Link copied!
Sign in / Sign up
19
Shares

ವೀಕ್ಷಿಸಿ : ಕೇವಲ 24 ವಾರಕ್ಕೆ ಜನಿಸಿದ ಮಗು, ಮುಂದೇನಾಯಿತು ಎಂದು ನೋಡಿದರೆ ಗಾಬರಿ ಆಗುತ್ತೀರಾ

ಇದು ಟೋಬಿ ಎಂಬ ಮಗುವಿನ ಒಂದು ವಿಸ್ಮಯಕಾರಿ ಕಥೆ. ಈ ಮಗುವು ಇನ್ನು ಹೆರಿಗೆ ದಿನಕ್ಕೆ ಮೂರು ತಿಂಗಳ ಮೇಲೆ ಒಂದು ವಾರ ಬಾಕಿ ಇರಬೇಕಾದಾಗಲೇ ಭೂಮಿಗೆ ಕಾಲಿಟ್ಟನು. ಅಂದರೆ, ಈ ಮಗುವಿನ ತಾಯಿ ಆಕೆಯ ಗರ್ಭಧಾರಣೆಯ 24ನೇ ವಾರದಲ್ಲೇ ಈತನಿಗೆ ಜನ್ಮ ನೀಡಿದಳು. ಆದರೆ ಈ ಮಗುವನ್ನು ಉಳಿಸಿಕೊಳ್ಳುವುದು ಸುಲಭದ ಮಾತಾಗಿರಲಿಲ್ಲ. ತನ್ನ ಜೀವನದ ಮೊದಲ ಕ್ಷಣಗಳನ್ನು ಕಳೆದಿದ್ದೇ ಈ ಮಗುವಿಗೆ ಒಂದು ಯುದ್ಧದಲ್ಲಿ ಪಾಲ್ಗೊಂಡಂತೆ ಆಯಿತು.

ಆದರೆ ಈಗ ಟೋಬಿಯು ಸ್ವಲ್ಪ ವಾರಗಳಷ್ಟು ಬೆಳೆದಿದ್ದು, ಈಗಲೂ ಅವನನ್ನು ತೀವ್ರ ನಿಗಾ ಘಟಕದಲ್ಲೇ ಇರಿಸಲಾಗಿದೆ. ಆದರೆ, ಅವನು ಕೇವಲ ಹುಟ್ಟಿ 12 ಗಂಟೆಗಳಷ್ಟು ಆಗುವಷ್ಟರಲ್ಲಿ ತನ್ನ ಕೈಗಳನ್ನು ಮತ್ತು ಕಾಲುಗಳನ್ನು ಅಲಗಾಡಿಸುವಂತಹ ಆಶಾದಾಯಕ ಕ್ರಿಯೆಗಳನ್ನು ಮಾಡುತ್ತಿದ್ದ. ಇದು ಆತನ ತಂದೆ ತಾಯಿಗೆ ಅವನು ಬದುಕುಳಿಯಬಹುದು ಎಂಬ ಆಶಯ ತುಂಬಿತು.

ಕೇವಲ 24 ವಾರಕ್ಕೆ ಜನಿಸುವ ಮಕ್ಕಳ ದೇಹದಲ್ಲಿ ಉಸಿರಾಟದ ನಾಳವು ಸರಿಯಾದ ಬೆಳವಣಿಗೆ ಹೊಂದಿರುವುದಿಲ್ಲ ಮತ್ತು ಇನ್ನು ಕೆಲವಷ್ಟು ಶ್ವಾಸಕೋಶದ ಕೋಶಗಳು ಆಗಷ್ಟೇ ಹುಟ್ಟಿಕೊಳ್ಳುತ್ತಿರುತ್ತವೆ. ಈ ಹಂತದಲ್ಲಿ ಟೋಬಿಯನ್ನು ವೆಂಟಿಲೇಟರ್ ಮೂಲಕ ಜೀವಂತವಾಗಿ ಇಡಬೇಕಾಯಿತು. ಅಲ್ಲದೆ ಅವನಿಗೆ ಪೋಷಕಾಂಶಗಳನ್ನು ಬಾಯಿಯಿಂದ ಹೊಟ್ಟೆಯವರೆಗೆ ಒಂದು ಟ್ಯೂಬ್ ಇರಿಸಿ, ದ್ರವ್ಯ ರೂಪದ ಆಹಾರದ ಮೂಲಕ ನೀಡಲಾಗುತ್ತಿತ್ತು.

ಆದರೆ ಅವನು ಬದುಕುವ ಸೂಚನೆಗಳನ್ನು ಯಾವಾಗಲೂ ತೋರಿಸುತ್ತಲೇ ಇದ್ದ. ಈಗ ಅವನು ಹೇಗಾಗಿದ್ದಾನೆ ಎಂದು ನೀವು ನೋಡಿದರೆ ಬೆಚ್ಚಿ ಬೀಳುತ್ತೀರಾ! ಅದನ್ನು ನೋಡಲು ಈ ವಿಡಿಯೋ ನೋಡಿ :

 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon