Link copied!
Sign in / Sign up
3
Shares

30ರ ಬಳಿಕ ಗರ್ಭಧಾರಣೆಯ ಪ್ರಯತ್ನ : ನೀವು ತಿಳಿದುಕೊಳ್ಳಲೇಬೇಕಾಗಿರುವುದು?

ಬಹುತೇಕ ಮಹಿಳೆಯರು ೩೦ರ ಪ್ರಾಯವು ತಾಯಿಯಾಗಲು ಸೂಕ್ತ ಸಮಯವೆಂದು ಭಾವಿಸುತ್ತಾರೆ. ದಾಂಪತ್ಯ ಜೀವನ ಹಾಗೂ ಆರ್ಥಿಕ ಸ್ಥಿತಿಯೂ ಭಧ್ರವಾಗಿರುವುದು ಮಾತ್ರವಲ್ಲದೆ, ೩೦ ವಯಸ್ಸಿನಲ್ಲಿ ೨೦ ರ ಹರೆಯದ ಚಂಚಲತೆಯಿರದೆ, ತನ್ನ ದೃಢ ನಿಲುವನ್ನು, ವ್ಯಕ್ತಪಡಿಸಲಿರುವ ಮನೋಧೈರ್ಯವೂ ೩೦ರ ಹರೆಯದಲ್ಲಿ ತಂತಾನೇ ಮೈಗೂಡಿಕೊಂಡಿರುತ್ತದೆ. ಆದರೆ, ನೀವು ನಿಮ್ಮದೇ ಲೋಕದಲ್ಲಿ ಮೈಮರೆತಿರುವಾಗ, ೩೦ ರ ಬಳಿಕ ನಿಮ್ಮ ಫಲವತ್ತತೆಯ ಪ್ರಮಾಣದಲ್ಲೂ ಗಣನೀಯವಾಗಿ ಇಳಿಮುಖವಾಗಿರುವುದರಿಂದ, ಗರ್ಭಧರಿಸುವ ಸಾಧ್ಯತೆಯೂ ಬಹಳ ಕಡಿಮೆಯೆಂಬ ಸತ್ಯವನ್ನೂ ಅರಿತಿರಬೇಕು.

ವಿವಿಧ ನುರಿತ ಆರೋಗ್ಯ ವೈದ್ಯ ಹಾಗೂ ಪ್ರಸೂತಿ ತಜ್ಞರ ಅನುಭವ ಸಂಪತ್ತನ್ನು ಒಟ್ಟುಗೂಡಿಸಿ೩೦ರ ಬಳಿಕ ಗರ್ಭಧರಿಸಲು ಬಯಸುವ ಮಹಿಳೆಯರಿಗಾಗಿ ತಯಾರಿಸಲಾದ ಲೇಖನ.

ಸಾಧಕಗಳು

೩೦ರ ಬಳಿಕವೂ ಬಹುತೇಕ ಮಹಿಳೆಯರು  ಆರೋಗ್ಯಯುತವಾಗಿ ಹಾಗೂ ಗಟ್ಟಿಮುಟ್ಟಾಗಿ ಇರುವುದರಿಂದ ಮಗುವನ್ನು ಪರಿಪಾಲಿಸಲು ಯಾವುದೇ ಶಾರೀರಿಕ ಅಸ್ವಸ್ಥತೆಯು ಸಮಸ್ಯೆಗಳನ್ನು ಎದುರಿಸಲಾರರು. ೨೦ರ ವಸಂತದ ಚಂಚಲತೆ ಅಥವಾ ೪೦ರ ಅಸ್ವಸ್ಥತೆಗಳು ೩೦ ತಲುಪಿದ ಸ್ತ್ರೀಯಲ್ಲಿ ಕಂಡು ಬರುವುದಿಲ್ಲ.

ವೈವಾಹಿಕ ಜೀವನದಲ್ಲೂ ,ಆರ್ಥಿಕ ಮಟ್ಟದಲ್ಲೂ ಭದ್ರವಾಗಿರುವ ಸ್ತ್ರೀಯರು ಒಂದು ಮಗುವಿನ ಅಗತ್ಯವಿದೆಯೇ ಇಲ್ಲವೇ ಎಂದು ತೀರ್ಮಾನಿಸುವ ಪಕ್ವತೆಯನ್ನು ಪಡೆದುಕೊಂಡಿರುವ ಒಬ್ಬಂಟಿಗರಾಗಿರುವ ಮಹಿಳೆಯರಿಗೂ ಮುಂದಿನ ಮಗುವಿನ ಅಗತ್ಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಮನೋದಾರ್ಢ್ಯವಿರುತ್ತದೆ.

ಬಾಧಕಗಳು 

ತಜ್ಞರ ಅಭಿಪ್ರಾಯದಂತೆ ೩೫ರ ಹರವು ಸ್ತ್ರೀಗಳಿಗೆ ಪ್ರಸವ ಸಮಯಕ್ಕೊಂದು ಮೈಲಿಗಲ್ಲಾಗಿರುತ್ತದೆ. ೩೫ ಕ್ಕೆ ಕಾಲಿರಿಸಿದ ಸ್ತ್ರೀಗಳಲ್ಲಿ ಗರ್ಭಧಾರಣೆಯ ಸಾಧ್ಯತೆ ಕಡಿಮೆಯಾಗೂ, ಗರ್ಭಪಾತವಾಗಲಿರುವ ಸಾಧ್ಯತೆಯು ಹೆಚ್ಚಾಗೂ ಕಂಡುಬರುತ್ತದೆ. ಅಥವಾ ಮಗುವು ಡೌನ್ ಸಿಂಡ್ರೋಮ್ ಗಳಂತಹ ತೊಂದರೆಯನ್ನು ಅನುಭವಿಸಬೇಕಾದ ಸರಾಸರಿಯೂ ಹೆಚ್ಚಾಗಿರುತ್ತದೆ. ಆದರೆ ೩೫ ದಾಟಿದ ಬಳಿಕ ಸ್ತ್ರೀಯ ಫಲವತ್ತತೆಯೂ ದಿಗಿಲು ಹುಟ್ಟಿಸುವ ವೇಗದಲ್ಲಿ ವರ್ಧಿಸುವುದರಿಂದರಿಂದ, ಗರ್ಭಧಾರಣೆಗೆ ಸಂಬಂಧಿಸಿದ ಹಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. ಕೆಲವೊಮ್ಮೆ ಸಿಸೇರಿಯನ್ ಕೂಡ ಅಗತ್ಯ ಬೀಳಬಹುದು.

ನೀವೆಷ್ಟು ಯಶಸ್ವಿಯಾಗುವಿರಿ?

೩೦-೩೫ ರ ಪ್ರಾಯಗಳೆಡೆಯಲ್ಲಿ,  ಗರ್ಭ ಧರಿಸಲಿರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಆದರೆ,೩೮-೩೯ ಅವಸ್ಥೆಯಲ್ಲಿ ನಿಮ್ಮ ವಯಸ್ಸನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಗಣತಿಯ ಪ್ರಕಾರ, ೩೫ ರ ನಂತರ ಅವಳಿಗಳಾಗುವ ಸಾಧ್ಯತೆಯೇ ಹೆಚ್ಚು. ಆದಕಾರಣ ೩೫ರ ಬಳಿಕವೂ ಗರ್ಭಧಾರಣೆಗೆ ಬಯಸುವಿರಾದರೆ ನಿಮಗೆ ಮಕ್ಕಳಾಗದಿರುವ ಅಥವಾ ಅವಳಿಗಳಾಗುವ ಸಾಧ್ಯತೆಗಳಿವೆ.

ಮಕ್ಕಳನ್ನು ಪಡೆದೇ ತೀರುವೆನೆನ್ನುವಿರಾದರೆ, ಫ್ರೋಜನ್ ಎಗ್ ಮಾದರಿಯಿಂದ ಗರ್ಭಧಾರಣೆಗೆ ಪ್ರಯತ್ನಿಸಬಹುದು.ಸಾಧಾರಣವಾಗಿ ತುಂಬಾ ತಡವಾಗಿ ಮಗುವನ್ನು ಪಡೆಯಲು ಬಯಸುವ ತಾಯಂದಿರು, ಇದೇ ರೀತಿಗೆ ಮೊರೆ ಹೋಗುತ್ತಾರೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon