Link copied!
Sign in / Sign up
1
Shares

ಶಿಶುವಿನ ಎರಡನೇ ತಿಂಗಳ ಬೆಳವಣಿಗೆ ಮತ್ತು ಶಿಶು ಮೈಲಿಗಲ್ಲುಗಳು

ಶಿಶುವಿನ ಬೆಳವಣಿಗೆಯ ವಿಷಯ ಬಂದಾಗ, ನಿಮ್ಮ ತಲೆಯಲ್ಲಿ ಈ ಸತ್ಯವನ್ನು ನೆನಪಿನಲ್ಲಿಟ್ಟುಕೊಳ್ಳಿ, ಇದು ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಒರೆತು, ಸ್ಪರ್ಧೆಯಲ್ಲ. ಮಗುವು ತನ್ನ ಎಲ್ಲಾ ಮೈಲಿಗಳನ್ನು ಅನುಭವಿಸುತ್ತದೆ, ಮಗುವು ಎರಡನೇ ತಿಂಗಳಲ್ಲಿ ಅನುಭವಿಸಬೇಕಾದ ಬೆಳವಣಿಗೆಯನ್ನು ಕಾಣಲಿಲ್ಲ ಎಂದರೆ ಸ್ವಲ್ಪ ತಡವಾಗಿ ಅದನ್ನು ಮಗುವು ಅನುಭವಿಸುತ್ತದೆ ಎಂದರ್ಥ. ಮಗುವು ತನ್ನ ಎಲ್ಲಾ ಶಿಶು ಮೈಲಿಗಳನ್ನು ತನ್ನ ಮೊದಲನೇ ವರ್ಷದಲ್ಲಿ ಅನುಭವಿಸುವನು.

ನಿಮ್ಮ ಮಗುವು ಬೆಳೆಯುತ್ತಿರುವುದನ್ನು ಆನಂದಿಸಿ ಮತ್ತು ಅನುಭವಿಸಿ ಇದರ ಬದಲು ಯಾವುದೇ ಕಾರಣಕ್ಕೂ ಬೇರೆ ಮಗುವಿನ ಜೊತೆ ಹೋಲಿಕೆ ಮಾಡಬೇಡಿ.

ಎರಡನೇ ತಿಂಗಳ ಮಗುವಿನ ಬೆಳವಣಿಗೆ

ನಿಮ್ಮ ಮಗುವು ತನ್ನ ಎರಡನೇ ತಿಂಗಳಲ್ಲಿ ಈ ಕೆಳಗಿನ ಮೈಲಿಗಲ್ಲುಗಳನ್ನು ಎದುರಿಸುತ್ತಾನೆ ಮತ್ತು ದೈಹಿಕ ಮತ್ತು ಮಾನಸಿಕ ಅಭಿವೃದ್ಧಿಯನ್ನು ಕಾಣುವನು. ಎರಡನೇ ತಿಂಗಳ ಮಗುವಿನ ಶಿಶು ಮೈಲಿಗಲ್ಲುಗಳು.

೧.ದೈಹಿಕ ಬೆಳವಣಿಗೆ

ನಿಮ್ಮ ಮಗುವಿಗೆ ೨ ತಿಂಗಳು ತುಂಬಿದ ನಂತರ ಅವನಲ್ಲಿ/ಅವಳಲ್ಲಿ ನೀವು ಗಮನಾರ್ಹ ದೈಹಿಕ ಬದಲಾವಣೆಯನ್ನು ಕಾಣಬಹುದು.

- ಮಗುವು ಈಗ ತನ್ನ ತಲೆಯನ್ನು ಎತ್ತುವುದು, ಮತ್ತು ತನ್ನ ಹೊಟ್ಟೆಯ ಮೇಲೆ ಮಲಗುವುದು.

- ತನ್ನ ಕೈಗಳನ್ನು ಆಡಿಸಲು ಶುರುಮಾಡುತ್ತಾರೆ, ಅವರು ಮುಖ ಕೆಳಗೆ ಮಾಡಿ ಮಲಗಿಕೊಳ್ಳಲು ಪ್ರಯತ್ನಿಸುವರು, ಕೆಲವರು ಯಶಸ್ವಿಯಾಗುವರು.

- ನಿಮ್ಮ ಮಗುವು ಈಗ ತನ್ನ ಎರಡು ಕೈಗಳನ್ನು ಚಪ್ಪಾಳೆ ತಟ್ಟುವ ರೀತಿಯಲ್ಲಿ ಆಡಿಸುತ್ತದೆ ಮತ್ತು ನಿಮ್ಮನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತದೆ.

- ಆದರೆ ನೀವು ಮಗುವಿನ ಕತ್ತು ಮತ್ತು ತಲೆಗೆ ಬೆಂಬಲವನ್ನು ನೀಡಿರಿ. ಏಕೆಂದರೆ ಶಿಶುವು ತನ್ನ ತಲೆಯನ್ನು ತಾನಾಗೇ ಎತ್ತುವ ಶಕ್ತಿಯನ್ನು ಇನ್ನು ಪಡೆದಿರುವುದಿಲ್ಲ.

೨.ಮೆದುಳಿನ ಅಭಿವೃದ್ಧಿ

ಮಗುವಿನ ಜನನದ ಸಮಯದಲ್ಲಿ ಶಿಶುವಿನ ಮೆದುಳಿನ ಗಾತ್ರ ನಿಮ್ಮ ಮೆದುಳಿನ ಗಾತ್ರದ ಶೇಕಡಾ ೨೫ರಷ್ಟು ಮಾತ್ರ ಇರುತ್ತದೆ. ಮಗುವಿಗೆ ಒಂದು ವರ್ಷ ಕಳೆಯುತ್ತಿದ್ದಂತೆ, ಮೆದುಳಿನ ಗಾತ್ರ ವಯಸ್ಕರ ಮೆದುಳಿನ ಶೇಕಡಾ ೭೦ರಷ್ಟು ಬೆಳೆದಿರುತ್ತದೆ.

- ನೀವು ಹೇಗೆ ಮಗುವಿನ ಜೊತೆ ಹೇಗೆ ಪರಸ್ಪರ ಪ್ರತಿಕ್ರಿಯೆ ನೀಡುವಿರಿ ಅದು ಮಗುವಿನ ಭಾಷೆಯನ್ನು ಮತ್ತು ಕೌಶಲ್ಯವನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.

- ನಿಮ್ಮ ಮಗುವು ತನ್ನ ಎರಡನೇ ತಿಂಗಳಿನಲ್ಲಿ ತನ್ನ ಸುತ್ತಮುತ್ತಲಿನ ಧ್ವನಿಯನ್ನು ಆಲಿಸುವಲ್ಲಿ ನಿರತವಾಗಿರುತ್ತದೆ.

- ನಿಮ್ಮ ಮಗುವು ಕಣ್ಣಿನ ಮೂಲಕ ಅಥವಾ ಕಣ್ಣಿನ ಸಹ್ನೆ ಇಂದ ಈಗ ನಿಮ್ಮ ಜೊತೆ ಮಾತನಾಡಲು ಪ್ರಾರಂಭಿಸುವನು.

೩.ಸಾಮಾಜಿಕ ಬೆಳವಣಿಗೆ
ನಿಮ್ಮ ಮಗುವು ಸಂವಹನ ಮಾಡಲು ಈಗ ಪ್ರಾರಂಭಿಸುತ್ತದೆ.

- ಮಗುವು ಈಗ ತನ್ನ ಸುತ್ತ ಕೇಳುವ ಧ್ವನಿ ಕಡೆಗೆ ತಲೆಯನ್ನು ತಿರುಗಿಸುವ ಮೂಲಕ ತನ್ನ ಆಸಕ್ತಿಯನ್ನು ವ್ಯಕ್ತಪಡಿಸುವುದು.

- ಮಗುವಿಗೆ ಇಷ್ಟವಿಲ್ಲವಾದರೆ ತನ್ನ ತಲೆಯನ್ನು ಬೇರೆಕಡೆ ತಿರುಗಿಸಿಕೊಳ್ಳುವ ಮೂಲಕ ನಿಮಗೆ ಅದನ್ನು ತಿಳಿಸುತ್ತದೆ.

- ಈ ಸಮಯದಲ್ಲಿ ನಿಮ್ಮ ಮಗುವಿನ ಅಳುವನ್ನು ಸಹ ಮಗುವು ನೀಡುತ್ತಿರುವ ಪ್ರತಿಕ್ರಿಯೆ ಎಂದು ಭಾವಿಸಬಹುದು.

ಎರಡನೇ ತಿಂಗಳ ಮಗುವಿಗೆ ನೀವು ನೀಡಬೇಕಾದ ಕೆಲವು ಕಾಳಜಿ

- ಮಗುವು ಸರಿಯಾದ ತೂಕವನ್ನು ಪಡೆಯುತ್ತಿದೆ ಎಂದು ಖಚಿತಪಡಿಕೊಳ್ಳಿ.

- ಶಬ್ದ ಮತ್ತು ಬೆಳಕಿಗೆ ಪ್ರತಿಕ್ರಿಯೆ ನೀಡುತ್ತಿದೆ ಎಂಬುದನ್ನು ಗಮನಿಸಿ.

ನೀವು ಖಚಿತಪಡಿಸಿಕೊಳ್ಳಬೇಕಾದ ವಿಷಯಗಳು

- ನಿಮ್ಮ ಮಗುವು ಎದೆಹಾಲನ್ನು ಸೆಸಿಸಬೇಕು. ತಾಯಿ ವಿಟಮಿನ್ D ಯನ್ನು ಪ್ರತಿದಿನ ಸೇವಿಸಲೇಬೇಕು.

- ಮಗುವು ಹೊಟ್ಟೆಯ ಮೇಲೆ ಮಲಗಿದಾಗ ಮಗುವನ್ನು ಅವನ/ಳ ಇಷ್ಟ ಬಂದಹಾಗೆ ಆಡಲು ಬಿಡಿ ಇದರಿಂದ ಮಗುವಿನ ಸ್ನಾಯುಗಳು ಬಲಿಷ್ಠಗೊಳ್ಳುತ್ತವೆ.

- ಮಗುವು ಹೊಟ್ಟೆಯ ಮಲಗಿದಾಗ ತೆವಳುವುದನ್ನು ಅಭ್ಯಾಸ ಮಾಡಿಸಿ.

- ನಿಮ್ಮ ಮಗುವಿನ ಜೊತೆ ನೀವು ಪ್ರತಿದಿನ ಹಲವು ಗಂಟೆಗಳ ಕಾಲ ಮಾತನಾಡುತ್ತೀರಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon