ಆಸ್ಟ್ರೇಲಿಯಾ ದೇಶದ 5 ವರ್ಷದ ಬಾಲಕಿಯೊಬ್ಬಳು ತನಗೆ ನಾಲ್ಕು ವರ್ಷ ವಯಸ್ಸು ಆಗಿದ್ದಾಗಿನಿಂದಲೇ ಋತುಸ್ರಾವ ಹೊಂದಲು ಶುರು ಮಾಡಿದ್ದು, ಈಗಾಗಲೇ ಆಕೆ ಋತುಬಂಧ (ಮುಟ್ಟು ನಿಲ್ಲುವ ಕಾಲ) ಹೊಂದುವ ಎಲ್ಲಾ ಲಕ್ಷಣಗಳನ್ನ ಪ್ರದರ್ಶಿಸುತ್ತಿದ್ದಾಳೆ! ಇದಕ್ಕೆ ಕಾರಣ ಅಡ್ಡಿಸನ್ಸ್ ಕಾಯಿಲೆ.
ಎಮಿಲಿ ಡೋವರ್ ಎಂಬ ಹುಡುಗಿಯ ಜನನ ಸಹಜತೆ ಇಂದ ಮತ್ತು ಖುಷಿ ಇಂದ ಕೂಡಿದ್ದೇ ಆಗಿತ್ತು. ಆದರೆ ಆಕೆ ಹುಟ್ಟಿ ಇನ್ನೂ ಎರಡು ವಾರಗಳು ಆಗುತ್ತಿದ್ದಂತೆ ಆಕೆ ಅಸಹಜ ವೇಗದಲ್ಲಿ ಬೆಳವಣಿಗೆ ಹೊಂದಲು ಶುರು ಮಾಡಿದಳು. ಅವಳಿಗೆ ಕೇವಲ ನಾಲ್ಕು ತಿಂಗಳು ವಯಸ್ಸಾದಾಗಲೇ, ಆಕೆ ಆಗಲೇ ಒಂದು ವರ್ಷದ ಗಂಡು ಮಗುವಿನ ಗಾತ್ರ ಹೊಂದಿದ್ದಳು. ಆಕೆಗೆ 2 ವರ್ಷಗಳು ಆಗುತ್ತಿದ್ದಂತೆ, ಆಕೆ ಸ್ತನಗಳ ಮೊಗ್ಗು, ದೇಹದ ಗಂಧ ಮತ್ತು ಸಿಸ್ಟಿಕ್ ಮೊಡವೆ ಎಂದು ಗುರುತಿಸಲ್ಪಟ್ಟ ಚರ್ಮದ ಮೇಲಿನ ದಡ್ಡುಗಳನ್ನು ಆಕೆ ಬೆಳೆಸಿಕೊಂಡಿದ್ದಳು.

ಕೇವಲ ಅಡ್ಡಿಸನ್ಸ್ ಕಾಯಿಲೆ ಅಷ್ಟೇ ಅಲ್ಲದೆ, ಈಕೆಗೆ ಕಾಂಜೆನಿಟಲ್ ಅಡ್ರಿನಲ್ ಹೈಪರ್ಪ್ಲಾಸಿಯಾ, ಸೆಂಟ್ರಲ್ ಪ್ರೆಕಷಿಯಸ್ ಪುಬೆರ್ಟಿ ಮತ್ತು ಇನ್ನಷ್ಟು ಅಸ್ವಸ್ಥೆಗಳು ಇವೆ ಎಂದು ತಪಾಸಣೆ ಇಂದ ತಿಳಿದು ಬಂದಿದೆ.
ಎಮಿಲಿಯ ತಾಯಿಯು ತನ್ನ ಮಗಳು ತನ್ನ ದೇಹದ ಬಗ್ಗೆ ಸ್ವಲ್ಪ ಅರಿತಿದ್ದು, ಆಕೆ ಇತರೆ ಮಕ್ಕಳಿಗಿಂತ ವಿಭಿನ್ನ ಎಂದು ತಿಳಿದಿದ್ದಾಳೆ ಎನ್ನುತ್ತಾರೆ. ದುರದೃಷ್ಟವಶಾತ್, ಆ ಪುಟ್ಟ ಹುಡುಗಿಗೆ ಏನಾಗುತ್ತಿದೆ ಎಂದು ಅರ್ಥ ಆಗುವುದಿಲ್ಲ.
ಚಲನೆಯ ಕೊರತೆ ಮತ್ತು ಯಾವಾಗಲು ಕಾಣಿಸಿಕೊಳ್ಳುವ ನೋವಿನಿಂದ ಈಕೆಯ ಪ್ರತಿ ವಾರ ಫಿಸಿಯೋಥೆರಪಿ ಚಿಕಿತ್ಸೆ ಪಡೆಯಬೇಕಾಗಿದೆ. ಈಗ ಎಮಿಲಿಗೆ 5 ವರ್ಷ ವಯಸ್ಸಾಗಿದ್ದು, ಈಕೆ ಋತುಸ್ರಾವ ಹೊಂದುತ್ತಿದ್ದಾಳೆ. ಆದರೆ ಒಮ್ಮೆ ಹಾರ್ಮೋನ್ ರಿಪ್ಲೇಸೆಮೆಂಟ್ ಥೆರಪಿ ಶುರು ಮಾಡಿದ ಮೇಲೆ ಈಕೆ ಋತುಬಂಧ ಹೊಂದುತ್ತಾಳೆ. ಆದರೆ, 50 ವರ್ಷ್ ಮೇಲ್ಪಟ್ಟ ಹೆಂಗಸು ಅನುಭವಿಸುವ ಎಲ್ಲಾ ಅಡ್ಡಪರಿಣಾಮಗಳನ್ನೂ ಸಹ ಈಕೆ ಎದುರಿಸಬೇಕು.
