Link copied!
Sign in / Sign up
6
Shares

ನನ್ನ ೪ ತಿಂಗಳ ಮಗುವಿಗೆ ಸೆರೆಲ್ಯಾಕ್ ಅನ್ನು ನೀಡಬಹುದೇ?

ನಿಮ್ಮ ಮುದ್ದು ಕಂದಮ್ಮನಿಗೆ ಸೆರೆಲ್ಯಾಕ್ ಅನ್ನು ನೀಡಬೇಕೆ ಅಥವಾ ಬೇಡವೇ ಎಂಬ ಗೊಂದಲದಲ್ಲಿ ಸಿಲುಕಿರುವಿರಾ? ಇದು ತಮ್ಮ ಮಕ್ಕಳಿಗೆ ನಾಲ್ಕು ತಿಂಗಳು ತುಂಬಿದ ನಂತರ ಪ್ರತಿ ಪೋಷಕರ ಪ್ರಶ್ನೆ.

ಭಾರತದ ಮಕ್ಕಳ ವೈದ್ಯಕೀಯ ಶಾಸ್ತ್ರ ಮತ್ತು ಶಿಶು ಮತ್ತು ಮಹಿಳಾ ಅಭಿವೃದ್ಧಿ ಸಚಿವಾಲಯ ತಾಯಿಯು ಮಗುವಿಗೆ ಕನಿಷ್ಠ ೬ ತಿಂಗಳವರೆಗೆ ಎದೆಹಾಲನ್ನು ನೀಡಲು ಶಿಫಾರಸ್ಸು ಮಾಡುತ್ತದೆ. ಏಕೆಂದರೆ, ನಿಮ್ಮ ಎದೆಹಾಲು ಮಗುವಿಗೆ ಬೇಕಾದ ಕಾರ್ಬೋಹೈಡ್ರೇಟ್, ಕೊಬ್ಬಿನಾಮ್ಲ, ನೀರು, ಸಕ್ಕರೆ, ಪ್ರೊಟೀನ್, ಆಂಟಿಬಾಡೀಸ್ ಮತ್ತು ಮುಂತಾದ ಪೌಷ್ಟಿಕಾಂಶಗಳನ್ನು ಒಳಗೊಂಡಿರುತ್ತದೆ.

ನಿಮ್ಮ ಮಗುವಿಗೆ ೪ ತಿಂಗಳು ಆದ ನಂತರ ದಿನಕ್ಕೆ ೫ ರಿಂದ ೭ ಬಾರಿ ಪ್ರತಿ ಬಾರಿ ೧೧೮ ಮಿಲಿಲೀಟರ್ ನಷ್ಟು ಎದೆಹಾಲನ್ನು ಸೇವಿಸಬೇಕು. ೪ ತಿಂಗಳ ಮಗುವಿಗೆ ಸೆರೆಲ್ಯಾಕ್ ನೀಡಬಹುದೇ ಬೇಡವೇ ಎಂಬುದನ್ನು ತಿಳಿಯಲು ಮುಂದೆ ಓದಿ.

ನನ್ನ ೪ ತಿಂಗಳ ಮಗುವಿಗೆ ನಾನು ಸೆರೆಲ್ಯಾಕ್ ಅನ್ನು ನೀಡಬಹುದೇ?

ಈ ಸಮಯದಲ್ಲಿ ಶಿಶುವಿಗೆ ಅಗತ್ಯವಿರುವುದು ತಾಯಿಯ ಎದೆಹಾಲು ಮಾತ್ರ. ಆದಾಗ್ಯೂ, ನೀವು ನಿಮ್ಮ ಮಗುವಿಗೆ ಕೆಲವು ವಾರಗಳ ನಂತರ ಆರೋಗ್ಯಕರ ಉತ್ತಮ ಗುಣಮಟ್ಟದ ಸೆರೆಲ್ಯಾಕ್ ಅನ್ನು ನೀಡಬಹುದು. ಇದನ್ನು ನೀವು ಮಗುವಿಗೆ ನೀಡುವ ಮುನ್ನ ವೈದ್ಯರ ಬಳಿ ಕೇಳಿ ನಂತರ ಮಗುವಿಗೆ ನೀಡುವುದು ಉತ್ತಮ.

ಪ್ರಾರಂಭದಲ್ಲಿ ನಿಮ್ಮ ಮಗುವಿಗೆ ಒಂದು ಚಮಚ ಸೆರೆಲ್ಯಾಕ್ ಅನ್ನು ನೀಡಿರಿ. ನಂತರ ೨-೩ಚಮಚ ಸೆರೆಲ್ಯಾಕ್ ಅನ್ನು ನೀಡಲು ಪ್ರಾರಂಭಿಸಿ.

ನಿಮ್ಮ ಮಗುವು ಸೆರೆಲ್ಯಾಕ್ ಅನ್ನು ಸೇವಿಸಲು ಸಿದ್ಧವಿರುವ ೬ ಸೂಚನೆಗಳು

ನಿಮ್ಮ ಮಗುವು ಬೆಳೆಯುತ್ತಿದ್ದಂತೆ, ಕೆಲವು ಚಿಹ್ನೆಗಳನ್ನು ತೋರಿಸಲು ಶುರುಮಾಡುವುದು. ನಿಮ್ಮ ಮಗುವು ಸೆರೆಲ್ಯಾಕ್ ಅನ್ನು ಸೇವಿಸಲು ತಯಾರಾಗಿರುವ ಅಥವಾ ಇಲ್ಲ ಎಂಬುದನ್ನು ಇವುಗಳಿಂದ ತಿಳಿದುಕೊಳ್ಳಿ. ನಿಮ್ಮ ಮಗುವು ೪ ತಿಂಗಳ ಶಿಶುವಾಗಿದ್ದರೆ, ಈ ಚಿಹ್ನೆಗಳನ್ನು ಗಮನಿಸಿ.

೧.ನಿಮ್ಮ ತಟ್ಟೆಯಲ್ಲಿರುವ ಆಹಾರದ ಮೇಲೆ ಮಗುವಿಗೆ ಆಸಕ್ತಿ ಇದೆ.

೨.ನಿಮ್ಮ ಮಗುವು ತನ್ನ ಬೆರಳುಗಳನ್ನು ಬಾಯಿಯಲ್ಲಿ ಇರಿಸಿಕೊಳ್ಳುತ್ತಿರುತ್ತದೆ.

೩.ನಿಮ್ಮ ಮಗುವಿಗೆ ನೀವು ಎದೆಹಾಲುಣಿಸಿದ ನಂತರವೂ ಹಸಿವು ಎಂದು ತೋರಿಸುತ್ತಿದ್ದರೆ

೪.ನೀವು ಮಗುವಿನ ಬಾಯಿ ಹತ್ತಿರ ಚಮಚ ಅಥವಾ ನಿಮ್ಮ ಕೈಯನ್ನು ತೆಗೆದುಕೊಂಡು ಹೋದಾಗ ತಾನಾಗೇ ಬಾಯಿ ತೆಗೆದು ತಿನ್ನಲು ಪ್ರಯತ್ನಿಸುತ್ತಿದೆ ಎಂದರೆ

೫.ಮಗುವು ಉತ್ತಮವಾಗಿ ಕತ್ತು ಮತ್ತು ತಲೆಯ ನಿಯಂತ್ರಣವನ್ನು ತಾನಾಗೇ ಸರಿಯಾಗಿ ನಿಭಾಯಿಸಿದರೆ

೬.ಗೋಡೆ ಅಥವಾ ಬೇರೆ ವಸ್ತುಗಳ ಸಹಾಯದಿಂದ ನಿಮ್ಮ ಮಗುವು ತಾನಾಗೇ ಕುಳಿತುಕೊಂಡರೆ.

ಈ ಮೇಲಿನ ಚಿಹ್ನೆಗಳನ್ನು ನೀವು ನಿಮ್ಮ ಮಗುವಿನಲ್ಲಿ ಕಾಣದಿದ್ದರೆ, ಇನ್ನು ಸ್ವಲ್ಪ ವಾರಗಳು ಕಾಯುವುದು ಒಳ್ಳೆಯದು.

ಬೇಗನೆ ಏಕೆ ನಾನು ಸೆರೆಲ್ಯಾಕ್ ಅನ್ನು ನೀಡಬಾರದು?

೩ ಮತ್ತು ೪ನೇ ತಿಂಗಳು ನಿಮ್ಮ ಮಗುವಿನ ಬೆಳವಣಿಗೆಯ ಪ್ರಮುಖ ಹಂತಗಳು. ಈ ಕೆಳಗಿನ ಕಾರಣಗಳಿಗೆ ನೀವು ಮಗುವಿಗೆ ಬೇಗನೆ ಘನ ಪದಾರ್ಥಗಳನ್ನು ನೀಡಬಾರದು.

೧.ಮಗುವು ಘನ ಪದಾರ್ಥಗಳನ್ನು ಆಗೆಯೇ ನುಂಗಿದರೆ ಅದು ತುಂಬಾ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ.

೨.ಮಗುವಿನಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಸರಿಯಾಗಿ ಅಭಿವೃದ್ಧಿ ಆಗದಿರುವ ಕಾರಣ ಮಗುವು, ರೋಗಕ್ಕೆ, ಸೋಂಕಿಗೆ, ಮತ್ತು ಅಲರ್ಜಿಗೆ ಒಳಗಾಗಬಹುದು.

೩.ಘನ ಪದಾರ್ಥಗಳು ಮಗುವಿನಲ್ಲಿ ಸಂಪೂರ್ಣವಾಗಿ ಜೀರ್ಣವಾಗದೇ ಇರಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon