೆ ಗೋಧಿಯು ಚೆನ್ನಾಗಿ ಬೆಂದ ನಂತರ ಅದನ್ನು(ಓಟ್ಸ್ ಅನ್ನು) ಗಂಜಿಯಿಂದ ಹೊರಗಡೆ ತಗೆಯುವುದು. 

೪.ಸಬುದಾನ/ಸಬ್ಬಕ್ಕಿ ಗಂಜಿ

ನೀಡುವುದು: ೭ ತಿಂಗಳ ನಂತರ

ಸಾಮಗ್ರಿಗಳು:

೨ ಚಮಚ ಸಬುದಾನ/ಸಬ್ಬಕ್ಕಿ

೧ ಚಿಟಕಿ ಏಲಕ್ಕಿ ಪುಡಿ

೧ ಚಿಟಕಿ ಬಾದಾಮಿ ಪುಡಿ

ತಯಾರಿಸುವುದು:

೧.ಸಬ್ಬಕ್ಕಿ/ಸಬುದಾನವನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ.

೨.ಸಬ್ಬಕ್ಕಿ/ಸಬುದಾನದ ಗಾತ್ರ ಚಿಕ್ಕದಾಗಿದ್ದರೆ(ಅಥವಾ ಕಡಿಮೆ ಗಡಸುತನ), ೧೦-೧೫ ನಿಮಿಷ ನೆನೆಸಿ, ಅಥವಾ ಹೆಚ್ಚು ಗಡಸಾಗಿದ್ದರೆ ರಾತ್ರಿಯಿಡಿ ನೆನೆಸ ಬೇಕು.

೩.ನೀರನ್ನು ಕುದಿಸಿ, ಮತ್ತು ಅದಕ್ಕೆ ಸಬ್ಬಕ್ಕಿ/ಸಬುದಾನ ಅರೆಪಾರದರ್ಶಕವಾಗುವವರೆಗೆ ಹಾಕಿ.

೪.ಏಲಕ್ಕಿ ಪುಡಿ ಮತ್ತು ಬಾದಾಮಿ ಪುಡಿಯನ್ನು ಸೇರಿಸಿ. 

೫.ರವೆ/ಸೂಜಿ/ಸೇಮಲಿನ ಗಂಜಿ

ನೀಡುವುದು: ೬ ತಿಂಗಳ ನಂತರ

ಸಾಮಗ್ರಿಗಳು:

ಒಂದು ಬಟ್ಟಲು ಸೂಜಿ/ರವೆ

೨ ಚಮಚ ತುಪ್ಪ

೧ ಚಿಟಕಿ ಏಲಕ್ಕಿ ಪುಡಿ

೩ ಬಟ್ಟಲು ನೀರು

ತಯಾರಿಸುವುದು:

೧.ಪಾತ್ರೆಯಲ್ಲಿ ಅಥವಾ ತವಾದಲ್ಲಿ ಒಣಗಿದ ರವೆ/ಸೂಜಿಯನ್ನು ಉರಿದುಕೊಳ್ಳಿ.

೨.ಪಾತ್ರೆಗೆ ೩ ಬಟ್ಟಲು ನೀರು ಹಾಕಿ ಕುದಿಯಲು ಬಿಡಿ.

೩.ಆ ಪಾತ್ರೆಗೆ ಉರಿದ ರವೆ/ಸೂಜಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ(ಯಾವುದೇ ಗಂಟು ಆಗದಂತೆ ನೋಡಿಕೊಳ್ಳಿ).

೪.ಗಂಟು ಉಂಟಾಗುವುದನ್ನು ತಡೆಯಲು ಮಿಶ್ರಣವನ್ನು ಚೆನ್ನಾಗಿ ಕದಡುತ್ತಿರಿ (ಚೆನ್ನಾಗಿ ಬೇಯುವವರೆಗೂ).

೫.ಅದಕ್ಕೆ ತುಪ್ಪವನ್ನು ಸೇರಿಸಿ.

೬.ಚೆನ್ನಾಗಿ ಮಿಶ್ರಿಸಿ ಮತ್ತು ಅದಕ್ಕೆ ಚಿಟಕೆ ಏಲಕ್ಕಿ ಪುಡಿ ಸೇರಿಸಿ.

೭.ಮೃದುವಾಗಲು ಅಥವಾ ತಿಳಿ ಗಂಜಿಯಂತಾಗಲು ಎದೆ ಹಾಲು ಅಥವಾ ಹಸು ಹಾಲನ್ನು ಸೇರಿಸಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
38%
Wow!
50%
Like
13%
Not bad
0%
What?
scroll up icon