Link copied!
Sign in / Sign up
30
Shares

2018ರ ನಿಮ್ಮ ಜೀವನದ ಕಿರುನೋಟವನ್ನು ನಿಮ್ಮ ರಾಶಿ ಹೀಗೆ ತಿಳಿಸುತ್ತದೆ

ಹೊಸ ವರ್ಷಕ್ಕೆ ಕಾಲಿಡಲು ನಾವೆಲ್ಲ ಸಿದ್ಧವಾಗಿರುವೆವು, ಇನ್ನು ಕೆಲವೇ ದಿನಗಳಲ್ಲಿ ಹೊಸ ವರ್ಷ ಬರುವುದು, ಹೊಸ ವರ್ಷವನ್ನು ಆನಂದದಿಂದ ಬರಮಾಡಿಕೊಳ್ಳುವ ನೀವು ನಿಮ್ಮ ಈ ವರ್ಷದ ಜೀವನದ ಬಗ್ಗೆ ನಿಮ್ಮ ರಾಶಿ ಏನು ಹೇಳುತ್ತದೆ ಗೊತ್ತಾ? ಈ ಹೊಸ ವರ್ಷದಲ್ಲಿ ನಿಮ್ಮ ಭವಿಷ್ಯದ ಒಂದು ಕಿರುನೋಟ!

೧.ಮೇಷ ರಾಶಿ

ಮೇಷ ರಾಶಿಯವರಿಗೆ ಈ ವರ್ಷ ಉತ್ತಮ ವರ್ಷವಾಗಿದೆ, ನಿಮ್ಮ ಹಲವು ಕನಸುಗಳನ್ನು ಈ ವರ್ಷ ನೀವು ಸಾಧಿಸಬಹುದು. ಜೀವನದಲ್ಲಿ ಖುಷಿಯನ್ನು ಕಾಣುವಿರಿ, ನಿಮ್ಮ ಪರಿಶ್ರಮಕ್ಕೆ ಈಗ ಬೆಲೆ ಸಿಗಲಿದೆ. ಜೊತೆಗೆ ನೀವು ನಿಮ್ಮ ಹಣಕಾಸಿನ ವಿಷಯದಲ್ಲಿ ಈ ವರುಷ ಸುಧಾರಣೆಯನ್ನು ಕಾಣುವಿರಿ.

೨.ವೃಷಭ ರಾಶಿ

ಈ ವರುಷ ನಿಮ್ಮ ಬಗ್ಗೆ ನೀವು ಸರಿಯಾಗಿ ಹೆಚ್ಚು ತಿಳಿದುಕೊಳ್ಳುವಂತೆ ಮಾಡುತ್ತದೆ, ಮತ್ತು ಸ್ವಯಂ-ಆವಿಷ್ಕಾರದ ದಾರಿಯಲ್ಲಿ ಸಾಗುವಿರಿ. ಈ ವರ್ಷಪೂರ್ತಿ ನೀವು ಕಲಿಯುವಿರಿ, ಮತ್ತು ನೀವು ಯಾರಿಗೆ ಆದ್ಯತೆ ನೀಡಬೇಕು ಎಂಬುದನ್ನು ಹುಡುಕುವಿರಿ, ಮತ್ತು ನಿಮ್ಮ ಜೀವನದಲ್ಲಿ ಯಾರಿಗೆ ಆದ್ಯತೆ ನೀಡಬೇಕು ಎಂಬುದನ್ನು ಕಲಿಯಲು ಪ್ರಯತ್ನಿಸುವಿರಿ.

೩.ಮಿಥುನ ರಾಶಿ

ನಿಮ್ಮ ಕನಸು ಮತ್ತು ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಲು ಕನಸನ್ನು ಈಡೇರಿಸಿಕೊಳ್ಳಲು ಮುಂದೆ ಸಾಗಲು ಇದು ಸೂಕ್ತ ಸಮಯ. ನೀವು ಬಹಳಷ್ಟು ಶ್ರಮವನ್ನು ಪಟ್ಟರು ನಿಮ್ಮ ಇಚ್ಚೆಯ ಫಲಿತಾಂಶ ತಪ್ಪಬಹುದು ಆದರೆ ನಿಮ್ಮ ಭರವಸೆ ಕಳೆದುಕೊಳ್ಳಬೇಡಿ, ಈ ವರ್ಷ ನಿಮಗೆ ಸಾದಿಸುವುದನ್ನು ಕಲಿಸುತ್ತದೆ.

೪.ಕಟಕ ರಾಶಿ

ಈ ವರ್ಷ ನಿಮಗೆ ಸಕಾರಾತ್ಮಕದ ಅಲೆಯು ದಾರಿಯನ್ನು ತೋರುವುದು. ನೀವು ಹತಾಶೆ ಅಥವಾ ಬೇಸರಗೊಂಡರೆ ಅದರಿಂದ ಕೋಪಿತಗೊಳ್ಳಬೇಡಿ, ನಿಮ್ಮ ಸ್ಥಳದಲ್ಲೇ ನಿಮಗೆ ಬೇಕಿರುವುದು ಮೊದಲಿನಂತೆ ಸಿಗುವುದಿಲ್ಲ. ಈ ಸಮಯ ನಿಮಗೆ ಹೊಸದಾದ ಅರ್ಥ ಸಿಗುವುದು ಮತ್ತು ಅದು ನೀವು ಉತ್ತಮ ಕೆಲಸಗಳನ್ನು ಮಾಡಲು ಶಕ್ತಿ ನೀಡುವುದು.

೫.ಸಿಂಹ ರಾಶಿ

ಮೋಜಿನ ಕ್ಷಣಗಳನ್ನು ಅನುಭವಿಸಲು ಇದು ನಿಮಗೆ ಅಂದರೆ ಸಿಂಹ ರಾಶಿಯವರಿಗೆ ಅಧಿಕೃತ ವರ್ಷ. ಈ ವರ್ಷದಲ್ಲಿ ಹಲವು ಆಶ್ಚರ್ಯಗಳನ್ನು ಎದುರಿಸಲು ತಯಾರಾಗಿ, ಅದರಲ್ಲಿ ಹೆಚ್ಚಿನವು ಒಳ್ಳೆಯ ವಿಸ್ಮಯ ಸುದ್ದಿಗಳಾಗಿರುವವು. ಈ ವರ್ಷ ನಿಮಗೆ ವಿಶೇಷವಾಗಿ ಪರಿಣಮಿಸುತ್ತದೆ. ಎಲ್ಲವು ಇರುತ್ತದೆ ಆದರೆ ನೀರಸ ಇರುವುದು ಸಾಮಾನ್ಯ.

೬.ಕನ್ಯಾ ರಾಶಿ

ನಿಮ್ಮ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲು ಇದು ಸರಿಯಾದ ವರುಷ. ನಿಮ್ಮ ಎಲ್ಲಾ ವಿಷಯಗಳನ್ನು ತಡವಾಗಿ ಮಾಡುವುದು ಅಥವಾ ಮುಂದಕ್ಕೆ ಹಾಕುತ್ತಿದ್ದರೆ, ಅದನ್ನು ಪ್ರಯತ್ನಿಸಲು ಇದು ಸರಿಯಾದ ಸಮಯ. ನಿಮ್ಮ ಅದೃಷ್ಟ ನಿಮ್ಮ ಜೊತೆಗೆ ಇರುವುದರಿಂದ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ, ನಿಮ್ಮ ಸಂಬಂಧಗಳನ್ನು ಮರುಪಡೆಯಿರಿ, ಶಕ್ತಿಯುತರಾಗಿ.

೭.ತುಲಾ ರಾಶಿ

ನಿಮ್ಮನ್ನು ನೀವು ಪ್ರೀತಿಸಲು ಈ ವರ್ಷ. ಬೇರೆಯವರ ಸಂತೋಷದಲ್ಲಿ ಭಾಗಿಯಾಗುತ್ತಿದ್ದ ನಿಮಗೆ ನಿಮ್ಮ ಸ್ವಂತ ಖುಷಿಯನ್ನು ಅನುಭವಿಸಲು ಅವಕಾಶಗಳಿವೆ ಅದನ್ನು ಸರಿಯಾಗಿ ಬಳಸಿಕೊಳ್ಳಿ. ನಿಮ್ಮ ಜೀವನದಲ್ಲಿ ನಿಮಗೆ ನಿಜವಾಗಿಯೂ ಏನು ಬೇಕು ಅದನ್ನು ತಿಳಿದುಕೊಳ್ಳುವ ಸಮವಿದು.

೮.ವೃಶ್ಚಿಕ ರಾಶಿ

ನೀವು ಮಾಡಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಇದು ಸರಿಯಾದ ಸಮಯ. ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಕೆಲವು ಸಮಯವನ್ನು ಮೀಸಲಿಡಿ. ಈ ವರ್ಷ ತಪ್ಪುಗಳಿಂದ ಕಲಿತು ಮುಂದೆ ಸಾಗುವುದು ಒಳ್ಳೆಯದು.

೯.ಧನಸ್ಸು ರಾಶಿ

ನಿಮ್ಮ ಗುರಿಯನ್ನು ಮುಟ್ಟಲು ಇದು ಸರಿಯಾದ ವರ್ಷ. ಈ ವರ್ಷದಲ್ಲಿ ನೀವು ಅಸಾಧ್ಯವಾದುದ್ದನ್ನು ಸಾಧಿಸಬಹುದಾದ ಅವಕಾಶವನ್ನು ಹೊಂದಿರುವಿರಿ. ನಿಮ್ಮ ಗುರಿಯನ್ನು ಮುಟ್ಟಲು ತೀವ್ರವಾಗಿ ಕೆಲಸಮಾಡಿ.

೧೦.ಮಕರ ರಾಶಿ

ವೃತ್ತಿಪರವಾಗಿ, ಈ ವರುಷ ನಿಮಗೆ ಒಳ್ಳೆಯದನ್ನು ಮಾಡುತ್ತದೆ. ನಿಮ್ಮ ಸಂಸ್ಥೆಯಲ್ಲಿ ನಿರ್ದಿಷ್ಟ ಸ್ಥಾನವನ್ನು ತಲುಪಲು ನೀವು ಶ್ರಮಿಸುತ್ತೀರಿ ಮತ್ತು ಇದು ನಿಮಗೆ ಮೇಲ್ಭಾಗದಲ್ಲಿ ಉಳಿಯಲು ಸಹಾಯ ಮಾಡುತ್ತದೆ. ನಿಮ್ಮ ಯಶಸ್ಸನ್ನು ನೀವು ಪಡೆಯಲು ಇದು ಸೂಕ್ತ ಸಮಯ.

೧೧.ಕುಂಭ ರಾಶಿ

ನಿಮ್ಮ ಜೀವನದ ಒಳ್ಳೆಯದು ಮತ್ತು ಕೆಟ್ಟದು ಎರಡಲ್ಲೂ ಬದಲಾವಣೆಯನ್ನು ನೀವು ಈ ವರ್ಷ ಕಾಣುವಿರಿ. ಸಹಾಯದ ಅವಶ್ಯಕತೆ ಇರುವವರಿಗೆ ಸಹಾಯ ಮಾಡಲು ದೈರ್ಯವಾಗಿ ಮುಂದಾಗುವಿರಿ. ಬದಲಿಸಿಕೊಳ್ಳಲು ಕಷ್ಟವಾದರೂ, ಬದಲಾವಣೆ ಮಾಡಿಕೊಳ್ಳುವುದರಿಂದ ನಿಮ್ಮ ಜೀವನವನ್ನು ಮರುರೂಪಿಸಿಕೊಳ್ಳಬಹುದು.

೧೨.ಮೀನ

ಕ್ರಿಯಾತ್ಮಕ ಚಿಂತನೆಯೊಂದಿಗೆ ಈ ವರ್ಷ ಮುನ್ನಡೆಯುವಿರಿ. ಹಲವು ಕಲ್ಪನೆಗಳು ಈ ವರ್ಷ ನಿಮ್ಮ ತಲೆಯಲ್ಲಿ ತುಂಬಿರುವುದು, ವೃತ್ತಿಪರ ಮತ್ತು ವೈಯಕ್ತಿಕ ಎರಡರಲ್ಲೂ ನೀವು ಅದ್ಬುತ ಜೀವನವನ್ನು ಅನುಭವಿಸುವಿರಿ. ಈ ವರ್ಷ ಸಂತೋಷ ಎಂಬುದು ನಿಮ್ಮ ಎರಡನೇ ಹೆಸರು ಎಂದು ಹೇಳಬಹುದು. ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವಿರಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon