Link copied!
Sign in / Sign up
1
Shares

ಸಂತಾನಹರಣ ಹೇಗಿರುತ್ತದೆ? ಈ ಗಂಡಸರು ಹೇಳಿದ್ದು ಕೇಳಿ !

ಸಂತಾನಹರಣ ಅಥವಾ ವೆಸಕ್ಟೋಮಿ ಎಂದರೆ ಒಂದು ಶಸ್ತ್ರಚಿಕಿತ್ಸಾ ಪ್ರಕ್ರಿಯೆ ಆಗಿದ್ದು, ಇದರಲ್ಲಿ ಗಂಡಸಿನ ವೀರ್ಯವನ್ನ ವೃಷಣದಿಂದ ಶಿಶ್ನವಿಗೆ ಒಯ್ಯುವ ರೇತ್ರನಾಳಗಳನ್ನ ಕತ್ತರಿಸಿ ಅವುಗಳನ್ನ ಗಂಟು ಹಾಕಲಾಗುತ್ತದೆ. ಇದರಿಂದ ಸಂತಾನ ಶಕ್ತಿಹರಣ ಆಗುತ್ತದೆ. ಇದರ ಪರಿಣಾಮವನ್ನ ನೀವು ರಿವರ್ಸ್ ಮಾಡಬಹುದೇ ಆದರೂ, ಜನನ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಎಂದೇ ಪರಿಗಣಿಸಲಾಗುತ್ತದೆ. ಈ ಸಂತಾನಹರಣ ಮಾಡಿಸಿಕೊಂಡ 3 ಗಂಡಸರ ಅನುಭವ ಹೇಗಿತ್ತು ಎಂದು :

೧. ಮೊದಲ ವ್ಯಕ್ತಿ

ಈಗ ನನಗೆ 32 ವರ್ಷಗಳು. ನಾನು ವೆಸಕ್ಟೋಮಿ ಮಾಡಿಸಿಕೊಂಡಾಗ ನನಗೆ 28 ವರ್ಷಗಳು. ನನಗೆ ಮದುವೆಯಾದಾಗ ನನಗೆ 21 ವರ್ಷ ವಯಸ್ಸಾಗಿತ್ತು. ನನ್ನ ಮಗುವಿನ ಗರ್ಭಧಾರಣೆ ವೇಳೆ ನನ್ನ ಹೆಂಡತಿಯು ಹೈಪರ್ಮೆಸಿಸ್ ಗವರ್ಡಿಯುಂ ಎಂಬ ಅಸ್ವಸ್ಥತೆ ಇಂದ ಬಳಲುತ್ತಿದ್ದಳು. ಗರ್ಭಧಾರಣೆಯ ಮೂರು ವಾರಗಳಿಂದ ಹಿಡಿದು 7 ತಿಂಗಳುಗಳ ವರೆಗೆ ಆಕೆ ತೀವ್ರ ನೋವು ಅನುಭವಿಸಿದಳು. ಹೀಗಾಗಿ ನಾವು ಇನ್ನೊಂದು ಮಗು ಮಾಡಿಕೊಳ್ಳವ ಯೋಚನೆ ಮಾಡಲಿಲ್ಲ.

ಆದರೆ ನಾವು ಪ್ರತಿ ಬಾರಿ ಸಂಭೋಗ ನಡೆಸುವಾಗ ಕಾಂಡೋಮ್ ಧರಿಸಬೇಕಿತ್ತು ಅಥವಾ ಆಕೆಯು ಜನನ ನಿಯಂತ್ರಕ ಮಾತ್ರೆಗಳು ಸೇವಿಸಬೇಕಿತ್ತು. ಇದು ಕೇವಲ ಲೈಂಗಿಕ ಕ್ರಿಯೆಯ ಅನುಭವವನ್ನ ಹಾಳು ಮಾಡುವುದಷ್ಟೇ ಅಲ್ಲದೆ, ನನ್ನ ಪತ್ನಿಯ ರುತುಚಕ್ರವನ್ನು ಬದಲಿಸುತ್ತಿದ್ದವು, ಹೀಗಾಗಿ ನಾನು ವೆಸಕ್ಟೋಮಿ ಮಾಡಿಸಿಕೊಳ್ಳಲು ನಿರ್ಧರಿಸಿದೆವು.

ಇದನ್ನ ಮಾಡಿಸಿಕೊಳ್ಳುವ ಮುನ್ನ ನನ್ನ ಮನಸಿನಲ್ಲಿ ಸ್ವಲ್ಪ ಭಯವಿತ್ತು. ನನ್ನದು ಮನೆಯಿಂದಲೇ ಮಾಡುವ ಕೆಲಸವಾದರಿಂದ ಕೆಲಸಕ್ಕೆ ಏನು ತೊಂದರೆ ಆಗಲಿಲ್ಲ. ಸರ್ಜರಿ ನಂತರದ ನನ್ನ ಮೊದಲ ಸಂಭೋಗದ ವೇಳೆ ನನ್ನ ಗುಪ್ತಾಂಗವೆ ಸಿಡಿದು ಹೋಗಿ ಬಿಡುತ್ತದೇನೋ ಎಂದು ಗಾಬರಿಯಾಗಿತ್ತು, ಆದರೆ ಯಾವುದೇ ತೊಂದರೆ ಇಲ್ಲದೆ ಎಲ್ಲಾ ಸುಗಮವಾಗಿ ಆಯಿತು.

೨. ಎರಡನೇ ವ್ಯಕ್ತಿ

ನನಗೆ ಇವಾಗ 38 ವರ್ಷ ಹಾಗು ನಾನು ವೆಸಕ್ಟೋಮಿ ಮಾಡಿಸಿಕೊಂಡಿದ್ದು 2 ವರ್ಷಗಳ ಹಿಂದೆ, ಅಂದರೆ ನನಗೆ 36 ವರ್ಷ ವಯಸ್ಸಾಗಿದ್ದಾಗ. ನನಗೆ ಈಗ ಮದುವೆಯಾಗಿ ಏಳು ವರ್ಷಗಳಾಗಿದ್ದು ಇಬ್ಬರು ಮಕ್ಕಳಿದ್ದಾರೆ. ನನಗೆ ಎರಡು ಮಕ್ಕಳು ಸಾಕಿದ್ದವು ಹಾಗು ನನಗೆ ಯಾವುದೇ ಜನನ ನಿಯಂತ್ರಣ ವಿಧಾನಗಳನ್ನ ಉಪಯೋಗಿಸಲು ಇಷ್ಟವಿರಲಿಲ್ಲ. ಅಲ್ಲದೆ, ನನ್ನ ಪತ್ನಿಯು ಕೆಲವು ಜನನ ನಿಯಂತ್ರಣ ವಿಧಾನಗಳನ್ನ ಬಳಸಿದಾಗ ಆಕೆಯ ತುಂಬಾ ಸೂಕ್ಷ್ಮವಾದ ತ್ವಚೆಗೆ ತೊಂದರೆ ಆಗುತಿತ್ತು ಮತ್ತು ನನಗೆ ಕಾಂಡೋಮ್ ಬಳಸಲು ಇಷ್ಟವಿರಲಿಲ್ಲ. ಏಕೆಂದರೆ ಅದು ನನಗೆ ಅಷ್ಟೊಂದು ಹಿತ ಎನಿಸುತ್ತಿರಲಿಲ್ಲ.

ನನಗೂ ಈ ಸರ್ಜರಿಯ ಬಗ್ಗೆ ಸ್ವಲ್ಪ ಗೊಂದಲಗಳಿತ್ತು. ಆಗ ನನ್ನ ಹೆಂಡತಿಯು ನನ್ನ ಜೊತೆಯಲ್ಲೇ ಇದ್ದಳು. ಆದರೆ ಸರ್ಜರಿ ವೇಳೆ ಅವಳಿಗೆ ಆಪರೇಷನ್ ರೂಮಿನಲ್ಲಿ ಇರಲು ಆಗಲಿಲ್ಲ. ಸರ್ಜರಿ ನಂತರ ಚೇತರಿಸಿಕೊಳ್ಳುವುದು ಅಷ್ಟೊಂದೇನು ಚೆನ್ನಾಗಿರಲಿಲ್ಲ ಆದರೆ ನಾನು ಅಂದುಕೊಂಡಷ್ಟು ಕೆಟ್ಟದಾಗಿ ಅಂತೂ ಇರಲಿಲ್ಲ. ಸುಮಾರು ಒಂದೂವರೆ ದಿನ ನಾನು ಪೈನ್ ಕಿಲ್ಲರ್ ಗಳನ್ನ ಸೇವಿಸಿದೆ. ಅದು ತುಂಬಾ ನೋವು ಉಂಟು ಮಾಡುತ್ತಿರಲಿಲ್ಲ, ಆದರೆ ಸ್ವಲ್ಪ ನೋವು ಅಂತು ಇತ್ತು.

ನಾನು ಸರ್ಜರಿಯಾಗಿ ಎರಡು ದಿನಗಳ ನಂತರ ಕೆಲಸಕ್ಕೆ ಮರಳಿದೆ. ನಾನು ಲೈಂಗಿಕ ಕ್ರಿಯೆಯಲ್ಲಿ 2 ವಾರಗಳ ನಂತರ ತೊಡಗಿಕೊಂಡೆ. ಇವಾಗ ನನಗೆ ಮತ್ತೆ ಯಾವುದೇ ಜನನ ನಿಯಂತ್ರಕ ವಿಧಾನಗಳ ಬಗ್ಗೆ ತಲೆನೋವು ಇಲ್ಲ. ಯಾವುದೇ ಚಿಂತೆ ಇಲ್ಲದೆ ಆರಾಮಾಗಿ ಸೆಕ್ಸ್ ಮಾಡಬಹುದು!

೩. ಮೂರನೇ ವ್ಯಕ್ತಿ

ನನ್ನ ವಯಸ್ಸು 42 ಹಾಗು ನಾನು ವೆಸಕ್ಟೋಮಿ ಮಾಡಿಸಿಕೊಂಡಿದ್ದು ನನಗೆ 36 ವಯಸ್ಸಿದ್ದಾಗ. ನನಗೆ ಮದುವೆಯಾಗಿ 11 ವರ್ಷಗಳಾಗಿದ್ದು ನನಗೆ ಮೂರು ಮಕ್ಕಳಿದ್ದಾರೆ. ನಾನು ಮದುವೆಯಾಗಿದ್ದು 27ನೆ ವಯಸ್ಸಿನಲ್ಲಿ ಹಾಗು ನನಗೆ ಮೂರನೇ ಮಗುವಾಗಿದ್ದು ನನ್ನ 33ನೇ ವಯಸ್ಸಿನಲ್ಲಿ. ನಮಗೆ ಮತ್ತಷ್ಟು ಮಕ್ಕಳು ಬೇಡ ಎಂದು ಯೋಚಿಸಿ ವೆಸಕ್ಟೋಮಿ ಮಾಡಿಸಿಕೊಳ್ಳಲು ಮುಂದಾದೆ.

ಇದರಿಂದ ನನ್ನ ಪತ್ನಿಗೆ ಸಂತಸವಾಯಿತು, ಏಕೆಂದರೆ ಅವಳು ಹೇಳುವ ಪ್ರಕಾರ ಈ ಸಂತಾನಹರಣ ಸರ್ಜರಿಯು ಗಂಡಸರಿಗಿಂತ ಹೆಂಗಸರಿಗೆ ಹೆಚ್ಚು ನೋವು ಮಾಡುತ್ತದೆ ಅಂತೆ. ಸರ್ಜರಿಯು ಸುಗಮವಾಗಿ ಆಯಿತು ಮತ್ತು ೫ ದಿನಗಳ ಒಳಗೆ ನಾನು ಸಂಪೂರ್ಣವಾಗಿ ಚೇತರಿಸಿಕೊಂಡೆ. ನಾನು ಒಂದೆರೆಡು ದಿನಗಳನ್ನ ಬಿಟ್ಟು ಕೆಲಸಕ್ಕೆ ಮರಳಿದೆ ಮತ್ತು ಲೈಂಗಿಕ ಜೀವನಕ್ಕೆ ಒಂದು ವಾರವಷ್ಟೇ ವಿರಾಮ ನೀಡಿದೆ. ಆದರೆ ಈ ಸರ್ಜರಿ ವೇಳೆ ಏನೋ ಒಂಥರಾ ವಾಸನೆ ಬರುತಿತ್ತು, ಸುಟ್ಟಿರೋ ವಾಸನೆ ಥರ.  

ವೆಸಕ್ಟೋಮಿ ಗರ್ಭಧಾರಣೆ ನಿವಾರಿಸಲು ಒಂದು ನೋವುರಹಿತ ಹಾಗು ಪರಿಣಾಮಕಾರಿ ವಿಧಾನವಾಗಿದ್ದು, ನೀವು ಅಂದುಕೊಂಡಷ್ಟು ನೋವು ಉಂಟು ಮಾಡುವುದೇ ಇಲ್ಲ. ಅಲ್ಲದೆ, ಇದು ನಿಮ್ಮ ಲೈಂಗಿಕ ಜೀವನದ ಮೇಲೆ ಯಾವ ರೀತಿಯ ಅಡ್ಡಪರಿಣಾಮಗಳನ್ನೂ ಬೀರುವುದಿಲ್ಲ. ಯಾವುದೇ ಚಿಂತೆ ಇಲ್ಲದೆ ಆರಾಮಾಗಿ ಸಂಭೋಗದಲ್ಲಿ ತೊಡಗಿಕೊಳ್ಳಬಹುದು ಎಂಬ ಯೋಚನೆಯೇ ನನಗೆ ಮತ್ತಷ್ಟು ಮಾನಸಿಕ ಉತ್ತೇಜನ ನೀಡುತ್ತದೆ.  

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon