Link copied!
Sign in / Sign up
139
Shares

3, 6, 9 ತಿಂಗಳು ವಯಸ್ಸಿನ ಮಗುವಿಗೆ ಸಂಪೂರ್ಣ ಆಹಾರ ವೇಳಾಪಟ್ಟಿ!

6 ತಿಂಗಳ ಮಗುವಿಗೆ ಆಹಾರ

ನಿಮ್ಮ ಮುದ್ದು ಕಂದಮ್ಮಗಳಿಗೆ ಎದೆಹಾಲಿನ ಜೊತೆಗೆ, ಘನರೂಪದ ಆಹಾರವನ್ನು ಯಾವ ವಯಸ್ಸಿನ್ನಿಂದ ಪ್ರಾರಂಭಿಸಬೇಕು ಎಂದು ಚಿಂತಿಸುತ್ತಿದ್ದೀರಾ? ಯಾವ ವಿಧದ ಘನರೂಪದ ಆಹಾರವನ್ನು ನೀಡಬೇಕು ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ಮಕ್ಕಳ ತಜ್ಞರ ಸಲಹೆ. ನಿಮ್ಮ ಮಗುವು ಜನಿಸಿದ ದಿನದಿಂದ ೬ ತಿಂಗಳಿನವರೆಗೆ, ಕೇವಲ ಎದೆ ಹಾಲನ್ನು ಮಾತ್ರ ನೀಡಿ. ೬ ತಿಂಗಳಿನ ನಂತರ ಕ್ರಮೇಣವಾಗಿ, ಘನ ಆಹಾರವನ್ನು ಪ್ರಾರಂಭಿಸಬೇಕು. ಘನ ಆಹಾರದ ಜೊತೆಗೆ ತಾಯಿಯ ಎದೆ ಹಾಲ್ಲನ್ನು, ಕನಿಷ್ಠ ೨ ವರ್ಷಗಳವರೆಗೆ ನೀಡಬೇಕು. ಹೀಗೆ ಮಾಡಿದ್ದಲ್ಲಿ, ಮಗುವಿನ ರೋಗ ನಿರೋಧಕ ಶಕ್ತಿ ವೃದ್ಧಿಸಿ, ಶಾರೀರಿಕ ಹಾಗೂ ಮಾನಸಿಕ ಬೆಳೆವಣಿಗೆಗೆ ಸಹಾಯವಾಗುತ್ತದೆ.

ಹಾಗಾದರೆ ಬನ್ನಿ, ವೈದ್ಯರು ಹೇಳಿರುವಂತೆ ಯಾವ ರೀತಿಯ ಘನರೂಪದ ಆಹಾರವನ್ನು, ಯಾವ ಸಮಯದಲ್ಲಿ ನಿಮ್ಮ ಕೂಸಿಗೆ ನೀಡಬೇಕು ಎಂದು ತಿಳಿಯೋಣ.

ನಿಮ್ಮ ಮಗುವಿಗೆ ೬ ತಿಂಗಳಿನ ನಂತರ, ಯಾವ ಆಹಾರದಿಂದ ಪ್ರಾರಂಭಿಸಬೇಕು ಎಂಬ ಪಟ್ಟಿ ಇಲ್ಲಿದೆ.

ಮೊದಲನೆಯ ದಿನ :

ಮೊದಲ ಬಾರಿಗೆ, ನೀವು ಯಾವುದೇ ಆಹಾರವನ್ನು ನಿಮ್ಮ ಕಂದಮ್ಮಗಳಿಗೆ ನೀಡಬೇಕಾದ್ದಲ್ಲಿ, ಒಂದು ಚಮಚಕ್ಕಿಂತ ಜಾಸ್ತಿ ತಿನ್ನಿಸಬೇಡಿ. ಉದಾ: ಕಿವುಚಿದ ಅನ್ನ , ಬೀಳೆ ಅಥವಾ ಯಾವುದೇ ಹಣ್ಣನ್ನು ಒಂದು ಚಮಚ ಮೀರದಂತೆ ಎಚ್ಚರವಹಿಸಿ. ಹೀಗೆ ಮಾಡಿದ್ದಲ್ಲಿ, ನಿಮ್ಮ ಮಗುವಿಗೆ ಹೊಸದಾಗಿ ಪ್ರಾರಂಭಿಸಿದ ಆಹಾರದಿಂದ, ಯಾವುದಾದರು ಅಡ್ಡ ಪರಿಣಾಮಗಳಾಗುತ್ತಿದೆಯೇ ಎಂದು ಗಮನಿಸಿ. ಉದಾ: ಬೇದಿ, ಕೆಮ್ಮು, ನೆಗಡಿ, ಉಬ್ಬಸ, ಜ್ವರ ಇತ್ಯಾದಿ. ಈ ರೀತಿಯ ಸಮಸ್ಯೆಗಳು  ಕಂಡುಬಂದ್ದಲ್ಲಿ, ಆ ಆಹಾರವನ್ನು ಕೂಡಲೇ ನಿಲ್ಲಿಸಿ, ಹತ್ತಿರದ ವೈದ್ಯರನ್ನು ಸಂಪರ್ಕಿಸಿ. ಯಾವುದೇ ಅಡ್ಡ ಪರಿಣಾಮಗಳು ಕಾಣದ್ದಿದ್ದಲ್ಲಿ, ಮಗುವಿಗೆ ಅದೇ ಆಹಾರವನ್ನು ಎದೆಹಾಲಿನೊಂದಿಗೆ ಮುಂದುವರೆಸಿ.

ಎರಡನೆಯ ದಿನ:

ಮೊದಲನೆ ದಿನ ನೀಡಿದ ಆಹಾರವನ್ನು, ೨ ಚಮಚಕ್ಕೆ ಏರಿಸಿ, ಎದೆ ಹಾಲಿನೊಂದಿಗೆ ಮುಂದುವರಿಸಿ.

ಮೂರನೆಯ ದಿನ:

ಪ್ರಾರಂಭಿಸಿದ ಆಹಾರವನ್ನು ೩ ಚಮಕ್ಕೆ ಏರಿಸಿ, ದಿನಕ್ಕೆ ಎರಡು ಬಾರಿ ನೀಡಿ. ನಿಮ್ಮ ಮಗುವಿಗೆ ಘನರೂಪದ ಆಹಾರವನ್ನು ಪ್ರಾರಂಭಿಸಿದ ಕೂಡಲೇ, ವಿಧ ವಿಧದ ಆಹಾರವನ್ನು ತಿನ್ನಿಸಬೇಡಿ. ಒಂದೊಂದೇ ಆಹಾರದಿಂದ ಪ್ರಾರಂಭಿಸಿ, ಕ್ರಮೇಣ ಆಹಾರದ ವಿಧವನ್ನು ಹೆಚ್ಚಿಸಿ. ಮಗುವಿಗೆ ಹೆಚ್ಚಿನ ಪ್ರಮಾಣದ್ದಲ್ಲಿ ಆಹಾರವನ್ನು ತಿನ್ನಿಸಿ, ತಮ್ಮ ಮಗುವು ಮುದ್ದು ಮುದ್ದಾಗಿ ಕಾಣಲಿ ಎಂಬ ಆಸೆ ಹೊಂದಿರುವ ತಾಯಂದಿರೇ ಎಚ್ಚರ. ಹೀಗೆ ಒಂದೇ ಬಾರಿಗೆ, ಮಗುವಿನ ಆಹಾರದ ಪ್ರಮಾಣವನ್ನು ಹೆಚ್ಚಿಸಿದರೆ , ಮಗುವಿನ ಪಚನ ಶಕ್ತಿಯು ಕಡಿಮೆಯಾಗಿ ಅಜೀರ್ಣ, ಹೊಟ್ಟೆ ನೋವು, ವಾಂತಿ, ಬೇದಿ, ಜ್ವರ ಮುಂತಾದ ಖಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಕ್ರಮೇಣವಾಗಿ ಮಗುವಿನ ಆಹಾರವನ್ನು ಹೆಚ್ಚಿಸಿ.

ಯಾವ ವಿಧದ ಘನರೂಪದ ಆಹಾರವನ್ನು ಮಕ್ಕಳಿಗೆ ನೀಡಬೇಕು ಎಂದು ತಿಳಿದುಕೊಳ್ಳಲು ಆತುರವೇ? ಇಲ್ಲಿದೆ ನೋಡಿ ವೈದ್ಯರ ಉತ್ತರ

ತರಕಾರಿಗಳಾದ ಕುಂಬಳಕಾಯಿ( ಸಿಹಿ ಕುಂಬಳ), ಆಲುಗೆಡ್ಡೆ, ಸಿಹಿ ಗೆಣಸು, ಅವರೇಕಾಳು, ಕೆಂಬೇರು(ಕ್ಯಾರಟ್) ಇತ್ಯಾದಿ. ಈ ತರಕಾರಿಗಳ್ಳನ್ನು ಚೆನ್ನಾಗಿ ಬೇಯಿಸಿ, ಕಿವುಚಿ ಮುದ್ದೆಯಂತೆ ತಿನ್ನಿಸಬಹುದು.

ಹಣ್ಣುಗಳಾದ ಪರಂಗಿ ಹಣ್ಣು, ಸೇಬು, ಬಾಳೆಹಣ್ಣು, ಮಾವಿನ ಹಣ್ಣು, ಪೀಚ್ ಹಣ್ಣು, ಬೆಣ್ಣೆ ಹಣ್ಣುಗಳ್ಳನ್ನು ನೀಡಬಹುದು. ಹಣ್ಣಿನಲ್ಲಿ ವಿಟಮಿನ್, ಉತ್ಕರ್ಷಣ ನಿರೋಧಕಗಳು( anti-oxidants), ಖನಿಜಗಳು, ಒಮೇಗಾ ಕೊಬ್ಬಿನಾಮ್ಲಗಳು

ತುಂಬಿರುವುದರಿಂದ, ನಿಮ್ಮ ಕಂದಮ್ಮಗಳ ಸಂಪೂರ್ಣ ಬೆಳವಣಿಗೆಗೆ ಸಹಕಾರಿಯಾಗಲಿದೆ. ಆದರೆ ಒಂದು ಬಾರಿಗೆ, ಒಂದೇ ಹಣ್ಣನ್ನು ನೀಡಬೇಕು. ಹಣ್ಣನ್ನು ಕಿವುಚಿ/ ರುಬ್ಬಿ ಪಾನಕದಂತೆಯು ಸಹ ನೀಡಬಹುದು.

ಇನ್ನು ಧಾನ್ಯಗಳ ಪಟ್ಟಿಯ ಕಡೆ ಬಂದರೆ, ತೋಕೆ ಗೋಧಿ(Oats), ಅಕ್ಕಿ, ಜವೆಗೋಧಿ( barley)ಯನ್ನು ನೀಡಬಹುದು.

ಅಕ್ಕಿಯನ್ನು ಚೆನ್ನಾಗಿ ಬೇಯಿಸಿ, ಅದಕ್ಕೆ ಎದೆ ಹಾಲನ್ನು ಮಿಶ್ರಿಣ ಮಾಡಿ ತಿನ್ನಿಸಬಹುದು, ಇಲ್ಲವೆ ಬೇಳೆ ಕಟ್ಟಿನ ಸಾರಿನೊಂದಿಗು ಸಹ ನೀಡಬಹುದು. ಇದಕ್ಕಿಂತ ಸುಲಭ ಉಪಾಯವೇನೆಂದರೆ ಅಕ್ಕಿ/ ತೋಕೆ ಗೋಧಿಯನ್ನು, ಮೇಲೆ ಹೇಳಿದ ತರಕಾರಿಗಳೊಂದಿಗೆ ಪಾತ್ರೆಯಲ್ಲಿ ಚೆನ್ನಾಗಿ ಬೇಯಿಸಿ,  ಎರಡನ್ನು ಕಿವುಚಿ, ಅದರಿಂದ ಬರುವ ನೀರನ್ನು ತೆಗೆದು, ಮುದ್ದೆಯಂತಿರುವ ಆಹಾರವನ್ನು ಮಗುವಿಗೆ ಕ್ರಮೇಣ ನೀಡಿದ್ದಲ್ಲಿ, ಅದರ ಜೀರ್ಣ ಶಕ್ತಿ ವೃದ್ಧಿಸುತ್ತದೆ.

ಮಾಂಸಾಹಾರ ತಿನ್ನುವ ಕುಟುಂಬದ್ದಲ್ಲಿ , ಮಗುವಿಗೆ ಮಾಂಸ ಅಥವಾ ಮೀನನ್ನು ಪ್ರಾರಂಭಿಸುವ ಮೊದಲು ವೈದ್ಯರ ಸಲಹೆಯನ್ನು ಪಡೆಯಿರಿ. ಮೀನಿನ್ನಲ್ಲಿ ಅತಿ ಹೆಚ್ಚಿನ ಪ್ರಮಾಣದ ಪಾದರಸವಿರುವುದರಿಂದ , ನಿಮ್ಮ ಎಳೆ ಕಂದಮ್ಮಗಳಿಗೆ ಮೀನನ್ನು ನೀಡದಿರಿ. ಇಲ್ಲವಾದ್ದಲ್ಲಿ ಪಾದರಸದಿಂದ, ಮಗುವಿನ ಮೆದುಳಿನ ಬೆಳವಣಿಗೆ ಕುಂಟಿತವಾಗಿ ನರಮಂಡಲದ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ. ಮಾಂಸವನ್ನು ತಿನ್ನಿಸಲೇ ಬೇಕು ಎನ್ನುವ ಪೋಷಕರು, ದಯವಿಟ್ಟು ಮಾಂಸವನ್ನು ಚೆನ್ನಾಗಿ ಬೇಯಿಸಿ, ಅದರಿಂದ ಬರುವ ಸಾರು(soup)ಅನ್ನು ಮಾತ್ರ ಮಕ್ಕಳಿಗೆ ತಿನ್ನಿಸುವುದು ಸೂಕ್ತ.

ನಿಮ್ಮ ೬ ತಿಂಗಳಿನ ಮಗುವಿಗೆ ಮಾದರಿ/ಪರಿಪೂರ್ಣ ಆಹಾರದ ಪಟ್ಟಿಇಲ್ಲಿದೆ:

೧. ನಿಮ್ಮ ಮಗುವಿಗೆ ಮುಂಜಾನೆಯ ತಿಂಡಿಗೆ, ಎದೆ ಹಾಲನ್ನು ನೀಡಬೇಕು ಹಾಗೂ ಹಣ್ಣಿನ/ ತರಕಾರಿಯ, ಪೀತ ವರ್ಣ ದ್ರವ್ಯ(puree)ಯನ್ನು ಸಹ ನೀಡಬಹುದು.

೨. ಮಧ್ಯಾಹ್ನದ ಊಟಕ್ಕೆ ಚೆನ್ನಾಗಿ ಬೇಯಿಸಿದ ಅನ್ನ ಹಾಗೂ ತರಕಾರಿಯನ್ನು ನೀಡಿ.

೩. ಸಂಜೆಯ ವೇಳೆ ಹಣ್ಣು ಅಥವಾ ತರಕಾರಿಯ ತಿಳಿ( soup) ಯನ್ನು ನೀಡಬಹುದು. ಆದರೆ ಇದು ಕಡ್ಡಾಯವಲ್ಲ. ಇಲ್ಲವಾದರೆ ಎದೆ ಹಾಲನ್ನು ನೀಡಿದರೆ ಸಾಕು.

೪. ರಾತ್ರಿಯ ಊಟಕ್ಕೆ ಹಣ್ಣು/ ತರಕಾರಿಯ ತಿಳಿಯನ್ನು ನೀಡಿ. ಇವೆಲ್ಲವುಗಳ ಮಧ್ಯೆ, ನಿಮ್ಮ ಮಗುವಿಗೆ ಎಷ್ಟು ಸಲ ಸಾಧ್ಯವೋ, ಅಷ್ಟು ಸಲ ಎದೆ ಹಾಲನ್ನು ಕುಡಿಸಿ, ನಿಮ್ಮ ಮುದ್ದು ಕಂದಮ್ಮಗಳ ಆರೋಗ್ಯವನ್ನು ಕಾಪಾಡಿ.

ಈ ಲೇಖನ ನಿಮಗೆ ಉಪಯುಕ್ತವೆನಿಸಿದರೆ, ನಿಮ್ಮಂತೆ ಮಗುವಿನ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಸಾವಿರಾರು ತಾಯಂದಿರೊಂದಿಗೆ ಇದನ್ನು ಹಂಚಿಕೊಳ್ಳಿ.

 

8 ತಿಂಗಳ ಮಗುವಿಗೆ ಆಹಾರ

ನಿಮ್ಮ ಮಗುವು ನಿಮ್ಮ ತಟ್ಟೆಗೆ ಕೈ ಹಾಕುತ್ತಿರುವುದೇ? ತಟ್ಟೆಯಲ್ಲಿರುವ ಆಹಾರವನ್ನು ತಿನ್ನಲು ಬಯಸುತ್ತಿರುವುದೇ? ಇದನ್ನು ನೋಡಲು ಮುದ್ದಾಗಿ ಕಾಣುವುದು. ಇದು  ನಿಮ್ಮ ಮಗುವು ಆಹಾರವನ್ನು ಸೇವಿಸಲು ತಯಾರಾಗಿರುವುದರ ಸೂಚನೆ ಆಗಿರಬಹುದು. ಅದು ಏನೇ ಆಗಿರಲಿ, ನಿಮ್ಮ ಮಗುವಿಗೆ ಈಗ ಹೆಚ್ಚಿನ ಪೌಷ್ಟಿಕಾಂಶಗಳ ಅಗತ್ಯವಿದೆ. ನಿಮ್ಮ ಮಗುವು ಈ ಸಮಯದಲ್ಲಿ ತೆವಳುವುದು, ಆಟವಾಡುವುದು, ಕುಳಿತುಕೊಳ್ಳುವುದು ಮುಂತಾದ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತಿರುವುದು. ನಿಮ್ಮ ೮ ತಿಂಗಳ ಕಂದಮ್ಮನಿಗೆ ನೀವು ನೀಡಿತ್ತಿರುವ ಎದೆಹಾಲು ಸಾಲದೇ ಇರಬಹುದು, ಅದಕ್ಕಾಗಿಯೇ ಈ ಸರಳ ರುಚಿಕರ ಮತ್ತು ಆರೋಗ್ಯಕರ ತಿನಿಸುಗಳು ನಿಮ್ಮ ಬೆಳೆಯುತ್ತಿರುವ ಶಿಶುಗಾಗಿ.

೧.ಎದೆಹಾಲು ಅಥವಾ ಫಾರ್ಮುಲಾ ಹಾಲು

ನಿಮ್ಮ ಮಗುವು ಬೆಳೆಯುತ್ತಿರುವುದರಿಂದ ಅವನಿಗೆ/ಅವಳಿಗೆ ಎದೆಹಾಲು ನೀಡುವುದನ್ನು ಮುಂದುವರೆಸಿ. ಎದೆಹಾಲು ಮಗುವಿನ ಪೌಷ್ಟಿಕಾಂಶಗಳ ಪ್ರಧಾನ ಸೇವನೆಯಾಗಿದೆ. ಎದೆಹಾಲು ಜೊತೆಗೆ ನೀವು ಘನ ಆಹಾರವನ್ನು ನೀಡಬಹುದು.

೨.ಸಿಹಿ ಗೆಣಸು ಗಂಜಿ
ನಿಮಗೆ ಬೇಕಾಗಿರುವುದು

- ೨ ಸಿಹಿ ಗೆಣಸು(ಕತ್ತರಿಸಿ ಬೇಯಿಸಿಕೊಳ್ಳಿ)

- ೧ ಚಮಚ ಬೆಲ್ಲ (ತುರಿದು ಕೊಂಡಿರುವುದು)

- ೧ ಬಟ್ಟಲು ಹಾಲು

- ಸ್ವಲ್ಪ ಏಲಕ್ಕಿ ಪುಡಿ

ತಯಾರಿಸುವುದು ಹೇಗೆ?

೧.ಬೇಯಿಸಿದ ಸಿಹಿ ಗೆಣಸನ್ನು ಚೆನ್ನಾಗಿ ಕಿವುಚಿ.

 

೨.ಬೇರೆ ಪಾತ್ರೆಯಲ್ಲಿ ಹಾಲನ್ನು ಕುದಿಸಿ, ಇದಕ್ಕೆ ಕಿವುಚಿದ ಗೆಣಸು ಮತ್ತು ಏಲಕ್ಕಿ ಪುಡಿಯನ್ನು ಹಾಕಿ. ನಿರಂತರವಾಗಿ ತಿರುಗಿಸುತ್ತಿರಿ.

೩.ಇದಕ್ಕೆ ಬೆಲ್ಲವನ್ನು ಸೇರಿಸಿ, ಒಲೆಯನ್ನು ಕೆಡಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ಆರಲು ಬಿಡಿ, ನಂತರ ನಿಮ್ಮ ಮುದ್ದು ಕಂದಮ್ಮನಿಗೆ ತಿನ್ನಿಸಿ.

೩.ಹಸಿರುಕಾಳು ಖಿಚಿಡಿ
ನಿಮಗೆ ಬೇಕಾಗಿರುವುದು

- ೧ ಚಮಚ ಹಸಿರು ಕಾಳು (ಹಸಿರು ಬೆಳೆ, ಒಂದು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ)

- ಚಿಟಕಿ ಅರಿಶಿಣ

- ಅರ್ಧ ಬಟ್ಟಲು ಅಕ್ಕಿ

- ೧ ಬಟ್ಟಲು ನೀರು

- ರುಚಿಗೆ ಉಪ್ಪು(ಖಡ್ಡಾಯವಲ್ಲ)

ಮಾಡುವುದು ಹೇಗೆ?

೧.ಅಕ್ಕಿಯನ್ನು ತೊಳೆದು, ನೀರನ್ನು ಸೋರಿಸಿ, ಎಲ್ಲಾ ಪದಾರ್ಥಗಳನ್ನು ಕುಕ್ಕರ್ ನಲ್ಲಿ ಹಾಕಿ, ೩ ಕೂಗು(ವಿಸ್ಟೆಲ್) ಬರುವವರೆಗು ಬೇಯಿಸಿ.

೨.ನಂತರ ಚೆನ್ನಾಗಿ ಮಿಶ್ರಿಸಿ, ಚೆನ್ನಾಗಿ ಚಿವುಕಿ ಮಗುವಿಗೆ ತಿನ್ನಲು ನೀಡಿ.

೪.ಕ್ಯಾರಟ್ ಮತ್ತು ಸೇಬಿನ ಸಾರು(ಸೂಪ್)  ಆಲೂಗಡ್ಡೆ ಜೊತೆಗೆ
ನಿಮಗೆ ಬೇಕಾಗಿರುವುದು

- ಅರ್ಧ ಬಟ್ಟಲು ಸೇಬು(ಸಣ್ಣಗೆ ಕತ್ತರಿಸುವುದು)

- ೨ ಚಮಚ ಕ್ಯಾರಟ್(ತುರಿದಿರುವುದು)

- ಕಾಲು ಬಟ್ಟಲು ಆಲೂಗಡ್ಡೆ(ಸಣ್ಣಗೆ ಕತ್ತರಿಸಿರುವುದು)

https://dynamic-cdn.tinystep.in/image/admin-panel-image-427c5bac-cde8-40af-92e6-84a052175106-1527249828514.jpeg

- ೧ ಚಮಚ ಎಣ್ಣೆ

- ೧ ಚಮಚ ಈರುಳ್ಳಿ(ಸಣ್ಣಗೆ ಕತ್ತರಿಸಿರುವುದು)

- ೧ ಬಟ್ಟಲು ನೀರು

ತಯಾರಿಸುವ ವಿಧಾನ

೧.ಎಣ್ಣೆಯನ್ನು ಕುಕ್ಕರ್ ಗೆ ಹಾಕಿ, ಎಣ್ಣೆ ಕಾದ ನಂತರ ಈರುಳ್ಳಿಯನ್ನು ಹಾಕಿ, ಅರ್ಧ ನಿಮಿಷ ಉರಿಯಿರಿ.

೨.ಉಳಿದ ಪದಾರ್ಥಗಳನ್ನು ಕುಕ್ಕರ್ ಗೆ ಹಾಕಿ, ೩ ಕೂಗು ಕೂಗುವವರೆಗು ಬೇಯಿಸಿ.

೩.ನಂತರ ಚೆನ್ನಾಗಿ ಮಿಶ್ರಣ ಮಾಡಿ, ಕಿವುಚಿ ಮಗುವಿಗೆ ತಿನ್ನಲು ನೀಡಿ.

 

9 ತಿಂಗಳ ಮಗುವಿಗೆ ಆಹಾರ

ಒಂಭತ್ತು ತಿಂಗಳು ಪ್ರಾಯವಾದ ಮಗುವು ಹಿರಿಯರು ಸೇವಿಸುವ ಸಾಧಾರಣ ಎಲ್ಲ ಘನ ಆಹಾರಗಳನ್ನು ತಿನ್ನಬಲ್ಲದು. ದಿನಕ್ಕೆ ಮೂರು ಬಾರಿಯಾದರೂ, ಗಡದ್ದಾಗಿ ಹೊಟ್ಟೆ ತುಂಬ ತಿನ್ನಬಹುದು, ಎಂದರೆ ಮೊದಲು ನೀಡುತ್ತಿದ್ದ ಆಹಾರಗಳಿಗಿಂತ ಹೆಚ್ಚು ಪ್ರಮಾಣದ ಆಹಾರಗಳನ್ನು ನೀವು ಮಗುವಿಗೆ ನೀಡಬೇಕು. ಕೇವಲ ಬೇಳೆ - ಕಾಳುಗಳನ್ನು ಮಾತ್ರ ನೀಡದೆ, ಹಣ್ಣು ತರಕಾರಿಗಳನ್ನು ಕೂಡ ಮಗುವಿನ ಆಹಾರ ಪದ್ಧತಿಗಳಲ್ಲಿ ಅಳವಡಿಸಿಕೊಳ್ಳಬೇಕು.

ಮಾಂಸಾಹಾರಿಗಳಾಗಿದ್ದರೆ, ಮಗುವಿಗೆ ಮೊಟ್ಟೆ, ಮೀನು ಹಾಗೂ ಸ್ವಲ್ಪ ಮಟ್ಟಿಗೆ ಮಾಂಸವನ್ನು ನೀಡಬಹುದು.ಆದರೆ ಇದರೊಂದಿಗೆ ಮಗುವಿಗೆ ನಿಮ್ಮ ಎದೆಹಾಲನ್ನು ನೀಡಬೇಕೆನ್ನುವುದನ್ನು ಮಾತ್ರ ಮರೆಯದಿರಿ. ಆಹಾರ ಸೇವಿಸಲು ನಿರಾಕರಿಸುವ, ನಿಮ್ಮ ಮುದ್ದು ಮಕ್ಕಳಿಗೆ ಅಗತ್ಯವಾದ ಪೋಷಕಾಂಶಗಳು ನೀವು ನೀಡುವ ಎದೆಹಾಲಿನಿಂದಲೇ ಲಭ್ಯವಾಗಬೇಕಷ್ಟೆ...?

ನಿಮ್ಮ ಮಗುವಿನ ದೈನಂದಿನ ಆಹಾರ ಪದ್ಧತಿಯು ಹೀಗಿರಲಿ.

 

ಸೋಮವಾರ

ಬೆಳಗ್ಗಿನ ಉಪಹಾರಗಳನ್ನು ತಿನ್ನಿಸುವ ಮೊದಲೇ ಎದೆಹಾಲನ್ನು ನೀಡಿರಿ. ಉಪಹಾರವು ಹೊಗೆಯಾಡುವ ಇಡ್ಲಿ ಅಥವಾ ‘ಘಂ’ ಎನ್ನಿಸುವ ದೋಸೆಯಾಗಿರಲಿ. ಉಪಹಾರಗಳನ್ನು ಸೇವಿಸಲು ಉತ್ಸುಕತೆ ತೋರುವ ಮಗುವಾಗಿದ್ದರೆ, ಸೇವಿಸಲಿರುವ ತಿಂಡಿಯ ಆಯ್ಕೆಯನ್ನು ಮಗುವಿಗೆ ನೀಡಿರಿ. ನೀಡಿದ ಎಲ್ಲ ತಿಂಡಿಗಳನ್ನು ಮಕ್ಕಳು ಒಮ್ಮೆಗೇ ಸೇವಿಸದು. ಸ್ವಲ್ಪ ಸ್ವಲ್ಪವಾಗಿ ತಿಂಡಿಗಳನ್ನು ಸೇವಿಸುವ ಮಗುವಿಗೆ, ಮಧ್ಯಾಹ್ನದ ವೇಳೆಯಲ್ಲಿ ತರಕಾರಿಗಳಿಂದ ತುಂಬಿದ ಕಿಚಡಿಗಳನ್ನು ನೀಡಿರಿ. ಸಂಜೆಯಾಗುತ್ತಿದ್ದಂತೆಯೇ ಹಣ್ಣುಗಳಿಂದ ತುಂಬಿದ ಪಾತ್ರೆಗಳನ್ನು ಮಗುವಿಗೆ ನೀಡುವುದರೊಂದಿಗೆ ಎದೆಹಾಲನ್ನು ಕುಡಿಸಬೇಕು. ರಾತ್ರಿಯ ಊಟಕ್ಕಾಗಿ ಪುಲಾವ್ ಅನ್ನು ಪರೀಕ್ಷಿಸಬಹುದು. ಮಗುವಿಗೆ ಎದೆಹಾಲನ್ನುಣಿಸಿ ಮಲಗಿಸಿರಿ.

ಮಂಗಳವಾರ

ದಿನದ ಆಹಾರ ಎದೆಹಾಲಿನೊಂದಿಗೆ ಪ್ರಾರಂಭಿಸಿ. ಇವತ್ತು ಉಪಹಾರಕ್ಕಾಗಿ ‘ಕೇಕ್’ ನೀಡಿರಿ. ಬೆಣ್ಣೆಯಿಂದ ತಯಾರಿಸಿದ ಉತ್ತಮ ತಿಂಡಿಗಳನ್ನು ನೀಡುವುದರ ಜತೆಗೇ, ತಾಯಿಯ ಎದೆ ಹಾಲನ್ನು ಸೇವಿಸಲು ನೀಡಿರಿ. ಮಧ್ಯಾಹ್ನದ ಊಟಕ್ಕೆ ಅನ್ನ ಮತ್ತು ತರಕಾರಿಗಳ ಪದಾರ್ಥಗಳನ್ನು ಉಣಬಡಿಸಿ. ನಾಲ್ಕು ಗಂಟೆಗೆ ಎದೆಹಾಲಿನೊಂದಿಗೆ, ಬೇಯಿಸಿದ ತರಕಾರಿಗಳನ್ನು ನೀಡಿರಿ. ದಿನವೂ ಸಂಪೂರ್ಣ ಪೋಷಕಾಂಶಗಳು ದೊರೆಯುವಂತೆ, ಇವತ್ತು ರಾತ್ರಿ ಚಪಾತಿ ಹಾಗೂ ಪಲ್ಯವನ್ನು ತಿನ್ನಿಸಿರಿ. ಮಲಗುವ ಮುನ್ನ ಎದೆಹಾಲನ್ನು ನೀಡಲು ಮರೆಯದಿರಿ.

ಬುಧವಾರ

ದಿನನಿತ್ಯದ ಚಟುವಟಿಕೆಯಂತೆ ಎದ್ದೊಡನೆಯೇ ತಾಯಿಯ ಎದೆಹಾಲು. ಬಾಳೆಹಣ್ಣು ಸೇರಿಸಿ ತಯಾರಿಸಿದ ಗಂಜಿಯನ್ನು ಬೆಳಗಿನ ತಿಂಡಿಗಾಗಿ ನೀಡಿರಿ. ಪುನಃ ಎದೆಹಾಲನ್ನು ಕುಡಿಸಿರಿ. ಮಧ್ಯಾಹ್ನದ ಊಟಕ್ಕೆ ಮೀನು ಅಥವಾ ಚಿಕನನ್ನು ನೀಡಿರಿ. ಮಗುವಿಗೆ ಖಾರ ಪದಾರ್ಥಗಳನ್ನು ನೀಡಲು ಯಾವುದೇ ಹಿಂಜರಿಕೆ ಪಡಬೇಕಾಗಿಲ್ಲ. ಸಂಜೆಯಾಗುತ್ತಿದ್ದಂತೆ ಬ್ರೆಡ್ಡಿನ ಸವಿ ತೋರಿಸಿರಿ. ರಾತ್ರಿಯ ಊಟಕ್ಕೆ ತುಪ್ಪ ಸವರಿದ ದೋಸೆಯಾಗಿದ್ದರೆ...? ತದನಂತರ ಎದೆಹಾಲುಣಿಸಿ ಮಲಗಿಸಿರಿ.

ಗುರುವಾರ

ಮಗು ಎದ್ದೊಡನೆಯೇ ಎದೆಹಾಲು..! ತರಕಾರಿಗಳಿಂದ ತುಂಬಿದ ಬ್ರೆಡ್ ಟೋಸ್ಟ್ ಇವತ್ತಿನ ಉಪಾಹಾರವಾಗಿರಲಿ. ಸ್ವಲ್ಪ ಸಮಯದ ಬಳಿಕ ಪುನಃ ಎದೆಹಾಲು ಉಣಿಸಿ. ಮಧ್ಯಾಹ್ನದ ಊಟಕ್ಕೆ ‘ಮಸಾಲಾ ಪೊಂಗಲ್’ ಆಗಿದ್ದರೆ ಹೇಗೆ..?ಮಗುವಿನ ಸಂಜೆಯ ತಿಂಡಿಗೆ ಮಗುವಿನ ಇಚ್ಛೆಗೆ ಅನುಗುಣವಾಗಿ, ತರಕಾರಿ ಸೂಪು ಅಥವಾ ಚಿಕನ್ ಸೋಪು ನೀಡಿದರಾಗದೆ ! ರಾತ್ರಿಯಾಗುತ್ತಿದ್ದಂತೆಯೇ ಆಲೂ ಪರಾಟ ಅಥವಾ ಪನೀರ್ ಪರಾಟ...!! (ನನ್ನ ಬಾಯಲ್ಲೂ ನೀರೂರುತ್ತಿದೆ) ಎದೆಹಾಲುಣಿಸಿ ಮಲಗಿಸಿ.

ಶುಕ್ರವಾರ

ಖಂಡಿತವಾಗಿಯೂ ಮಗುವು ಎದ್ದೊಡನೆಯೇ ತಾಯಿಯ ಅಮೃತ...! ಇವತ್ತು ಉಪ್ಮಾ (ಸಜ್ಜಿಗೆ) ಯಾಕಾಗಬಾರದು ? ಒಂದು ಗಂಟೆಯ ಬಳಿಕ ಎದೆಹಾಲನ್ನು ನೀಡಿರಿ. ಮಧ್ಯಾಹ್ನ ಊಟಕ್ಕೆಂದು ಮೊಸರನ್ನ ಮತ್ತು ಚೆನ್ನಾಗಿ ಬೇಯಿಸಿ ಹಿಸುಕಿದ ತರಕಾರಿ. ಸಂಜೆಯ ತಿಂಡಿಗಾಗಿ ಎದೆಹಾಲಿನೊಂದಿಗೆ ಪನ್ನೀರ್ ತುಂಡುಗಳು. ರಾತ್ರಿಯೂಟಕ್ಕಾಗಿ, ಚಪಾತಿ ಮತ್ತು ತರಕಾರಿ ಪಲ್ಯ. ರಾತ್ರಿಯ ವೇಳೆಯಲ್ಲಿ ಮಗುವು ಸುಖವಾಗಿ ನಿದ್ರಿಸುವಂತೆ, ರಾತ್ರಿ ಊಟವಾದ ಬಳಿಕ ಮತ್ತು ಮಗು ಮಲಗುವ ಮುನ್ನ ಪುನಃ ಎದೆಹಾಲನ್ನುಣಿಸಿರಿ.

ಶನಿವಾರ

ದಿನದ ಪ್ರಾರಂಭ ಎಂದಿನಂತೆಯೇ ಎದೆ ಹಾಲು ನೀಡಿಯೇ ಆಗಿರಲಿ. ವಾರಾಂತ್ಯವನ್ನು ಮೊಟ್ಟೆ ಮತ್ತು ಟೋಸ್ಟ್ ನಿಂದ ಯಾಕೆ ಆಹ್ಲಾದಿಸಬಾರದು...?ಪೂರ್ವಾಹ್ನವಾಗುತ್ತದ್ದಂತೆಯೇ, ಎದೆಹಾಲಿನೊಂದಿಗೆ ಹಣ್ಣುಗಳನ್ನು ಸೇವಿಸಲು ನೀಡಿರಿ. ಮಧ್ಯಾಹ್ನದೂಟಕ್ಕೆ ವೆಜಿಟೆಬಲ್ ರೈಸ್ ನೀಡಿದರೆ ಹೇಗೆ..? ಮಲಗುವ ಹೊತ್ತೆಂದರೆ, ಹಾಲೂಡಿಸುವ ಹೊತ್ತು.

ಭಾನುವಾರ

ದಿನದ ಆರಂಭವನ್ನು ಎಂದಿನಂತೆಯೇ ಎದೆಹಾಲು ನೀಡಿ ಪ್ರಾರಂಭಿಸಿ. ತಿಂಡಿಗಾಗಿ, ಆರೋಗ್ಯಕ್ಕೆ ಉತ್ತಮವಾದ ರಾಗಿ ದೋಸೆಯಾಗಿರಲಿ. ಪೂರ್ವಾಹ್ನವಾಗುತ್ತಿದ್ದಂತೆಯೇ ಎದೆಹಾಲು ನೀಡಿ ಹೊಟ್ಟೆ ತುಂಬಿಸಿದ ಬಳಿಕ ರೋಟಿ ಮತ್ತು ಚಿಕನ್ ಕರಿಯನ್ನು ಮಧ್ಯಾಹ್ನ ಭೋಜನಕ್ಕೆ ನೀಡಿ. ಅವಕಾಡೊ ಹಣ್ಣು ಮತ್ತು ಬ್ರೆಡ್ ಸ್ಟಿಕ್ ಗಳನ್ನು ಸಂಜೆಯ ಹೊತ್ತಿಗೆ ನೀಡುವಂತಾಗಲಿ. ವಾರಾಂತ್ಯವಾದ ಕಾರಣ ಬಾಯಿಗೆ ಸಿಹಿ ಸಿಹಿಯಾದ ‘ಖೀರ್’ ಅನ್ನು ರಾತ್ರಿ ಊಟಕ್ಕೆ  ಸವಿಯಲು ಕೊಡಿ. ರಾತ್ರಿ ಊಟವಾದ ಬಳಿಕ ದಿನವನ್ನು ಎದೆಹಾಲೂಡಿಸಿ ಅಂತ್ಯಗೊಳಿಸಿ ದಿನದ ಆರಂಭವನ್ನು ತಾಜಾ ಆಹಾರದಿಂದ ಪ್ರಾರಂಭಿಸಿ. ಎಂದರೆ ಹಣ್ಣುಗಳು ಮತ್ತು ತರಕಾರಿಗಳ ಸೇವನೆ ಮಾತ್ರ ಆಗಬೇಕೆಂದೇನಿಲ್ಲ. ಹೊಸ ಹೊಸ ತಿಂಡಿಗಳ ತಯಾರಿಯೂ ಆಗಿರಬಹುದು.

 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon