Link copied!
Sign in / Sign up
3
Shares

೪ನೇ ತಿಂಗಳ ಗರ್ಭಾವಸ್ಥೆ : ಏನನ್ನು ನಿರೀಕ್ಷಿಸಬಹುದು?

ಅಭಿನಂದನೆಗಳು, ನೀವು ಈಗ ತಾನೇ ನಿಮ್ಮ ಮೊದಲನೇ ತ್ರೈಮಾಸಿಕವನ್ನು ಯಶಸ್ವಿಯಾಗಿ ದಾಟಿರುವಿರಿ. ಮೊದಲ ತ್ರೈಮಾಸಿಕದಲ್ಲಿ ನಿಮಗೆ ಅಷ್ಟು ಆರಾಮದಾಯಕದ ಅನುಭವ ಆಗಿರುವುದು ಕಡಿಮೆ, ನೀವು ಮತ್ತು ನಿಮ್ಮ ದೇಹ ಈಗ ಬದಲಾಗುತ್ತಿರುವ ಹಾರ್ಮೋನು ಮತ್ತು ದೇಹ ಸ್ಥಿತಿಗೆ ನಿಧಾನವಾಗಿ ಹೊಂದಿಕೊಳ್ಳುತ್ತಿದೆ.

ನೀವು ಏನನ್ನು ನಿರೀಕ್ಷಿಸಬಹುದು?

೪ನೇ ತಿಂಗಳ ಗರ್ಭಾವಸ್ಥೆಯ ಆರೈಕೆಯಲ್ಲಿ ಗಮನಾರ್ಹವಾಗಿ ಭಾವಿಸುವ ಕೆಲವು ಬದಲಾವಣೆಗಳನ್ನು ಇಲ್ಲಿ ನೀಡಲಾಗಿದೆ.

೧.ಮೊದಲಿಗಿಂತ ಈಗ ಹೆಚ್ಚು ಆರಾಮದಾಯಕ ಆಗಿರುವೆ ಎಂದು ಭಾವಿಸುವಿರಿ. ಬೆಳಗ್ಗಿನ ಕಾಯಿಲೆ (ಸುಸ್ತು, ವಾಂತಿ ಇತ್ಯಾದಿ) ಈ ಸಮಯದಲ್ಲಿ ಕಡಿಮೆ ಆಗುತ್ತದೆ.

೨.ನಿಮ್ಮ ಉಡುಪುಗಳ ಸೈಜ್ ಬದಲಾಗಿರುತ್ತದೆ, ಬೆಳೆಯುತ್ತಿರುವ ಮಗುವಿಗೆ ಅನುಗುಣವಾಗಿ ನಿಮ್ಮ ಅಂಗಾಗಳು ಮತ್ತು ಚರ್ಮ ಹಿಗ್ಗುತ್ತವೆ.

೩.ನಿಮ್ಮ ಮೊದಲ ಅಲ್ಟ್ರಾಸೌಂಡ್ ಸ್ಕ್ಯಾನ್ ಅನ್ನು ಈ ಸಮಯದಲ್ಲಿ ಮಾಡಿಸಲು ವೈದ್ಯರು ಸೂಚಿಸುತ್ತಾರೆ.

೪.ನಿಮ್ಮ ಮಗುವಿನ ಹೃದಯ ಬಡಿತವನ್ನು ಕೇಳಿದ ನಂತರ ನಿಮ್ಮ ಬದುಕಿನ ಖುಷಿಯ ಕ್ಷಣಗಳ ಎಣಿಕೆಯನ್ನು ಪ್ರಾರಂಭಿಸುವಿರಿ.

ದೇಹದಲ್ಲಿ ಬದಲಾವಣೆ

ನೀವು ಬದಲಾವಣೆಯ ಗಮನಾರ್ಹ ಮತ್ತು ಮಿಶ್ರ ಅನುಭವವನ್ನು ಅನುಭವಿಸುವಿರಿ. ನಿಮ್ಮ ಉದರದೊಳಗೆ ಈಗ ಹಲವು ಬದಲಾವಣೆಗಳು ಆಗುತ್ತಿವೆ ಮತ್ತು ದೈಹಿಕವಾಗಿಯೂ ನೀವು ಬದಲಾವಣೆಯನ್ನು ಎದುರಿಸುವಿರಿ.

೧)ಪದೇ ಪದೇ ಬಾತ್ ರೂಮ್ ಗೆ ಓಡುವ ಕಾರಣ ನೀವು ನಿರಾಸಕ್ತಿಯಾದಂತೆ ಕಾಣುವಿರಿ. ಇದಕ್ಕೆ ಕಾರಣ ಪ್ರೊಜೆಸ್ಟೊರಾನ್ ಹಾರ್ಮೋನು.

೨)ನಿಮ್ಮ ಗರ್ಭಕೋಶ ಈಗ ದ್ರಾಕ್ಷಿ ಹಣ್ಣಿನಷ್ಟು ಗಾತ್ರವನ್ನು ಹೊಂದಿದೆ. ನಿಮಗೆ ಹೊಟ್ಟೆ ತುಂಬಿದೆ ಎನಿಸಿದಾಗ, ಜಾಸ್ತಿ ಆಯಿತು ಎಂದು ಅಥವಾ ಹೆಚ್ಚು ಬಾರ ಹೊಂದಿರುವ ಅನುಭವ ಆಗುವುದು ಸಹಜ.

೩)ನಿಮ್ಮ ಹೊಟ್ಟೆಯ ಸುತ್ತ ಗಮನಾರ್ಹ ಬದಲಾವಣೆಯನ್ನು ಕಾಣಬಹುದು. ನೀವು ಅಗಲವಾದ ಅಥವಾ ದಪ್ಪ ಹೊಟ್ಟೆಯನ್ನು ಹೊತ್ತಿಕೊಂಡು ವೃತ್ತಾಕಾರವಾಗಿ ಕಾಣುವಿರಿ.

೪)ನಿಮ್ಮ ಸ್ತನ ದಿಡೀರ್ ಆಗಿ ದಪ್ಪದಾಗಿ ಕಾಣಿಸುತ್ತದೆ, ವೃತ್ತಾಕಾರವಾಗಿ ಮತ್ತು ತುಂಬಿದಂತೆ, ಇದು ಹೆರಿಗೆ ನಂತರ ಮಗುವಿಗೆ ಹಾಲುಣಿಸಲು ತಯಾರಾಗುತ್ತಿದೆ.

೫)ವಾಕರಿಕೆ ಮತ್ತು ತಲೆತಿರುಗುವಿಕೆ ಮೊದಲಿಗಿಂತ ಈಗ ಕಡಿಮೆ ಆಗುತ್ತದೆ, ಆದರೆ ಇದು ಸಂಪೂರ್ಣವಾಗಿ ಹೋಗುತ್ತದೆ ಎಂದು ಹೇಳಲಾಗುವುದಿಲ್ಲ.

ಮಗುವಿನಲ್ಲಿ ಬದಲಾವಣೆ

ಬೆಳೆಯುತ್ತಿರುವ ಮಗುವಿನಲ್ಲಿ ಸರಣಿಯ ಹಲವು ಬದಲಾವಣೆಗಳು ಸಂಭವಿಸುತ್ತವೆ. ನಿಮ್ಮ ಮಗು ಈಗ ಉದರದಲ್ಲಿ ಬೇಗನೆ ಬೆಳೆಯಲು ಪ್ರಾರಂಭಿಸಿರುವನು.

೧)ಮಗುವಿನ ಕಣ್ಣುಗಳು ಈಗ ಸರಿಯಾದ ಜಾಗದಲ್ಲಿ ಬಂದು ಬಹುತೇಕ ಅಭಿವೃದ್ದಿಯಾಗಿರುತ್ತದೆ.

೨)ಕತ್ತು ಉದ್ದವಾಗುತ್ತದೆ ಮತ್ತು ಮಗುವಿನ ಗಲ್ಲವನ್ನು ಅಲ್ಟ್ರಾಸೌಂಡ್ ಸ್ಕ್ಯಾನ್ ಮೂಲಕ ನೋಡಬಹದು.

೩)ಮುಖದ ರೂಪ ಮತ್ತು ಲಕ್ಷಣಗಳು ಸಂಪೂರ್ಣವಾಗಿ ಬೆಳೆಯಲು ಶುರುವಾಗುತ್ತದೆ.

೪)ವಿಭಿನ್ನ ಬೆರಳಚ್ಚು ಈಗ ಅಭಿವೃದ್ದಿಯಾಗಿರುತ್ತದೆ.

೫)ಹೊರಗಿನ ಕ್ರಿಯೆಗೆ ನಿಮ್ಮ ಮಗು ಪ್ರತಿಕ್ರಿಯೆ ನೀಡಲು ಶುರು ಮಾಡುತ್ತದೆ. ನಿಮ್ಮ ಉದರದ ಮೇಲೆ ನಿಮ್ಮ ಬೆರಳುಗಳನ್ನು ಮೆತ್ತಗೆ ಆಡಿಸಿ, ಉದರದೊಳಗೆ ನಿಮ್ಮ ಮಗುವು ಅಲುಗಾಡುವುದನ್ನು ಅಥವಾ ಒದೆತವನ್ನು ಅನುಭವಿಸಿ.

೬)೫ ಅಥವಾ ೬ನೇ ತಿಂಗಳುಗಳಲ್ಲಿ ಮಗುವಿನ ಉಬ್ಬು ಮತ್ತು ಕೂದಲು ಬೆಳೆಯಲು ಪ್ರಾರಂಭವಾಗುತ್ತದೆ.

೭)ತನ್ನ ಹೆಬ್ಬೆರಳನ್ನು ಚೀಪಲು ಮಗುವು ಶುರುಮಾಡುತ್ತದೆ.

೮)ಮಗುವಿನ ಅಂಗಗಳು ಈಗ ಕಾರ್ಯ ನಿರ್ವಹಿಸಲು ಪ್ರಾರಂಭ ಮಾಡುತ್ತವೆ ಮತ್ತು ಅದರ ಚಲನೆಯನ್ನು ತಾಯಿಯು ಅನುಭವಿಸಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon