Link copied!
Sign in / Sign up
0
Shares

ವೀಕ್ಷಿಸಿ : ಈ 4 ವರ್ಷದ ಹುಡುಗಿಗೆ ವೈಯಾಗ್ರ ಬೇಕೇ ಬೇಕು!

ಒಂದು ಸವ್ಯಸಾಚಿ 4 ವರ್ಷದ ಹುಡುಗಿಯು ವೈಯಾಗ್ರ ಸೇವಿಸದೇ ಬದುಕುಳಿಯುವುದಿಲ್ಲ. ವೈಯಾಗ್ರ ಕಾರಣ ಅವಳು ಇಲ್ಲಿಯವರೆಗೂ ಬಂದಿದ್ದಾಳೆ. ಯಾರು ಈಕೆ? ಇವಳಿಗೆ ವೈಯಾಗ್ರ ಏಕೆ ಬೇಕೇ ಬೇಕು?

ಪುರುಷರಲ್ಲಿನ ನಿಮಿರುವಿಕೆಯ ತೊಂದರೆಯನ್ನು ನಿವಾರಿಸಲು ಬಳಸುವ ವೈಯಾಗ್ರ, ಈಕೆಯ ದೇಹದ ಭಾಗಗಳು ಸರಿಯಾದ ಕಾರ್ಯನಿರ್ವಹಣೆ ಮಾಡಲು ಸಹಾಯ ಮಾಡುತ್ತಿದೆ. ಈಕೆಯ ಹೆಸರು ವಿಕ್ಟೋರಿಯಾ.

ವಿಕ್ಟೋರಿಯಾಳ ಈ ವಿಶೇಷ ಮತ್ತು ವಿರಳ ಪ್ರಕರಣ ಬೆಳಕಿಗೆ ಬಂದದ್ದು ಆಕೆಯ ಜನಿಸಿದೊಡನೆಯೇ. ಈ ಅಸ್ವಸ್ಥತೆಯು ಆಕೆಯ ಹೃದಯದ ಒಂದು ಭಾಗವು ಸರಿಯಾಗಿ ಕಾರ್ಯನಿರ್ವಹಿಸದಂತೆ ಮಾಡುತ್ತದೆ. ಆಕೆಯನ್ನು ಚಿಕಿತ್ಸೆಗೆ ಒಳಪಡಿಸಿರುವ ಮಕ್ಕಳ ಹೃದಯ ತಜ್ಞೆ ಡಾ ।। ಆನ್ ಚುನ್, ಈಗಾಗಲೇ ವಿಕ್ಟೋರಿಯಾಗೆ 3 ಸರ್ಜರಿಗಳಾಗಿದ್ದು, ಆಕೆಯ ಹರೆಯಕ್ಕೆ ಕಾಲಿಟ್ಟ ಮೇಲೆ ಹೃದಯ ಕಸಿ ಮಾಡಬೇಕಾಗುತ್ತದೆ ಎನ್ನುತ್ತಾರೆ.

ವಿಕ್ಟೋರಿಯಾ ಈಗ ಕಡಿಮೆ ಪ್ರಮಾಣದ ವೈಯಾಗ್ರ ಸೇವಿಸುತ್ತಿದ್ದಾಳೆ. ಇದು ಆಕೆಯ ರಕ್ತನಾಳಗಳು ಶಾಂತವಾಗುವಂತೆ ಮಾಡಿ ದೇಹದ ಇತರೆ ಭಾಗಗಳಿಂದ ಶ್ವಾಸಕೋಶಕ್ಕೆ ಸಹಜವಾಗಿ ರಕ್ತ ಹರಿಯುವಂತೆ ಮಾಡಿ, ಆಮ್ಲಜನಕದ ಪ್ರಮಾಣವನ್ನ ನಿಯಂತ್ರಣದಲ್ಲಿ ಇಡುತ್ತದೆ. ಇಷ್ಟೇ ಅಲ್ಲದೆ, ಪ್ರಪಂಚದ ಬಹಳಷ್ಟು ಮಕ್ಕಳ ಆಸ್ಪತ್ರೆಗಳಲ್ಲಿ ಶ್ವಾಸಕೋಶ ಮತ್ತು ಹೃದಯ ರೋಗಗಳಿಗೆ ಔಷಧಿಯಾಗಿ ವೈಯಾಗ್ರವನ್ನ ನೀಡಲಾಗುತ್ತಿದೆ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon