Link copied!
Sign in / Sign up
8
Shares

2018ರಲ್ಲಿ ನೀವು ಯಾವ ರೀತಿಯ ತಾಯಿ ಆಗುತ್ತೀರೆಂದು ತಿಳಿಸುತ್ತೇವೆ ಓದಿ!

ಪೋಷಕಾಗುವುದು ಒಂದು ಕಡೆ ಜೀವನದ ಅತೀ ದೊಡ್ಡ ಸಾಧನೆ ಅನ್ನಿಸಿದರೆ, ಮತ್ತೊಂದು ಕಡೆ ಹೆಚ್ಚಿದ ಜವಾಬ್ಧಾರಿ ಎಂದರೆ ತಪ್ಪಾಗುವುದಿಲ್ಲ. ಮಕ್ಕಳ ಒಳಿತಿಗಾಗಿ ತಂದೆ-ತಾಯಂದಿರು ತಮ್ಮ ಜೀವನವನ್ನೇ ಮುಡಿಪಾಗಿಡುತ್ತಾರೆ. ತಮಗೆ ಎಷ್ಟೇ ಕಷ್ಟ, ನೋವು ಇದ್ದರೂ, ಅದನ್ನು ಮಕ್ಕಳ ಮುಂದೆ ಹೇಳದೆ, ಅವರಿಗೆ ಯಾವುದರಲ್ಲೂ ಕಡಿಮೆಯಾಗದ ಹಾಗೆ ಬೆಳಸುತ್ತಾರೆ. ಇಂತಹ ಪೋಷಕರಿಗೊಂದು ಸಲಾಂ. ತಮ್ಮ ಮಕ್ಕಳ ಉನ್ನತ ಭವಿಷ್ಯಕ್ಕಾಗಿ ತಮ್ಮ ಭವಿಷ್ಯವನ್ನು ತೇಯ್ದು, ಉತ್ತಮ ದಿನಗಳಿಗೆ ಕಾಯುತ್ತಿರುವ ಪೋಷಕರಿಗೆ ಇಲ್ಲಿದೆ ಒಂದು ಸಿಹಿ ಸುದ್ಧಿ.

ನಿಮ್ಮ ಜನ್ಮ ರಾಶಿಗಳು, ನಿಮ್ಮ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಸಂಶೋಧನೆಯೊಂದು ದೃಢಪಡಿಸಿದೆ. ಈ ಲೇಖನದಲ್ಲಿ, ೧೨ ರಾಶಿಯ ಪೋಷಕರು ಮಾಡಬೇಕಾದ ಕೆಲಸಗಳು ಹಾಗು ಮಾಡಬಾರದ ಕೆಲಸಗಳು ಯಾವುದೆಂದು ತಿಳಿಯಲು ನೀವು ಕಾತುರಾಗಿದ್ದೀರಾ? ಮುಂದೆ ಓದಿ.


೧. ಕುಂಭ ರಾಶಿ (jan 20 -feb 18)

ಹುಟ್ಟು ಹಬ್ಬದ ಶುಭಾಶಯಗಳು ಕುಂಭ ರಾಶಿಯ ಪೋಷಕರೇ. feb ೧೫ ತಾರೀಖನ್ನು ನಿಮ್ಮ ಕ್ಯಾಲೆಂಡರಲ್ಲಿ ಗುರುತು ಹಾಕಿಕೊಲ್ಲಿ. ಅಮಾವಾಸ್ಯೆ ಹಾಗು ಅಲ್ಪ ಪ್ರಮಾಣದ ಸೂರ್ಯ ಗ್ರಹಣ ನಿಮ್ಮ ರಾಶಿಗೆ ಹೆಚ್ಚು ಬಲವನ್ನು ನೀಡಿದೆ ಹಾಗು ನೀವು ಬಯಸುತ್ತಿರುವ ನಿಮ್ಮ ದೀರ್ಘಕಾಲದ ಆಸೆಯೂ ಕೈಗೂಡಲಿದೆ. ನಿಮ್ಮ ಜೀವನದಲ್ಲಿ ಆರೋಗ್ಯ್ಕರ ಜೀವನ ಶೈಲಿಯಾದ ಯೋಗ , ಪ್ರಾಣಾಯಾಮವನ್ನು ತಪ್ಪದೆ ಪ್ರತಿನಿತ್ಯ ಪಾಲಿಸಿದಲ್ಲಿ ನಿಮಗೆ ಮನಶಾಂತಿ ದೊರೆಯುತ್ತದೆ. ನಿಮ್ಮ ಪ್ರೀತಿಪಾತ್ರರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದಿರಿ, ಅವರು ಸದಾಕಾಲ ನಿಮ್ಮ ಬಳಿಯೇ ಇರುತ್ತಾರೆ. ಸಂಸಾರದ ಜವಾಬ್ಧಾರಿಯಿಂದ ವಿರಾಮ ತೆಗೆದುಕೊಂಡು ನಿಮ್ಮ ಸ್ನೇಹಿತರೊಂದಿಗೆ ಹೊರಗೆ ಹೋಗಿ ಬನ್ನಿ. ಲಾಭಕರವಾದ ಶುಭವಾರ್ತೆಯೊಂದು ಫೆಬ್ರವರಿ ೧೮ ರಿಂದ ಮಾರ್ಚ್ ೨೦ ರೊಳಗೆ ನಿಮ್ಮ ಕಿವಿಗೆ ಬೀಳಲಿದೆ. ಹಾಗಾಗಿ, ಯಾವುದೇ ರೀತಿಯ ಆತಂಕ, ಒತ್ತಡಕ್ಕೆ ಒಳಗಾಗದೆ ನೀವು ನಿಮ್ಮ ಪ್ರಾಮಾಣಿಕ ಪ್ರಯತ್ನದಲ್ಲಿ ತೊಡಗಿಸಿಕೊಳ್ಳಿ.


೨. ಮೀನಾ ರಾಶಿ (feb 19 - march 20)

ಪ್ರೇಮಿಗಳ ದಿನ ಹತ್ತಿರ ಬರುತ್ತಿದೆ, ಈ ರಾಶಿಯವರು ಪ್ರೇಮಿಗಳ ದಿನದ ನಂತರವೂ, ನೀವು ಹೆಚ್ಚು ರೋಮ್ಯಾಂಟಿಕ್ ಆಗಿ ಇರುತ್ತೀರ. ಈ ತಿಂಗಳು ನಿಮ್ಮ ಸಂಗಾತಿಯೊಂದಿಗೆ ನೀವು ಮತ್ತೆ ಪ್ರೀತಿಯಲ್ಲಿ ಬೀಳುತ್ತೀರ. ಮಗುವನ್ನು ಬೇಬಿಸಿಟ್ಟರ್ ಅಥವಾ ನಿಮ್ಮ ಪೋಷಕರ ಬಳಿ ಮಗುವನ್ನು ಒಂದು ದಿನದ ಮಟ್ಟಿಗೆ ಬಿಟ್ಟು, ಡಿನ್ನರ್ ಡೇಟ್ಗೆ ಹೋಗಿ ಬನ್ನಿ. ಶುಕ್ರ ದೆಸೆ ಈ ರಾಶಿಯವರ ಮೇಲೆ ಇರುವುದರಿಂದ, ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಬಾಂದವ್ಯ ಹೆಚ್ಚಾಗುತ್ತದೆ. ನೀವು ತೂಕ ಇಳಿಸಲು ಹಾಗು ವ್ಯಾಯಾಮವನ್ನು ಈ ವರುಷದಿಂದ ಪ್ರಾರಂಭಿಸಬೇಕು ಎಂದುಕೊಂಡಿದ್ದಲ್ಲಿ, ಅದನ್ನು ಶುರು ಮಾಡಲು, ಇದು ಒಳ್ಳೆಯ ಸಮಯ.


೩. ಮೇಷ ರಾಶಿ ( march 21 - april 19)


ಈ ರಾಶಿಯವರು ಕಿಟ್ಟಿ ಪಾರ್ಟಿಗಳನ್ನು ಆಯೋಜಿಸುವಲ್ಲಿ ಹಾಗು ಪಾಲ್ಗೊಳ್ಳುವಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ. ಫೆಬ್ರವರಿ ೧೫ ಆಸುಪಾಸಿನಲ್ಲಿ, ನಿಮಗೆ ಲಾಭಬರುವಂತ ಡೀಲ್ಗಳು ಕೈಗೂಡಲಿವೆ ಹಾಗು ಲಕ್ಷ್ಮಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ. ಟೀಮ್ ವರ್ಕ್ ನಿಮಗೆ ಹೆಚ್ಚಿನ ಲಾಭವನ್ನು ತಂದುಕೊಡುತ್ತದೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಂಡಿರಿ ಹಾಗು ನಿಮ್ಮ ಒಳ ಮನಸ್ಸು ಹೇಳುವ ಮಾತನ್ನು ಆಲಿಸಿ ನಡೆದರೆ, ಕೆಲಸಗಳು ಕೈಗೂಡುತ್ತವೆ.


೪. ವೃಷಭ ರಾಶಿ ( april 20 - may 20 )


ಈಗಾಗಲೇ ನೀವು ನಿಮ್ಮ ಮನೆಯವರೊಂದಿಗೆ ಒಳ್ಳೆಯ ಕಾಲವನ್ನು ಕಳೆಯುತ್ತಿರುತ್ತೀರ. ಸ್ವಲ್ಪ ಸಮಯ ಮನೋರಂಜನೆಗೆ ಎತ್ತಿಡಿ ಹಾಗು ನಿಮ್ಮ ಫ್ಯಾಮಿಲಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ. ನೀವು ತುಂಬಾ ದಿನದಿಂದ ಇಚ್ಛಿಸುತ್ತಿರುವ ಫ್ಯಾಮಿಲಿ ಪಿಕ್ನಿಕ್ಗೆ ಹೋಗಿ ಬನ್ನಿ. ನೀವು ನಿಮ್ಮ ಜೀವನದಲ್ಲಿ ಈಗಾಗಲೇ ಹೆಚ್ಚಿನ ಸಾಧನೆಯನ್ನು ಮಾಡಿದ್ದೀರಿ ಹಾಗು ಶುಕ್ರದೆಸೆ ನಿಮಗೆ ಮತ್ತಷ್ಟು ಒಳ್ಳೆಯದನ್ನು ಮಾಡುವುದರಲ್ಲಿ ಸಂಶಯವಿಲ್ಲ. ನಿಮ್ಮ ಜೀವನದಲ್ಲಿ ಏನಾದರೂ ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳಬೇಕಾದಲ್ಲಿ ಫೆಬ್ರವರಿ ೧೫ ಒಳ್ಳೆಯ ದಿನವಾಗಿದ್ದು, ನೀವು ಮಾಡುವ ಕೆಲಸಗಳ್ಳಲ್ಲಿ ಹೆಚ್ಚು ಲಾಭವನ್ನು ಅನುಭವಿಸುವಿರಿ.


೫. ಮಿಥುನ ರಾಶಿ ( may 21 - june 20 )

ಈಗಾಗಲೇ, ಎಲ್ಲಾ ವಿಷಯದಲ್ಲಿ ನಿಮಗೆ ಬೋರ್ ಆಗಿದೆ ಹಾಗು ಹೊಸತರ ನೀರಿಕ್ಷೆಯಲ್ಲಿ ನೀವಿದ್ದೀರ. ಫೆಬ್ರವರಿ ೧೫ ದಿನದೊಳಗೆ, ಅಮಾವಾಸ್ಯೆ ಹಾಗು ಅಲ್ಪ ಪ್ರಮಾಣದ ಸೂರ್ಯ ಗ್ರಹಣದಿಂದ ನಿಮ್ಮ ರಾಶಿಯ ೯ನೇ ಮನೆಗೆ ಬೀಳುವುದರಿಂದ, ನೀವು ಮಾಡುತ್ತಿರುವ ಕೆಲಸದ ಮೇಲೆ ಇನ್ನು ಹೆಚ್ಚಿನ ಶ್ರಮವನ್ನು ವಹಿಸುತ್ತೀರ ಹಾಗು ಅದರಿಂದ ನೀವು ಯಶಸ್ಸು ಕಾಣುತ್ತೀರ. ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರೆ, ಅದರಲ್ಲಿ ಯಶಸ್ಸು ಮಾತ್ರ ಖಂಡಿತ ಹಾಗು ನೀವು ಹೊಸ ಉದ್ಯೋಗದ ಹುಡುಕಾಟದಲ್ಲಿದ್ದರೆ, ನಿಮ್ಮ ಇನ್ನೋವೆಟಿವ್ ಐಡಿಯಾಸ್ ನಿಮ್ಮನ್ನು ಮತ್ತಷ್ಟು ಮೇಲಕ್ಕೆ ಕರೆದುಕೊಂಡು ಹೋಗುತ್ತದೆ.


೬. ಕರ್ಕಟ ರಾಶಿ ( june ೨೧- july 20 )

ನೀವು ತುಂಬಾ ಭಾವನಾತ್ಮಕ ವ್ಯಕ್ತಿಗಳಾಗಿರುವುದರಿಂದ, ನಿಮ್ಮ ಭಾವನಾತ್ಮಕ ವ್ಯಕ್ತಿತ್ವವನ್ನು ವ್ಯಕ್ತಪಡಿಸುವ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೀರ. ನಿಮ್ಮ ಸಂಗಾತಿಯೊಂದಿಗೆ ಭಾವನತ್ಮಕವಾಗಿ ಹೆಚ್ಚು ಸಂಗತಿಗಳನ್ನು ಹಂಚಿಕೊಳ್ಳುತ್ತೀರ. ನಿಮ್ಮ ಸಾಂಸಾರಿಕ ಜೀವನ ಮತ್ತಷ್ಟು ಗಟ್ಟಿಯಾಗಲಿದೆ ಹಾಗು ನಿಮ್ಮ ಮಧ್ಯೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಎದುರಾಗುವುದಿಲ್ಲ. ಮಾರ್ಚ್ ೨೦ರ ಒಳಗೆ ಒಳ್ಳೆಯ ಸುದ್ಧಿಯೊಂದು ನಿಮ್ಮ ಕಿವಿಯ ಮೇಲೆ ಬೀಳುವುದು ಮಾತ್ರ ಖಂಡಿತ.


೭. ಸಿಂಹ ರಾಶಿ ( july 23 - august 22 )

 

ಈ ರಾಶಿಯಯವರು ಹೆಚ್ಚು ಹುಮ್ಮಸ್ಸಿನವರಾಗಿರುತ್ತಾರೆ. ನಿಮ್ಮ ಕಲೆ ಹಾಗು ಸೌಂದರ್ಯದ ವಿಷಯದಲ್ಲಿ, ಶುಕ್ರದೆಸೆ ನಿಮ್ಮ ಮೇಲೆ ಬೀಳುವುದರಿಂದ ನೀವು ಮಾನಸಿಕ ಹಾಗು ಲೈಂಗಿಕವಾಗಿ ಸಕ್ರಿಯರಾಗಿರುತ್ತೀರ. ನಿಮಗೆ ಯಾವುದಾದರೂ ಪರ್ಟ್ನೆರ್ಶಿಪ್ ಬೂನ್ಸ್ನೆಸ್ ನಲ್ಲಿ ಲಾಭ್ಯವಾಗುವ ಸಾಧ್ಯತೆಗಳಿದೆ.

 

೮. ಕನ್ಯಾ ರಾಶಿ ( august 23 - ಸೆಪ್ಟೆಂಬರ್ 22 )


ಈ ರಾಶಿಯವರು ಆರೋಗ್ಯಕರ ಜೀವನ ಶೈಲಿಯನ್ನು ಹೆಚ್ಚು ಪಾಲಿಸುತ್ತಾರೆ ಹಾಗು ಆರೋಗ್ಯಕರ ತಿನಿಸುಗಳನ್ನು ಹೆಚ್ಚು ಇಷ್ಟ ಪಡುತ್ತಾರೆ. ನೀವು ಮತ್ತಷ್ಟು ಆರೋಗ್ಯಕರ  ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕೆಂದಲ್ಲಿ, ನೀವು ಹೊಸ ವ್ಯಾಯಾಮ ಆಹಾರ  ಕ್ರಮಗಳನ್ನು ಅನುಕರಿಸಲು ಫೆಬ್ರವರಿ ತಿಂಗಳು ಬಹಳ ಸೂಕ್ತ. ಮಹಿಳಿಯರು ದೃಢ ನಿರ್ಧಾರವನ್ನು ಕೈಗೂಳ್ಳುವವರಾಗಿರುತ್ತಾರೆ ಹಾಗು ಆತ್ಮವಿಶ್ವಾಸಿಗಳು ಹೌದು.


೯. ತುಲಾ ರಾಶಿ ( september 23 - october 22 )


ಹಳೆಯ ವಿಷಯಗಳನ್ನು ತಲೆಯಿಂದ ತೆಗೆದು ಹಾಕಿ, ನಿಮ್ಮನ್ನು ನೀವು ನಕ್ಷತ್ರದ ಮಟ್ಟಕ್ಕೆ ಏರುವುದನ್ನು ನೋಡುವಿರಿ. ಆರೋಗ್ಯಕರ ಶಾರೀರವನ್ನು ಹೊಂದುವ ಆಸೆ ನಿಮ್ಮದಾಗಿದ್ದಲ್ಲಿ ಮಾರ್ಚ್ ೧೮ರೊಳಗೆ ಜಿಮ್ ಗೆ ಸೇರಿಕೊಳ್ಳಿ. ನಿಮ್ಮ ಆಸೆ-ಆಕಾಂಷೆಗಳು ನೆರವೇರುವ ವರ್ಷವಿದು. ನೀವು ಮಾಡುವ ಕೆಲಸಗಳಲ್ಲಿ ಆಸಕ್ತಿ ಹೆಚ್ಚಾಗಿ, ನೀವು ಮುಟ್ಟಿದ ಕೆಲಸಗಳಲ್ಲಿ ಯಶಸ್ಸು ಖಂಡಿತ ಲಭಿಸುವುದು. ನಿಮ್ಮ ಉದ್ಯೋಗ, ಸಂಸಾರ, ಪ್ರೀತಿ ಎಲ್ಲವೂ ನಿಮಗೆ ಲಭಿಸುತ್ತದೆ.


೧೦. ವೃಶಿಕ ರಾಶಿ ( october 23 - november 21 )


ನೀವು ನಿಮ್ಮ ಮನೆಯ ನವೀಕರಣ ಮಾಡುವ ಸಾಧ್ಯತಗಳು ಹೆಚ್ಚು. ನಿಮ್ಮ ಮಗುವಿನ ಕೋಣೆಗೆ ಬಣ್ಣ ಹಚ್ಚುವ ಸಾಧ್ಯತೆಗಳು ಹೆಚ್ಚು. ಈ ರಾಶಿಯ ವ್ಯಕ್ತಿಗಳು ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ. ನಿಮ್ಮ ಸಂಗಾತಿ ಹಾಗು ಮಗುವನ್ನು ಮೈಂಡ್ ಗೇಮ್ಸ್ನಲ್ಲಿ ಹೆಚ್ಚು ತೊಡಗಿಸುವುದರಿಂದ ನಿಮೆಲ್ಲರ ಕುಶಲತೆ ಹೆಚ್ಚಾಗುತ್ತದೆ. ನೀವು ಯಾವುದೇ ಕೆಲಸ ಮಾಡಿದರೂ, ಅದರಲ್ಲಿ ಜಯಭೇರಿಯಾಗುವುದು ಮಾತ್ರ ಖಚಿತ.


೧೧. ಧನಸ್ಸು ರಾಶಿ ( november 22 - december  21 )


ಇಷ್ಟು ದಿನ ಕಾಯುತ್ತಿದ್ದ ಮೆಚ್ಚುಗೆ ಹಾಗು ಕೀರ್ತಿ ನಿಮ್ಮದಾಗಲಿದೆ. ನೀವು ನಿಮ್ಮ ವೃತ್ತಿಯಲ್ಲಿ ಪ್ರಗತಿಯನ್ನು ಹೊಂದುವಿರಿ. ಆದಷ್ಟು ಜಗಳ, ವಾದ-ವಿವಾಧಗಳಿಂದ ದೂರವಿರಿ, ಇದರಿಂದ ನಿಮ್ಮ ಸಾಂಸಾರಿಕ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚು. ವ್ಯವಹಾರ ಚಾತುರ್ಯವನ್ನು ನೀವು ಕಲಿತಲ್ಲಿ ನೀವು ಮುಟ್ಟಬೇಕಾದಂತ ಗುರಿ ಸುಲಭವಾಗಿ ನಿಮಗೆ ದಕ್ಕುತ್ತದೆ.


೧೨. ಮಕರ ರಾಶಿ ( december 22 - ಜನವರಿ 19 )


ಫೆಬ್ರವರಿ ೧೫ರ ನಂತರ, ಶುಕ್ರನ ದೆಸೆಯು ನಿಮ್ಮ ರಾಶಿಯ ೨ನೇ ಮನೆಗೆ ಬರುವುದರಿಂದ, ನೀವು ಯಾವುದೇ ಆರ್ಥಿಕ ವ್ಯವಾಹರಗಳಿಗೆ ಕೈಹಾಕಲು ಸೂಕ್ತವಾದ ಸಮಯ. ನಿಮ್ಮ ಮಕ್ಕಳಿಗೆಂದೇ ಉಳಿತಾಯ ಖಾತೆಯೊಂದನ್ನು ತೆರೆಯಿರಿ ಅಥವಾ ಇನ್ಶೂರೆನ್ಸ್ ಖಾತೆಯೊಂದನ್ನು ತೆರೆಯಿರಿ. ನಿಮ್ಮ ಸಂಗಾತಿಯೊಂದಿಗೆ ಬಿಡುವುಮಾಡಿಕೊಂಡು ಕಾಲ ಕಳೆಯಿರಿ. ನೀವು ನಿಮ್ಮ ಭಾವನೆಯನ್ನು ನಿಮ್ಮೊಳಗೆ ಇಟ್ಟುಕೊಳ್ಳುವ ವ್ಯಕ್ತಿಗಳಾಗಿದ್ದರೂ, ನಿಮ್ಮ ಮನಸಿನ್ನಲ್ಲಿರುವ ನೆಗೆಟಿವ್ ಯೋಚನೆಗಳು, ಭಾವನೆಗಳನ್ನು ತೆಗೆದುಹಾಕುವುದಕ್ಕೆ ಇದೊಂದು ಒಳ್ಳೆಯ ಸಮಯ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon